Kuri Sakanike Tarabeti-ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಗಾಗಿ ಅರ್ಜಿ ಆಹ್ವಾನ!

January 4, 2026 | Siddesh
Kuri Sakanike Tarabeti-ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಗಾಗಿ ಅರ್ಜಿ ಆಹ್ವಾನ!
Share Now:

ಕೆನರಾ ಬ್ಯಾಂಕ್‌ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಿಂದ ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯನ್ನು(Sheep And Goat Farming Training) ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ತರಬೇತಿಗಾಗಿ ಅರ್ಜಿಯನ್ನು ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಮತ್ತು ಕುರಿ ಮತ್ತು ಮೇಕೆ ಸಾಕಾಣಿಕೆಗೆ ಯಾವೆಲ್ಲ ಯೋಜನೆಯಡಿ ಸಬ್ಸಿಡಿಯನ್ನು ಪಡೆಯಬಹುದು ಎನ್ನುವ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಪ್ರಕಟಿಸಲಾಗಿದೆ.

ಪ್ರಸ್ತುತ ದಿನಗಳಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು(Kuri Sakanike Tarabeti) ಮಾಡುವವರ ಜನ ಸಂಖ್ಯೆಯು ಹೆಚ್ಚುತ್ತಿದ್ದು ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ನೇರವಾಗಿ ಬಂಡವಾಳವನ್ನು ಹೂಡಿಕೆ ಮಾಡಿ ಸಾಕಾಣಿಕೆಯನ್ನು ಮಾಡುವವರು ಸೂಕ್ತ ತರಬೇತಿಯನ್ನು ಪಡೆದು ಪ್ರಾರಂಭಿಸುವುದು ಉತ್ತಮವಾಗಿದೆ ಈ ನಿಟ್ಟಿನಲ್ಲಿ ಕೆನರಾ ಬ್ಯಾಂಕ್‌ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಿಂದ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಪ್ರಯೋಜನ ಪಡೆದುಕೊಳ್ಳಬಹುದು.

ಇದನ್ನೂ ಓದಿ: Yashaswini Card-ಯಶಸ್ವಿನಿ ಕಾರ್ಡ ಪಡೆಯಲು ಅರ್ಜಿ ಸಲ್ಲಿಕೆ ಆರಂಭ!

ಈ ಲೇಖನದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆಗೆ(Kuri Sakanike) ಯಾವೆಲ್ಲ ಯೋಜನೆಯಡಿ ಸಹಾಯಧನ ಪಡೆಯಬಹುದು? ಇದಕ್ಕಾಗಿ ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಎನ್ನುವ ಮಾಹಿತಿಯನ್ನು ಸಹ ವಿವರಿಸಲಾಗಿದ್ದು ಜೊತೆಗೆ ಪ್ರಸ್ತುತ ಕೆನರಾ ಬ್ಯಾಂಕ್‌ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಿಂದ ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯನ್ನು ಪಡೆಯಲು ಅಭ್ಯರ್ಥಿಗಳು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಮಾಹಿತಿಯನ್ನು ಸಹ ಹಂಚಿಕೊಳ್ಳಲಾಗಿದೆ.

Who Can Apply For Sheep Farming Training- ತರಬೇತಿಯಲ್ಲಿ ಯಾರೆಲ್ಲ ಭಾಗವಹಿಸಬಹುದು?

ಕೆನರಾ ಬ್ಯಾಂಕ್‌ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಿಂದ ಪ್ರಸ್ತುತ ಆಯೋಜನೆ ಮಾಡಿರುವ ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯನ್ನು ಪಡೆಯಲು ಯಾರೆಲ್ಲ ಮುಂಚಿತವಾಗಿ ನೋಂದಣಿಯನ್ನು ಮಾಡಿಕೊಂಡು ತರಬೇತಿಯಲ್ಲಿ ಭಾಗವಹಿಸಬಹುದು ಎನ್ನುವ ವಿವರ ಹೀಗಿದೆ:

ಅರ್ಜಿದಾರ ಅಭ್ಯರ್ಥಿಯು ಕರ್ನಾಟಕದ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.

ಅರ್ಜಿದಾರರ ವಯಸ್ಸು 18 ರಿಂದ 35 ವರ್ಷದ ಒಳಗಿರಬೇಕು.

ರಾಜ್ಯದ ಎಲ್ಲಾ ಜಿಲ್ಲೆಯ ಅಭ್ಯರ್ಥಿಗಳು ಈ ತರಬೇತಿಯಲ್ಲಿ ಭಾಗವಹಿಸಲು ನೋಂದಣಿಯನ್ನು ಮಾಡಿಕೊಳ್ಳಬಹುದು.

ಗ್ರಾಮೀಣ ಭಾಗದಲ್ಲಿ ನೆಲೆಸಿರುವ ಬಿಪಿಎಲ್ ಕಾರ್ಡ ಅನ್ನು ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ಇರುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಅಭ್ಯರ್ಥಿಗಳು ಸ್ಥಳೀಯ ಭಾಷೆ ಬಲ್ಲವರಾಗಿದ್ದು, ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು.

ಇದನ್ನೂ ಓದಿ: Poultry Shed Subsidy-ಕುಕ್ಕುಟ ಸಂಜೀವಿನಿ ಯೋಜನೆಯಡಿ ಉಚಿತ ಕೋಳಿಮರಿ, ಶೆಡ್ ಸಹಾಯಧನ ಪಡೆಯಲು ಅರ್ಜಿ!

Sheep Farming Training Center-ತರಬೇತಿ ಕೇಂದ್ರ ವಿಳಾಸ:

ಉಚಿತ ಅಣಬೆ ಬೇಸಾಯ ತರಬೇತಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್‌ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.

Sheep And Goat Farming Training Date-ತರಬೇತಿ ಅವಧಿ:

ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯು ದಿನಾಂಕ 19 ಜನವರಿ 2026 ರಿಂದ ಪ್ರಾರಂಭವಾಗಿ ಒಟ್ಟು 13 ದಿನ ಏರ್ಪಡಿಸಲಾಗಿದೆ.

ಇದನ್ನೂ ಓದಿ: Online Mutation-ಉಚಿತವಾಗಿ ಮ್ಯುಟೇಷನ್ ಪಡೆಯಲು ಇಲ್ಲಿದೆ ವೆಬ್ಸೈಟ್ ಲಿಂಕ್!

Kuri Sakanike Tarabeti

Free Sheep Farming Training Registration-ತರಬೇತಿಯಲ್ಲಿ ಭಾಗವಹಿಸಲು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳುವುದು ಹೇಗೆ?

ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯನ್ನು ಪಡೆಯಲು ಅಭ್ಯರ್ಥಿಗಳು ಮುಂಚಿತವಾಗಿ ಹೆಸರುಗಳನ್ನು ನೋಂದಣಿಯನ್ನು ಮಾಡಿಕೊಳ್ಳಲು ಈ ಮೊಬೈಲ್ ಸಂಖ್ಯೆ 8970476050, 9591514154, 9686248369, 8970446644, 9505894247 ಗೆ ಕರೆ ಮಾಡಿ ನೋಂದಣಿ ಮಾಡಿ.

Uchitha Kuri Sakanike Tarabeti-ಸಂಪೂರ್ಣ ಉಚಿತ ತರಬೇತಿ:

ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯಲ್ಲಿ ಭಾಗವಹಿಸುವವರು ತರಬೇತಿಯಲ್ಲಿ ಭಾಗವಹಿಸಲು ಯಾವುದೇ ಬಗ್ಗೆಯ ಶುಲ್ಕವನ್ನು ಪಾವತಿ ನಿಗದಿಪಡಿಸಿರುವುದಿಲ್ಲ ಜೊತೆಗೆ ಈ ತರಬೇತಿಯಲ್ಲಿ ಭಾಗವಹಿಸುವವರಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯನ್ನು ಏರ್ಪಡಿಸಲಾಗಿದ್ದು ಸಂಪೂರ್ಣ ಉಚಿತ ತರಬೇತಿ ಇದಾಗಿರುತ್ತದೆ.

ಇದನ್ನೂ ಓದಿ: LPG Cylinder Price Hike-ಗ್ಯಾಸ್ ಸಿಲಿಂಡರ್ ಬೆಲೆ ಭರ್ಜರಿ ಏರಿಕೆ! ಇಲ್ಲಿದೆ ದರ ವಿವರ!

Required Documents For Training- ತರಬೇತಿಯಲ್ಲಿ ಭಾಗವಹಿಸಲು ಅವಶ್ಯವಿರುವ ದಾಖಲೆಗಳು:

ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕಾದ ದಾಖಲೆಗಳ ವಿವರ ಹೀಗಿದೆ:

  • ಅಭ್ಯರ್ಥಿಯ ಆಧಾರ್ ಕಾರ್ಡ/Aadhar
  • ಬ್ಯಾಂಕ್ ಪಾಸ್ ಬುಕ್/Bank Pass Book
  • ಪೋಟೋ/Photo
  • ರೇಶನ್ ಕಾರ್ಡ/Ration Card

Kuri Sakanike Subsidy Yojanegalu-0ಕುರಿ ಮತ್ತು ಮೇಕೆ ಸಾಕಾಣಿಕೆಗೆ ಯಾವೆಲ್ಲ ಯೋಜನೆಯಡಿ ಸಬ್ಸಿಡಿ ಪಡೆಯಬಹುದು?

1) ರಾಷ್ಟ್ರೀಯ ಜಾನುವಾರು ಮಿಷನ್(NLM): ರಾಷ್ಟ್ರೀಯ ಜಾನುವಾರು ಮಿಷನ್(NLM) ಯೋಜನೆಯಡಿ ರೂ 25 ಲಕ್ಷದವರೆಗೆ ಶೇ 50% ಸಬ್ಸಿಡಿಯಲ್ಲಿ ಕುರಿ ಸಾಕಾಣಿಕೆಯನ್ನು ಆರಂಭಿಸಲ್ಲು ಅವಕಾಶವಿರುತ್ತದೆ.

ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಲಿಂಕ್- CLICK HERE

2) ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ: ಈ ಯೋಜನೆಯಡಿ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ (Karnataka Sheep and Wool Development Corporation) ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಸಹಾಯಧನ ಮತ್ತು ಸಾಲ ಸೌಲಭ್ಯಗಳನ್ನು ಒದಗಿಸುತ್ತದೆ.

ಪ್ರತಿ ಘಟಕಕ್ಕೆ (20 ಕುರಿ + 1 ಮೇಕೆ) ಒಟ್ಟು ₹1.75 ಲಕ್ಷ ವೆಚ್ಚದಲ್ಲಿ, ರಾಜ್ಯ ಸರ್ಕಾರ ₹43,750 ಸಹಾಯಧನ ನೀಡುತ್ತದೆ. ಫಲಾನುಭವಿಗಳು ಇದೇ ಮೊತ್ತವನ್ನು ₹43,750 ವಂತಿಕೆಯಾಗಿ ನೀಡಬೇಕು. ಇದಲ್ಲದೆ, ರಾಜ್ಯ ಹಣಕಾಸು ಸಂಸ್ಥೆಯಿಂದ ₹87,500 ಸಾಲ ಶೇ.9.26 ಬಡ್ಡಿದರದಲ್ಲಿ ಆರ್ಥಿಕ ನೆರವನ್ನು ಒದಗಿಸಲಾಗುತ್ತದೆ.

ಇದನ್ನೂ ಓದಿ: Grama One-ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ!

3) ಸಹಕಾರ ಸಂಘಗಳ ಮೂಲಕ ಸಬ್ಸಿಡಿ: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ಸಹಕಾರ ಸಂಘಗಳ ಮೂಲಕ ಕುರಿ ಖರೀದಿ, ಫೀಡ್, ಮತ್ತು ಇತರ ಮೂಲಭೂತ ಸೌಕರ್ಯಗಳಿಗೆ ಸಬ್ಸಿಡಿ ಒದಗಿಸುತ್ತದೆ. ಪ್ರತಿ ಯೂನಿಟ್‌ಗೆ (25 ಕುರಿ/ಮೇಕೆ) ಯೋಜನೆ ಮೌಲ್ಯದ 50%ರಷ್ಟು ಸಬ್ಸಿಡಿ, ಗರಿಷ್ಠ ₹1 ಲಕ್ಷ ಆರ್ಥಿಕ ನೆರವನ್ನು ಒದಗಿಸಲಾಗುತ್ತದೆ.

4) ನರೇಗಾ ಯೋಜನೆ: ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯಡಿ ಅರ್ಜಿ ಸಲ್ಲಿಸಿ ಕುರಿ ಮತ್ತು ಮೇಕೆ ಸಾಕಾಣಿಕೆಗೆ ಅವಶ್ಯವಿರುವ ಶೆಡ್ ನಿರ್ಮಾಣಕ್ಕೆ 68,000/-ಸಾವಿರದವರೆಗೆ ಅರ್ಥಿಕ ನೆರವನ್ನು ಪಡೆಯಬಹುದು.

5) ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಯೋಜನೆ: ಪರಿಶಿಷ್ಟ ಜಾತಿಯ ರೈತರಿಗೆ ಕುರಿ ಸಾಕಾಣಿಕೆಗೆ ಸಾಲ ಮತ್ತು 50% ಸಹಾಯಧನ ಸೌಲಭ್ಯವನ್ನು ಒಳಗೊಂಡಿದ್ದು, ಒಟ್ಟು ಘಟಕ ವೆಚ್ಚ ₹50,000 ರಲ್ಲಿ 50% ₹25,000 ಸಹಾಯಧನ ಮತ್ತು ₹25,000 ಸಾಲ (4% ಬಡ್ಡಿದರದಲ್ಲಿ) ನೀಡಲಾಗುತ್ತದೆ.

6) ಉಚಿತ ಟೆಂಟ್ ಮತ್ತು ಪರಿಕರ ವಿತರಣೆ: ವಲಸೆ ಕುರಿಗಾರರಿಗೆ ಉಚಿತ ಟೆಂಟ್ ಮತ್ತು ಇತರ ಪರಿಕರಗಳನ್ನು ನೀಡುವ ಯೋಜನೆ ಇದೆ, ಇದು ಸಾಕಾಣಿಕೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: