Free Mushroom Training-ಉಚಿತ ಅಣಬೆ ಬೇಸಾಯ ತರಬೇತಿ ಈಗಲೇ ಅರ್ಜಿ ಸಲ್ಲಿಸಿ!

September 14, 2025 | Siddesh
Free Mushroom Training-ಉಚಿತ ಅಣಬೆ ಬೇಸಾಯ ತರಬೇತಿ ಈಗಲೇ ಅರ್ಜಿ ಸಲ್ಲಿಸಿ!
Share Now:

ಕೆನರಾ ಬ್ಯಾಂಕ್‌ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ(Canara Bank Training Center) ಉಚಿತವಾಗಿ ಅಣಬೆ ಬೇಸಾಯ ತರಬೇತಿಯನ್ನು ಒದಗಿಸಲು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿರುತ್ತದೆ. ಈ ತರಬೇತಿಯನ್ನು ಪಡೆಯಲು ಅರ್ಜಿಯನ್ನು ಸಲ್ಲಿಸುವುದರ ಕುರಿತು ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್‌ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರದಲ್ಲಿ ಒಟ್ಟು 10 ದಿನಗಳ ಉಚಿತ ಅಣಬೆ ಬೇಸಾಯ ತರಬೇತಿಯನ್ನು(Mushroom Training) ಆಯೋಜನೆ ಮಾಡಲಾಗಿದ್ದು ಆಸಕ್ತಿಯುಳ್ಳ ಶಿಬಿರಾರ್ಥಿಗಳು ಅಣಬೆ ಬೇಸಾಯ ತರಬೇತಿಯನ್ನು ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಇದನ್ನೂ ಓದಿ: Mysuru Udyogamela-2025: ಮೈಸೂರಿನಲ್ಲಿ ಉದ್ಯೋಗ ಮೇಳ ನಿರುದ್ಯೋಗಿಗಳಿಗೆ ನೋಂದಣಿಗೆ ಅವಕಾಶ!

ಉಚಿತ ಅಣಬೆ ಬೇಸಾಯ ತರಬೇತಿ(Mushroom Training Application) ಪಡೆಯಲು ಅರ್ಜಿ ಸಲ್ಲಿಸಲು ಅರ್ಹರು, ತರಬೇತಿಯಲ್ಲಿ ಭಾಗವಹಿಸಲು ಅಗತ್ಯ ದಾಖಲೆಗಳೇನು? ತರಬೇತಿಯಲ್ಲಿ ಭಾಗವಹಿಸಲು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳುವ ವಿಧಾನ ಹೇಗೆ? ಇನ್ನಿತರೆ ಅವಶ್ಯಕ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Who Can Apply For Free Mushroom Training-ಅರ್ಜಿ ಸಲ್ಲಿಸಲು ಅರ್ಹರು ಯಾರು?

ಉಚಿತ ಅಣಬೆ ಬೇಸಾಯ ತರಬೇತಿಯನ್ನು ಪಡೆಯಲು ಈ ಕೆಳಗಿನ ಪಟ್ಟಿಯಲ್ಲಿರುವ ಅರ್ಹತೆಯನ್ನು ಹೊಂದಿರುವವರು ಅರ್ಜಿಯನ್ನು ಸಲ್ಲಿಸಿ ಮುಂಚಿತವಾಗಿ ನೋಂದಣಿಯನ್ನು ಮಾಡಿಕೊಳ್ಳಬಹುದು.

  • ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಅರ್ಜಿದಾರರ ವಯಸ್ಸು 18 ರಿಂದ 35 ವರ್ಷದ ಒಳಗಿರಬೇಕು.
  • ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ ನಿರುದ್ಯೋಗಿ ಪುರುಷರು ಮತ್ತು ಮಹಿಳೆಯರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ.
  • ಗ್ರಾಮೀಣ ಭಾಗದಲ್ಲಿ ನೆಲೆಸಿರುವ ಬಿಪಿಎಲ್ ಕಾರ್ಡ ಅನ್ನು ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ಇರುತ್ತದೆ.
  • ಅಭ್ಯರ್ಥಿಗಳು ಸ್ಥಳೀಯ ಭಾಷೆ ಬಲ್ಲವರಾಗಿದ್ದು, ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು.

ಇದನ್ನೂ ಓದಿ: Gruhalakshmi Hana-ಗೃಹಲಕ್ಷ್ಮಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಹಣ ಶೀಘ್ರದಲ್ಲಿ ಫಲಾನುಭವಿಗಳ ಖಾತೆಗೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Free Mushroom Training (3)

ಇದನ್ನೂ ಓದಿ: BPL Card-ಅನರ್ಹ ಬಿಪಿಎಲ್ ಕಾರ್ಡದಾರರಿಗೆ ನೋಟಿಸ್! ನಿಮಗೆ ನೋಟಿಸ್ ಬಂದರೆ ಏನು ಮಾಡಬೇಕು

Free Mushroom Training Date-ತರಬೇತಿ ಪ್ರಾರಂಭ ದಿನಾಂಕ ಯಾವುದು?

ಉಚಿತ ಅಣಬೆ ಬೇಸಾಯ ತರಬೇತಿಯು ದಿನಾಂಕ 19 ಸೆಪ್ಟೆಂಬರ್ 2025 ರಿಂದ ಆರಂಭವಾಗಿ ಒಟ್ಟು 10 ದಿನ ನಡೆಯಲಿದೆ ನಿರುದ್ಯೋಗಿ ಪುರುಷರಿಗೆ ಮತ್ತು ಮಹಿಳೆಯರಿಗೆ ಈ ತರಬೇತಿಯನ್ನು ಆಯೋಜನೆ ಮಾಡಲಾಗಿದೆ.

Mushroom Training Center Address-ಉಚಿತ ಅಣಬೆ ಬೇಸಾಯ ತರಬೇತಿ ಎಲ್ಲಿ ನಡೆಯುತ್ತದೆ?

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್‌ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರದಲ್ಲಿ ಒಟ್ಟು 10 ದಿನದ ಉಚಿತ ಅಣಬೆ ಬೇಸಾಯ ತರಬೇತಿಯನ್ನು ಆಯೋಜನೆ ಮಾಡಲಾಗಿದೆ.

ಇದನ್ನೂ ಓದಿ: JK Tyre Shiksha Scholarship-ಜೆಕೆ ಟೈರ್ ಸ್ಕಾಲರ್ಶಿಪ್ ವಿದ್ಯಾರ್ಥಿನಿಯರಿಗೆ ರೂ 25,000/- ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

Mushroom Training Registration-ತರಬೇತಿ ಪಡೆಯಲು ಮುಂಚಿತವಾಗಿ ನೋಂದಣಿ ಮಾಡುವುಹುದು ಹೇಗೆ?

ಉಚಿತ ಅಣಬೆ ಬೇಸಾಯ ತರಬೇತಿಯನ್ನು ಪಡೆಯಲು ಅಭ್ಯರ್ಥಿಗಳು ಮುಂಚಿತವಾಗಿ ತಮ್ಮ ಹೆಸರುಗಳನ್ನು ನೋಂದಣಿಯನ್ನು ಮಾಡಲು ಈ ದೂರವಾಣಿ ಸಂಖ್ಯೆ 8970476050, 9591514154, 9686248369, 8970446644, 9505894247 ಗಳಿಗೆ ಸಂಪರ್ಕಿಸಿ.

Free Mushroom Training

ಇದನ್ನೂ ಓದಿ: Traffic Fine 50% Offer-ವಾಹನ ಸವಾರರಿಗೆ ಸಿಹಿ ಸುದ್ದಿ: ಟ್ರಾಫಿಕ್ ಬಾಕಿ ದಂಡ ಪಾವತಿಗೆ ಶೇ 50% ರಿಯಾಯಿತಿ!

Free Mushroom Training Facility-ಶಿಬಿರಾರ್ಥಿಗಳಿಗೆ ಯಾವೆಲ್ಲ ಸೌಲಭ್ಯವಿರುತ್ತದೆ?

ತರಬೇತಿಯಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ತರಬೇತಿ ನಡೆಯುವ ಸಮಯದಲ್ಲಿ ಊಟ ಹಾಗೂ ವಸತಿ ಸೌಕರ್ಯಗಳು ಉಚಿತವಾಗಿ ಒದಗಿಸಲಾಗುತ್ತದೆ. ಇದಲ್ಲದೆ ತರಬೇತಿಯನ್ನು ಪಡೆದ ನಂತರ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಪ್ರಮಾಣ ಪತ್ರವನ್ನು ಸಹ ವಿತರಿಸಲಾಗುತ್ತದೆ.

Mushroom Farming Bank Loan-ಬ್ಯಾಂಕ್ ಮೂಲಕ ಸಾಲ ಪಡೆಯಲು ಉಚಿತ ಮಾರ್ಗದರ್ಶನ:

ಆಸಕ್ತ ಅಭ್ಯರ್ಥಿಗಳು ತರಬೇತಿಯನ್ನು ಪಡೆದ ಬಳಿಕ ಸ್ವಂತ ಉದ್ದಿಮೆಯನ್ನು ಆರಂಭಿಸಲು ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಎಲ್ಲಾ ಶಿಬಿರಾರ್ಥಿಗಳಿಗೆ ಉಚಿತವಾಗಿ ಯೋಜನಾ ವರದಿ ತಯಾರಿಕೆ ಮತ್ತು ಸಾಲ ಪಡೆಯಲು ಅವಶ್ಯಕ ಮಾರ್ಗದರ್ಶನವನ್ನು ಉಚಿತವಾಗಿ ನೀಡಲಾಗುತ್ತದೆ.

ಇದನ್ನೂ ಓದಿ: IDFC First Bank Scholarship-ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ IDFC First ಬ್ಯಾಂಕ್ ನಿಂದ 1.0 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Required Documents For Free Mushroom Training-ತರಬೇತಿಯಲ್ಲಿ ಭಾಗವಹಿಸಲು ಅವಶ್ಯಕ ದಾಖಲೆಗಳು ಯಾವುವು?

ಆಸಕ್ತಿಯುಳ್ಳ ಶಿಬಿರಾರ್ಥಿಗಳು ದಿನಾಂಕ : 19/0̈9/2025 ಶುಕ್ರವಾರ ಬೆಳಗ್ಗೆ 9.00 ಘಂಟೆಗೆ ಕೆನರಾ ಬ್ಯಾಂಕ್‌ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸೊಣ್ಣಹಳ್ಳಿಪುರ, ಹಸಿಗಾಳ (ಅಂಚೆ), ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ನಡೆಯುವ ನೇರ ಸಂದರ್ಶನಕ್ಕೆ ನಿಮ್ಮ ಆಧಾರ್ ಕಾರ್ಡ, ವಿದ್ಯಾರ್ಹತೆ ದಾಖಲಾತಿ, ರೇಶನ್ ಕಾರ್ಡ, ಪೋಟೊ, ಬ್ಯಾಂಕ್ ಪಾಸ್ ಬುಕ್ ದಾಖಲಾತಿಗಳೊಂದಿಗೆ ಹಾಜರಾಗಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: