CET Result-2025: ಸಿಇಟಿ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟ!

September 1, 2025 | Siddesh
CET Result-2025: ಸಿಇಟಿ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟ!
Share Now:

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು(UGCET Result) ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿದ್ದು ವಿದ್ಯಾರ್ಥಿಗಳು ಅನುಸರಿಸಬೇಕಾದ ಕ್ರಮಗಳ ಕುರಿತು ಅಗತ್ಯ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗಿದೆ.

ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟವಾಗಿದ್ದು, ಕಾಲೇಜುಗಳ ಪ್ರವೇಶ ಪ್ರಕ್ರಿಯೆ 31 ಆಗಸ್ಟ್ 2025 ರಿಂದ 03 ಸೆಪ್ಟೆಂಬರ್ 2025 ರವರೆಗೆ ನಡೆಯಲಿದೆ ಎಂದು ಪ್ರಾಧಿಕಾರದ(KEA) ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Karmika Mandali Kit-ಕಾರ್ಮಿಕ ಮಂಡಳಿಯಿಂದ ಸುರಕ್ಷತಾ ಕಿಟ್ ವಿತರಣೆ! ಈಗಲೇ ಅರ್ಜಿ ಸಲ್ಲಿಸಿ!

ವಿದ್ಯಾರ್ಥಿಗಳು ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಮೊಬೈಲ್ ನಲ್ಲೇ ಚೆಕ್ ಮಾಡುವುದು ಹೇಗೆ? ಪ್ರಾಧಿಕಾರದಿಂದ(UGCET Status Check)ನಿಗದಿಪಡಿಸಿರುವ ಪ್ರಮುಖ ದಿನಾಂಕಗಳ ವಿವರ ಸೇರಿದಂತೆ ಸಂಪೂರ್ಣ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.

UGCET Course Details-ಯಾವೆಲ್ಲ ಕೋರ್ಸ್ ಪ್ರವೇಶಕ್ಕೆ ಪಲಿತಾಂಶ ಪ್ರಕಟಿಸಲಾಗಿದೆ?

  • Medical Record Technology
  • Yoga & Naturopathy
  • B.Sc. AHS
  • Agricultural Engineering
  • Food Science /Fisheries & other Courses
  • Veterinary Science
  • BPO
  • PHARM - D
  • BSc Nursing
  • FOOD SCIENCE / FISHERIES AND OTHER COURSES
  • Engineering
  • BPT
  • B-Pharma
  • Architecture

ಇದನ್ನೂ ಓದಿ: Beauty Parlour-ಉಚಿತ ಬ್ಯೂಟಿಪಾರ್ಲರ್ ತರಬೇತಿ ಪಡೆದು ಸ್ವಂತ ಉದ್ಯೋಗ ಆರಂಭಿಸಿ!

CET Seat Result Check-ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ತಿಳಿಯುವ ವಿಧಾನ:

ವಿದ್ಯಾರ್ಥಿಗಳು ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಪಲಿತಾಂಶವನ್ನು ಚೆಕ್ ಮಾಡಿ ನೀವು ಆಯ್ಕೆ ಮಾಡಿಕೊಳ್ಳುವ ಕಾಲೇಜಿಗೆ ಪ್ರವೇಶವನ್ನು ಪಡೆಯಬಹುದು.

ಹಂತ-1: ವಿದ್ಯಾರ್ಥಿಗಳು ಈ "UGCET Seat Final Result" ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ ಗೋಗಲ್ ನಲ್ಲಿ CET Online Karnataka ಎಂದು ಸರ್ಚ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ.

KEA

ಹಂತ-2: ತದನಂತರ ಈ ಪೇಜ್ ನಲ್ಲಿ "ಯುಜಿಸಿಇಟಿ/UGCET" ವಿಭಾಗವನ್ನು ಪ್ರವೇಶ ಮಾಡಿ

ಹಂತ-3: ಇಲ್ಲಿ "ಯುಜಿಸಿಇಟಿ-2025 ಎರಡನೇ ಸುತ್ತಿನ ಅಂತಿಮ ಕಟ್ ಆಫ್ ಪಟ್ಟೊ 30-08-2025" ಬಟನ್ ಮೇಲೆ ಕ್ಲಿಕ್ ಮಾಡಿ ಪದವಿವಾರು ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಪಲಿತಾಂಶವನ್ನು ನೋಡಬಹುದು.

ಇದನ್ನೂ ಓದಿ: Krishi Mela Dharwad-ಧಾರವಾಡ ಕೃಷಿ ಮೇಳ 2025: ರೈತರ ಹಬ್ಬಕ್ಕೆ ದಿನಾಂಕ ಘೋಷಣೆ!

Important Dates-ಸೀಟು ಹಂಚಿಕೆಗೆ ನಿಗದಿಪಡಿಸಿದ ಪ್ರಮುಖ ದಿನಾಂಕಗಳು:

ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟಣೆ- 30-08-2025

ಸೀಟು ಹಂಚಿಕೆಯಾದ ಅಭ್ಯರ್ಥಿಗಳು Choice ಅನ್ನು ಆಯ್ಕೆ ಮಾಡಲು ಕಾಲಾವಕಾಶ- From 6.00 pm on 30-08-2025 upto 1.00pm on 02-09-2025

ಶುಲ್ಕ ಪಾವತಿ Choice-1,Choice-2 ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳಿಗೆ ಮಾತ್ರ- From 6.00 pm on 30-08-2025 upto 02-09-2025

Confimation Slip ಡೌನ್ಲೋಡ್ ಮಾಡಿಕೊಳ್ಳುವುದು Choice-1 ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳಿಗೆ ಮಾತ್ರ- Before 4.00 pm on 03-09-02025 After confirmation of payment

Choice-1 ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಕಾಲೇಜಿನಲ್ಲಿ ಪ್ರವೇಶ ಪಡೆಯಲು ಕೊನೆಯ ದಿನಾಂಕ- 03-09-2025 Before 5.30 pm

ಇದನ್ನೂ ಓದಿ: Prabanda Sparde-2025: ಗಾಂಧಿ ಜಯಂತಿ ಪ್ರಯುಕ್ತ ಪ್ರಬಂಧ ಸ್ಪರ್ಧೆ!ಪ್ರಥಮ ಬಹುಮಾನ 31,000 ರೂ!

UGCET Seat Result Information-ಸಿಇಟಿ ಎರಡನೇ ಸುತ್ತಿನ ಸೀಟು ಹಂಚಿಕೆ ಕುರಿತು ಉಪಯುಕ್ತ ಮಾಹಿತಿ:

ಅಧಿಕೃತ ವೆಬ್ಸೈಟ್
Click Here
ಪ್ರಮುಖ ದಿನಾಂಕ ವಿವರ
Download Now
ವಿದ್ಯಾರ್ಥಿಗಳಿಗೆ ಸೂಚನೆ ಪಟ್ಟಿ
Download Now
ಫಲಿತಾಂಶ ನೋಡಲು ಲಿಂಕ್Check UGCET Seat Final Result

ಇದನ್ನೂ ಓದಿ: Bele Parihara-2025-ಮಳೆಯಿಂದ ಹಾನಿಯಾದ ಬೆಳೆ ಹಾನಿಗೆ ಪರಿಹಾರ ಬಿಡುಗಡೆ! ಕಂದಾಯ ಇಲಾಖೆಯಿಂದ ಅಪ್ಡೇಟ್!

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವಿದ್ಯಾರ್ಥಿಗಳಿಗೆ ಪ್ರಮುಖ ಸೂಚನೆಗಳು:

ವೈದ್ಯಕೀಯ ಸೀಟುಗಳ ಅಖಿಲ ಭಾರತ ಎರಡನೇ ಸುತ್ತಿನ ವೇಳಾಪಟ್ಟಿ ಪರಿಷ್ಕರಣೆ ಹಂತದಲ್ಲಿ ಇರುವುದರಿಂದ ಮತ್ತು ಇನ್ನೂ ಕೆಲವು ದಿನಗಳವರೆಗೆ ವಿಳಂಬವಾಗುತ್ತಿರುವುದರಿಂದ, ಯುಜಿಸಿಇಟಿ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಎರಡನೇ ಸುತ್ತಿನಲ್ಲಿ ಯುಜಿಸಿಇಟಿ ಕೋರ್ಸುಗಳಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ನಾಲ್ಕು CHOICE ಗಳನ್ನು ನೀಡಲಾಗುವುದು.

ಇದನ್ನೂ ಓದಿ: SSP Scholarship Aadhar Link-ವಿದ್ಯಾರ್ಥಿವೇತನ ಪಡೆಯಲು ಆಧಾರ್ ಸೀಡಿಂಗ್ ಕಡ್ಡಾಯ! ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ!

UGCET 2025: ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶದ ನಂತರದ ಸೂಚನೆಗಳು:

ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದ ನಂತರ ಅಭ್ಯರ್ಥಿಗಳಿಗೆ ಈ ಕೆಳಗೆ ವಿವರಿಸಿರುವಂತೆ ನಿರ್ಣಯಗಳನ್ನು ತೆಗೆದುಕೊಳ್ಳಬಹುದಾಗಿರುತ್ತದೆ.

  • ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ವಿವಿಧ ನಾಲ್ಕು CHOICE ಗಳನ್ನು ನೀಡಲಾಗುವುದು. ಅಭ್ಯರ್ಥಿಗಳು ನಾಲ್ಕು CHOICE ಗಳಲ್ಲಿ ತಮಗೆ ಸರಿ ಎನಿಸುವ ಯಾವುದಾದರೂ ಒಂದು CHOICE ಅನ್ನು ಆಯ್ಕೆ ಮಾಡುವ ಮೊದಲು, ಪ್ರತಿ CHOICE ಗಳ ವಿವರಣೆಯನ್ನು ಓದಿ ಸರಿಯಾಗಿ ಅರ್ಥೈಸಿಕೊಂಡು, ತಮ್ಮ ಪೋಷಕರೊಡನೆ ಚರ್ಚಿಸಿ ಅಭ್ಯರ್ಥಿಯು ತನಗೆ ಸೂಕ್ತವೆನಿಸಿದ CHOICE ಅನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಿದೆ. ನಾಲ್ಕು CHOICE ಗಳಲ್ಲಿ ಯಾವುದೇ CHOICE ಅನ್ನು ಆಯ್ಕೆ ಮಾಡದಿರುವ ಅಭ್ಯರ್ಥಿಗಳು ಮುಂದಿನ ಸುತ್ತುಗಳಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆಯುವುದಿಲ್ಲ.
  • OPTIONS ಗಳನ್ನು ನೀಡಿ ಅದರೆ ಯಾವುದೇ ಸೀಟು ಹಂಚಿಕೆಯಾಗದೇ ಇರುವ ಅಭ್ಯರ್ಥಿಗಳಿಗೆ ಯಾವುದೇ CHOICE ಅನ್ನು ಆಯ್ಕೆ ಮಾಡುವ ಅವಕಾಶ ಇರುವುದಿಲ್ಲ.
  • ಎರಡನೇ ಸುತ್ತಿನಲ್ಲಿ ಹಂಚಿಕೆಯಾಗುವ ಸೀಟಿಗೆ ಅಭ್ಯರ್ಥಿಗಳು, CHOICE-1 ಅನ್ನು ಆಯ್ಕೆ ಮಾಡಿದಲ್ಲಿ, ಅಂತಹ ಅಭ್ಯರ್ಥಿಗಳನ್ನು ಯುಜಿಸಿಂಟಿ ಕೋರ್ಸುಗಳಿಗೆ ಅಥವಾ ಯುಜಿನೀಟ್ ಸೀಟು ಹಂಚಿಕೆಗೆ ಪರಿಗಣಿಸುವುದಿಲ್ಲ.
  • ಒಂದು ವೇಳೆ ಅಭ್ಯರ್ಥಿಗಳು ತನಗೆ ಹಂಚಿಕೆಯಾದ ಸೀಟು ತೃಪ್ತಿಕರವಾಗಿದ್ದು, ಯಾವುದೇ ಬದಲಾವಣೆ ಬೇಡ ಎಂದೆನಿಸಿದಲ್ಲಿ ಮಾತ್ರ CHOICE-1 ಅನ್ನು ಆಯ್ಕೆ ಮಾಡಬಹುದು. ಮುಂದಿನ ಯಾವುದೇ ಸುತ್ತುಗಳಲ್ಲಿ ಭಾಗವಹಿಸಲು ಅರ್ಹತೆ ಇರುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು CHOICE-1 ಅನ್ನು ಆಯ್ಕೆ ಮಾಡಲು ಸೂಚಿಸಿದೆ.

  • CHOICE-2 ಅನ್ನು ಆಯ್ಕೆ ಮಾಡಿಕೊಳ್ಳುವ ಅಭ್ಯರ್ಥಿಗಳು ಎರಡನೇ ಸುತ್ತಿನಲ್ಲಿ ಯಾವುದೇ ಡಿಸಿಪ್ಲೇನ್‌ನಲ್ಲಿ ಅಥವಾ ಯಾವುದೇ ವರ್ಗದಲ್ಲಿ ಸೀಟು ಹಂಚಿಕೆಯಾಗಿದ್ದಲ್ಲಿ 3ನೇ ಸುತ್ತಿನಲ್ಲಿ ಭಾಗವಹಿಸಲು ಅರ್ಹತೆ ಪಡೆಯಲು ನಿಗದಿತ ಶುಲ್ಕವನ್ನು ಪಾವತಿಸಬೇಕು.
  • CHOICE-3 ಅನ್ನು ಆಯ್ಕೆ ಮಾಡಿಕೊಳ್ಳುವ ಅಭ್ಯರ್ಥಿಗಳು ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ಶುಲ್ಕವನ್ನು ಪ ವತಿಸುವ ಅಗತ್ಯವಿರುವುದಿಲ್ಲ. ಆದರೆ 3ನೇ ಸುತ್ತಿನಲ್ಲಿ ಭಾಗವಹಿಸಲು ರೂ.10,000/- Caution Deposit ಅನ್ನು ಪಾವತಿಸಬೇಕು.
  • ಗಮನಿಸಿ: ಯುಜಿಸಿಇಟಿ ಕೋರ್ಸುಗಳ 3ನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆಯ ನಂತರ ಅಭ್ಯರ್ಥಿಗಳಿಗೆ ಯಾವುದೇ ಛಾಯ್ಸ್ ಗಳು ಆಯ್ಕೆ ಮಾಡಲು ಅವಕಾಶ ಇರುವುದಿಲ್ಲ. ಅಭ್ಯರ್ಥಿಗಳು ಕಡ್ಡಾಯವಾಗಿ ಹಂಚಿಕೆಯಾದ ಸೀಟಿಗೆ ಪ್ರವೇಶವನ್ನು ಪಡೆಯಬೇಕು, ಆದ್ದರಿಂದ ಅಭ್ಯರ್ಥಿಗಳು ಮತ್ತು ಪೋಷಕರು ಕಾಲೇಜಿಗೆ ಸೇರ ಬಯಸುವ ಇಷ್ಟವಿರುವ ಕಾಲೇಜುಗಳನ್ನು ಮಾತ್ರ ದಾಖಲಿಸಬೇಕು,
  • ಏಕೆಂದರೆ ಮೆರಿಟ್ ಆಧಾರದ ಮೇಲೆ ಹಾಗು ಅಭ್ಯರ್ಥಿಗಳು ದಾಖಲಿಸುವ options ಗಳನ್ನು ಪರಿಗಣಿಸಿ ಸೀಟು ಹಂಚಿಕೆ ಮಾಡುವುದರಿಂದ ಹಂಚಿಕೆಯಾದ ಸೀಟನ್ನು ನಿರಾಕರಿಸುವಂತಿಲ್ಲ. ಆದ್ದರಿಂದ ಅಭ್ಯರ್ಥಿಗಳು ಎಚ್ಚರದಿಂದ options ಗಳನ್ನು ಆದ್ಯತೆಯ ಕ್ರಮಾಂಕದಲ್ಲಿ ಸಲ್ಲಿಸಬೇಕು. 3ನೇ ಸುತ್ತಿನ ಸೀಟು ಹಂಚಿಕೆಯ ನಂತರ ಶುಲ್ಕ ಪಾವತಿಸಲು ಅಥವಾ ಕಾಲೇಜಿನಲ್ಲಿ ಪ್ರವೇಶ ಪಡೆಯಲು ವಿಫಲನಾದಲ್ಲಿ ಅಂತಹ ಅಭ್ಯರ್ಥಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಮತ್ತು ಮುಂದಿನ ಮೂರು ವರ್ಷಗಳವರೆಗೆ ಸದರಿ ಕೋರ್ಸಿಗೆ ಅವಕಾಶ ನೀಡುವುದಿಲ್ಲ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: