HomeNew postsNLM Scheme-2024: ನೀವೇನಾದರು ಕೋಳಿ,ಕುರಿ,ಮೇಕೆ,ಹಂದಿ, ರಸಮೇವು ಘಟಕ ಮಾಡುವ ಆಸಕ್ತಿಯಿದ್ದಲ್ಲಿ ಈ ಯೋಜನೆಯಡಿ ಶೇ 50%...

NLM Scheme-2024: ನೀವೇನಾದರು ಕೋಳಿ,ಕುರಿ,ಮೇಕೆ,ಹಂದಿ, ರಸಮೇವು ಘಟಕ ಮಾಡುವ ಆಸಕ್ತಿಯಿದ್ದಲ್ಲಿ ಈ ಯೋಜನೆಯಡಿ ಶೇ 50% ಸಹಾಯಧನ!

ನೀವೇನಾದರು ಕೋಳಿ,ಕುರಿ,ಮೇಕೆ,ಹಂದಿ, ರಸಮೇವು ಘಟಕ ಮಾಡುವ ಆಸಕ್ತಿಯಿದ್ದಲ್ಲಿ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ (NLM EDP) ಈ ಯೋಜನೆಯಡಿ ಶೇ 50% ಸಹಾಯಧ ಪಡೆಯಬಹುದಾಗಿದೆ.

ಈ ಯೋಜನೆಯಡಿ ಸಹಾಯಧನ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಕೆ ವಿಧಾನ ಹೇಗೆ? ಯಾವೆಲ್ಲ ದಾಖಲಾತಿಗಳನ್ನು ಸಲ್ಲಿಸಬೇಕು? ಇತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಈ ಮಾಹಿತಿ ನಿಮಗೆ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಮೊಬೈಲ್ ನಲ್ಲಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಈ ಕಾರ್ಯಕ್ರಮದಡಿ ಗ್ರಾಮೀಣ ಕೋಳಿ ಉದ್ಯಮಶೀಲತೆ, ಕುರಿ, ಮೇಕೆ, ಹಂದಿ ಸಾಕಾಣಿಕೆ ಮತ್ತು ರಸಮೇವು ಉತ್ಪಾದನೆ ಘಟಕಗಳನ್ನು ಆರಂಭಿಸಲು ಆರ್ಥಿಕ ನೆರವು ನೀಡುವ ಯೋಜನೆ ಇದಾಗಿದ್ದು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯಡಿ ಆರ್ಥಿಕ ಸೌಲಭ್ಯ ಪಡೆಯಬಹುದಾಗಿದೆ ಎಂದು ಪಶುಸಂಗೋಪನೆ ಇಲಾಖೆಯ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: RTC adhar link status- ನಿಮ್ಮ ಜಮೀನಿನ ಪಹಣಿಗೆ ಆಧಾರ್ ಜೋಡಣೆ ಅಗಿದಿಯಾ? ಎಂದು ಚೆಕ್ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ.

NLM Scheme-2024: ಘಟಕವಾರು ಸಹಾಯಧನದ ವಿವರ ಹೀಗಿದೆ:

1) ಗ್ರಾಮೀಣ ಕೋಳಿ ಉದ್ದಿಮೆ(1000 ದೇಶಿ ಮಾತೃಕೋಳಿ ಘಟಕ+ ಹ್ಯಾಚರಿ ಘಟಕ+ ಮರಿಗಳ ಸಾಕಾಣಿಕೆ ಘಟಕ)Rural Poultry Entrepreneurship programme):

ಗರಿಷ್ಥ ಯೋಜನಾ ವೆಚ್ಚ:- 50 ಲಕ್ಷ, ಸಹಾಯಧನ:- ಶೇ 50 ರಷ್ಟು ಒಂದು ಘಟಕಕ್ಕೆ ಗರಿಷ್ಟ ರೂ 25 ಲಕ್ಷ.

2) ಕುರಿ-ಮೇಕೆ ತಳಿ ಸಂವರ್ಧನಾ ಘಟಕ(Sheep and Goat farming):

A) 500+25- ಗರಿಷ್ಥ ಯೋಜನಾ ವೆಚ್ಚ:- 1 ಕೋಟಿ, ಸಹಾಯಧನ:- ಶೇ 50 ಗರಿಷ್ಟ ರೂ 50 ಲಕ್ಷ.
B) 400+20- ಗರಿಷ್ಥ ಯೋಜನಾ ವೆಚ್ಚ:-  80 ಲಕ್ಷ, ಸಹಾಯಧನ:- ಶೇ  50 ಗರಿಷ್ಟ ರೂ 40 ಲಕ್ಷ
C) 300+15- ಗರಿಷ್ಥ ಯೋಜನಾ ವೆಚ್ಚ:-  60 ಲಕ್ಷ, ಸಹಾಯಧನ:- ಶೇ 50 ಗರಿಷ್ಟ ರೂ 30 ಲಕ್ಷ.
D) 200+10- ಗರಿಷ್ಥ ಯೋಜನಾ ವೆಚ್ಚ:-  40 ಲಕ್ಷ, ಸಹಾಯಧನ:- ಶೇ 50 ಗರಿಷ್ಟ ರೂ 20 ಲಕ್ಷ.
E) 100+5-  ಗರಿಷ್ಥ ಯೋಜನಾ ವೆಚ್ಚ:-   20 ಲಕ್ಷ, ಸಹಾಯಧನ:- ಶೇ 50 ಗರಿಷ್ಟ ರೂ 10 ಲಕ್ಷ.

ಇದನ್ನೂ ಓದಿ: Copra msp price- ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಗೆ ಪುನಃ ನೋಂದಣಿಗೆ ಅವಕಾಶ! ಎಷ್ಟು ದಿನ ಅವಕಾಶ ನೀಡಲಾಗಿದೆ?

3) ಹಂದಿ ತಳಿ ಸಂವರ್ಧನಾ ಘಟಕ(Piggery Entrepreneurship):

100+10 ಗರಿಷ್ಥ ಯೋಜನಾ ವೆಚ್ಚ:-   60 ಲಕ್ಷ, ಸಹಾಯಧನ:- ಶೇ 50 ಗರಿಷ್ಟ ರೂ 30 ಲಕ್ಷ
50+5   ಗರಿಷ್ಥ ಯೋಜನಾ ವೆಚ್ಚ:-   30 ಲಕ್ಷ, ಸಹಾಯಧನ:-  ಶೇ 50 ಗರಿಷ್ಟ ರೂ 15 ಲಕ್ಷ.

4) ರಸಮೇವು ಉತ್ಪಾದನಾ ಘಟಕ, ಮೇವು ಬ್ಲಾಕ್ ತಯಾರಿಕಾ ಘಟಕ/ ಟಿಎಂಆರ್ ಪ್ಲಾಂಟ್ ಸ್ಥಾಪನೆ ಘಟಕ(ವಾರ್ಷಿಕ 2000-2500 ಮೆಟ್ರಿಕ್ ಟನ್ ಉತ್ಪಾದನೆ)-
Silage making unit for entrepreneurs(producation capacity 2000-2500 MT per annum)

ಗರಿಷ್ಥ ಯೋಜನಾ ವೆಚ್ಚ:- 1 ಕೋಟಿ,   ಸಹಾಯಧನ:- ಶೇ 50 ಗರಿಷ್ಟ ರೂ 50 ಲಕ್ಷ.

ಇದನ್ನೂ ಓದಿ: Scholarship application- ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ!

Required documents for NLM yojana application- ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

1) ವಿಸ್ತ್ರತ ಯೋಜನಾ ವರದಿ (Detailed Project Report).

2) ಭೂಮಿ ದಾಖಲೆ ಪಹಣಿ (RTC).

3) ಭೂಮಿ ಇಲ್ಲದವರು ಬಾಡಿಗೆ ಅಥವಾ ಗುತ್ತಿಗೆಗೆ ಭೂಮಿ ಪಡೆದು, ನೋಂದಾಯಿತ ಕರಾರು ಪತ್ರ ಸಲ್ಲಿಸುವುದು.

4) ಆಧಾರ್ ಸಂಖ್ಯೆ, ಪ್ಯಾನ್ ಸಂಖ್ಯೆ, ವಿಳಾಸ ವಿವರಗಳು.

5) Project site GPS Photo.

6) ಕಳೆದ 6 ತಿಂಗಳ ಬ್ಯಾಂಕ್ ವಹಿವಾಟು ವಿವರ.

7) ತರಬೇತಿ ಪ್ರಮಾಣ ಪತ್ರ / ಅನುಭವ ಹೊಂದಿರುವ ಬಗ್ಗೆ ಪ್ರಮಾಣ ಪತ್ರ.

ಎಲ್ಲಿ ಅರ್ಜಿ ಸಲ್ಲಿಸಬೇಕು?

ಆಸಕ್ತ ಅರ್ಹ ಅರ್ಜಿದಾರರು ನೇರವಾಗಿ ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಈ ಯೋಜನೆಯ ವೆಬ್ಸೈಟ್ ಭೇಟಿ ಮಾಡಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ:

ಅರ್ಜಿ ಸಲ್ಲಿಸಲು ಲಿಂಕ್: Apply Now
ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯ ವೆಬ್ಸೈಟ್: click here

Most Popular

Latest Articles

Related Articles