- Advertisment -
HomeNew postsAnnabhagya yojana- ಈ ಪಟ್ಟಿಯಲ್ಲಿರುವವರಿಗೆ ಮಾರ್ಚ-2024 ತಿಂಗಳ ಅನ್ನಭಾಗ್ಯ ಅಕ್ಕಿ ವಿತರಣೆ ಮತ್ತು ಅಕ್ಕಿ ಹಣ...

Annabhagya yojana- ಈ ಪಟ್ಟಿಯಲ್ಲಿರುವವರಿಗೆ ಮಾರ್ಚ-2024 ತಿಂಗಳ ಅನ್ನಭಾಗ್ಯ ಅಕ್ಕಿ ವಿತರಣೆ ಮತ್ತು ಅಕ್ಕಿ ಹಣ ವರ್ಗಾವಣೆ ಪ್ರಾರಂಭ!

Last updated on September 27th, 2024 at 01:59 pm

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಚೀಟಿದಾರರಿಗೆ ಮಾರ್ಚ್-2024 ತಿಂಗಳಗೆ ಅನ್ವಯವಾಗುವಂತೆ ಪಡಿತರ ಧಾನ್ಯ ಹಂಚಿಕೆ ಮತ್ತು ಹೆಚ್ಚುವರಿ ಅಕ್ಕಿ ಬದಲು ಅರ್ಥಿಕ ಸಹಾಯಧನದ ಹಣ(Annabhagya yojana) ವರ್ಗಾವಣೆ ಕಾರ್ಯ ಪ್ರಾರಂಭಿಸಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಸಿದ್ದರಾಮ್ ಮಾರಿಹಾಳ್ ರವರು ಮಾಹಿತಿ ಹಂಚಿಕೊಂಡಿದ್ದಾರೆ.

ಆಹಾರ ಇಲಾಖೆಯ ಅಧಿಕೃತ https://ahara.kar.nic.in ಈ ವೆಬ್ಸೈಟ್ ನಲ್ಲಿ ಮಾರ್ಚ-2024 ತಿಂಗಳ ಜಿಲ್ಲಾವಾರು ಅರ್ಹ ಮತ್ತು ಅನರ್ಹ ರೇಷನ್ ಕಾರ್ಡ ಪಟ್ಟಿ ಬಿಡುಗಡೆ ಮಾಡಲಾಗಿದ್ದು ಅರ್ಹ ಪಟ್ಟಿಯಲ್ಲಿರುವರಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ.

ಜಿಲ್ಲಾವಾರು ಅರ್ಹ ಮತ್ತು ಅನರ್ಹ ರೇಷನ್ ಕಾರ್ಡ  ಪಟ್ಟಿಯನ್ನು ಗ್ರಾಹಕರು ತಮ್ಮ ಮೊಬೈಲ್ ನಲ್ಲಿ ಹೇಗೆ ಡೌನ್ಲೋಡ್ ಮಾಡಿಕೊಂಡು ನಿಮ್ಮ ಹೆಸರಿರುವುದನ್ನು ಚೆಕ್ ಮಾಡಬಹುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Online marriage registration- ಇನ್ನು ಮುಂದೆ ವಿವಾಹ ನೋಂದಣಿ ಭಾರೀ ಸುಲಭ ನಿಮ್ಮ ಮೊಬೈಲ್ ಮೂಲಕವೇ ನೋಂದಣಿ ಮಾಡಿ!

Eligible and Ineligible ration card list: ಮಾರ್ಚ-2024 ತಿಂಗಳ ಅರ್ಹ ಮತ್ತು ಅನರ್ಹ ರೇಷನ್ ಕಾರ್ಡ ಪಟ್ಟಿಯನ್ನು ನೋಡುವ ವಿಧಾನ:

Eligible ration card list- ವಿಧಾನ-1: ಅರ್ಹ ರೇಷನ್ ಕಾರ್ಡ ಪಟ್ಟಿಯನ್ನು ನೋಡುವ ವಿಧಾನ:- 

Step-1: ಗ್ರಾಹಕರು ಮೊದಲಿಗೆ ಈ Eligible ration card list ಲಿಂಕ್ ಮೇಲೆ ಕ್ಲಿಕ್ ಮಾಡಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು. (ಸೂಚನೆ: ಮೊಬೈಲ್ ನಲ್ಲಿ ನೋಡುವಾಗ “Desktop view” ಆಯ್ಕೆಯನ್ನು ಕ್ಲಿಕ್ ಮಾಡಿಕೊಂಡು ನೋಡಿದರೆ ಉತ್ತಮ) ಬಳಿಕ  ಈ ಪೇಜ್ ನಲ್ಲಿ “ಇ-ಸೇವೆಗಳು” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: ತದನಂತರ “ಇ-ಪಡಿತರ ಚೀಟಿ” ವಿಭಾಗದ ಮೇಲೆ ಒತ್ತಿ ಅಲ್ಲೇ ಕೆಳಗಡೆ ಕಾಣುವ “ಹಳ್ಳಿ ಪಟ್ಟಿ” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತಿ ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಂಡು “GO” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ  ರೇಷನ್ ಕಾರ್ಡ ಪಡೆಯಲು ಅರ್ಹರಿರುವ ಕಾರ್ಡದಾರರ RC number, ಹೆಸರು, ವಿಳಾಸ, ಪಡಿತರ ಚೀಟಿ ವಿಧ, ಮತ್ತು ಪಡಿತರ ಚೀಟಿಯಲ್ಲಿ ಎಷ್ಟು ಜನ ಸದಸ್ಯರಿದ್ದರೆ ಎಂದು ತೋರಿಸುತ್ತದೆ.

ಇದನ್ನೂ ಓದಿ: Voter id application- ಮತದಾರರು ಪಟ್ಟಿಯಲ್ಲಿ ನಿಮ್ಮ ಹೆಸರು ಬಿಟ್ಟು ಹೋಗಿದ್ದರೆ ಸೇರ್ಪಡೆಗೆ ಅರ್ಜಿ ಸಲ್ಲಿಸಲು ಅವಕಾಶ!

ಈ ಪಟ್ಟಿಯಲ್ಲಿರುವವರಿಗೆ ಪಡಿತರ ದಾನ್ಯ ಮತ್ತು ಅಕ್ಕಿ ಹಣ ದೊರೆಯಲಿದೆ.

Cancelled ration card list- ವಿಧಾನ-2: ಅನರ್ಹ ರೇಷನ್ ಕಾರ್ಡ ಪಟ್ಟಿಯನ್ನು ನೋಡುವ ವಿಧಾನ:- 

Step-1: ಪ್ರಥಮದಲ್ಲಿ ಈ Cancelled ration card list ಲಿಂಕ್ ಮೇಲೆ ಕ್ಲಿಕ್ ಮಾಡಿ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು. ನಂತರ “ಇ-ಪಡಿತರ ಚೀಟಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ “ರದ್ದುಗೊಳಿಸಲಾದ/ತಡೆಹಿಡಿಯಲಾದ ಪಟ್ಟಿ” ಮೇಲೆ ಕ್ಲಿಕ್ ಮಾಡಬೇಕು.

Step-2: “ರದ್ದುಗೊಳಿಸಲಾದ/ತಡೆಹಿಡಿಯಲಾದ ಪಟ್ಟಿ” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ, ತಾಲ್ಲೂಕು, ತಿಂಗಳು- March ಮತ್ತು ವರ್ಷ- 2024 ಎಂದು ಆಯ್ಕೆ ಮಾಡಿಕೊಂಡು “GO” ಬಟನ್ ಮೇಲೆ ಕ್ಲಿಕ್ ಮಾಡಿದರೆ ರದ್ದಾದ ರೇಷನ್ ಕಾರ್ಡ(Cancelled and Suspended List) ಪಟ್ಟಿ ತೋರಿಸುತ್ತದೆ.

ಪಡಿತರ ವಿತರಣೆಯಲ್ಲಿ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ಮಾಡಲು ಸೂಚನೆ:

ಅಂತ್ಯೋದಯ ಪಡಿತರ ಚೀಟಿದಾರರಿಗೆ ಪ್ರತಿ ಕಾರ್ಡ್‍ಗೆ 35 ಕೆ.ಜಿ ಅಕ್ಕಿ, ಆದ್ಯತಾ ಹಾಗೂ ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ 5 ಕೆ.ಜಿ ಅಕ್ಕಿ ಉಚಿತವಾಗಿ ವಿತರಿಸಲಾಗುತ್ತದೆ.

ಹಾಗೂ ಪ್ರತಿ ಕೆ.ಜಿ ಗೆ ರೂ.15ರಂತೆ ಒಪ್ಪಿಗೆ ನೀಡಿದ ಎ.ಪಿ.ಎಲ್ ಏಕ ಸದಸ್ಯ ಪಡಿತರ ಚೀಟಿದಾರರಿಗೆ 5 ಕೆ.ಜಿ, ಎರಡು ಮತ್ತು ಹೆಚ್ಚಿನ ಸದಸ್ಯರನ್ನು ಹೊಂದಿರುವವರಿಗೆ 10 ಕೆ.ಜಿ ಅಕ್ಕಿಯನ್ನು ವಿತರಿಸಲಾಗುವುದು.

ಇದನ್ನೂ ಓದಿ: BPL card Application- ಹೊಸ ಬಿ.ಪಿ.ಎಲ್ ಕಾರ್ಡ ಪಡೆಯಲು ಅರ್ಜಿ ಆಹ್ವಾನ!

ಸರ್ಕಾರದ ಗ್ಯಾರಂಟಿ ಯೋಜನೆಯಡಿ 5 ಕೆ.ಜಿ ಅಕ್ಕಿ ಬದಲಾಗಿ ಪಡಿತರ ಚೀಟಿದಾರರಿಗೆ ನೇರ ನಗದು ವರ್ಗಾವಣೆ ಮಾಡುತ್ತಿದ್ದು, ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಹರಿಸಿಕೊಳ್ಳಬಹುದೆಂದು ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಸಿದ್ದರಾಮ್ ಮಾರಿಹಾಳ್ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ:

ಅಧಿಕೃತ ವೆಬ್ಸೈಟ್: Click here
ನಿಮ್ಮ ಜಿಲ್ಲೆಯ ಆಹಾರ ಇಲಾಖೆ ಅಧಿಕಾರಿ ಕಚೇರಿ ದೂರವಾಣಿ ಸಂಖ್ಯೆಗಳು: Click here

ಇದನ್ನೂ ಓದಿ: RTC adhar link status- ನಿಮ್ಮ ಜಮೀನಿನ ಪಹಣಿಗೆ ಆಧಾರ್ ಜೋಡಣೆ ಅಗಿದಿಯಾ? ಎಂದು ಚೆಕ್ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ.

- Advertisment -
LATEST ARTICLES

Related Articles

- Advertisment -

Most Popular

- Advertisment -