BPL Card-ಶೀಘ್ರದಲ್ಲಿ ರಾಜ್ಯ ಸರಕಾರದಿಂದ 12.68 ಲಕ್ಷ ಅಕ್ರಮ BPL ಕಾರ್ಡ ರದ್ದು: ಸಚಿವ ಕೆ ಹೆಚ್ ಮುನಿಯಪ್ಪ!

August 13, 2025 | Siddesh
BPL Card-ಶೀಘ್ರದಲ್ಲಿ ರಾಜ್ಯ ಸರಕಾರದಿಂದ 12.68 ಲಕ್ಷ ಅಕ್ರಮ BPL ಕಾರ್ಡ ರದ್ದು: ಸಚಿವ ಕೆ ಹೆಚ್ ಮುನಿಯಪ್ಪ!
Share Now:

ರಾಜ್ಯದಲ್ಲಿ 15.59 ಲಕ್ಷ ಫಲಾನುಭವಿಗಳನ್ನು ಒಳಗೊಂಡ 12.68 ಲಕ್ಷ ಅಕ್ರಮ ಪಡಿತರ ಚೀಟಿಗಳನ್ನು(Ration Card)ಪಟ್ಟಿ ಮಾಡಿದ್ದು, ಅವುಗಳನ್ನು ಶೀಘ್ರ ರದ್ದು ಮಾಡಲಾಗುವುದು. ಇಲ್ಲವೇ, ಎಪಿಎಲ್(APL) ಪಡಿತರಕ್ಕೆ ಪರಿವರ್ತಿಸಲಾಗುವುದು ಎಂದು ಆಹಾರ ಸಚಿವರಾದ ಕೆ ಹೆಚ್ ಮುನಿಯಪ್ಪ ಅವರು ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ತಿಳಿಸಿದ್ದು ಈ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಪ್ರಕಟಿಸಲಾಗಿದೆ.

ಈ ಅಂಕಣದಲ್ಲಿ ರಾಜ್ಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ರೇಶನ್ ಕಾರ್ಡ(Ration Card Statistics) ಅಂಕಿ-ಅಂಶ ವಿವರ, ಯಾವೆಲ್ಲ ಗ್ರಾಹಕರ ಬಿಪಿಎಲ್(BPL) ಕಾರ್ಡ ರದ್ದಾಗುತ್ತದೆ? ಇದಕ್ಕಾಗಿ ಇಲಾಖೆಯಿಂದ ನಿಗದಿಪಡಿಸಿರುವ ಅರ್ಹತಾ ಮಾನದಂಡಗಳೇನು? ಆನ್ಲೈನ್ ನಲ್ಲಿ ರದ್ದಾದ ಪಟ್ಟಿಯನ್ನು ಗ್ರಾಹಕರು ಮೊಬೈಲ್ ನಲ್ಲಿ ನೋಡುವುದು ಹೇಗೆ? ಇನ್ನಿತರೆ ಅಗತ್ಯ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Bhu Odetana Yojana-ಭೂ ಒಡೆತನ ಯೋಜನೆಯಡಿ ಜಮೀನು ಖರೀದಿಗೆ ಶೇ 50% ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ!

Karanataka Ration Card Statistics-ರಾಜ್ಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ರೇಶನ್ ಕಾರ್ಡ ಅಂಕಿ-ಅಂಶ ವಿವರ ಹೀಗಿದೆ:

  • ಅಂತ್ಯೋದ್ಯ ಅನ್ನ ಪಡಿತರ ಚೀಟಿ- 10,76,942
  • ಅದ್ಯತಾ ಪಡಿತರ ಚೀಟಿ(BPL Card)- 1,17,31,508
  • ಅದ್ಯತೇತರ ಪಡಿತರ ಚೀಟಿ(APL Card)- 1,53,65,869

BPL Card Ineligibility Rules in Karnataka-ಬಿಪಿಎಲ್ ಕಾರ್ಡ ಪಡೆಯಲು ಅನರ್ಹರ ವಿವರ:

ಆಹಾರ ಇಲಾಖೆಯ ಅಧಿಕೃತ ಮಾರ್ಗಸೂಚಿಯ ಪ್ರಕಾರ ಈ ಕೆಳಗಿನ ಪಟ್ಟಿಯಲ್ಲಿರುವ ವರ್ಗಕ್ಕೆ ಸೇರಿದವರಿಗೆ ಬಿಪಿಎಲ್ ಕಾರ್ಡ ಪಡೆಯಲು ಅನರ್ಹರಾಗಿರುತ್ತಾರೆ.

ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಖಾಯಂ ನೌಕರರು ಅಂದರೆ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ ಮಂಡಳಿಗಳು/ ನಿಗಮಗಳು/ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ/ಸೇವಾ ತೆರಿಗೆ/ ವ್ಯಾಟ್/ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು.

ಗ್ರಾಮೀಣ ಪ್ರದೇಶಗಳಲ್ಲಿ 03 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು.

ಇದನ್ನೂ ಓದಿ: SIM Card Status-ನಿಮ್ಮ ಹೆಸರಿನ ಮೇಲೆ ಎಷ್ಟು ಸಿಮ್ ತೆಗೆದುಕೊಳ್ಳಲಾಗಿದೆ? ಈಗಲೇ ಚೆಕ್ ಮಾಡಿ!

ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯು ವಾಹನವನ್ನು ಅಂದರೆ ಟ್ರಾಕ್ಟರ್. ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು,

ಕುಟುಂಬದ ವಾರ್ಷಿಕ ಆದಾಯವು ರೂ. 1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು.

Ration Card List

ಇದನ್ನೂ ಓದಿ: Grama One-ಗ್ರಾಮ ಒನ್ ಕೇಂದ್ರವನ್ನು ಆರಂಭಿಸಲು ಅರ್ಜಿ ಆಹ್ವಾನ!

BPL Ration Card News-ರಾಜ್ಯ ಬಿಪಿಎಲ್ ಜನಸಂಖ್ಯೆಯು ಹೊಂದಾಣಿಕೆಯಾಗದಿರಲು ಈ ಕ್ರಮ:

ವಿಧಾನ ಪರಿಷತ್ತಿನಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ಎಂ ನಾಗರಾಜು ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಆಹಾರ ಸಚಿವ ಮುನಿಯಪ್ಪ ಅವರು ಇದರಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ ಬಿಪಿಎಲ್ ಕಾರ್ಡ ವಿತರಣೆಯಲ್ಲಿ ನೀತಿ ಆಯೋಗದ ಅಂಕಿ ಅಂಶಗಳು ರಾಜ್ಯ ಬಿಪಿಎಲ್ ಜನಸಂಖ್ಯೆಯು ಹೊಂದಾಣಿಕೆಯಾಗದಿರಲು ರಾಜ್ಯದಲ್ಲಿ ಆದ್ಯತಾ ಪಡಿತರ ಚೀಟಿ ಪಡೆಯಲು ರೂಪಿಸಿರುವ ಮಾನದಂಡಗಳು ಹಾಗೂ ನೀತಿ ಆಯೋಗದವರು ರೂಪಿಸಿರುವ ಮಾನದಂಡಗಳು ಬೇರೆಯಾಗಿರುತ್ತದೆ.

ರಾಜ್ಯದಲ್ಲಿ,, ಆದ್ಯತಾ ಪಡಿತರ ಚೀಟಿಗಳನ್ನು ನೀಡಲು ಹೊರಗಿಡುವ ಮಾನದಂಡಗಳನ್ನು ರೂಪಿಸಲಾಗಿರುತ್ತದೆ ಆದರೆ ನೀತಿ ಆಯೋಗದಿಂದ ಬಹು ಆಯಾಮಿನ ಬಡತನ ರೇಖೆಯಲ್ಲಿರುವ ಜನರನ್ನು ಗುರುತಿಸಲು ಮಾನದಂಡಗಳನ್ನು ರೂಪಿಸಲಾಗಿರುತ್ತದೆ.

ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು 2024 ರ ಜುಲೈ ಮಾಹೆಯಲ್ಲಿ ಆದ್ಯತಾ ಪಡಿತರ ಚೀಟಿ ಪಡೆಯಲು ನಿಗದಿಪಡಿಸಿರುವ ಮಾನದಂಡಗಳ ವಿರುದ್ಧವಾಗಿ ಪಡಿತರ ಚೀಟಿ ಪಡೆದ ಆದಾಯ ತೆರಿಗೆ ಪಾವತಿದಾರರು. ಸರ್ಕಾರಿ ನೌಕರರು, 1.20 ಲಕ್ಷಕ್ಕಿಂತ ಹೆಚ್ಚು ಇರುವ ಕುಟುಂಬಗಳು ಹಾಗೂ 6 ತಿಂಗಳಿಗಿಂತ ಹೆಚ್ಚು ಅವಧಿಗೆ ಪಡಿತರ ಪಡೆಯದೇ ಇರುವ ಒಟ್ಟು 3,62,254 ಪಡಿತರ ಚೀಟಿದಾರರ ವಿವರಗಳನ್ನು ಕುಟುಂಬ ತಂತ್ರಾಂಶದಿಂದ ಪಡೆದು ರದ್ದು/ಆದ್ಯತೇತರ ಕ್ರಮವಹಿಸಲಾಗಿತ್ತು. ಸದರಿ ಪಡಿತರ ಚೀಟಿಗಳನ್ನು ಪಡಿತರ ಚೀಟಿಗಳನ್ನಾಗಿ ಪರಿವರ್ತಿಸಲು ಕ್ರಮ ವಹಿಸಲಾಗುತ್ತದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Ganga Kalyana-2025: ಗಂಗಾ ಕಲ್ಯಾಣ ಸೇರಿದಂತೆ ವಿವಿಧ ಯೋಜನೆಯಡಿ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

BPL Card Statistics In Karnataka-ರಾಜ್ಯದಲ್ಲಿರುವ ಅಕ್ರಮ BPL ಕಾರ್ಡದಾರರ ಅಂಕಿ-ಅಂಶ ಹೀಗಿದೆ:

ರಾಜ್ಯದಲ್ಲಿ ಪ್ರಸ್ತುತ ಆಹಾರ ಇಲಾಖೆಯಿಂದ ಸಮಗ್ರ ಪರಿಶೀಲನೆ ಕೈಗೊಂಡು ಅನರ್ಹ BPL ಪಡಿತರ ಚೀಟಿದಾರರ ಪಟ್ಟಿಯನ್ನು ಸಿದ್ದಪಡಿಸಿದ್ದ ಇದರ ಅಂಕಿ-ಅಂಶ ವಿವರ ಈ ಕೆಳಗಿನಂತಿದೆ:

  • ಮೃತ ಸದಸ್ಯರ ಹೆಸರಿನಲ್ಲಿರುವ ಕಾರ್ಡಗಳು- 1,446
  • ಅಂತರ್ ರಾಜ್ಯ ಪಡಿತರ ಚೀಟಿದಾರರ ಸಂಖ್ಯೆ- 57,864
  • ಜಿಎಸ್​ಟಿ ಒಟ್ಟು 25 ಲಕ್ಷ ವಹಿವಟು ಮೀರಿದವರು- 2,684
  • 1.2 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವವರು- 5,13,613
  • ಕಂಪನಿಗಳಲ್ಲಿ ಡೈರೆಕ್ಟರ್ ಆಗಿರುವವರು- 19,690
  • ಪಿಎಂ ಕಿಸಾನ್ ಲ್ಯಾಂಡ್ ಹೋಲ್ಡಿಂಗ್ 7.5 ಎಕರೆ ಹೊಂದಿರುವ ಕಾರ್ಡದಾರರು- 33,456
  • 06 ತಿಂಗಳಿಗಿಂತ ಹೆಚ್ಚಿನ ಅವಧಿಗೆ ಪಡಿತರ/ರೇಶನ್ ಪಡೆಯದೆ ಇರುವವರು- 19,893
  • 100 ವರ್ಷ ವಯೋಮಿತಿ ದಾಟಿರುವ ಪಡಿತರದಾರರು- 2,040
  • 18 ವರ್ಷ ವಯಸ್ಸಿಗಿಂತ ಕೆಳಗಿನ ಏಕ ಸದಸ್ಯ ಪಡಿತರರು- 731
  • ಸ್ವಂತ ಉಪಯೋಗಕ್ಕಾಗಿ ಸ್ವಂತ ವಾಹನ ಹೊಂದಿರುವವರು- 119
  • ಇ-ಕೆವೈಸಿ ಮಾಡಿಸದೆ ಇರುವವರು- 6,16,196

ಇದನ್ನೂ ಓದಿ: Students Scholarship-1 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

BPL ಕಾರ್ಡ ರದ್ದಾದವರಿಗೆ APL Card ವಿತರಣೆ:

ಆಹಾರ ಇಲಾಖೆಯ ಮಾರ್ಗಸೂಚಿಯ ಪ್ರಕಾರ BPL ಕಾರ್ಡ ಪಡೆಯಲು ಅನರ್ಹರಿರುವ ಒಟ್ಟು 12.68 ಲಕ್ಷ ಅಕ್ರಮ BPL ಕಾರ್ಡಗಳನ್ನು ರದ್ದು ಮಾಡಿ ಈ ಕಾರ್ಡದಾರಿಗೆ APL Card ಅನ್ನು ವಿತರಣೆ ಮಾಡಲಾಗುತ್ತದೆ ಎಂದು ಆಹಾರ ಇಲಾಖೆ ಸಚಿವರು ಮಾಹಿತಿಯನ್ನು ತಿಳಿಸಿದ್ದಾರೆ.

Cancelled and Suspended Ration Card List-ರದ್ದಾದ ಪಟ್ಟಿಯನ್ನು ಗ್ರಾಹಕರು ಮೊಬೈಲ್ ನಲ್ಲಿ ನೋಡುವುದು ಹೇಗೆ?

ಪಡಿತರ ಚೀಟಿಯನ್ನು ಹೊಂದಿರುವ ಗ್ರಾಹಕರು ಇಲ್ಲಿ ಕ್ಲಿಕ್ "Cancelled and Suspended Ration Card List" ಮಾಡಿ ಆಹಾರ ಇಲಾಖೆಯ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ "ಇ-ಪಡಿತರ ಚೀಟಿ" ಬಟನ್ ಮೇಲೆ ಕ್ಲಿಕ್ ಮಾಡಿ "ರದ್ದುಗೊಳಿಸಲಾದ/ತಡೆಹಿಡಿಯಲಾದ ಪಟ್ಟಿ" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ/ತಾಲ್ಲೂಕು/ತಿಂಗಳು/ವರ್ಷ ಮತ್ತು ಕೆಳಗೆ ಕಾಣುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ "Go" ಬಟನ್ ಮೇಲೆ ಕ್ಲಿಕ್ ಮಾಡಿ ಪ್ರತಿ ತಿಂಗಳುವಾರು ರದ್ದಾದ ರೇಶನ್ ಕಾರ್ಡ ಪಟ್ಟಿಯನ್ನು ನೋಡಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: