Whatsapp Banking-ಗ್ರಾಹಕರಿಗೆ ಸಿಹಿ ಸುದ್ದಿ: ಈಗ ವಾಟ್ಸಾಪ್ ನಲ್ಲೇ ಬ್ಯಾಂಕಿಂಗ್ ಸೇವೆ ಲಭ್ಯ!

January 6, 2026 | Siddesh
Whatsapp Banking-ಗ್ರಾಹಕರಿಗೆ ಸಿಹಿ ಸುದ್ದಿ: ಈಗ ವಾಟ್ಸಾಪ್ ನಲ್ಲೇ ಬ್ಯಾಂಕಿಂಗ್ ಸೇವೆ ಲಭ್ಯ!
Share Now:

ಇಂದಿನ ಡಿಜಿಟಲ್ ಯುಗದಲ್ಲಿ ಬ್ಯಾಂಕ್ ಸೇವೆಗಳು ಕೇವಲ ಶಾಖೆಗಳಿಗೆ ಸೀಮಿತವಾಗಿಲ್ಲ. ಮೊಬೈಲ್, ಇಂಟರ್ನೆಟ್ ಮೂಲಕ ಅನೇಕ ಬ್ಯಾಂಕಿಂಗ್ ಕಾರ್ಯಗಳು ಈಗ ಸುಲಭವಾಗಿ ನಮ್ಮ ಕೈಗೆಟುಕಿವೆ. ಈ ಸಾಲಿನಲ್ಲಿ ಹೊಸದಾಗಿ ಜನಪ್ರಿಯವಾಗುತ್ತಿರುವ ಸೇವೆಯೇ ವಾಟ್ಸಾಪ್ ಬ್ಯಾಂಕಿಂಗ್(Whatsapp Banking Details) ನಾವು ಪ್ರತಿದಿನ ಸಂದೇಶ ಕಳುಹಿಸಲು ಬಳಸುವ ವಾಟ್ಸಾಪ್ ಅಪ್ಲಿಕೇಶನ್ ಮೂಲಕವೇ ಬ್ಯಾಂಕ್ ಖಾತೆ ವಿವರಗಳನ್ನು ತಿಳಿದುಕೊಳ್ಳುವುದು, ಸೇವೆಗಳ ಬಗ್ಗೆ ಮಾಹಿತಿ ಪಡೆಯುವುದು ಸಾಧ್ಯವಾಗಿರುವುದು ಈ ವ್ಯವಸ್ಥೆಯ ವಿಶೇಷತೆ.

ವಾಟ್ಸಾಪ್ ಬ್ಯಾಂಕಿಂಗ್(Whatsapp Banking Numbers) ಅಂದರೆ ಬ್ಯಾಂಕ್ ನೀಡುವ ಅಧಿಕೃತ ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಖಾತೆಯ ಬ್ಯಾಲೆನ್ಸ್ ವಿಚಾರಣೆ, ಮಿನಿ ಸ್ಟೇಟ್‌ಮೆಂಟ್, ಡೆಬಿಟ್ ಕಾರ್ಡ್ ಮಾಹಿತಿ, ಲೋನ್ ವಿವರಗಳು, ಶಾಖೆ ಮತ್ತು ಎಟಿಎಂ ಮಾಹಿತಿ ಮುಂತಾದ ಸೇವೆಗಳನ್ನು ಪಡೆಯುವ ವ್ಯವಸ್ಥೆ. ಇದಕ್ಕಾಗಿ ಪ್ರತ್ಯೇಕ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ. ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಇದ್ದರೆ ಸಾಕು.

ಇದನ್ನೂ ಓದಿ: Cow Farming Subsidy-ಹಸು ಸಾಕುವ ರೈತರಿಗೆ ಗೋಕುಲ ಮಿಷನ್ ಯೋಜನೆಯಡಿ ಸಬ್ಸಿಡಿ! ವರ್ಷಕ್ಕೆ ₹21,500 ಆದಾಯ!

ಗ್ರಾಮೀಣ ಪ್ರದೇಶದ ಜನರು, ಹಿರಿಯ ನಾಗರಿಕರು ಹಾಗೂ ತಂತ್ರಜ್ಞಾನಕ್ಕೆ ಹೆಚ್ಚು ಪರಿಚಯವಿಲ್ಲದವರು ಸಹ ಸುಲಭವಾಗಿ ಬಳಸಿಕೊಳ್ಳಬಹುದಾದ ಈ ಸೇವೆ, ಸಮಯ ಮತ್ತು ಪ್ರಯಾಸವನ್ನು ಉಳಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ. 24 ಗಂಟೆಗಳೂ ಲಭ್ಯವಿರುವ ಈ ವ್ಯವಸ್ಥೆ ಬ್ಯಾಂಕಿಂಗ್ ಅನುಭವವನ್ನು ಇನ್ನಷ್ಟು ಸರಳ ಮತ್ತು ಸ್ನೇಹಪೂರ್ಣವಾಗಿಸಿದೆ.

Whatsapp Banking Information-ವಾಟ್ಸಾಪ್ ಬ್ಯಾಂಕಿಂಗ್ ನಲ್ಲಿ ಯಾವೆಲ್ಲ ಸೇವೆ ಲಭ್ಯ?

ಪ್ರಸ್ತುತ ದೇಶದ 9 ಬ್ಯಾಂಕಿನ ವಾಟ್ಸಾಪ್ ಬ್ಯಾಂಕಿಂಗ್ ಸೇವೆಯ ಸಹಾಯವಾಣಿಗಳ ಪಟ್ಟಿಯನ್ನು ಈ ಲೇಖನದಲ್ಲಿ ಪ್ರಕಟಿಸಲಾಗಿದ್ದು ಆ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿರುವ ಗ್ರಾಹಕರು ಈ ಕೆಳಗಿನ ಪಟ್ಟಿಯಲ್ಲಿರುವ ಸೇವೆಗಳನ್ನು ಪಡೆಯಬಹುದು.

ಖಾತೆ ಮಾಹಿತಿ: ಖಾತೆ ಬ್ಯಾಲೆನ್ಸ್ ಚೆಕ್, ಇತ್ತೀಚಿನ ವಹಿವಾಟುಗಳು (ಮಿನಿ ಸ್ಟೇಟ್‌ಮೆಂಟ್) ಮತ್ತು ಇ-ಸ್ಟೇಟ್‌ಮೆಂಟ್ ವಿನಂತಿ.

ಕಾರ್ಡ್ ಸೇವೆಗಳು: ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳನ್ನು ಬ್ಲಾಕ್/ಅನ್‌ಬ್ಲಾಕ್ ಮಾಡುವುದು ಮತ್ತು ಕಾರ್ಡ್‌ಗಳ ಬಗ್ಗೆ ಮಾಹಿತಿ ಪಡೆಯಬವುದು.

ಚೆಕ್ ಸೇವೆಗಳು: ಹೊಸ ಚೆಕ್ ಬುಕ್ ವಿನಂತಿ, ಚೆಕ್ ಸ್ಟೇಟಸ್ ಮತ್ತು ಚೆಕ್ ಪೇಮೆಂಟ್ ಸ್ಟಾಪ್ ಮಾಡುವಿಕೆ ಕುರಿತು ಮಾಹಿತಿಯನ್ನು ತಿಳಿಯಬಬುದು.

ಆಫರ್‌ಗಳು: ಪ್ರಿ-ಅಪ್ರೂವ್ಡ್ ಲೋನ್ ಆಫರ್‌ಗಳ ಮಾಹಿತಿ.

ಇದನ್ನೂ ಓದಿ: Online Land Records-ರೈತರು ಇನ್ಮುಂದೆ ತಮ್ಮ ಜಮೀನಿನ ದಾಖಲೆ ಪಡೆಯುವುದು ಭಾರೀ ಸುಲಭ!

Bank Wise Whatsapp Banking Numbers-ಬ್ಯಾಂಕ್ ವಾರು ವಾಟ್ಸಾಪ್ ಬ್ಯಾಂಕಿಂಗ್ ಮೊಬೈಲ್ ಸಂಖ್ಯೆಗಳ ಪಟ್ಟಿ:

ಪ್ರಸ್ತುತ ನಮ್ಮ ದೇಶದ ಪ್ರಮುಖ ಬ್ಯಾಂಕ್ ಗಳು ವಾಟ್ಸಾಪ್ ಬ್ಯಾಂಕಿಂಗ್ ಸೇವೆಯನ್ನು ಜಾರಿಗೆ ತಂದಿದ್ದು ಇದಕ್ಕಾಗಿ ನಿಗದಿಪಡಿಸಿರುವ ಬ್ಯಾಂಕ್ ವಾರು ವಾಟ್ಸಾಪ್ ಬ್ಯಾಂಕಿಂಗ್ ಮೊಬೈಲ್ ಸಂಖ್ಯೆಗಳ ಪಟ್ಟಿ ಈ ಕೆಳಗಿನಂತಿವೆ:

1) SBI ವಾಟ್ಸಾಪ್ ಬ್ಯಾಂಕಿಂಗ್ ಸಂಖ್ಯೆ- 9022690226
2) CANARA BANK- 9076030001
3) UNION BANK- 9666606060
4) YES BANK- 8291201200
5) HDFC- 7070022222
6) ICICI BANK- 8640086400
7) AXIS BANK- 7036165000
8) PUNJAB NATIONAL BANK-9264092640
9) BANK OF BARODA- 8433888777

ಇದನ್ನೂ ಓದಿ: Kuri Sakanike Tarabeti-ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಗಾಗಿ ಅರ್ಜಿ ಆಹ್ವಾನ!

How To Use Whatsapp Banking-ವಾಟ್ಸಾಪ್ ಬ್ಯಾಂಕಿಂಗ್ ಬಳಸುವ ವಿಧಾನ ಹೇಗೆ?

ಗ್ರಾಹಕರು ತಾವು ಯಾವ ಬ್ಯಾಂಕ್ ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರುತ್ತಿರೋ ಆ ಬ್ಯಾಂಕ್ ವಾಟ್ಸಾಪ್ ಬ್ಯಾಂಕಿಂಗ್ ಮೊಬೈಲ್ ಸಂಖ್ಯೆಗೆ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಈ ಕೆಳಗಿನ ವಿಧಾನವನ್ನು ಅನುಸರಿಸಿ ಸಂದೇಶವನ್ನು ಕಳುಹಿಸುವುದರ ಮೂಲಕ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದು.

Step-1: ಗ್ರಾಹಕರು ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಬ್ಯಾಂಕಿನ ಸಂಖ್ಯೆಯನ್ನು "Save" ಮಾಡಿಕೊಂಡು ಬಳಿಕ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಒಪನ್ ಮಾಡಿ ಆ ಸಹಾಯವಾಣಿ ವಾಟ್ಸಾಪ್ ಬ್ಯಾಂಕಿಂಗ್ ಸಂಖ್ಯೆಗೆ "Whatsapp Menu" ಎಂದು ಮೆಸೇಜ್/ಸಂದೇಶವನ್ನು ಕಳುಹಿಸಿ.

ಇದನ್ನೂ ಓದಿ: Poultry Shed Subsidy-ಕುಕ್ಕುಟ ಸಂಜೀವಿನಿ ಯೋಜನೆಯಡಿ ಉಚಿತ ಕೋಳಿಮರಿ, ಶೆಡ್ ಸಹಾಯಧನ ಪಡೆಯಲು ಅರ್ಜಿ!

Whatsapp Banking Numbers

ಇದನ್ನೂ ಓದಿ: Online Mutation-ಉಚಿತವಾಗಿ ಮ್ಯುಟೇಷನ್ ಪಡೆಯಲು ಇಲ್ಲಿದೆ ವೆಬ್ಸೈಟ್ ಲಿಂಕ್!

Step-2: ಬಳಿಕ ಇಲ್ಲಿ ಈಗಾಗಲೇ ನೀವು ವಾಟ್ಸಾಪ್ ಬ್ಯಾಂಕಿಂಗ್ ಸೇವೆಯನ್ನು ಪಡೆಯಲು ನೋಂದಣಿಯನ್ನು ಮಾಡಿಕೊಂಡಿದ್ದರೆ "Menu" ಒಪನ್ ಅಗಿತ್ತದೆ ಇಲ್ಲದಾದ್ದಲಿ ವಾಟ್ಸಾಪ್ ಬ್ಯಾಂಕಿಂಗ್ ನೋಂದಣಿ ಹೇಗೆ ಮಾಡಿಕೊಳ್ಳಬೇಕು ಎನ್ನುವ ಸಂದೇಶ ಬರುತ್ತದೆ ಈ ವಿಧಾನವನ್ನು ಅನುಸರಿಸಿ ವಾಟ್ಸಾಪ್ ಬ್ಯಾಂಕಿಂಗ್ ಸೇವೆಯನ್ನು ಸಕ್ರಿಯಗೊಳಿಸಿ ವಾಟ್ಸಾಪ್ ಬ್ಯಾಂಕಿಂಗ್ ಸೇವೆಯನ್ನು ಪಡೆಯಬಹುದು.

Step-3: "Menu" ಆಯ್ಕೆಯು ತೆರೆದುಕೊಂಡ ಬಳಿಕ ಇಲ್ಲಿ ನೀವು ಅಗತ್ಯವಿರು ಸೇವೆಯ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಬ್ಯಾಂಕ್ ಖಾತೆಯ ವಿವರವನ್ನು ಪಡೆಯಬಹುದು.

ಗಮನಿಸಿ: ಈ ಮೇಲಿನ ವಿಧಾನವನ್ನು ಅನುಸರಿಸಿ ವಾಟ್ಸಾಸ್ ನಲ್ಲಿ ಸಂದೇಶವನ್ನು ಕಳುಹಿಸಿದಾಗ Dear Customer, You are not registered for SBI WhatsApp Banking services. To register and provide your consent for using these services, kindly send the following SMS WAREG A/c No to 9172089 from your Registered Mobile No with the Bank ಎಂದು ಮರು ಸಂದೇಶ ಬಂದರೆ ಅಗತ್ಯ ವಿವರಗಳ ಸಮೇತ ಈ ಮೊಬೈಲ್ ಸಂಖ್ಯೆಗೆ ಮೇಸೆಜ್ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ವಾಟ್ಸಾಪ್ ಬ್ಯಾಂಕಿಂಗ್ ಸೇವೆಯನ್ನು ಸಕ್ರಿಯಗೊಳಿಸಬೇಕು.

ಇದನ್ನೂ ಓದಿ: Yashaswini Card-ಯಶಸ್ವಿನಿ ಕಾರ್ಡ ಪಡೆಯಲು ಅರ್ಜಿ ಸಲ್ಲಿಕೆ ಆರಂಭ!

WhatsApp Banking Safety Measures-ವಾಟ್ಸಾಪ್ ಬ್ಯಾಂಕಿಂಗ್ ಬಳಸುವಾಗ ಅನುಸರಿಸಬೇಕಾದ ಸುರಕ್ಷತ ಕ್ರಮಗಳು ಯಾವುವು?

ವಾಟ್ಸಾಪ್ ಬ್ಯಾಂಕಿಂಗ್ ಸೇವೆ ಉಪಯುಕ್ತವಾಗಿರುವಂತೆಯೇ, ಸುರಕ್ಷತೆಯನ್ನೂ ಸಮಾನವಾಗಿ ಗಮನಿಸಬೇಕಾಗುತ್ತದೆ. ವಾಟ್ಸಾಪ್ ಬ್ಯಾಂಕಿಂಗ್ ಬಳಸುವಾಗ ಅನುಸರಿಸಬೇಕಾದ ಪ್ರಮುಖ ಸುರಕ್ಷತಾ ಕ್ರಮಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.

ಅಧಿಕೃತ ವಾಟ್ಸಾಪ್ ಸಂಖ್ಯೆಯನ್ನೇ ಬಳಸಿ: ನಿಮ್ಮ ಬ್ಯಾಂಕ್ ಅಧಿಕೃತವಾಗಿ ಘೋಷಿಸಿರುವ ವಾಟ್ಸಾಪ್ ಸಂಖ್ಯೆಗೆ ಮಾತ್ರ ಸಂದೇಶ ಕಳುಹಿಸಿ. ಅನಧಿಕೃತ ಅಥವಾ ಅನುಮಾನಾಸ್ಪದ ಸಂಖ್ಯೆಗಳೊಂದಿಗೆ ವ್ಯವಹರಿಸಬೇಡಿ.

OTP, ಪಿನ್, ಪಾಸ್ವರ್ಡ್ ಹಂಚಿಕೊಳ್ಳಬೇಡಿ: ಬ್ಯಾಂಕ್ ಅಥವಾ ವಾಟ್ಸಾಪ್ ಎಂದಿಗೂ ನಿಮ್ಮ OTP, ATM ಪಿನ್, UPI ಪಿನ್, CVV ಸಂಖ್ಯೆ ಕೇಳುವುದಿಲ್ಲ. ಇಂತಹ ಮಾಹಿತಿ ಯಾರಿಗೂ ನೀಡಬಾರದು.

ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮೊದಲು ಎಚ್ಚರಿಕೆ: ವಾಟ್ಸಾಪ್ ಮೂಲಕ ಬರುವ ಅನುಮಾನಾಸ್ಪದ ಲಿಂಕ್‌ಗಳು, ಆಫರ್ ಸಂದೇಶಗಳು ಅಥವಾ ಬಹುಮಾನಗಳ ಬಗ್ಗೆ ಎಚ್ಚರಿಕೆಯಿಂದಿರಿ. ಇವು ಮೋಸದ ಪ್ರಯತ್ನವಾಗಿರಬಹುದು.

ಇದನ್ನೂ ಓದಿ: LPG Cylinder Price Hike-ಗ್ಯಾಸ್ ಸಿಲಿಂಡರ್ ಬೆಲೆ ಭರ್ಜರಿ ಏರಿಕೆ! ಇಲ್ಲಿದೆ ದರ ವಿವರ!

ಬ್ಯಾಂಕ್ ಸೇವೆಗಳಿಗೆ ಮೆಸೇಜ್ ಕಳುಹಿಸುವಾಗ ವೈಯಕ್ತಿಕ ಮಾಹಿತಿ ನೀಡಬೇಡಿ: ಖಾತೆ ಸಂಖ್ಯೆ, ಆಧಾರ್ ಸಂಖ್ಯೆ, ಪ್ಯಾನ್ ಕಾರ್ಡ್ ವಿವರಗಳನ್ನು ಚಾಟ್‌ನಲ್ಲಿ ಹಂಚಿಕೊಳ್ಳುವುದನ್ನು ತಪ್ಪಿಸಿ.

ಮೊಬೈಲ್‌ಗೆ ಲಾಕ್ ವ್ಯವಸ್ಥೆ ಕಡ್ಡಾಯ: ನಿಮ್ಮ ಫೋನ್‌ನಲ್ಲಿ ಪಿನ್, ಪ್ಯಾಟರ್ನ್ ಅಥವಾ ಫಿಂಗರ್‌ಪ್ರಿಂಟ್ ಲಾಕ್ ಬಳಸಿ. ಫೋನ್ ಕಳೆದುಹೋದರೆ ತಕ್ಷಣ ಬ್ಯಾಂಕ್‌ಗೆ ಮತ್ತು ಟೆಲಿಕಾಂ ಕಂಪನಿಗೆ ಮಾಹಿತಿ ನೀಡಿ.

ವಾಟ್ಸಾಪ್ ಅಪ್ಲಿಕೇಶನ್ ಅನ್ನು ಸದಾ ಅಪ್‌ಡೇಟ್ ಮಾಡಿ: ಹೊಸ ಅಪ್‌ಡೇಟ್‌ಗಳಲ್ಲಿ ಸುರಕ್ಷತಾ ಸುಧಾರಣೆಗಳು ಇರುತ್ತವೆ. ಹಳೆಯ ಆವೃತ್ತಿಗಳನ್ನು ಬಳಸುವುದು ಅಪಾಯಕರ.

ಪಬ್ಲಿಕ್ ವೈ-ಫೈ ಬಳಕೆ ತಪ್ಪಿಸಿ: ಸಾರ್ವಜನಿಕ Wi-Fi ಮೂಲಕ ಬ್ಯಾಂಕಿಂಗ್ ಚಾಟ್‌ಗಳನ್ನು ನಡೆಸುವುದರಿಂದ ಮಾಹಿತಿ ಲೀಕ್ ಆಗುವ ಸಾಧ್ಯತೆ ಇದೆ.

ಚಾಟ್ ಇತಿಹಾಸವನ್ನು ಪರಿಶೀಲಿಸಿ ಮತ್ತು ಕ್ಲಿಯರ್ ಮಾಡಿ: ಅವಶ್ಯಕತೆ ಇಲ್ಲದ ಬ್ಯಾಂಕಿಂಗ್ ಚಾಟ್‌ಗಳನ್ನು ಅಳಿಸುವುದು ಉತ್ತಮ ಅಭ್ಯಾಸ.

ಫೇಕ್ ಪ್ರೊಫೈಲ್ ಮತ್ತು ಕಾಲ್‌ಗಳಿಂದ ಎಚ್ಚರಿಕೆ: ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡು ಕರೆ ಮಾಡಿ ಮಾಹಿತಿ ಕೇಳಿದರೆ ನಂಬಬೇಡಿ. ತಕ್ಷಣ ಬ್ಯಾಂಕ್ ಹೆಲ್ಪ್‌ಲೈನ್‌ಗೆ ತಿಳಿಸಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: