E-Khatha-ಜುಲೈ 01 ರಿಂದ ಜನರ ಮನೆ ಬಾಗಿಲಿಗೆ ಇ-ಖಾತಾ: ಡಿ.ಕೆ.ಶಿವಕುಮಾರ್‌!

June 23, 2025 | Siddesh
E-Khatha-ಜುಲೈ 01 ರಿಂದ ಜನರ ಮನೆ ಬಾಗಿಲಿಗೆ ಇ-ಖಾತಾ: ಡಿ.ಕೆ.ಶಿವಕುಮಾರ್‌!
Share Now:

ರಾಜ್ಯ ಸರ್ಕಾರದಿಂದ ಆಸ್ತಿಯ ಮಾಲೀಕರಿಗೆ ತಮ್ಮ ದಾಖಲೆಗಳನ್ನು(Property documents) ಸಮರ್ಪಕವಾಗಿ ನಿರ್ವಹಣೆ ಮಾಡಲು ತಾಂತ್ರಿಕವಾಗಿ(E-Khata) ನೆರವು ನೀಡಲು ಹಾಗೂ ಅಗತ್ಯ ಡಿಜಿಟಲ್ ದಾಖಲೆಯನ್ನು ಹೊಂದಲು ಬಿಬಿಎಂಪಿ(Bengalore) ವ್ಯಾಪ್ತಿಯಲ್ಲಿ ಜುಲೈ 01 ರಿಂದ ಜನರ ಮನೆ ಬಾಗಿಲಿಗೆ ಇ-ಖಾತಾ ವಿತರಣೆಯನ್ನು ಮಾಡಲು ಸರ್ಕಾರ ಮುಂದಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ(property registration) ಈಗಾಗಲೇ ಇ-ಖಾತಾವನ್ನು ಪಡೆಯುವುದನ್ನು ಕಡ್ಡಾಯ ಮಾಡಲಾಗಿದ್ದು ಗ್ರಾಮೀಣ ಭಾಗದಲ್ಲಿ ಆಸ್ತಿಯ ಮಾಲೀಕರಿಗೆ ಇ-ಸ್ವತ್ತು ದಾಖಲೆಯನ್ನು ನೀಡುವ ರೀತಿಯಲ್ಲಿ ನಗರ ಪ್ರದೇಶದ ಮಾಲೀಕರಿಗೆ ಇ-ಖಾತಾವನ್ನು ನೀಡಲಾಗುತ್ತದೆ.

ಇದನ್ನೂ ಓದಿ: Ration card-ರೇಷನ್ ಕಾರ್ಡದಾರರಿಗೆ ಅಕ್ಕಿ ಬದಲು ಆಹಾರ ಕಿಟ್! ಇಲ್ಲಿದೆ ಸಂಪೂರ್ಣ ವಿವರ!

ಪ್ರಸ್ತುತ ಈ ಲೇಖನದಲ್ಲಿ ಇ-ಖಾತಾ ಕುರಿತು ಸಂಪೂರ್ಣ ಅಗತ್ಯ ಮಾಹಿತಿಯನ್ನು(Real estate business) ವಿವರಿಸಿದ್ದು,ಇ-ಖಾತಾ ಪಡೆಯಲು ಅರ್ಜಿದಾರರು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಹಾಗೂ ಇ-ಖಾತಾ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ದಾಖಲೆಗಳು ಹಾಗೂ ಇ-ಖಾತಾ ಪಡೆಯುವುದರಿಂದ ಅಗುವ ಪ್ರಯೋಜನ ಸೇರಿದಂತೆ ಇನ್ನಿತರೆ ಅಗತ್ಯ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

E-Khatha Information-ಜುಲೈ 01 ರಿಂದ ಜನರ ಮನೆ ಬಾಗಿಲಿಗೆ ಇ-ಖಾತಾ: ಡಿ.ಕೆ.ಶಿವಕುಮಾರ್‌

ಜುಲೈ 1 ರಿಂದ ಇಡೀ ತಿಂಗಳು ಆಸ್ತಿಯ ಇ-ಖಾತಾ ದಾಖಲೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಾಗುವುದು. ಬೆಂಗಳೂರಿನಲ್ಲಿ 25 ಲಕ್ಷ ಆಸ್ತಿಗಳಿವೆ. ಈ ಪೈಕಿ 5 ಲಕ್ಷ ಮಂದಿ ದಾಖಲೆಗಳನ್ನು ಅಪ್‌ಲೋಡ್‌ ಮಾಡಿದ್ದಾರೆ. 20 ಲಕ್ಷ ಆಸ್ತಿಗಳ ದಾಖಲೆಗಳ ಅಪ್‌ಲೋಡ್‌ ಬಾಕಿ ಇದೆ ಎಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ: Land Purchase Loan-ಕರ್ನಾಟಕ ಬ್ಯಾಂಕ್ ನಿಂದ ಕೃಷಿ ಭೂಮಿ ಖರೀದಿಗೆ ಸಾಲ ಸೌಲಭ್ಯ!

E-Khatha Details-ಇ-ಖಾತಾ ಯೋಜನೆಯ ಮಹತ್ವ:

ಇ-ಖಾತಾ ಒಂದು ಆನ್‌ಲೈನ್ ಆಸ್ತಿ ದಾಖಲೆ ವ್ಯವಸ್ಥೆಯಾಗಿದ್ದು, ಆಸ್ತಿ ಮಾಲೀಕರಿಗೆ ತಮ ಆಸ್ತಿಯ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಪಡೆಯಲು ಸಹಾಯ ಮಾಡುತ್ತದೆ. ಈ ಯೋಜನೆಯಡಿ, ಬೆಂಗಳೂರಿನಲ್ಲಿ ಸುಮಾರು 25 ಲಕ್ಷ ಆಸ್ತಿಗಳಿದ್ದು, ಈ ಪೈಕಿ 5 ಲಕ್ಷ ಮಂದಿ ತಮ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಆದರೆ ಇನ್ನೂ 20 ಲಕ್ಷ ಆಸ್ತಿಗಳ ದಾಖಲೆಗಳ ಅಪ್‌ಲೋಡ್ ಮಾಡುವ ಕೆಲಸ ಬಾಕಿ ಇದೆ. ಈ ಸಂದರ್ಭದಲ್ಲಿ, ಸರ್ಕಾರವು ಜನರ ಮನೆಗಳಿಗೆ ತೆರಳಿ ದಾಖಲೆಗಳನ್ನು ಸಂಗ್ರಹಿಸಿ ಡಿಜಿಟಲೀಕರಣಗೊಳಿಸುವ ಯೋಜನೆಯನ್ನು ಜಾರಿಗೆ ತರುತ್ತಿದ್ದು, ಇದು ಸಾರ್ವಜನಿಕರಿಗೆ ತಮ ಆಸ್ತಿ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸಲು ಒಂದು ಸುವರ್ಣಾವಕಾಶವನ್ನು ಒದಗಿಸುತ್ತದೆ.

ಈ ಯೋಜನೆಯ ಮೂಲ ಉದ್ದೇಶ ಆಸ್ತಿ ದಾಖಲೆಗಳಲ್ಲಿ ಸಹಜವಾಗಿ ಉಂಟಾಗುವ ತಪ್ಪುಗಳನ್ನು ತಿದ್ದುವುದು, ತಮ ಆಸ್ತಿಯ ಮಾಹಿತಿಯನ್ನು ಸುಲಭವಾಗಿ ಪಡೆಯುವಂತೆ ಮಾಡುವುದು ಮತ್ತು ಆಸ್ತಿ ತೆರಿಗೆ ಪಾವತಿ ಇತ್ಯಾದಿ ಸೇವೆಗಳನ್ನು ಡಿಜಿಟಲ್‌ಗೊಳಿಸುವುದು. ಇದರಿಂದ ಭ್ರಷ್ಟಾಚಾರ ಕಡಿಮೆಯಾಗಿ, ಸರ್ಕಾರಿ ಸೇವೆಗಳು ಪಾರದರ್ಶಕವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Gruhalakshmi Yojane-ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿಸುದ್ದಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್!

E-Khatha-ಜುಲೈ 01 ರಿಂದ ಇ-ಖಾತಾ ಕಡ್ಡಾಯ:

ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕೃತ ನೂತನ ಪ್ರಕಟಣೆಯನ್ವಯ ಇನ್ನು ಮುಂದೆ ಜುಲೈ 01 ರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸುವವರಿಗೆ ಇ-ಖಾತಾ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿರುತ್ತದೆ.

e khata

ಇದನ್ನೂ ಓದಿ: Health insurance-ಸುವರ್ಣ ಆರೋಗ್ಯ ಯೋಜನೆಯಡಿ ₹ 5 ಲಕ್ಷಗಳವರೆಗೆ ಉಚಿತ ಚಿಕಿತ್ಸೆ!

E-Khatha Benefits-ಇ-ಖಾತಾ ಪಡೆಯುವುದರಿಂದ ಅಗುವ ಪ್ರಯೋಜನ?

ಇ-ಖಾತಾ (e-Khata) ಪಡೆಯುವುದರಿಂದ ಕರ್ನಾಟಕದಲ್ಲಿ, ವಿಶೇಷವಾಗಿ ಬೆಂಗಳೂರಿನಂತಹ ನಗರಗಳಲ್ಲಿ ಆಸ್ತಿ ಮಾಲೀಕರಿಗೆ ಹಲವಾರು ಪ್ರಯೋಜನಗಳಿವೆ. ಇ-ಖಾತಾವು ಆಸ್ತಿಯ ಒಡೆತನ ಮತ್ತು ಇತರ ವಿವರಗಳ ಡಿಜಿಟಲ್ ದಾಖಲೆಯಾಗಿದ್ದು, ಈ ಕೆಳಗಿನ ಪ್ರಯೋಜನಗಳನ್ನು ಒದಗಿಸುತ್ತದೆ:

ದಾಖಲೆ ಪಡೆಯಲು ಕಚೇರಿ ಅಲೆದಾಟಕ್ಕೆ ಬ್ರೇಕ್: ಇ-ಖಾತಾವನ್ನು ಆನ್‌ಲೈನ್‌ನಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಂದಾದರೂ ಪಡೆಯಬಹುದು. ಇದರಿಂದ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ.

ಆಸ್ತಿ ಮಾಲೀಕತ್ವದ ಪಾರದರ್ಶಕತೆ: ಆಸ್ತಿಯ ಮಾಲೀಕತ್ವ, ವಿವರಗಳು ಮತ್ತು ತೆರಿಗೆ ಸಂಬಂಧಿತ ಮಾಹಿತಿಯನ್ನು ಸ್ಪಷ್ಟವಾಗಿ ತಿಳಿಯಬಹುದು, ಇದರಿಂದ ವಂಚನೆಯ ಸಾಧ್ಯತೆ ಕಡಿಮೆಯಾಗುತ್ತದೆ.

ಕಾನೂನು ಮಾನ್ಯತೆ: ಇ-ಖಾತಾವು ಸರ್ಕಾರದಿಂದ ಅಧಿಕೃತವಾಗಿ ಮಾನ್ಯವಾದ ದಾಖಲೆಯಾಗಿದ್ದು, ಆಸ್ತಿ ಖರೀದಿ, ಮಾರಾಟ, ಅಥವಾ ಇತರ ಕಾನೂನು ಪ್ರಕ್ರಿಯೆಗಳಿಗೆ ಉಪಯುಕ್ತವಾಗಿದೆ.

ಇದನ್ನೂ ಓದಿ: Garden fair in bangalore-ಸಸ್ಯ ಸಂತೆಯಲ್ಲಿ ಮಾರಾಟ ಮಳಿಗೆ ನೋಂದಣಿಗೆ ಅರ್ಜಿ ಅಹ್ವಾನ!

ತೆರಿಗೆ ಪಾವತಿಯ ಸುಲಭತೆ: ಇ-ಖಾತಾದ ಮೂಲಕ ಆಸ್ತಿ ತೆರಿಗೆಯನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಪಾವತಿಸಬಹುದು ಮತ್ತು ದಾಖಲೆಗಳನ್ನು ಒಂದೇ ಕಡೆಯಲ್ಲಿ ಇರಿಸಿಕೊಳ್ಳಬಹುದು.

ಸಮಯ ಮತ್ತು ವೆಚ್ಚ ಉಳಿತಾಯ: ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಇರಿಸಿಕೊಳ್ಳುವುದರಿಂದ ಕಾಗದದ ದಾಖಲೆಗಳನ್ನು ಸಂಗ್ರಹಿಸುವ ಮತ್ತು ನಿರ್ವಹಣೆಯ ತೊಂದರೆ ತಪ್ಪುತ್ತದೆ.

ಆಸ್ತಿ ವಹಿವಾಟಿನಲ್ಲಿ ಸುಗಮತೆ: ಆಸ್ತಿ ಖರೀದಿ, ಮಾರಾಟ, ಅಥವಾ ಸಾಲಕ್ಕಾಗಿ ಬ್ಯಾಂಕ್‌ಗಳಿಗೆ ಇ-ಖಾತಾವನ್ನು ಸುಲಭವಾಗಿ ಸಲ್ಲಿಸಬಹುದು, ಇದರಿಂದ ವಹಿವಾಟು ವೇಗವಾಗಿ ನಡೆಯುತ್ತದೆ.

ತಪ್ಪುಗಳ ತಿದ್ದುಪಡಿ: ಇ-ಖಾತಾದಲ್ಲಿ ಯಾವುದೇ ತಪ್ಪಿದ್ದರೆ, ಆನ್‌ಲೈನ್‌ನಲ್ಲಿಯೇ ತಿದ್ದುಪಡಿ ಮಾಡಿಕೊಳ್ಳಬಹುದು, ಇದರಿಂದ ಕಾನೂನು ತೊಡಕುಗಳು ಕಡಿಮೆಯಾಗುತ್ತವೆ.

ಡೇಟಾ ಭದ್ರತೆ: ಡಿಜಿಟಲ್ ದಾಖಲೆಗಳು ಸರ್ಕಾರದ ಡೇಟಾಬೇಸ್‌ನಲ್ಲಿ ಸುರಕ್ಷಿತವಾಗಿರುತ್ತವೆ, ಇದರಿಂದ ದಾಖಲೆ ಕಳೆದುಕೊಳ್ಳುವ ಭಯವಿಲ್ಲ.

ಇದನ್ನೂ ಓದಿ: Bisi uta yojana-ಬಿಸಿಯೂಟದ ಅಡುಗೆಯವರಿಗೆ ವೇತನ ಹೆಚ್ಚಳ ಮಾಡಿದ ಸರ್ಕಾರ!

E-khata Online Application-ಇ-ಖಾತಾ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು:

ಸಾರ್ವಜನಿಕರು ಅಂತಿಮ ಇ-ಖಾತಾವನ್ನು ಪಡೆಯಲು ತಮ್ಮ ಮನೆಯಲ್ಲೇ ಇದ್ದು ಆನ್ಲೈನ್ ಮೂಲಕ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಈ ಕೆಳಗೆ ವಿವರಿಸುರುವ ಹಂತಗಳನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಬಹುದು.

Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ "e-khata Online Application" ಮಾಡಿ ಅಧಿಕೃತ ಇ-ಖಾತಾ ಜಾಲತಾಣವನ್ನು ಪ್ರವೇಶ ಮಾಡಬೇಕು.

e khata online application

Step-2: ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿದ ಬಳಿಕ ಈ ಪೇಜ್ ನಲ್ಲಿ ಲಾಗಿನ್ ಕಾಲಂ ನಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು OTP ಅನ್ನು ನಮೂದಿಸಿ ಅಗತ್ಯ ವಿವರವನ್ನು ಭರ್ತಿ ಮಾಡಿ "Login" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ತದನಂತರ ಈ ಪೇಜ್ ನಲ್ಲಿ ಎಡಬದಿಯಲ್ಲಿ ತೋರಿಸುವ "e-khata" ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿ ಎಲ್ಲಾ ವಾರ್ಡ್ ಹೆಸರು ತೋರಿಸುತ್ತದೆ ಇಲ್ಲಿ ನಿಮ್ಮ ವಾರ್ಡ ಅನ್ನು ಹುಡುಕಿ ಬಳಿಕ ನಂತರದ ಪೇಜ್ ನಲ್ಲಿ ನಿಮ್ಮ ಹೆಸರನ್ನು ಸರ್ಚ್ ಮಾಡಿ ಮುಂದುವರೆಯಬೇಕು.

Step-4: ಮೇಲಿನ ಹಂತಗಳನ್ನು ಪೂರ್ಣಗೊಳಿಸಿದ ಬಳಿಕ "Submit Information For ekhata" ಕಾಲಂ ನಲ್ಲಿ ಕೆಳಗೆ ತೋರಿಸುವ Click Here ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ಕೇಳುವ ಎಲ್ಲಾ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸ್ವೀಕೃತಿಯಾಗಿ ಕೊನೆಯಲ್ಲಿ ಸ್ವೀಕೃತಿ ರಶೀದಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶವಿರುತ್ತದೆ.

ಸಾರ್ವಜನಿಕರು ಈ ಮೇಲಿನ ತಿಳಿಸಿರುವ ವಿಧಾನದ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ- Watch Now

Documents required for E-Khata-ಇ-ಖಾತಾ ಪಡೆಯಲು ಅವಶ್ಯಕ ದಾಖಲೆಗಳು:

ಇ-ಖಾತಾ ಪಡೆಯಲು ಸಾರ್ವಜನಿಕರು ಈ ಕೆಳಗೆ ತಿಳಿಸಿರುವ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸುವುದು ಅವಶ್ಯಕವಾಗಿದೆ.

  • ಆಸ್ತಿ ಮಾಲೀಕರ ಆಧಾರ್ ಕಾರ್ಡ/Aadhar Card
  • ಆಸ್ತಿ ತೆರಿಗೆ ಎಸ್ ಎ ಎಸ್ ಸಂಖ್ಯೆ.
  • ಮಾರಾಟ ಅಥವಾ ನೋಂದಾಯಿತ ಪತ್ರ.
  • ಆಸ್ತಿಯ ಜಿಪಿಎಸ್ ಸ್ಥಳ/GPS location of the property
  • ಮಾಲೀಕರು ನಿಂತಿರುವ ಛಾಯಾಚಿತ್ರ/Standing photograph of the owner
  • ಕ್ರಯಪತ್ರ/Purchase Deed
  • ವಿಭಾಗ ಪತ್ರ/Partition Deed
  • ಮೊಬೈಲ್ ನಂಬರ್/Mobile Number

E-Khata Helpline Number-ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಗತ್ಯ ಮಾಹಿತಿ:

Helpline Number-ಸಹಾಯವಾಣಿ-080 4920 3888
Official Website-ಅಧಿಕೃತ ವೆಬ್ಸೈಟ್-Click Here

WhatsApp Group Join Now
Telegram Group Join Now
Share Now: