Maize MSP-ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಮಿತಿ 50 ಕ್ವಿಗೆ ಹೆಚ್ಚಳ! ಕ್ವಿಂಟಾಲ್ ಗೆ 2,400/- ರೂ ನಿಗದಿ!

December 9, 2025 | Siddesh
Maize MSP-ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಮಿತಿ 50 ಕ್ವಿಗೆ ಹೆಚ್ಚಳ! ಕ್ವಿಂಟಾಲ್ ಗೆ 2,400/- ರೂ ನಿಗದಿ!
Share Now:

ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ(Mekkejola) ಬೆಲೆಯು ಕುಸಿತ ಕಂಡಿರುವ ಪರಿಣಾಮದಿಂದ ಮೆಕ್ಕೆಜೋಳ ಬೆಳೆಗಾರರಿಗೆ ಉತ್ತಮ ದಾರಣೆಯನ್ನು ನೀಡಲು ರಾಜ್ಯ ಸರಕಾರವು ರೈತರಿಂದ ನೇರವಾಗಿ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳವನ್ನು ಖರೀದಿಸುವಂತೆ ಸಹಕಾರ ಇಲಾಖೆಗೆ ಅಧಿಕೃತ ಆದೇಶವನ್ನು ಈಗಾಗಲೇ ಹೊರಡಿಸಲಾಗಿದ್ದು ಪ್ರಸ್ತುತ ನಿಗದಿಪಡಿಸಿರುವ ಗರಿಷ್ಠ ಮಿತಿಯನ್ನು ಹೆಚ್ಚಳ ಮಾಡಿ ನೂತನ ಆದೇಶವನ್ನು ಹೊರಡಿಸಲಾಗಿದ್ದು ಇದರ ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ರಾಜ್ಯದಲ್ಲಿ ವಿವಿಧ ಭಾಗಗಳಲ್ಲಿ ತೆರೆದ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆಯು(Mekkejola Bembala Bele)ತೀರ್ವ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಮಾಡುವಂತೆ ಪ್ರತಿಬಟಣೆಗಳನ್ನು ಮಾಡಲಾಗಿತ್ತು ಈ ಕುರಿತು ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಮಾಡುವ ಕುರಿತು ಆದೇಶವನ್ನು ಹೊರಡಿಸಲಾಗಿತ್ತು ಆದರೆ ಒಬ್ಬ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಅನ್ನು ಮಾತ್ರ ಖರೀದಿ ಮಾಡಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಈ ಆದೇಶಕ್ಕೆ ತಿದ್ದುಪಡಿ ಮಾಡಿ ನೂತನ ಆದೇಶವನ್ನು ಹೊರಡಿಸಲಾಗಿದೆ.

ಇದನ್ನೂ ಓದಿ: Shrama Shakti Yojana-ಶ್ರಮ ಶಕ್ತಿ ಯೋಜನೆಯಡಿ ₹50,000 ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ!

ರೈತರು ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳವನ್ನು(Mekkejoala MSP Yojana)ಮಾರಾಟ ಮಾಡಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಇದಕ್ಕಾಗಿ ಎಲ್ಲಿ ನೋಂದಾಯಿಸಿಕೊಳ್ಳಬೇಕು? ಅವಶ್ಯವಿರುವ ದಾಖಲಾತಿಗಳೇನು? ಎಷ್ಟು ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗಿದೆ? ಒಬ್ಬ ರೈತರಿಂದ ಗರಿಷ್ಠ ಎಷ್ಟು ಕ್ವಿಂಟಾಲ್ ಮೆಕ್ಕೆಜೋಳವನ್ನು ಖರೀದಿಸಲಾಗುತ್ತದೆ? ನೂತನ ಆದೇಶದಲ್ಲಿ ಯಾವೆಲ್ಲ ಅಂಶಗಳನ್ನು ಉಲ್ಲೇಖಿಸಲಾಗಿದೆ ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Maize MSP Price-ಪ್ರತಿ ಕ್ವಿಂಟಾಲ್ ಗೆ ರೂ 2,400/- ನಿಗದಿ:

ರಾಜ್ಯ ಸರಕಾರದಿಂದ ಪ್ರಸ್ತುತ ರೈತರಿಂದ ನೇರವಾಗಿ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಾಲ್ ಗೆ ರೂ 2,400/- ನಿಗದಿಪಡಿಸಲಾಗಿದೆ.

ಇದನ್ನೂ ಓದಿ: Mahindra Sarathi Scholarship-ಮಹೀಂದ್ರಾ ಸಾರಥಿ ಅಭಿಯಾನದ ಅಡಿಯಲ್ಲಿ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Maize MSP in karnataka

ಇದನ್ನೂ ಓದಿ: Free Sewing Machine-ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!

Mekkejola Bembala Bele-ಮೆಕ್ಕೆಜೋಳ ಖರೀದಿ ಮಿತಿ 50 ಕ್ವಿಗೆ ಹೆಚ್ಚಳ!

ಬೆಂಬಲ ಬೆಲೆಯಲ್ಲಿ ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿ ಮಿತಿ 50 ಕ್ವಿಗೆ ಹೆಚ್ಚಳ ಮಾಡಿ ಆದೇಶವನ್ನು ಹೊರಡಿಸಲು ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರು ಸಹಕಾರ ಇಲಾಖೆಯ ಕಾರ್ಯದರ್ಶಿ ಅವರಿಗೆ ಸೂಕ್ತ ಆದೇಶವನ್ನು ಹೊರಡಿಸಲಾಗಿದ್ದು ಇದರ ವಿವರ ಹೀಗಿದೆ "30 ನವೆಂಬರ್ 2025ಕ್ಕೆ ಅನುಗುಣವಾಗಿ ದಿನಾಂಕ: 02-12-2025ರಂದು ಹೊರಡಿಸಿರುವ ತಿದ್ದುಪಡಿ ಆದೇಶದಲ್ಲಿ 'ಪ್ರತಿ ರೈತರಿಂದ ಗರಿಷ್ಟ 5.00 ಕ್ವಿಂಟಾಲ್ ಮೆಕ್ಕೆಜೋಳ ಉತ್ಪನ್ನವನ್ನು ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್‌ಗೆ ರೂ.2400/- ರಂತೆ ಖರೀದಿಸತಕ್ಕದ್ದು

ಮತ್ತು ಡಿಸ್ಟಿಲರಿಗಳ ಸಮೀಪದ PACS ಗಳ ಮೂಲಕ ಖರೀದಿಸಲು ಆದ್ಯತೆ ನೀಡತಕ್ಕದ್ದು" ಎಂಬುದರ ಬದಲಾಗಿ "FRUITS ತಂತ್ರಾಂಶದಲ್ಲಿ ಲಭ್ಯವಾಗುವ ರೈತರು ಹೊಂದಿರುವ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ಪ್ರತಿ ಎಕರೆಗೆ 12 ಕ್ವಿಂಟಾಲ್‌ನಂತೆ ಪ್ರತಿ ರೈತರಿಂದ ಗರಿಷ್ಟ 20.00 ಕ್ವಿಂಟಾಲ್ ಮೆಕ್ಕೆಜೋಳ ಉತ್ಪನ್ನವನ್ನು ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್ ಗೆ ರೂ.2400/- ರಂತೆ ಖರೀದಿಸತಕ್ಕದ್ದು ಮತ್ತು ಡಿಸ್ಟಿಲರಿಗಳ ಸಮೀಪದ PACS ಗಳ ಮೂಲಕ ಖರೀದಿಸಲು ಆದ್ಯತೆ ನೀಡತಕ್ಕದ್ದು" ಎಂದು ತಿಳಿಸಲಾಗಿದೆ.

ಆದರೆ, ರೈತರು ಇದಕ್ಕೆ ಸೂಕ್ತವಾಗಿ ಸ್ಪಂದಿಸದೇ ಮಾನ್ಯ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮಾರಾಟ ಖರೀದಿ ಪ್ರಮಾಣವನ್ನು 50.00 ಕ್ವಿಂಟಾಲ್‌ಗೆ ಹೆಚ್ಚಿಸುವಂತೆ ಮನವಿ ಮಾಡಿರುತ್ತಾರೆ. ಅದರಂತೆ, 50.00 ಕ್ವಿಂಟಾಲ್‌ಗೆ ಹೆಚ್ಚಿಸಿ ಸದರಿ ಆದೇಶವನ್ನು ಪರಿಷ್ಕರಿಸಿ ತಿದ್ದುಪಡಿ ಆದೇಶವನ್ನು ಹೊರಡಿಸುವಂತೆ ಕೋರಲು ಮಾನ್ಯ ಮುಖ್ಯಮಂತ್ರಿಯವರಿಂದ ನಿರ್ದೇಶಿಸಲ್ಪಟ್ಟಿದ್ದೇನೆ ಎಂದು ನೂತನ ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Business Loan Subsidy-ಮಹಿಳಾ ನಿಗಮದಿಂದ ಮಹಿಳೆಯರಿಗೆ ಸ್ವಂತ ಉದ್ದಿಮೆ ಆರಂಭಿಸಲು ₹1.5 ಲಕ್ಷ ಸಬ್ಸಿಡಿ!

How To Sell Maize in MSP-ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಮಾರಾಟ ಮಾಡುವುದು ಹೇಗೆ?

ಮೆಕ್ಕೆಜೋಳ ಬೆಳೆಗಾರರು ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳವನ್ನು ಮಾರಾಟ ಮಾಡಲು ತಮ್ಮ ಹತ್ತಿರದ ಖರೀದಿ ಕೇಂದ್ರದ ಬಗ್ಗೆ ಮಾಹಿತಿಯನ್ನು ತಿಳಿಯಲು ತಾಲ್ಲೂಕಿನ ಕೃಷಿ ಮಾರುಕಟ್ಟೆ/APMC ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರದಲ್ಲಿ ಜೊತೆಗೆ ಡಿಸ್ಟಿಲರಿಗಳ ಸಮೀಪದಲ್ಲಿರುವ PACS (ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು) ಮೂಲಕ ಅಗತ್ಯ ಮಾಹಿತಿಯನ್ನು ಪಡೆದು ಮುಂಚಿತವಾಗಿ ಅಗತ್ಯ ದಾಖಲೆಯನ್ನು ಖರೀದಿ ಕೇಂದ್ರದಲ್ಲಿ ಸಲ್ಲಿಸಿ ಆನ್ಲೈನ್ ಮೂಲಕ ನೋಂದಣಿಯನ್ನು ಮಾಡಿಕೊಂಡು ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳವನ್ನು ಮಾರಾಟ ಮಾಡಬವುದು.

ಇದನ್ನೂ ಓದಿ: Kotak Scholarship-ಕೋಟಕ್ ಕನ್ಯಾ ಸ್ಕಾಲರ್‌ಶಿಪ್ ₹1.5 ಲಕ್ಷ ವಿದ್ಯಾರ್ಥಿವೇತನ! ಇಂದೇ ಅರ್ಜಿ ಸಲ್ಲಿಸಿ!

Required Documents For Maize MSP-ಅಗತ್ಯ ದಾಖಲೆಗಳು:

ರೈತರು ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳವನ್ನು ಮಾರಾಟ ಮಾಡಲು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಣಿಯನ್ನು ಮಾಡಿಕೊಳ್ಳಲು ಈ ಕೆಳಗಿನ ಪಟ್ಟಿಯಲ್ಲಿರುವ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಪ್ರೂಟ್ಸ್ ಐಡಿ/FID

ಆಧಾರ್ ಕಾರ್ಡ್/Adhar

ಬ್ಯಾಂಕ್ ಪಾಸ್‌ಬುಕ್/Bank Pass Book

ಪಹಣಿ/ಉತಾರ್/RTC

ಮೊಬೈಲ್ ನಂಬರ್/Mobile Number

ರೈತರು ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳವನ್ನು ಮಾರ‍ಾಟ ಮಾಡಲು ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ಹತ್ತಿರದ APMC ಕಚೇರಿಯನ್ನು ಭೇಟಿ ಮಾಡಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: