Indira Kit-ರೇಶನ್ ಕಾರ್ಡದಾರರಿಗೆ ಸಿಹಿ ಸುದ್ದಿ! ಇನ್ಮುಂದೆ ಸಿಗಲಿದೆ ಪ್ರತಿ ತಿಂಗಳು ತೊಗರಿ ಬೇಳೆ!

November 9, 2025 | Siddesh
Indira Kit-ರೇಶನ್ ಕಾರ್ಡದಾರರಿಗೆ ಸಿಹಿ ಸುದ್ದಿ! ಇನ್ಮುಂದೆ ಸಿಗಲಿದೆ ಪ್ರತಿ ತಿಂಗಳು ತೊಗರಿ ಬೇಳೆ!
Share Now:

ರಾಜ್ಯ ಸರಕಾರದಿಂದ ಪಡಿತರ ಚೀಟಿಯನ್ನು(Indira Kit News) ಹೊಂದಿರುವ ಫಲಾನುಭವಿಗಳಿಗೆ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದು ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಇಂದಿರಾ ಕಿಟ್ ವಿತರಣೆ ಕುರಿತು ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದ್ದು ಈ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ಪ್ರಕಟಿಸಲಾಗಿದೆ.

ಅನೇಕ ನಾಗರಿಕಗೆ ಈಗಾಗಲೇ ತಿಳಿದಿರುವ ಹಾಗೆಯೇ ಪ್ರತಿ ತಿಂಗಳು ಬಿಪಿಎಲ್ ಕಾರ್ಡದಾರರಿಗೆ(BPL Card) ವಿತರಣೆ ಮಾಡುವ ಆಹಾರ ಧಾನ್ಯದ ಜೊತೆಗೆ ಹೆಚ್ಚುವರಿಯಾಗಿ ಇಂದಿರಾ ಆಹಾರ ಕಿಟ್ ವಿತರಣೆ ಮಾಡಲು ರಾಜ್ಯ ಸರಕಾರ ಮುಂದಾಗಿದ್ದು ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ಪ್ರಮುಖ ನಿರ್ಣಯದ ಬಗ್ಗೆ ವಿವರಿಸಲಾಗಿದೆ.

ಇದನ್ನೂ ಓದಿ: Mobile Phone Trace-ನಿಮ್ಮ ಮೊಬೈಲ್ ಕಳುವಾದರೆ ಟ್ರೇಸ್ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ!

ಪ್ರಸ್ತುತ ಲೇಖನದಲ್ಲಿ ಇಂದಿರಾ ಆಹಾರ ಕಿಟ್ ನಲ್ಲಿ(Indira Kit New Scheme In Karnataka)ಯಾವೆಲ್ಲ ಆಧಾರ ಧಾನ್ಯಗಳು ಇರಲಿವೆ? ಪ್ರಸ್ತುತ ದಿನಾಂಕ: 01-11-2025 ರಂದು ರಾಜ್ಯ ಸರಕಾರದ ಸಚಿವ ಸಂಪುಟ ಸಭೆಯಲ್ಲಿ ಇಂದಿರಾ ಕಿಟ್ ವಿತರಣೆ ಕುರಿತು ತೆಗೆದುಕೊಂಡಿರುವ ನಿರ್ಣಯಗಳೇನು? ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Indira Kit Details-ರೇಶನ್ ಕಾರ್ಡದಾರರಿಗೆ ಇಂದಿರಾ ಆಹಾರ ಕಿಟ್:

ಈಗಾಗಲೇ ರಾಜ್ಯದಲ್ಲಿ ರೇಶನ್ ಕಾರ್ಡ ಅನ್ನು ಹೊಂದಿರುವ ನಾಗರಿಕರಿಗೆ ಪ್ರತಿ ತಿಂಗಳು ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಅಕ್ಕಿ,ರಾಗಿ, ಉತ್ಪನ್ನವನ್ನು ವಿತರಣೆ ಮಾಡಲಾಗಿತ್ತಿದ್ದು ಇದಕ್ಕೆ ಹೆಚ್ಚುವರಿಯಾಗಿ ಆಹಾರ ಧಾನ್ಯಗಳನ್ನು ನೀಡಲು ಇಂದಿರಾ ಆಹಾರ್ ಕಿಟ್ ನೀಡಲು ರಾಜ್ಯ ಸರಕಾರ ತಿರ್ಮಾನಿಸಿದೆ.

ಇದನ್ನೂ ಓದಿ: Bima Sakhi-ಬಿಮಾ ಸಖಿ ಯೋಜನೆ: ಎಲ್ಐಸಿ ಯಿಂದ ಮಹಿಳಾ ಏಜೆಂಟರಿಗೆ ತಿಂಗಳಿಗೆ ರೂ 7,000/- ಸ್ಟೈಪೆಂಡ್!

Indira Kit Yojana-ಇಂದಿರಾ ಆಹಾರ ಕಿಟ್ ನಲ್ಲಿ ಹೆಸರುಕಾಳಿನ ಬದಲಿಗೆ ಹೆಚ್ಚುವರಿ ತೊಗರಿ ಬೇಳೆ ನೀಡಲು ನಿರ್ಧಾರ:

ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದ ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಒಂದಾದ "ಅನ್ನಭಾಗ್ಯ ಯೋಜನೆ" ಅಡಿಯಲ್ಲಿ 5 ಕೆ ಜಿ ಅಕ್ಕಿಯ ಬದಲು ಇಂದಿರ ಪೌಷ್ಟಿಕ ಆಹಾರ ಕಿಟ್ ನೀಡಲು ನಿಧಾರ ಮಾಡಿದ್ದು, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಇಂದಿರಾ ಪೌಷ್ಟಿಕ ಆಹಾರ ಕಿಟ್ ಬದಲಿಗೆ ಇಂದಿರಾ ಕಿಟ್ ಎಂದು ಬದಲಾವಣೆ ಮಾಡಿ ಕಿಟ್ ನಲ್ಲಿ ನೀಡಲಾಗಿದ್ದ ಹೆಸರುಕಾಳಿನ ಬದಲಿಗೆ ಹೆಚ್ಚುವರಿ ತೊಗರಿ ಬೇಳೆಯನ್ನು ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧರಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಿದ್ದು, ಇದು ರಾಜ್ಯದ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಒಂದು ಮಹತ್ವ ಪೂರ್ಣ ಹೆಜ್ಜೆಯಾಗಿದೆ.

ಇದನ್ನೂ ಓದಿ: Crop Details-2025 ನೇ ಸಾಲಿನ ರೈತರ ಜಮೀನ ಬೆಳೆ ಸಮೀಕ್ಷೆ ವರದಿ ಬಿಡುಗಡೆ! ಇಲ್ಲಿದೆ ಪಹಣಿಯ ಬೆಳೆ ಮಾಹಿತಿ!

Indira Kit

ಇದನ್ನೂ ಓದಿ: PUC ಮತ್ತು SSLC ಅಂತಿಮ ವಾರ್ಷಿಕ ಪರೀಕ್ಷೆ ದಿನಾಂಕ ಪ್ರಕಟ!

Indira Kit-ಇಂದಿರಾ ಆಹಾರ ಕಿಟ್ ನಲ್ಲಿ ಏನೆಲ್ಲ ಇರಲಿದೆ?

ರಾಜ್ಯ ಸರಕಾರದಿಂದ ಪಡಿತರ ಚೀಟಿ ಹೊಂದಿರುವ ಗ್ರಾಹಕರಿಗೆ ನೀಡಲು ನಿರ್ಣಯಿಸಿರುವ ಇಂದಿರಾ ಕಿಟ್ ನಲ್ಲಿ ಫಲಾನುಭವಿಗಳಿಗೆ ತೊಗರಿ ಬೇಳೆ 1ಕೆ.ಜಿ, ಅಡುಗೆ ಎಣ್ಣೆ 1 ಲೀ, ಸಕ್ಕರೆ 1ಕೆ.ಜಿ, ಉಪ್ಪು 1 ಕೆ.ಜಿ. ಹಾಗೂ 1 ಕೆ.ಜಿ. ಹೆಸರುಕಾಳಿನ ಬದಲಿಗೆ ಅದರ ವೆಚ್ಚಕ್ಕನುಗುಣವಾಗಿ 1 ರಿಂದ 3 ಸದಸ್ಯರಿಗೆ ¾ ಕೆ.ಜಿ, 3 ರಿಂದ 4 ಸದಸ್ಯರಿರುವ ಕುಟುಂಬಕ್ಕೆ ¾ ಕೆ.ಜಿ. ಹಾಗೂ 5 ಕ್ಕೂ ಹೆಚ್ಚು ಸದಸ್ಯರಿರುವ ಕುಟುಂಬಕ್ಕೆ ¾ ಕೆ.ಜಿ. ತೊಗರಿ ಬೇಳೆಯನ್ನು ವಿತರಿಸಲಾಗುತ್ತದೆ.

ಇದನ್ನೂ ಓದಿ: Free TV Repair Training-ಉಚಿತ ಟಿವಿ ಮತ್ತು ಎಲೆಕ್ಟ್ರಿಕ್ ಉಪಕರಣ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

Cancelled Ration Card List-ರದ್ದಾದ ರೇಶನ್ ಕಾರ್ಡ ಪಟ್ಟಿಯನ್ನು ಮೊಬೈಲ್ ನಲ್ಲೇ ನೋಡಬಹುದು:

ರಾಜ್ಯ ಸರಕಾರದಿಂದ ಕಳೆದ 2-3 ತಿಂಗಳಿನಿಂದ ಅನರ್ಹ ಪಡಿತರ ಚೀಟಿದಾರನ್ನು ಗುರುತಿಸಿ ರದ್ದು ಮಾಡಲಾಗುತ್ತಿದ್ದು ಸಾರ್ವಜನಿಕರು ಈ ಕೆಳಗಿನ ಹಂತಗಳನ್ನು ಅನುಸರಿಸಿ ಆಹಾರ ಇಲಾಖೆಯ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ತಮ್ಮ ತಾಲ್ಲೂಕಿನಲ್ಲಿ ರದ್ದಾದ ರೇಶನ್ ಕಾರ್ಡದಾರರ ಪಟ್ಟಿಯನ್ನು ಮೊಬೈಲ್ ನಲ್ಲೇ ನೋಡಬಹುದು.

Step-1: ಸಾರ್ವಜನಿಕರು ಮೊದಲಿಗೆ "Cancelled Ration Card List" ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಆಹಾರ ಇಲಾಖೆಯ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Sprayer Subsidy-ಹೈ ಪ್ರೆಶರ್ ಪವರ್ ಸ್ಪ್ರೇಯರ್ ಸಹಾಯಧನದಲ್ಲಿ ಪಡೆಯಲು ಅರ್ಜಿ ಆಹ್ವಾನ!

Step-2: ನಂತರ ಈ ಪೇಜ್ ನಲ್ಲಿ ಎಡ ಬದಿಯಲ್ಲಿ ಕಾಣುವ ಮೆನು ಐಕಾನ್ ಮೇಲೆ ಕ್ಲಿಕ್ ಮಾಡಿ "ಇ-ಪಡಿತರ ಚೀಟಿ" ಬಟನ್ ಮೇಲೆ ಕ್ಲಿಕ್ ಮಾಡಿ "ರದ್ದುಗೊಳಿಸಲಾದ/ತಡೆಹಿಡಿಯಲಾದ ಪಟ್ಟಿ" ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ನಂತರ ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆ/ತಾಲ್ಲೂಕು/ತಿಂಗಳು/ವರ್ಷ ಮತ್ತು ಕ್ಯಾಪ್ಚ್ ಕೋಡ್ ನಮೂದಿಸಿ "Go" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ತಾಲ್ಲೂಕಿನಲ್ಲಿ ರದ್ದಾದ ಪಡಿತರ ಚೀಟಿದಾರರ ಪಟ್ಟಿ ತೋರಿಸುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: