KSRTC Flybus Service-ಬೆಂಗಳೂರು ವಿಮಾನ ನಿಲ್ದಾಣದಿಂದ ದಾವಣಗೆರೆಗೆ ಫ್ಲೈ ಬಸ್ ಸೇವೆ ಆರಂಭ!

November 13, 2025 | Siddesh
KSRTC Flybus Service-ಬೆಂಗಳೂರು ವಿಮಾನ ನಿಲ್ದಾಣದಿಂದ ದಾವಣಗೆರೆಗೆ ಫ್ಲೈ ಬಸ್ ಸೇವೆ ಆರಂಭ!
Share Now:

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC) ದ ವತಿಯಿಂದ ಸಾರ್ವಜನಿಕರಿಗೆ ಉತ್ತೇಜನವನ್ನು ನೀಡಲು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ(Bengaluru Kempegowda International Airport) ದಾವಣಗೆರೆಗೆ ಪ್ರಯಾಣಿಕರಿಗೆ ಸಹಾಯವಾಗಲು ಫ್ಲೈ ಬಸ್ ಸೇವೆಯನ್ನು ಪ್ರಾರಂಭಿಸಲಾಗಿದೆ.

ಈ ವ್ಯವಸ್ಥೆಯಲ್ಲಿ ಸುಮಾರು 300 ಕಿಲೋಮೀಟರ್ ದೂರವನ್ನು ಸುಮಾರು 5 ಗಂಟೆಗಳಲ್ಲಿ ಕ್ರಮಿಸುವ ಗುರಿಯನ್ನು ಹೊಂದಿದ್ದು, ಈ ಬಸ್ ಸೇವೆಯು(KSRTC) ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಆರಾಮದಾಯಕವಾದ ಅನುಭವವನ್ನು ಒದಗಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: Krishi Mela Bengalure-2025: ಬೆಂಗಳೂರು ಜಿಕೆವಿಕೆಯಲ್ಲಿ ಇಂದಿನಿಂದ 4 ದಿನ ಕೃಷಿ ಮೇಳ!

ಈ ಫ್ಲೈ ಬಸ್ ಸೇವೆಯನ್ನು 2013 ರಲ್ಲಿ ರಾಮಲಿಂಗ ರೆಡ್ಡಿಯವರು ಮೊದಲು ಬೆಂಗಳೂರಿನಿಂದ ಮೈಸೂರಿಗೆ ನೇರ ಫ್ಲೈಬಸ್ ಸಾರಿಗೆ ವ್ಯವಸ್ಥೆ ಪ್ರಾರಂಭ(Karnataka Transport Development) ಮಾಡಿದ್ದು, ಮುಂಬರುವ ದಿನಗಳಲ್ಲಿ ಮಡಿಕೇರಿ, ಕುಂದಾಪುರಕ್ಕೆ ಫ್ಲೈ ಬಸ್ ಸೇವೆಯನ್ನು ವಿಸ್ತರಿಸಲಾಯಿತು. ಹಾಗೆಯೇ ಬೆಂಗಳೂರು - ದಾವಣಗೆರೆ‌ ನಡುವೆ ನೇರ ಫ್ಲೈ ಬಸ್ ಸೇವೆಯನ್ನು ಆರಂಭ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಅಂಕಣದಲ್ಲಿ ಫ್ಲೈ ಬಸ್ ಸೇವೆಯ ಆರಂಭ, ಇದರ ಮಾರ್ಗ ಹಾಗೂ ನಿಲ್ದಾಣಗಳು, ಸೌಲಭ್ಯಗಳು ಹಾಗೂ ಸೇವೆಗಳಾವುವು? ದರಗಳು ಮತ್ತು ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಹೇಗೆ? ಇತರ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ಇದನ್ನೂ ಓದಿ: Muthoot Finance Scholarship-ಮುತ್ತೊಟ್ ಫೈನಾನ್ಸ್ ನಿಂದ ₹2.40 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

What is the purpose of starting the Fly Bus service-ಫ್ಲೈ ಬಸ್ ಸೇವೆಯನ್ನು ಪ್ರಾರಂಭ ಮಾಡುವುದರ ಉದ್ದೇಶವೇನು?

ಕೆಎಸ್‌ಆರ್‌ಟಿಸಿಯು ಸಾರ್ವಜನಿಕ ಸಾರಿಗೆಯ ಅಭಿವೃದ್ಧಿ ಮತ್ತು ಪ್ರಯಾಣಿಕರ ಅನುಕೂಲವನ್ನು ತನ್ನ ಪ್ರಮುಖ ಗುರಿಯನ್ನಾಗಿ ಘೋಷಿಸಿದೆ. ಈ ನಿಟ್ಟಿನಲ್ಲಿ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆಯವರೆಗೆ ನೇರ ಫ್ಲೈ ಬಸ್ ಸೇವೆಯನ್ನು ಪ್ರಾರಂಭಿಸುವ ಮೂಲಕ ಪ್ರಯಾಣಿಕರಿಗೆ ವೇಗವಾದ, ಸುಲಭ ಮತ್ತು ಆರಾಮದಾಯಕ ಪ್ರಯಾಣದ ಅನುಭವವನ್ನು ಒದಗಿಸುವ ಉದ್ದೇಶ ಹೊಂದಿದೆ.

ಈ ಹೊಸ ಸೇವೆಯು ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದರ ಜೊತೆಗೆ ವಿಮಾನ ನಿಲ್ದಾಣಕ್ಕೆ ತಲುಪುವಿಕೆ ಮತ್ತು ಹೊರಟು ಹೋಗುವಿಕೆಯನ್ನು ಇನ್ನಷ್ಟು ಸುಗಮಗೊಳಿಸುತ್ತದೆ. ಫ್ಲೈ ಬಸ್ ಸೇವೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ನೀಡಿದ ಪ್ರಕಟಣೆಯ ಪ್ರಕಾರ, “ಪ್ರಯಾಣಿಕರ ಸೌಲಭ್ಯಕ್ಕಾಗಿ ಅತ್ಯಾಧುನಿಕ ಮತ್ತು ಉತ್ತಮ ಗುಣಮಟ್ಟದ ಬಸ್‌ಗಳನ್ನು ಬಳಸಲಾಗುತ್ತಿದ್ದು, ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಹೆಚ್ಚಿಸುವುದು ಮತ್ತು ಖಾಸಗಿ ವಾಹನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ” ಎಂದು ತಿಳಿಸಲಾಗಿದೆ.

ಈ ಹೊಸ ಯೋಜನೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಸಾರ್ವಜನಿಕ ಸಾರಿಗೆಯ ಪುನರುಜ್ಜೀವನದತ್ತ ಒಂದು ಮಹತ್ವದ ಹೆಜ್ಜೆಯಾಗಿದೆ.

ಇದನ್ನೂ ಓದಿ: Sportsman Incentive-ಕ್ರ‍ೀಡಾಪಟುಗಳಿಗೆ 10 ಲಕ್ಷದ ವರೆಗೆ ಪ್ರೋತ್ಸಾಹಧನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಅಹ್ವಾನ!

Routes and stations covered under this system-ಈ ವ್ಯವಸ್ಥೆಯಡಿ ಒಳಗೊಂಡಿರುವ ಮಾರ್ಗಗಳು ಹಾಗೂ ನಿಲ್ದಾಣಗಳು:

ಈ ಫ್ಲೈ ಬಸ್ ಸೇವೆ ಬೆಂಗಳೂರು ವಿಮಾನ ನಿಲ್ದಾಣದಿಂದ ಸ್ಯಾಟ್‌ಲೈಟ್ ಟೌನ್ ರಿಂಗ್ ರೋಡ್, ದೊಡ್ಡಬಳ್ಳಾಪುರ ಬೈಪಾಸ್, ದಾಬಾಸ್ ಪೇಟೆ, ತುಮಕೂರು ಬೈಪಾಸ್ ಹಾಗೂ ಚಿತ್ರದುರ್ಗ ಬೈಪಾಸ್ ಮೂಲಕ ನೇರವಾಗಿ ದಾವಣಗೆರೆಗೆ ಸಂಚರಿಸುತ್ತದೆ. ಪ್ರಯಾಣಿಕರ ಸೌಲಭ್ಯಕ್ಕಾಗಿ ತುಮಕೂರು ಮತ್ತು ಚಿತ್ರದುರ್ಗ ಬೈಪಾಸ್‌ಗಳಲ್ಲಿ ನಿಲ್ದಾಣ ವ್ಯವಸ್ಥೆ ಮಾಡಲಾಗಿದೆ. ಈ ಮಧ್ಯಂತರ ನಿಲ್ದಾಣಗಳು ಪ್ರಯಾಣಿಕರಿಗೆ ವಿಶ್ರಾಂತಿ ಪಡೆಯಲು, ಅಗತ್ಯ ವಸ್ತುಗಳನ್ನು ಖರೀದಿಸಲು ಮತ್ತು ತಮ್ಮ ಪ್ರಯಾಣವನ್ನು ಸುಗಮಗೊಳಿಸಲು ಸಹಾಯ ಮಾಡುತ್ತವೆ.

ಬೆಂಗಳೂರಿನಿಂದ ದಾವಣಗೆರೆಗೆ ಹೊರಡುವ KSRTC ಫ್ಲೈ ಬಸ್ ವೇಳಾಪಟ್ಟಿ:

ಫ್ಲೈ ಬಸ್‌ಏರ್‌ಪೋರ್ಟ್‌ನಿಂದ ಪ್ರಾರಂಭದಾವಣಗೆರೆಗೆ ತಲುಪುವ ಸಮಯಬರುವ ನಿಲ್ದಾಣಗಳು
ಮೊದಲನೇಯ ಬಸ್ಮಧ್ಯ ರಾತ್ರಿ 12.45 ಕ್ಕೆ ಹೊರಡುತ್ತದೆಬೆಳಿಗ್ಗೆ 10 ಕ್ಕೆ ತಲುಪುತ್ತದೆತುಮಕೂರು ಬೈಪಾಸ್, ಚಿತ್ರದುರ್ಗ ಬೈಪಾಸ್
ಎರಡನೇಯ ಬಸ್ಬೆಳಿಗ್ಗೆ 5.45 ಕ್ಕೆ ಹೊರಡುತ್ತದೆಮಧ್ಯಾಹ್ನ 3 ಕ್ಕೆ ತಲುಪುತ್ತದೆತುಮಕೂರು ಬೈಪಾಸ್, ಚಿತ್ರದುರ್ಗ ಬೈಪಾಸ್

ಇದನ್ನೂ ಓದಿ: Bike Repair Training-ಉಚಿತ 30 ದಿನದ ದ್ವಿಚಕ್ರ ವಾಹನ ರಿಪೇರಿ ಮತ್ತು ಸರ್ವಿಸಿಂಗ್ ತರಬೇತಿಗೆ ಅರ್ಜಿ ಆಹ್ವಾನ!

ದಾವಣಗೆರೆ ಇಂದ ಬೆಂಗಳೂರಿಗೆ KSRTC ಫ್ಲೈ ಬಸ್ ವೇಳಾಪಟ್ಟಿ:

ಫ್ಲೈ ಬಸ್‌ದಾವಣಗೆರೆಯಿಂದ ಪ್ರಾರಂಭಏರ್‌ಪೋರ್ಟ್‌ ತಲುಪುವ ಸಮಯಬರುವ ನಿಲ್ದಾಣಗಳು
ಮೊದಲನೇಯ ಬಸ್ಬೆಳಿಗ್ಗೆ 8 ಕ್ಕೆ ಹೊರಡುತ್ತದೆಮಧ್ಯಾಹ್ನ 1 ಕ್ಕೆ ತಲುಪುತ್ತದೆತುಮಕೂರು ಬೈಪಾಸ್, ಚಿತ್ರದುರ್ಗ ಬೈಪಾಸ್
ಎರಡನೇಯ ಬಸ್ಸಂಜೆ 5 ಕ್ಕೆ ಹೊರಡುತ್ತದೆರಾತ್ರಿ 10 ಕ್ಕೆ ತಲುಪುತ್ತದೆತುಮಕೂರು ಬೈಪಾಸ್, ಚಿತ್ರದುರ್ಗ ಬೈಪಾಸ್

Fares and ticket booking details-ದರಗಳು ಮತ್ತು ಟಿಕೆಟ್‌ ಬುಕ್ಕಿಂಗ್ ವಿವರಗಳು:

ಬೆಂಗಳೂರು ವಿಮಾನ ನಿಲ್ದಾಣದಿಂದ ತುಮಕೂರು - 400 ರೂ.
ಬೆಂಗಳೂರು ವಿಮಾನ ನಿಲ್ದಾಣದಿಂದ ಚಿತ್ರದುರ್ಗ - 980 ರೂ.
ಬೆಂಗಳೂರು ವಿಮಾನ ನಿಲ್ದಾಣದಿಂದ ದಾವಣಗೆರೆ - 1250 ರೂ.

ಪ್ರಯಾಣಿಕರು ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಲು KSRTC ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಬುಕ್ಕಿಂಗ್ ಸೌಲಭ್ಯವನ್ನು ಪಡೆದುಕೊಳ್ಳಬಹುದು.- Click Here

ಇದನ್ನೂ ಓದಿ: Indira Kit-ರೇಶನ್ ಕಾರ್ಡದಾರರಿಗೆ ಸಿಹಿ ಸುದ್ದಿ! ಇನ್ಮುಂದೆ ಸಿಗಲಿದೆ ಪ್ರತಿ ತಿಂಗಳು ತೊಗರಿ ಬೇಳೆ!

ksrtc fly bus

Fly Bus system available from the airport-ವಿಮಾನ ನಿಲ್ದಾಣದಿಂದ ಫ್ಲೈ ಬಸ್ ವ್ಯವಸ್ಥೆಯು ಯಾವೆಲ್ಲ ಕಡೆಗೆ ಲಭ್ಯವಿರುತ್ತದೆ?

  • ಮೈಸೂರು: 09
  • ಮಡಿಕೇರಿ: 02
  • ದಾವಣಗೆರೆ: 02
  • ಕುಂದಾಪುರ: 02

Free Synax Kit facility in Fly Bus system-ಫ್ಲೈ ಬಸ್ ವ್ಯವಸ್ಥೆಯಲ್ಲಿ ಉಚಿತ ಸ್ಯ್ನಾಕ್ಸ್ ಕಿಟ್ ಸೌಲಭ್ಯ:

ಪ್ರತಿ ಸ್ನ್ಯಾಕ್ಸ್ ಕಿಟ್‌ನಲ್ಲಿ ಪ್ರಯಾಣಿಕರ ಅಗತ್ಯಗಳನ್ನು ಪೂರೈಸುವಂತಹ ವಿವಿಧ ಉತ್ಪನ್ನಗಳನ್ನು ಒಳಗೊಳ್ಳಲಾಗಿದ್ದು ಕೆಳಗೆ ತಿಳಿಸಿರುವ ಉತ್ಪನ್ನಗಳನ್ನು ಕಿಟ್ ನಲ್ಲಿ ಹೊಂದಿರುತ್ತದೆ.

ನೀರಿನ ಬಾಟಲಿ: ಪ್ರಯಾಣದ ಸಮಯದಲ್ಲಿ ಆರೋಗ್ಯಕರ ಮತ್ತು ಶುದ್ಧ ನೀರಿನ ಪೂರೈಕೆಯನ್ನು ಒದಗಿಸುತ್ತದೆ.

ಫ್ಲೇವರ್ಡ್ ಮಿಲ್ಕ್: ನಂದಿನಿ ಬ್ರಾಂಡ್‌ನ ಸಿಹಿ ಮತ್ತು ಪೌಷ್ಟಿಕ ದ್ರವ ಆಹಾರವನ್ನು ಪ್ರಯಾಣಿಕರಿಗೆ ಒದಗಿಸುತ್ತದೆ.

ಕುಕೀಸ್: ಸಣ್ಣ ಮತ್ತು ಸುಲಭವಾಗಿ ತಿನ್ನಬಹುದಾದ ಸ್ನ್ಯಾಕ್ ಆಯ್ಕೆಯಾಗಿ ಪ್ರಯಾಣದ ಸಮಯದಲ್ಲಿ ಉಪಯೋಗವಾಗುತ್ತದೆ.

ಇದನ್ನೂ ಓದಿ: PM Kisan Installment-2025: ಪಿಎಂ ಕಿಸಾನ್ 21ನೇ ಕಂತಿನ ಹಣ ಬಿಡುಗಡೆ ಯಾವಾಗ? ಕೆವೈಸಿ ಮಾಡದವರಿಗಿಲ್ಲ ಆರ್ಥಿಕ ನೆರವು!

ಕೇಕ್: ಪ್ರಯಾಣಿಕರಿಗೆ ಒಂದು ರುಚಿಕರ ಮತ್ತು ತೃಪ್ತಿಕರ ಅನುಭವವನ್ನು ಒದಗಿಸುವ ಉದ್ದೇಶದಿಂದ ಒಳಗೊಳ್ಳಲಾಗಿದೆ.

ಕೊಡುಬಳೆಯ ಪ್ಯಾಕೆಟ್: ಕರ್ನಾಟಕದ ಸಾಂಪ್ರದಾಯಿಕ ಸ್ನ್ಯಾಕ್‌ನ ಒಂದು ರೂಪವಾಗಿದ್ದು, ಇದು ಸ್ಥಳೀಯ ಸಂಸ್ಕತಿಯ ಪ್ರತಿಬಿಂಬವಾಗಿ ಕಾಣಿಸುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: