Bima Sakhi-ಬಿಮಾ ಸಖಿ ಯೋಜನೆ: ಎಲ್ಐಸಿ ಯಿಂದ ಮಹಿಳಾ ಏಜೆಂಟರಿಗೆ ತಿಂಗಳಿಗೆ ರೂ 7,000/- ಸ್ಟೈಪೆಂಡ್!

November 8, 2025 | Siddesh
Bima Sakhi-ಬಿಮಾ ಸಖಿ ಯೋಜನೆ: ಎಲ್ಐಸಿ ಯಿಂದ ಮಹಿಳಾ ಏಜೆಂಟರಿಗೆ ತಿಂಗಳಿಗೆ ರೂ 7,000/- ಸ್ಟೈಪೆಂಡ್!
Share Now:

ದೇಶಾದ್ಯಂತ ಭಾರತೀಯ ಜೀವ ವಿಮಾ ನಿಗಮದಿಂದ(LIC) ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಜೀವನವನ್ನು ಸಾಗಿಸಲು ಬಿಮಾ ಸಖಿ(Bima Sakhi) ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆ ಮೂಲಕ ಮಹಿಳಾ ಏಜೆಂಟರಿಗೆ ತಿಂಗಳಿಗೆ ರೂ 7000/- ಹೆಚ್ಚುವರಿ ಗೌರವಧನವನ್ನು ಪಡೆಯಲು ಅವಕಾಶ ನೀಡಲಾಗಿದ್ದು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಬಹುತೇಕ ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಎಲ್ಲಾ ನಾಗರಿಕರಿಗೆ LIC ಸಂಸ್ಥೆಯು ಚಿರಪರಿಚಿತವಾಗಿದ್ದು ಪ್ರಸ್ತುತ ಭಾರತೀಯ ಜೀವ ವಿಮಾ ನಿಗಮದಿಂದ ಮಹಿಳೆಯರಿಗೆ ಬಿಮಾ ಸಖಿ ಯೋಜನೆಯನ್ನು(Bima Sakhi Yojane)ಪರಿಚಯಿಸಿದ್ದು ಈ ಕಾರ್ಯಕ್ರಮದ ಮೂಲಕ ಮಹಿಳಾ ಏಜೆಂಟರಿಗೆ ಆರ್ಥಿಕ ನೆರವನ್ನು ಒದಗಿಸುವ ಗುರಿಯನ್ನು ಹಾಕಿಕೊಂಡಿದೆ.

ಇದನ್ನೂ ಓದಿ: Crop Details-2025 ನೇ ಸಾಲಿನ ರೈತರ ಜಮೀನ ಬೆಳೆ ಸಮೀಕ್ಷೆ ವರದಿ ಬಿಡುಗಡೆ! ಇಲ್ಲಿದೆ ಪಹಣಿಯ ಬೆಳೆ ಮಾಹಿತಿ!

ಬಿಮಾ ಸಖಿ ಯೋಜನೆ(Bima Sakhi Scheme)ಎಂದರೇನು? ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಆಯ್ಕೆಯಾಗುವ ಅರ್ಹ ಮಹಿಳೆಯರಿಗೆ ಯಾವೆಲ್ಲ ಪ್ರಯೋಜನಗಳಿವೆ? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುಹುದು ಹೇಗೆ? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳು ಯಾವುವು? ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Bima Sakhi Benefits-ಬಿಮಾ ಸಖಿ ಕಾರ್ಯಕ್ರಮದ ಪ್ರಯೋಜನಗಳ ವಿವರ ಹೀಗಿದೆ:

ಭಾರತೀಯ ಜೀವ ವಿಮಾ ನಿಗಮದಿಂದ ಮಹಿಳಾ ಏಜೆಂಟರಿಗೆ ಬಿಮಾ ಸಖಿ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುತ್ತಿದ್ದು ಇದರಿಂದ ಮಹಿಳಾ ಏಜೆಂಟರಿಗೆ ಸಿಗುವ ಪ್ರಯೋಜನಗಳ ಪಟ್ಟಿ ಹೀಗಿದೆ:

ವಿಮಾ ಪಾಲಿಸಿಗಳನ್ನು ಪ್ರಚಾರ ಮಾಡಿ ಏಜೆಂಟ್ ರೀತಿ ಕಾರ್ಯನಿರ್ವಹಿಸಿ ಜೀವ ವಿಮಾ ಇನ್ನಿತರೆ ವಿಮಾ ಪಾಲಿಸಿಗಳನ್ನು ಮಾಡಿಸುವ ಮೂಲಕ ನಿಗಮದಿಂದ ಪಾಲಿಸಿ ಕಮಿಷನ್, ಬೋನಸ್ ಕಮಿಷನ್, ರಿನಿವಲ್ ಕಮಿಷನ್ ಜೊತೆಗೆ ಮಹಿಳೆಯರಿಗೆ ಈ ಯೋಜನೆಯ ಮೂಲಕ ಪ್ರಾರಂಭಿಕ ಹಂತದಲ್ಲಿ ಮೊದಲ ವರ್ಷ ತಿಂಗಳಿಗೆ ₹7,000 ಹಾಗೂ ಎರಡನೇ ವರ್ಷ ಪ್ರತಿ ತಿಂಗಳಿಗೆ ₹6,000 ಮತ್ತು ಮೂರನೇ ವರ್ಷ ಪ್ರತಿ ತಿಂಗಳಿಗೆ ₹5,000 ಗೌರವಧನವನ್ನು ನೀಡಲಾಗುತ್ತದೆ.

ಇದನ್ನೂ ಓದಿ: Free TV Repair Training-ಉಚಿತ ಟಿವಿ ಮತ್ತು ಎಲೆಕ್ಟ್ರಿಕ್ ಉಪಕರಣ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

Bima Sakhi Eligibility Criteria-ಬಿಮಾ ಸಖಿ ಆಗಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು:

ಭಾರತೀಯ ಜೀವ ವಿಮಾ ನಿಗಮದಿಂದ ಬಿಮಾ ಸಖಿ ಕಾರ್ಯಕ್ರಮ ಅಡಿಯಲ್ಲಿ ಬಿಮಾ ಸಖಿ ಆಗಿ ಕಾರ್ಯನಿರ್ವಹಿಸಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎನ್ನುವ ವಿವರ ಹೀಗಿದೆ.

ಅಭ್ಯರ್ಥಿಯು ಭಾರತೀಯ ನಿವಾಸಿಯಾಗಿರಬೇಕು.

ಅಭ್ಯರ್ಥಿಯ ವಯಸ್ಸು 18 ರಿಂದ 70 ವರ್ಷದ ಒಳಗಿರಬೇಕು.

ಹೆಣ್ಣು ಮಕ್ಕಳಿಗೆ ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಸರಕಾರಿ ನೌಕರಿಯಲ್ಲಿರುವವರು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಇದನ್ನೂ ಓದಿ: Sprayer Subsidy-ಹೈ ಪ್ರೆಶರ್ ಪವರ್ ಸ್ಪ್ರೇಯರ್ ಸಹಾಯಧನದಲ್ಲಿ ಪಡೆಯಲು ಅರ್ಜಿ ಆಹ್ವಾನ!

Documents For Bima Sakhi-ಅರ್ಜಿ ಸಲ್ಲಿಸಲು ದಾಖಲಾತಿಗಳು:

  • ಅಭ್ಯರ್ಥಿಯ ಆದಾರ್ ಕಾರ್ಡ ಪ್ರತಿ/Adhar
  • ಅಭ್ಯರ್ಥಿಯ ಪಾನ್ ಕಾರ್ಡ/Pan
  • ಪೋಟೋ/Photo
  • ರದ್ದಾದ ಚೆಕ್ ಅಥವಾ ಬ್ಯಾಂಕ್ ಪಾಸ್ ಬುಕ್ ಮುಖಪುಟದ ಪ್ರತಿ/Bank Pass Book
  • ಮೊಬೈಲ್ ನಂಬರ್/Mobile Number

Bima Sakhi Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಮಹಿಳಾ ಅಭ್ಯರ್ಥಿಗಳು ಬಿಮಾ ಸಖಿಯಾಗಿ ಕಾರ್ಯನಿರ್ವಹಿಸಲು ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ತಮ್ಮ ಮೊಬೈಲ್ ಮೂಲಕವೇ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

Step-1: ಪ್ರಥಮದಲ್ಲಿ "Bima Sakhi Online Application" ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಭೇಟಿ ಮಾಡಿ.

ಇದನ್ನೂ ಓದಿ: PUC ಮತ್ತು SSLC ಅಂತಿಮ ವಾರ್ಷಿಕ ಪರೀಕ್ಷೆ ದಿನಾಂಕ ಪ್ರಕಟ!

bhima saki

ಇದನ್ನೂ ಓದಿ: Narega Scheme Subsidy-ನರೇಗಾ ಯೋಜನೆಯಡಿ 5.0 ಲಕ್ಷದವರೆಗೆ ಆರ್ಥಿಕ ನೆರವು! ಇಲ್ಲಿದೆ ಸಂಪೂರ್ಣ ಮಾಹಿತಿ!

Step-2: ನಂತರ ಇಲ್ಲಿ ಕೆಳಗೆ ಕಾಣುವ "Click Here For Bima sakhi" ಆಯ್ಕೆಯ ಮೇಲೆ ಒತ್ತಿದರೆ ಅಧಿಕೃತ ಬಿಮ ಸಖಿ ಅರ್ಜಿ ನಮೂನೆ ಒಪನ್ ಅಗುತ್ತದೆ ಬಳಿಕ ಇಲ್ಲಿ ಕೇಳುವ ಎಲ್ಲಾ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.

Bima Sakhi Selection Process-ಬಿಮಾ ಸಖಿ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಒಮ್ಮೆ ಅರ್ಜಿದಾರರು ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಜಿಲ್ಲೆಯ ಎಲ್ ಐ ಸಿ ಕಚೇರಿಯಿಂದ ನೀವು ಅರ್ಜಿ ಸಲ್ಲಿಸುವಾಗ ನಮೂದಿಸಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಕಚೇರಿ ಭೇಟಿ ಮಾಡಲು ಸೂಚನೆ ನೀಡಲಾಗುತ್ತದೆ. ಇದಾದ ಬಳಿಕ ಎಲ್ಲಾ ದಾಖಲೆಗಳನ್ನು ಎಲ್ ಐ ಸಿ ಕಚೇರಿಗೆ ಸಲ್ಲಿಸಿ ವಿಮಾ ಏಜೆಂಟ್ ಅಗಲು ಪರೀಕ್ಷೆಯನ್ನು ಬರೆಯುದರ ಕುರಿತು ಇಲ್ಲಿ ಮಾಹಿತಿ ಮತ್ತು ತರಬೇತಿಯನ್ನು ನೀಡಲಾಗುತ್ತದೆ.

ಪರೀಕ್ಷೆಯನ್ನು ಬರೆದು ಪಾಸಾದ ಬಳಿಕ ಆಯ್ಕೆಯಾಗುವ ಮಹಿಳಾ ಅಭ್ಯರ್ಥಿಗಳಿಗೆ ಎಲ್ ಐ ಸಿ ಪಾಲಿಸಿ ಮಾಡಿಸುವುದರ ಬಗ್ಗೆ ಮಾಹಿತಿ ಮತ್ತು ತರಬೇತಿಯನ್ನು ನೀಡಲಾಗುತ್ತದೆ ಮುಂದೆ ನೀವು ಬಿಮಾ ಸಖಿಯಾಗಿ ಕಾರ್ಯನಿರ್ವಹಿಸಲು ಎಲ್ ಐ ಸಿ ಯಿಂದ ಅಧಿಕೃತ ಪೂರಕ ದಾಖಲೆಗಳನ್ನು ವಿತರಣೆ ಮಾಡಲಾಗುತ್ತದೆ.

ಇನ್ನು ಹೆಚ್ಚಿನ ಮಾಹಿತಿ ಪಡೆಯಲು ನಿಮ್ಮ ಜಿಲ್ಲೆಯ ಎಲ್ ಐ ಸಿ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: