Scholarship e-authentication-ರಾಜ್ಯ ಸರಕಾರದಿಂದ ವಿದ್ಯಾರ್ಥಿವೇತನ ಪಡೆಯಲು ಇ-ದೃಡೀಕರಣ ಮಾಡುವುದು ಕಡ್ಡಾಯ!

November 18, 2025 | Siddesh
Scholarship e-authentication-ರಾಜ್ಯ ಸರಕಾರದಿಂದ ವಿದ್ಯಾರ್ಥಿವೇತನ ಪಡೆಯಲು ಇ-ದೃಡೀಕರಣ ಮಾಡುವುದು ಕಡ್ಡಾಯ!
Share Now:

ರಾಜ್ಯ ಸರ್ಕಾರದಡಿ ಕಾರ್ಯನಿರ್ವಹಿಸುತ್ತಿರುವ ಸಮಾಜ ಕಲ್ಯಾಣ ಇಲಾಕೆಯಿಂದ ಮತ್ತು ಇತರೆ ಇಲಾಖೆಗಳಿಂದ ವಿದ್ಯಾರ್ಥಿವೇತನವನ್ನು ಪಡೆಯಲು One Time Registrartion ಮತ್ತು Biometric e-authentication ಮಾಡುವುದು ಕಡ್ಡಾಯವಾಗಿದ್ದು ಈ ಕುರಿತು ಹೊರಡಿಸಿರುವ ಅಧಿಕೃತ ಪ್ರಕಟಣೆ ವಿವರವನ್ನು ಈ ಅಂಕಣದಲ್ಲಿ ಪ್ರಕಟಿಸಲಾಗಿದೆ.

ರಾಜ್ಯ ಮತ್ತು ಕೇಂದ್ರ ಸರಕಾರದಿಂದ 2025-26ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ಬಳಿಕ One Time Registrartion ಮತ್ತು Biometric e-authentication ಮಾಡಿದರೆ ಮಾತ್ರ ವಿದ್ಯಾರ್ಥಿವೇತನವನ್ನು ಪಡೆಯಲು ಸಾಧ್ಯವಾಗುತ್ತದೆ. ಇಲ್ಲವಾದ್ದಲ್ಲಿ ವಿದ್ಯಾರ್ಥಿವೇತನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: Holiday List 2026-ರಾಜ್ಯ ಸರಕಾರದಿಂದ 2026 ನೇ ವರ್ಷದ ಸರಕಾರಿ ರಜೆ ಪಟ್ಟಿ ಬಿಡುಗಡೆ!

ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನು ಪಡೆಯಲು One Time Registrartion ಮತ್ತು Biometric e-authentication ಮಾಡುವುದು ಹೇಗೆ? ಇದಕ್ಕಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹೇಗೆ ಎನ್ನುವ ಮಾಹಿತಿ ಸೇರಿದಂತೆ ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದ್ದು, ಓದುಗ ಮಿತ್ರರು ತಪ್ಪದೇ ಈ ಮಾಹಿತಿಯನ್ನು ಎಲ್ಲಾ ವಿದ್ಯಾರ್ಥಿಗಳಿಗೆ ತಲುಪಿಸಲು ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಸಹಕರಿಸಿ.

How To Apply-ಎಲ್ಲಿ ಅರ್ಜಿ ಸಲ್ಲಿಸಬೇಕು?

ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹ ವಿದ್ಯಾರ್ಥಿಗಳು OTR(one time Registrartion) ಸಂಖ್ಯೆಯನ್ನು Create ಮಾಡಲು ಮತ್ತು ವಿದ್ಯಾರ್ಥಿಗಳು Biometric e-authentication ಪೂರ್ಣಗೊಳಿಸಲು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ನೋಂದಣಿಯನ್ನು ಮಾಡಿಕೊಳ್ಳಬಹುದು.

ಇದನ್ನೂ ಓದಿ: Dhanashree Yojana-ಧನಶ್ರೀ ಯೋಜನೆಯಡಿ ಮಹಿಳೆಯರಿಗೆ ಸ್ವಂತ ಉದ್ಯೋಗಕ್ಕೆ ₹ 30,000 ಸಹಾಯಧನಕ್ಕೆ ಅರ್ಜಿ ಆಹ್ವಾನ!

Last Date-30 ನವೆಂಬರ್ 2025 ಕೊನೆಯ ದಿನಾಂಕ:

ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹ ವಿದ್ಯಾರ್ಥಿಗಳು OTR(one time Registrartion) ಸಂಖ್ಯೆಯನ್ನು Create ಮಾಡಲು ಮತ್ತು ವಿದ್ಯಾರ್ಥಿಗಳು Biometric e-authentication ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 30 ನವೆಂಬರ್ 2025 ಕೊನೆಯ ದಿನಾಂಕವಾಗಿದ್ದು ಆದ್ದರಿಂದ ತಪ್ಪದೇ ಅಂತಿಮ ದಿನಾಂಕ ಮುಗಿಯುವುದರ ಒಳಗಾಗಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಲಾಖೆಯಿಂದ ಸೂಚನೆ ಹೊರಡಿಸಲಾಗಿದೆ.

Official Notification-ಇಲಾಖೆಯ ಅಧಿಕೃತ ಪ್ರಕಟಣೆ ಪ್ರತಿ:

Scholarship e-authentication

ಇದನ್ನೂ ಓದಿ: Rolls Royce India Scholarship-ರೋಲ್ಸ್ ರಾಯ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವತಿಯಿಂದ ₹35,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Required Documents For OTR-ಅಗತ್ಯ ದಾಖಲಾತಿಗಳು ಯಾವುವು?

ವಿದ್ಯಾರ್ಥಿಗಳು OTR(one time Registrartion) ಸಂಖ್ಯೆಯನ್ನು Create ಮಾಡಲು ಮತ್ತು Biometric e-authentication ಅನ್ನು ಪೂರ್ಣಗೊಳಿಸಲು ಅಗತ್ಯವಾಗಿ ಅವಶ್ಯಕವಿರುವ ದಾಖಲಾತಿಗಳ ಪಟ್ಟಿ ಈ ಕೆಳಗಿನಂತಿದೆ:

  • ವಿದ್ಯಾರ್ಥಿಯ ಆಧಾರ್ ಕಾರ್ಡ
  • ಬ್ಯಾಂಕ್ ಪಾಸ್ ಬುಕ್
  • ವ್ಯಾಸಂಗ ಪ್ರಮಾಣ ಪತ್ರ
  • ಮೊಬೈಲ್ ನಂಬರ್
  • ಇ-ಮೇಲ್ ಐಡಿ

ಇದನ್ನೂ ಓದಿ: PM Kisan List-ಪಿಎಂ ಕಿಸಾನ್ 21ನೇ ಕಂತಿನ ಹಣ ವರ್ಗಾವಣೆಗೆ ಅರ್ಹ ರೈತರ ಪಟ್ಟಿ ಬಿಡುಗಡೆ!

OTR(one time Registrartion) ಸಂಖ್ಯೆಯನ್ನು Create ಮಾಡುವುದು ಹೇಗೆ?

ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ಮೂಲಕವೇ OTR(one time Registrartion) ಸಂಖ್ಯೆಯನ್ನು ರಚನೆ ಮಾಡಿಕೊಳ್ಳಲು ಅವಕಾಶವಿರುತ್ತದೆ.

Step-1: ವಿದ್ಯಾರ್ಥಿಗಳು ಮೊದಲಿಗೆ Click Here ಇಲ್ಲಿ ಕ್ಲಿಕ್ ಮಾಡಿ ಅಧಿಕೃತ NSP ಪೊರ್ಟಲ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Mahindra Scholarship-ಮಹೀಂದ್ರ ಸಂಸ್ಥೆಯಿಂದ ರೂ 6,000/- ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿ ಆಹ್ವಾನ!

Step-2: ಇದಾದ ಬಳಿಕ ಮುಖಪುಟದಲ್ಲಿ ಕಾಣಿಸುವ OTR ಆಯ್ಕಯೆ ಮೇಲೆ ಕ್ಲಿಕ್ ಮಾಡಿ ವಿದ್ಯಾರ್ಥಿಯ ಆಧಾರ್ ಕಾರ್ಡ ನಂಬರ್ OTP ಅನ್ನು ನಮೂದಿಸಿ ಕ್ಯಾಪ್ಚ್ ಕೋಡ್ ಅನ್ನು ಹಾಕಿ Proceed ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ಮೇಲಿನ ಹಂತಗಳನ್ನು ಪೂರ್ಣಗೊಳಿಸಿದ ಬಳಿಕ ಅಧಿಕೃತ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ವಿವರವನ್ನು ಭರ್ತಿ ಮಾಡಿ ನೋಂದಣಿಯನ್ನು ಮಾಡಿಕೊಳ್ಳಿ.

ಇದನ್ನೂ ಓದಿ: Nikon India scholarship-ನಿಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವತಿಯಿಂದ 1 ಲಕ್ಷ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

NSP OTR App ಮೂಲಕವು ಸಹ ನೋಂದಣಿ ಮಾಡಬಹುದು:

ವಿದ್ಯಾರ್ಥಿಗಳಿ ಈ Download Now ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೈ ಸ್ಟೋರ್ ಅನ್ನು ಪ್ರವೇಶ ಮಾಡಿ NSP OTR App ಅನ್ನು ಡೌನ್ಲೋಡ್ ಮಾಡಿಕೊಂಡು ಸಹ OTR(one time Registrartion) ಸಂಖ್ಯೆಯನ್ನು Create ಮಾಡುವುದರ ಜೊತೆಗೆ Biometric e-authentication ಅನ್ನು ಸಹ ಮಾಡಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: