Whatsapp Chatbot-ನಾಗರಿಕರಿಗೆ ಗ್ರಾಮ ಪಂಚಾಯತಿ ಯೋಜನೆಗಳನ್ನು ತಲುಪಿಸಲು ಇನ್ಮುಂದೆ ವಾಟ್ಸಾಪ್ ಚಾಟ್‌ಬಾಟ್‌ ಬಳಕೆ!

August 18, 2025 | Siddesh
Whatsapp Chatbot-ನಾಗರಿಕರಿಗೆ ಗ್ರಾಮ ಪಂಚಾಯತಿ ಯೋಜನೆಗಳನ್ನು ತಲುಪಿಸಲು ಇನ್ಮುಂದೆ ವಾಟ್ಸಾಪ್ ಚಾಟ್‌ಬಾಟ್‌ ಬಳಕೆ!
Share Now:

ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ಪಂಚಾಯತ್ ರಾಜ್ ಇಲಾಖೆಯಿಂದ(Panchayat Raj Department) ಗ್ರಾಮೀಣ ಭಾಗದ ನಾಗರಿಕರಿಗೆ ಉತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ(Grama Panchayat)ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ಇನ್ಮುಂದೆ ವಾಟ್ಸಾಪ್ ಚಾಟ್‌ಬಾಟ್‌ ಅನ್ನು ಬಳಕೆಯನ್ನು ಜಾರಿಗೆ ತರಲಾಗಿದೆ ಎಂದು ಇಲಾಕೆಯಿಂದ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗಿದೆ.

ಇಂದಿನ ಈ ಅಂಕಣದಲ್ಲಿ ಏನಿದು ವಾಟ್ಸಾಪ್ ಚಾಟ್‌ಬಾಟ್‌(Panchatantra Whatsapp Chatbot)? ಇದರ ಬಳಕೆಯಿಂದ ಗ್ರಾಮೀಣ ಮಟ್ಟದಲ್ಲಿ ಸಾರ್ವಜನಿಕರಿಗೆ ಯಾವೆಲ್ಲ ಪ್ರಯೋಜನಗಳಿವೆ? ವಾಟ್ಸಾಪ್ ಚಾಟ್‌ಬಾಟ್‌ ಅನ್ನು ನಾಗರಿಕರು ಬಳಕೆ ಮಾಡುವುದು ಹೇಗೆ? ಇದರ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Car Subsidy Scheme-ಸ್ವಾವಲಂಬಿ ಸಾರಥಿ ಯೋಜನೆಯಡಿ ಕಾರು ಖರೀದಿಗೆ ₹4.00 ಲಕ್ಷ ಸಹಾಯಧನಕ್ಕೆ ಅರ್ಜಿ!

ದಿನೇ ದಿನೇ ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಡಿಜಿಟಲೀಕರಣ(Digital) ವ್ಯವಸ್ಥೆಯು ಅನೇಕ ಕೆಲಸಗಳನ್ನು ಸರಳವಾಗಿ ನಿಭಾಹಿಸಲು ಮಾನವರಿಗೆ ತಾಂತ್ರಿಕವಾಗಿ ನೆರವು ನೀಡುತ್ತವೆ ಈ ನಿಟ್ಟಿನಲ್ಲಿ ಪಂಚಾಯತ್ ರಾಜ್ ಇಲಾಖೆಯಡಿ ಬರುವ ಗ್ರಾಮ ಪಂಚಾಯತಿ ಅಧಿಕಾರಿಗಳು ಪಂಚತಂತ್ರ ವಾಟ್ಸಾಪ್ ಚಾಟ್‌ಬಾಟ್‌(Panchatantra Whatsapp Helpline) ಸೇವೆಯನ್ನು ಅನುಷ್ಠಾನ ಮಾಡಲು ಮುಂದಾಗಿದ್ದಾರೆ.

What Is Panchatantra Whatsapp Chatbot-ಏನಿದು ವಾಟ್ಸಾಪ್ ಚಾಟ್‌ಬಾಟ್‌?

ಗ್ರಾಮ ಪಂಚಾಯತಿ ಸೇವೆಗಳು, ಕುಂದುಕೊರತೆಗಳನ್ನು ದಾಖಲಿಸಲು ಇನ್ಮುಂದೆ ವಾಟ್ಸಾಪ್ ಚಾಟ್‌ಬಾಟ್‌(Whatsapp Chatbot) ಲಭ್ಯವಿದೆ! ಹೇಗೆ? ಯಾವ ನಂಬರ್‌ಗೆ ಅಂತೀರಾ? ಇಲ್ಲಿದೆ ಮಾಹಿತಿ! ಹೌದು ಮಿತ್ರರೇ ಪಂಚಾಯತ್ ರಾಜ್ ಇಲಾಖೆಯಿಂದ ಗ್ರಾಮ ಪಂಚಾಯತಿ ಯೋಜನೆಗಳ ಪ್ರಯೋಜನವನ್ನು ಸುಲಭ ಮತ್ತು ಸರಳ ವಿಧಾನವನ್ನು ಅನುಸರಿಸಿ ಸಾರ್ವಜನಿಕರಿಗೆ ತಲುಪಿಸಲು ಇಲಾಕೆಯು ವಾಟ್ಸಾಪ್ ಸಹಾಯವಾಣಿಯನ್ನು ಆರಂಭಿಸಿದೆ.

ಇದನ್ನೂ ಓದಿ: Borewell Subsidy-ಬೋರ್ವೆಲ್ ಕೊರೆಸಲು ₹4.25 ಲಕ್ಷ ಸಹಾಯಧನಕ್ಕೆ ಅರ್ಜಿ ಅಹ್ವಾನ!

Panchatantra Whatsapp Helpline-ಪಂಚತಂತ್ರ ವಾಟ್ಸಾಪ್ ಚಾಟ್‌ಬಾಟ್‌ ಹೇಗೆ ಕಾರ್ಯನಿರ್ವಹಿಸುತ್ತದೆ?

ಗ್ರಾಮೀಣ ಭಾಗದ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ "8277506000" ಈ ಪಂಚತಂತ್ರ ವಾಟ್ಸಾಪ್ ಚಾಟ್‌ಬಾಟ್‌ ಸಹಾಯವಾಣಿ ಸಂಖ್ಯೆಯನ್ನು ಸೇವ್ ಮಾಡಿಕೊಂಡು ನೇರವಾಗಿ ನಿಮ್ಮ ಮೊಬೈಲ್ ನಲ್ಲಿರುವ ವಾಟ್ಸಾಪ್ ಮೊಬೈಲ್ ಅಪ್ಲಿಕೇಶನ್ ಅನ್ನು ಒಪನ್ ಮಾಡಿ ಸಂದೇಶವನ್ನು ಕಳುಹಿಸುವುದರ ಮೂಲಕ ಗ್ರಾಮ ಪಂಚಾಯತಿ ಸೇವೆಗಳು, ಕುಂದುಕೊರತೆಗಳ ಬಗ್ಗೆ ಅರ್ಜಿಯನ್ನು ಸಲ್ಲಿಸಬಹುದು.

How To Get Panchatantra Whatsapp Helpline Benefits-ಪಂಚತಂತ್ರ ವಾಟ್ಸಾಪ್ ಚಾಟ್‌ಬಾಟ್‌ ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆಯುವುದು ಹೇಗೆ?

ಪಂಚತಂತ್ರ ವಾಟ್ಸಾಪ್ ಚಾಟ್‌ಬಾಟ್‌ ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆಯುವುದು ಭಾರೀ ಸುಲಭ ತಮ್ಮ ಮೊಬೈಲ್ ನಲ್ಲಿ "8277506000" ಈ ಪಂಚತಂತ್ರ ವಾಟ್ಸಾಪ್ ಚಾಟ್‌ಬಾಟ್‌ ಸಹಾಯವಾಣಿ ಸೇವ್ ಮಾಡಿಕೊಂಡು ಕೆಳಗಿನ ವಿಧಾನವನ್ನು ಅನುಸರಿಸಿ ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆಯಬಹುದು.

ಇದನ್ನೂ ಓದಿ: Borewell Subsidy-ಬೋರ್ವೆಲ್ ಕೊರೆಸಲು ₹4.25 ಲಕ್ಷ ಸಹಾಯಧನಕ್ಕೆ ಅರ್ಜಿ ಅಹ್ವಾನ!

How To Use Panchatantra Whatsapp Helpline-ಪಂಚತಂತ್ರ ವಾಟ್ಸಾಪ್ ಚಾಟ್‌ಬಾಟ್‌ ಬಳಸುವ ವಿಧಾನ:

ಗ್ರಾಮೀಣ ಭಾಗದ ಸಾರ್ವಜನಿಕರು ಪಂಚತಂತ್ರ ಸಹಾಯವಾಣಿಯ ಲಾಭವನ್ನು ಪಡೆಯಲು ಕೆಳಗಿನ ವಿಧಾನವನ್ನು ಅನುಸರಿಸಿ.

ಹಂತ-1: ಮೊದಲಿಗೆ ತಮ್ಮ ಮೊಬೈಲ್ ನಲ್ಲಿ "8277506000" ಈ ಪಂಚತಂತ್ರ ವಾಟ್ಸಾಪ್ ಚಾಟ್‌ಬಾಟ್‌ ಸಹಾಯವಾಣಿಯನ್ನು ಸೇವ್ ಮಾಡಿಕೊಳ್ಳಬೇಕು.

ಹಂತ-2: ಬಳಿಕ ನಿಮ್ಮ ಮೊಬೈಲ್ ನಲ್ಲಿರುವ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಒಪನ್ ಮಾಡಿಕೊಂಡು ಈ ನಂಬರ್ ಗೆ "Hi" ಎಂದು ಮೆಸೇಜ್ ಕಳುಹಿಸಿ.

ಇದನ್ನೂ ಓದಿ: Kotak Mahidra Scholarship-ಮಹೀಂದ್ರ ಗ್ರೂಪ್ ನಿಂದ ವೃತ್ತಿಪರ ಪದವಿ ವಿದ್ಯಾರ್ಥಿಗಳಿಗೆ ₹1.5 ಲಕ್ಷ ಸ್ಕಾಲರ್‌ಶಿಪ್!

ಇದನ್ನೂ ಓದಿ: Hero Scholarship-ಹೀರೋ ಕಂಪನಿ ವತಿಯಿಂದ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

ಹಂತ-3: ತದನಂತರ ಇಲ್ಲಿ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ ಎಂದು ಸೂಚನೆ ತೋರಿಸುತ್ತದೆ ಇಲ್ಲಿ ಭಾಷೆಯನ್ನು ಆಯ್ಕೆ ಮಾಡಿಕೊಂಡು ನಿಮ್ಮ ಜಿಲ್ಲೆ/ತಾಲ್ಲೂಕು/ಗ್ರಾಮ ಪಂಚಾಯತಿಯನ್ನು ಆಯ್ಕೆ ಮಾಡಿ.

ಹಂತ-4: ಇಲ್ಲಿ ನಿಮ್ಮ ಗ್ರಾಮ ಪಂಚಾಯತಿಯಿಂದ ನಿಮಗೆ ಅವಶ್ಯವಿರುವ ಯೋಜನೆ ಬಗ್ಗೆ ಅರ್ಜಿ ಸಲ್ಲಿಸಿ ಅಥವಾ ನಿಮ್ಮ ಹಳ್ಳಿಯ ಕುಂದು-ಕೊರತೆಯ ಕುರಿತು ನಿಮ್ಮ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಇಲ್ಲಿ ದೂರನ್ನು ಸಲ್ಲಿಸಬಹುದು.

More Information-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು:

RDPR Website-ಇಲಾಖೆಯ ಅಧಿಕೃತ ಜಾಲತಾಣ- Click Here
Helpline-ಸಹಾಯವಾಣಿ ಸಂಖ್ಯೆ-8277506000
RDPR X Account-ಎಕ್ಸ್/ಟ್ವಿಟರ್ ಖಾತೆ- Follow Now

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: