Engineering scholarship-ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ₹75,000 ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿ ಆಹ್ವಾನ!

November 23, 2025 | Siddesh
Engineering scholarship-ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ₹75,000 ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿ ಆಹ್ವಾನ!
Share Now:

2025-2026 ನೇ ಸಾಲಿನ ಎರಿಕ್ಸನ್ ಎಂಪವರಿಂಗ್ ಗರ್ಲ್ ಸ್ಕಾಲರ್‌ಶಿಪ್ ಪ್ರೋಗ್ರಾಂ ನ ಅಡಿಯಲ್ಲಿ(Engineering scholarship) ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ವಿಜ್ಞಾನ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಅಥವಾ ದೂರಸಂಪರ್ಕ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಪದವಿ ಪಡೆದ 2 ನೇ ವರ್ಷದ ಮಹಿಳಾ ವಿದ್ಯಾರ್ಥಿಗಳಿಗೆ ₹75,000 ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿಯನ್ನು ಕರೆಯಲಾಗಿದೆ.

ಸಮಾಜದ ಹಿಂದುಳಿದ ವರ್ಗಗಳ ಪ್ರತಿಭಾನ್ವಿತ ಮಹಿಳಾ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡಿ(Engineering support fund) ಅವರ ಮುಂದಿನ ಉನ್ನತ ಶಿಕ್ಷಣವನ್ನು ಮುಂದುವರಿಸಲು ಆರ್ಥಿಕ ಅಡಚಣೆಗಳಾಗದಂತೆ ನೋಡಿಕೊಳ್ಳುವುದೆ ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಇದನ್ನೂ ಓದಿ: Fisheries-ಮೀನುಗಾರಿಕೆ ಇಲಾಖೆ ಪರಿಹಾರ ನಿಧಿಯಡಿ ಪರಿಹಾರ ಮೊತ್ತ 10.00 ಲಕ್ಷರೂ.ಗಳಿಗೆ ಏರಿಕೆ- ಸಿದ್ದರಾಮಯ್ಯ

ಪ್ರಸ್ತುತ ಈ ಅಂಕಣದಲ್ಲಿ ವಿದ್ಯಾರ್ಥಿವೇತನವನ್ನು ಪಡೆಯಲು ಯಾರೆಲ್ಲ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹರಿರುತ್ತಾರೆ? ಅರ್ಜಿ ಸಲ್ಲಿಸಲು ಯಾವೆಲ್ಲ ಹಂತಗಳನ್ನು ಅನುಸರಿಸಬೇಕು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಅರ್ಜಿಗೆ ಸಂಭಂದಿಸಿದ ಅವಶ್ಯಕ ದಾಖಲಾತಿಗಳಾವುವು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Last Date To APply-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 30 2025

Scholorship Amount-ಈ ಕಾರ್ಯಕ್ರಮದ ಅಡಿಯಲ್ಲಿ ಎಷ್ಟು ವಿದ್ಯಾರ್ಥಿವೇತನವನ್ನು ಪಡೆಯಬಹುದು?

ಎರಿಕ್ಸನ್ ಎಂಪವರಿಂಗ್ ಗರ್ಲ್ ಸ್ಕಾಲರ್‌ಶಿಪ್ ಪ್ರೋಗ್ರಾಂ ನ ಅಡಿಯಲ್ಲಿ ಆಯ್ಕೆಯಾದ ಮಹಿಳಾ ವಿದ್ಯಾರ್ಥಿಗಳಿಗೆ ₹75,000 ವಿದ್ಯಾರ್ಥಿವೇತನವನ್ನು ಪಡೆಯಲು ಅವಕಾಶವಿರುತ್ತದೆ.

ಇದನ್ನೂ ಓದಿ: Free Treatment-ನಾಯಿ, ಹಾವು ಕಡಿತಕ್ಕೆ ತಕ್ಷಣ ಉಚಿತ ಚಿಕಿತ್ಸೆ ಕಡ್ಡಾಯ ಸುಪ್ರೀಂ ಕೋರ್ಟ್ ಆದೇಶ!

Who Can Apply For This scholorship-ಅರ್ಜಿ ಸಲ್ಲಿಸಲು ಯಾರ‍ೆಲ್ಲ ಅರ್ಹರಿರುತ್ತಾರ‍ೆ?

ಅರ್ಜಿದಾರ‍ ಅಭ್ಯರ್ಥಿಯು ಭಾರತದ ಮಹಿಳಾ ವಿದ್ಯಾರ್ಥಿನಿ ಆಗಿರಬೇಕು.

ಭಾರತದ ರಾಜ್ಯ/ಯುಜಿಸಿ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ವಿಜ್ಞಾನ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಮತ್ತು ದೂರಸಂಪರ್ಕ ವಿಭಾಗಗಳಲ್ಲಿ ಎಂಜಿನಿಯರಿಂಗ್ ಕಾರ್ಯಕ್ರಮದ 2 ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.

ಅಭ್ಯರ್ಥಿಯು ಹಿಂದಿನ ವರ್ಷದ ಅಂತಿಮ ಪರೀಕ್ಷೆಯಲ್ಲಿ ಕನಿಷ್ಠ 6.5 GPA ಅಂಕಗಳನ್ನು ಗಳಿಸಿರಬೇಕು.

ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು 6 ಲಕ್ಷ ದ ಒಳಗಿರಬೇಕು.

ಅಂಗವಿಕಲರು/ಒಂಟಿ ಪೋಷಕರು/ಅನಾಥರು ಇರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ.

ಎರಿಕ್ಸನ್ ಹಾಗೂ ಬಡ್ಡಿ4ಸ್ಟುಡಿ ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಇದನ್ನೂ ಓದಿ: Revenue Site Khata-ರೆವಿನ್ಯೂ ಸೈಟ್ ಗೂ ಇನ್ಮುಂದೆ ಸಿಗಲಿದೆ ಇ-ಖಾತಾ!

enginiaring scholorship application

ಇದನ್ನೂ ಓದಿ: AI Fact Check Training-ಎಐ ಹಾಗೂ ಫ್ಯಾಕ್ಟ್‌ಚೆಕ್‌ ಕುರಿತು ಒಂದು ದಿನದ ತರಬೇತಿಗೆ ಅರ್ಜಿ ಆಹ್ವಾನ!

Documents Required-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು?

ಎರಿಕ್ಸನ್ ಎಂಪವರಿಂಗ್ ಗರ್ಲ್ ಸ್ಕಾಲರ್‌ಶಿಪ್ ಪ್ರೋಗ್ರಾಂ ನ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅರ್ಹ ವಿದ್ಯಾರ್ಥಿಗಳು ಈ ಕೆಳಗೆ ತಿಳಿಸಿರುವ ದಾಖಲಾತಿಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು.

ಅಭ್ಯರ್ಥಿಯ ಆಧಾರ್ ಕಾರ್ಡ/Aadhar Card

10, 12 ನೇ ತರಗತಿಯ ಅಂಕಪಟ್ಟಿ/10 12 Marks Card

ಪ್ರಥಮ ವರ್ಷದ ಅಂಕಪಟ್ಟಿ/First year markscard

ಆದಾಯ ಪ್ರಮಾಣ ಪತ್ರ/Income certificate

ಶುಲ್ಕ ರಶೀದಿ/Fee receipt

ಬ್ಯಾಂಕ್ ಪಾಸ್ ಪುಸ್ತಕ/Bank Passbook

ಫೋಟೊ/Photocopy

ಅಂಗವೈಕಲ್ಯ ಪ್ರಮಾಣ ಪತ್ರ(ಅನ್ವಯಿಸಿದರೆ)/Disability Certificate

ಇದನ್ನೂ ಓದಿ: PUC Scholarship-ಧಾರ್ಮಿಕ ದತ್ತಿ ಇಲಾಖೆಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ₹5,000/- ಪ್ರೋತ್ಸಾಹಧನ!

Onlilne Application Process-ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ವಿಧಾನ:

ಎರಿಕ್ಸನ್ ಎಂಪವರಿಂಗ್ ಗರ್ಲ್ ಸ್ಕಾಲರ್‌ಶಿಪ್ ಪ್ರೋಗ್ರಾಂ ನ ಅಡಿಯಲ್ಲಿ ಆಯ್ಕೆಯಾಗಿರುವ ಅರ್ಹ ವಿದ್ಯಾರ್ಥಿನಿಯರು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಬಹುದು.

Step-1: ಮಹಿಳಾ ವಿದ್ಯಾರ್ಥಿನಿಯರು ಮೊದಲಿಗೆ ಈ ಲಿಂಕ್ "Online Application" ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಮಾಡಿದ ನಂತರ “Apply Now” ಬಟನ್ ಮೇಲೆ ಕ್ಲಿಕ್ ಮಾಡಿ. ವೆಬ್‌ಸೈಟ್‌ಗೆ ಮೊದಲ ಬಾರಿಗೆ ಭೇಟಿ ನೀಡುತ್ತಿರುವ ವಿದ್ಯಾರ್ಥಿಗಳು “Create an Account” ಆಯ್ಕೆ ಮಾಡಿ ಹೊಸ ಖಾತೆಯನ್ನು ಸೃಜಿಸಿಕೊಳ್ಳಬೇಕು. ನಂತರ “Login” ಬಟನ್‌ ಮೂಲಕ ಅಗತ್ಯ ವಿವರಗಳನ್ನು ನಮೂದಿಸಿ ಲಾಗಿನ್ ಆಗಬೇಕು.

Step-3: ಲಾಗಿನ್ ಆದ ನಂತರ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಿ, ಬೇಕಾದ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಕೊನೆಯಲ್ಲಿ “Submit” ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Anganwadi Worker Salary-ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್!

More Information about scholorship-ಇನ್ನೂ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಪಡೆಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: