Samaja Kalyana Ilake-ಡಾ.ಬಾಬು ಜಗಜೀವನ ಚರ್ಮ ನಿಗಮದಿಂದ ವಸತಿ ಯೋಜನೆಯಡಿ ಅರ್ಜಿ ಆಹ್ವಾನ!

September 18, 2025 | Siddesh
Samaja Kalyana Ilake-ಡಾ.ಬಾಬು ಜಗಜೀವನ ಚರ್ಮ ನಿಗಮದಿಂದ ವಸತಿ ಯೋಜನೆಯಡಿ ಅರ್ಜಿ ಆಹ್ವಾನ!
Share Now:

ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದಿಂದ ವಿವಿಧ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸಹಾಯಧನವನ್ನು ಒದಗಿಸಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶ ಒದಗಿಸಲಾಗಿದೆ.

ಚರ್ಮಕಾರರ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ನೇರ ಸಾಲ ಯೋಜನೆ ಮತ್ತು ಚರ್ಮಕಾರರ ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಿದ್ದು ಈ ಯೋಜನೆಗೆ ಅರ್ಜಿ ಸಲ್ಲಿಸುವುದರ ಬಗ್ಗೆ ಮತ್ತು ಯೋಜನೆಗಳ ಪ್ರಯೋಜನದ ಕುರಿತು ಸಂಪೂರ್ಣ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Self Help Groups Subsidy-ಅಲ್ಪಸಂಖ್ಯಾತ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ₹ 2.00 ಲಕ್ಷ ಸಹಾಯಧನ!

ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮದ ವತಿಯಿಂದ ಚರ್ಮಕಾರರ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ನೇರ ಸಾಲ ಯೋಜನೆ ಮೂಲಕ ಅಡಿಯಲ್ಲಿ ಚರ್ಮೋತ್ಪನ್ನಗಳನ್ನು(ಸ್ಲ್ಪಿಪರ್ ಶಾಪ್) ಅಂಗಡಿಯನ್ನು ತೆರೆಯಲು ಶೇ 50% ಸಬ್ಸಿಡಿ ಪಡೆಯಬಹುದು ಮತ್ತು ಚರ್ಮಕಾರರ ವಸತಿ ಯೋಜನೆಯಡಿ ಮನೆಯನ್ನು ಹೊಂದಲು ನಿಗಮದಿಂದ ಧನ ಸಹಾಯವನ್ನು ಪಡೆಯಬಹುದು.

ಯೋಜನೆಯ ವಿವರ ಹೀಗಿದೆ:

1) ಚರ್ಮಕಾರರ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ನೇರ ಸಾಲ ಯೋಜನೆ:

ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮದಿಂದ ಚರ್ಮಕಾರರ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ನೇರ ಸಾಲ ಯೋಜನೆ ಅಡಿಯಲ್ಲಿ ಕಚ್ಚಾ ಮಾಲು ಖರೀದಿ, ಚರ್ಮೋತ್ಪನ್ನಗಳ ಉತ್ಪಾದನೆ, ರಿಪೇರಿ ಮತ್ತು ಮಾರಾಟ ಮಾಡುವ ಅಂಗಡಿ ತೆರೆಯುವುದು/ಲಘು ವಾಹನದ ಮೂಲಕ ವ್ಯಾಪಾರ ಮಾಡುವವರಿಗೆ ಒಟ್ಟು ಘಟಕದ ವೆಚ್ಚ 1,00,000/- ಕ್ಕೆ ರೂ 50,000/- ಸಹಾಯಧನ ಮತ್ತು ರೂ 50,000/- ಸಾಲವನ್ನು ಒದಗಿಸಲಾಗುತ್ತದೆ.

ಇದನ್ನೂ ಓದಿ: Azim Premji Foundation-ಅಜೀಂ ಪ್ರೇಮ್‌ಜಿ ಫೌಂಡೇಶನ್ ನಿಂದ ವಿದ್ಯಾರ್ಥಿನಿಯರಿಗೆ ₹30,000 ಸ್ಕಾಲರ್‌ಶಿಪ್!

2) ಚರ್ಮಕಾರರ ವಸತಿ ಯೋಜನೆ

ಚರ್ಮ ಕುಶಲಕರ್ಮಿಗಳು ಖಾಲಿ ನಿವೇಶನ ಹೊಂದಿದ್ದಲ್ಲಿ ಚರ್ಮಕಾರರಿಗೆ ವಾಸಕ್ಕೆ ಮತ್ತು ಉದ್ಯೋಗ ಮುಂದುವರೆಸಲು ಅನುಕೂಲ ವಾಗುವಂತೆ ವಸತಿ ಕಾರ್ಯಾಗಾರಗಳನ್ನು ನಿರ್ಮಿಸಿಕೊಳ್ಳಲು ನಿಗಮದ ಮೂಲಕ ರೂ.2.20 ಲಕ್ಷ ಧನಸಹಾಯವನ್ನು ಈ ಯೋಜನೆಯ ಮೂಲಕ ನೀಡಲಾಗುತ್ತದೆ.

ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತದೆ.

ಯೋಜನೆಗೆ ಅರ್ಜಿ ಸಲ್ಲಿಸಲು ಉಪಯುಕ್ತ ಮಾಹಿತಿ:

ನಿಗಮದ ವೆಬ್ಸೈಟ್- Click Here
ಅರ್ಜಿ ಸಲ್ಲಿಸಲು ಲಿಂಕ್- Apply Now
ಸಹಾಯವಾಣಿ- 9482300400
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 08 ಅಕ್ಟೋಬರ್ 2025

ಇದನ್ನೂ ಓದಿ: Bele Vime Amount: ಮುಂಗಾರು ಹಂಗಾಮಿನ 291.92 ಕೋಟಿ ಬೆಳೆ ವಿಮೆ ರೈತರ ಖಾತೆಗೆ: ಸಚಿವ ಪ್ರಿಯಾಂಕ್ ಖರ್ಗೆ

vasati yojane

ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳು:

  • ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದ ಅರುಂದತಿಯಾರ್, ಚಮ್ಮಾದಿಯ, ಚಮಾರ್, ಚಂಭಾರ್, ಚಮಗಾರ್, ಮಾದರ್, ಮಾದಿಗ್, ಮಾದಿಗ, ಮಿನಿಮಾದಿಗ್, ಜಾಂಬುವುಲು, ಹರಳಯ್ಯ, ಮಾಚಿಗಾರ್, ಮೋಚಿಗಾರ್, ಮೋಚಿ, ಮುಚಿ, ತೆಲಗು ಮೋಚಿ, ಕಮಾಟಿ ಮೋಚಿ, ರೋಹಿದಾಸ್, ಧೋರ್, ಕಕ್ಕಯ್ಯ, ಕಂಕಯ್ಯ, ಸಮಗಾರ, ಸಮಗಾರ್, ಆದಿ ಆಂದ್ರ, ಆದಿ ದ್ರಾವಿಡ, ಆದಿ ಕರ್ನಾಟಕ ಜಾತಿಗಳಿಗೆ ಸೇರಿದ ಕುಶಲಕರ್ಮಿಗಳಾಗಿರಬೇಕು.
  • ಆದಿ ಆಂದ್ರ, ಆದಿ ದ್ರಾವಿಡ, ಆದಿ ಕರ್ನಾಟಕ ಜಾತಿ ಪ್ರಮಾಣ ಪತ್ರ ಹೊಂದಿರುವವರು ಕಡ್ಡಾಯವಾಗಿ ಪ್ರಸ್ತಾಪಿತ ಉಪ ಜಾತಿಗೆ ಸೇರಿರುವ ಬಗ್ಗೆ ಸ್ವಯಂ ಘೋಷಣಾ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
  • ಅರ್ಜಿದಾರರು 18 ವರ್ಷ ಮೇಲ್ಪಟ್ಟ ವಯೋಮಾನದವರಾಗಿರಬೇಕು.
  • ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶವಾದಲ್ಲಿ ರೂ. 1.50 ಲಕ್ಷ ಹಾಗೂ ನಗರ ಪ್ರದೇಶವಾದಲ್ಲಿ ರೂ. 2.00 ಲಕ್ಷದ ಮಿತಿಯೊಳಗಿರಬೇಕು.
  • ಡಾ. ಬಾಬು ಜಗಜೀವನ ರಾಂ ಚರ್ಮಕಾರರ ವಸತಿ ಯೋಜನೆಗೆ ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದಲ್ಲಿ ರೂ. 32,000/- ಮತ್ತು ನಗರ ಪ್ರದೇಶದವರಿಗೆ ರೂ. 87,600/- ಗಳ ಮಿತಿ ಒಳಗಿರಬೇಕು.
  • ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು.

ಇದನ್ನೂ ಓದಿ: Free Bike Repair Training-ಉಚಿತ ಬೈಕ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

vasati yojane arji

ಅರ್ಜಿ ಸಲ್ಲಿಸುವುದು ಹೇಗೆ?

ಸುವಿಧಾ ಅಥವಾ ಸೇವಾಸಿಂಧು ಪೋರ್ಟಲ್ ಮೂಲಕ ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

ಫಲಾನುಭವಿ ಆಯ್ಕೆ ಪ್ರಕ್ರಿಯೆ:

ಒಮ್ಮೆ ಅರ್ಜಿಯನ್ನು ಸಲ್ಲಿಸಿದ ಬಳಿಕ ಕೊನೆಯ ದಿನಾಂಕ ಮುಗಿದ ಬಳಿಕ ನಿಗಮದ ಜಿಲ್ಲಾ ಸಂಯೋಜಕರು ಎಲ್ಲಾ ಅರ್ಜಿಗಳನ್ನು ಪರಿಶೀಲನೆ ಮಾಡಿ ಅರ್ಹ ಕುಶಲಕರ್ಮಿಗಳ ಪಟ್ಟಿ ಸಿದ್ಧಪಡಿಸಿ ಸಂಬಂಧಪಟ್ಟ ಕ್ಷೇತ್ರದ ಶಾಸಕರ ಗಮನಕ್ಕೆ ತಂದು ಜಿಲ್ಲಾ ಸಮಿತಿ ಮುಂದೆ ಮಂಡಿಸಲಾಗುತ್ತದೆ.

ಸಮಿತಿಯು ಫಲಾನುಭವಿಗಳನ್ನು ಆಯ್ಕೆ ಮಾಡಿದ ನಂತರ ದೃಢೀಕರಣ ಪಡೆದು ನಿಗಮದ ಜಿಲ್ಲಾ ಸಂಯೋಜಕರು ಪಟ್ಟಿಯನ್ನು ಪ್ರಧಾನ ಕಛೇರಿಗೆ ಸಲ್ಲಿಸಲಾಗುತ್ತದೆ. ಆಯ್ಕೆ ಪಟ್ಟಿಗೆ ವ್ಯವಸ್ಥಾಪಕ ನಿರ್ದೇಶಕರ ಆಡಳಿತಾತ್ಮಕ ಅನುಮೋದನೆ ಪಡೆದು ಆಯ್ಕೆ ಪಟ್ಟಿಯನ್ನು ಸಂಬಂಧಿಸಿದ ಜಿಲ್ಲಾ ಘಟಕಗಳ ಸೂಚನಾ ಫಲಕದಲ್ಲಿ ಪ್ರಕಟಿಸುವುದು ನಂತರ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತದೆ.

ಇದನ್ನೂ ಓದಿ: NMMS Scholarship-ಎನ್‍ಎಂಎಂಎಸ್ ಯೋಜನೆಯಡಿ ಪ್ರತಿ ತಿಂಗಳು 1,000/- ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

ಅರ್ಜಿ ಸಲ್ಲಿಸಲು ದಾಖಲೆಗಳು:

  • ಆಧಾರ್ ಕಾರ್ಡ್.
  • ಜಾತಿ ಪ್ರಮಾಣ ಪತ್ರ. (ಆರ್. ಡಿ ಸಂಖ್ಯೆ ಹೊಂದಿರಬೇಕು)
  • ಚಾಲ್ತಿಯಲ್ಲಿರುವ ವಾರ್ಷಿಕ ಆದಾಯ ಪ್ರಮಾಣ ಪತ್ರ.
  • ಪಡಿತರ ಚೀಟಿ .
  • ಪಾಸ್‍ಪೋರ್ಟ್ ಅಳತೆಯ ಗಂಡ ಮತ್ತು ಹೆಂಡತಿಯ ಭಾವಚಿತ್ರ.
  • ಇ-ಶ್ರಮ್ ಕಾರ್ಡ್ (ವೃತ್ತಿ-ಚರ್ಮ ವೃತ್ತಿಯಲ್ಲಿ ತೊಡಗಿರುವ ಬಗ್ಗೆ)
  • ಯೋಜನಾ ವರದಿ/ದರಪಟ್ಟಿ (ಸ್ವಯಂ ಉದ್ಯೋಗ ಯೋಜನೆಗಳಿಗೆ ಮಾತ್ರ).
  • ಸಂಚಾರಿ ಮಾರಾಟ ಮಳಿಗೆಯಾದಲ್ಲಿ ಆರ್.ಟಿ.ಓ ಯಿಂದ ಪಡೆದ ಡ್ರೈವಿಂಗ್ ಲೈಸೆನ್ಸ್.
  • ನಿವೇಶನದ ಖಾತಾ ಸರ್ಟಿಫಿಕೇಟ್ (ವಸತಿ ಯೋಜನೆಗೆ ಮಾತ್ರ).

ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಗಮದ ಜಾಲತಾಣ-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: