Nirani Sugars-ನಿರಾಣಿ ಶುಗರ್ಸ್ ವತಿಯಿಂದ ಕಬ್ಬಿನ ದರ ನಿಗದಿ ಕುರಿತು ಅಧಿಕೃತ ಆದೇಶ ಪ್ರಕಟ!

November 20, 2025 | Siddesh
Nirani Sugars-ನಿರಾಣಿ ಶುಗರ್ಸ್ ವತಿಯಿಂದ ಕಬ್ಬಿನ ದರ ನಿಗದಿ ಕುರಿತು ಅಧಿಕೃತ ಆದೇಶ ಪ್ರಕಟ!
Share Now:

ರಾಜ್ಯಾದ್ಯಂತ ಅದರಲ್ಲಿಯೂ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಕಬ್ಬಿಗೆ ದರ ನಿಗದಿಪಡಿಸುವುದರ ಕುರಿತು ಕಳೆದ 3-4 ವಾರದಿಂದ ತೀರ್ವಗತಿಯಲ್ಲಿ ರೈತರು ಪ್ರತಿಭಟನೆಯನ್ನು ಮಾಡಿಕೊಂಡು ಬರುತ್ತಿದ್ದು ಈ ನಿಟ್ಟಿನಲ್ಲಿ ನಿರಾಣಿ ಶುಗರ್ಸ್ ಕಂಪನಿ ವತಿಯಿಂದ ಕಬ್ಬಿನ ದರ(Nirani Sugars Ltd Sugar Factory) ನಿಗದಿಗೆ ಸಂಬಂಧಪಟ್ಟಂತೆ ನೂತನ ಪ್ರಕಟಣೆಯನ್ನು ಹೊರಡಿಸಲಾಗಿದ್ದು, ಇದರ ವಿವರವನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಬಾಗಲಕೋಟೆ ಜಿಲ್ಲೆ ಮುದೋಳ ತಾಲ್ಲೂಕಿನಲ್ಲಿರುವ ನಿರಾಣಿ ಶುಗರ್ಸ್ ಕಂಪನಿಗೆ 2025-26 ನೇ ಸಾಲಿನ ಮುಂಗಾರು ಹಂಗಾಮಿನ ಕಬ್ಬನ್ನು ಫ್ಯಾಕ್ಟರಿಗೆ(Nirani Sugars Ltd) ಸರಬರಾಜು ಮಾಡುವ ರೈತರಿಗೆ ನೀಡುವ ದರದ ಕುರಿತು ಇಲ್ಲಿಯವರೆಗೆ ಅಧಿಕೃತ ದರಪಟ್ಟಿಯ ಪ್ರಕಟಣೆಯನ್ನು ಸಮರ್ಪಕವಾಗಿ ಆದೇಶ ಹೊರಡಿಸಿರಲಿಲ್ಲ, ಪ್ರಸ್ತುತ ನಿರಾಣಿ ಶುಗರ್ಸ್ ವತಿಯಿಂದ ಮುನ್ನೆ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗಿದೆ.

ಇದನ್ನೂ ಓದಿ: Anganwadi Worker Salary-ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್!

ಇಂದಿನ ಈ ಅಂಕಣದಲ್ಲಿ ರೈತರು ಫ್ಯಾಕ್ಟರಿಗೆ ಸರಬರಾಜು ಮಾಡುವ ಕಬ್ಬಿಗೆ ನಿರಾಣಿ ಶುಗರ್ಸ್ ಕಂಪನಿಯು ಎಷ್ಟು ದರ(Nirani Sugars Sugarcane Rate 2025) ನಿಗದಿಪಡಿಸಲಾಗಿದೆ? ಕಂಪನಿಯಿಂದ ಹೊರಡಿಸಿರುವ ಅಧಿಕೃತ ಪ್ರಕಟಣೆಯಲ್ಲಿ ಯಾವೆಲ್ಲ ಅಂಶಗಳನ್ನು ಪರಿಗಣಿಸಲಾಗಿದೆ? ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

Nirani Sugars Sugarcane Rate-ಅಧಿಕೃತ ಪ್ರಕಟಣೆ ವಿವರ ಹೀಗಿದೆ:

ನಮ್ಮ ಕಾರ್ಖಾನೆಗೆ ಕಬ್ಬು ಪೂರೈಸುವ ಎಲ್ಲ ರೈತ ಬಾಂಧವರಿಗೆ ಈ ಮೂಲಕ ತಿಳಿಸುವುದೇನೆಂದರೆ, ಸನ್ 2025-26ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಸಂಬಂಧಿಸಿದಂತೆ ಪ್ರಸಕ್ತ ಹಂಗಾಮಿಗೆ ಕೇಂದ್ರ ಸರಕಾರ ನಿಗದಿ ಪಡಿಸಿದ ನ್ಯಾಯ ಮತ್ತು ಲಾಭದಾಯಕ ಬೆಲೆ (FRP) ರೂ.3782/- ಪ್ರತಿ ಟನ್ನಿಗೆ (ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚ ಸೇರಿ) ಇರುತ್ತದೆ.

ಕರ್ನಾಟಕ ಸರಕಾರದ ಆದೇಶದ ಮೇರೆಗೆ, ರಾಜ್ಯ ರೈತ ಸಂಘ ಮತ್ತು ನಮ್ಮ ಕಾರ್ಖಾನೆಯ ಕಬ್ಬು ಬೆಳೆಗಾರರ ಬೇಡಿಕೆಯಂತೆ ಮತ್ತು ರೈತರ ಹಿತದೃಷ್ಠಿಯಿಂದ ಸನ್ 2025-26ನೇ ಹಂಗಾಮಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಕಾರ್ಖಾನೆಯಿಂದ ಮೊದಲನೆಯ ಕಂತಾಗಿ ರೂ 3,212/- ಕಬ್ಬು ಬೆಲೆಯನ್ನು ನಿಗದಿಪಡಿಸಿದ್ದು ಹಾಗೂ ಎರಡನೆಯ ಕಂತಾಗಿ (ರೂ 50/- + ರೂ 50/- = ರೂ 100/-) ರಾಜ್ಯ ಸರಕಾರದಿಂದ ನೀಡಬೇಕಾದ ಆರ್ಥಿಕ ನೆರವು ಒಳಗೊಂಡಂತೆ ಒಟ್ಟು ರೂ 3,312/- ಪ್ರತಿ ಟನ್‌ಗೆ ನೀಡಲು ಕಾರ್ಖಾನೆಯ ಆಡಳಿತ ಮಂಡಳಿಯು ನಿರ್ಧರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದ್ದು,

ಇದನ್ನೂ ಓದಿ: Loreal India Scholarship-ಲೋರಿಯಲ್ ಇಂಡಿಯಾ ವತಿಯಿಂದ 1 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

ಕಾರಣ ಸಮಸ್ತ ರೈತ ಬಾಂಧವರು ನಮ್ಮ ಕಾರ್ಖಾನೆಗೆ ಹೆಚ್ಚಿನ ಪ್ರಮಾಣದಲ್ಲಿ ಒಳ್ಳೆಯ ಗುಣಮಟ್ಟದ ಮಾಗಿದ, ರವದಿ ಮತ್ತು ಕಳಲು ರಹಿತವಾದ ಸ್ವಚ್ಛವಾದ ಕಬ್ಬನ್ನು ಪೂರೈಸಿ, ಸನ್ 2025-26 ರ ಕಬ್ಬು ನುರಿಸುವ ಹಂಗಾಮನ್ನು ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ಕೋರುತ್ತೇವೆ ಎಂದು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ಸಂಗಮೇಶ ನಿರಾಣಿ ಅವರು ಪ್ರಕಟಣೆ ಹೊರಡಿಸಿದ್ದಾರೆ.

ಇದನ್ನೂ ಓದಿ: PM Kisan Status-ಇಂದು ರೈತರ ಖಾತೆಗೆ ಪಿಎಂ ಕಿಸಾನ್ ಹಣ ಬಿಡುಗಡೆ! ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ!

ಅಧಿಕೃತ ಪ್ರಕಟಣೆ ಪ್ರತಿ:

ಇದನ್ನೂ ಓದಿ: Rolls Royce India Scholarship-ರೋಲ್ಸ್ ರಾಯ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವತಿಯಿಂದ ₹35,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Nirani Sugars

ಇದನ್ನೂ ಓದಿ: Scholarship e-authentication-ರಾಜ್ಯ ಸರಕಾರದಿಂದ ವಿದ್ಯಾರ್ಥಿವೇತನ ಪಡೆಯಲು ಇ-ದೃಡೀಕರಣ ಮಾಡುವುದು ಕಡ್ಡಾಯ!

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: