Adike Bele Vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸಲು ಅರ್ಜಿ ಆಹ್ವಾನ!

June 25, 2025 | Siddesh
Adike Bele Vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸಲು ಅರ್ಜಿ ಆಹ್ವಾನ!
Share Now:

ತೋಟಗಾರಿಕೆ ಇಲಾಖೆ ಮತ್ತು ವಿಮಾ ಕಂಪನಿ ಸಹಯೋಗದಲ್ಲಿ(Crop Insurance) ಅಡಿಕೆ,ಮಾವು ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ವಿಮೆಯನ್ನು(Adike Bele vime) ಮಾಡಿಸಲು ಆಸಕ್ತ ರೈತರಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದ್ದು, ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

2024-25 ನೇ ಸಾಲಿನ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ(Horticulture Crop Insurance) ಬೆಳೆ ವಿಮೆ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಲು ಅವಕಾಶವಿದ್ದು ಇದರ ಕುರಿತು ಸಂಪೂರ್ಣ ಅಗತ್ಯ ಅವಶ್ಯಕ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Ration card-ರೇಷನ್ ಕಾರ್ಡದಾರರಿಗೆ ಅಕ್ಕಿ ಬದಲು ಆಹಾರ ಕಿಟ್! ಇಲ್ಲಿದೆ ಸಂಪೂರ್ಣ ವಿವರ!

ಪ್ರಸ್ತುತ ಈ ಲೇಖನದಲ್ಲಿ ಬೆಳೆ ವಿಮೆ(Bele Vime Arji) ಪ್ರಿಮಿಯಂ ಮೊತ್ತವನ್ನು ಪಾವತಿ ಮಾಡಿ ಎಲ್ಲಿ ಅರ್ಜಿ ಸಲ್ಲಿಸಬೇಕು? ಇದಕ್ಕಾಗಿ ಬೇಕಾಗುವ ದಾಖಲೆಗಳೇನು? ಈ ಕುರಿತು ಸಂಪೂರ್ಣ ವಿವರವನ್ನುಈ ಕೆಳಗೆ ತಿಳಿಸಲಾಗಿದ್ದು ಮಾಹಿತಿಯು ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

How To Apply For Horticulture Crop Insurance-ಬೆಳೆ ವಿಮೆ ಮಾಡಿಸಲು ಎಲ್ಲಿ ಅರ್ಜಿ ಸಲ್ಲಿಸಬೇಕು?

ರೈತರು ತೋಟಗಾರಿಕೆ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಲು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹತ್ತಿರದ ಗ್ರಾಮ ಒನ್ ಅಥವಾ ಕರ್ನಾಟಕ್ ಒನ್, CSC ಕೇಂದ್ರ ಅಥವಾ ನಿಮ್ಮ ಬ್ಯಾಂಕ್ ಅಕೌಂಟ್ ಇರುವ ಶಾಖೆಯನ್ನು ನೇರವಾಗಿ ಭೇಟಿ ಮಾಡಿ ಆನ್ಲೈನ್ ಮೂಲಕ ವಿಮೆ ಪ್ರೀಮಿಯಂ ಅನ್ನು ಪಾವತಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: E-Attendance In Schools-ಇನ್ನುಂದೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಇ-ಹಾಜರಾತಿ ಕಡ್ಡಾಯ!

Required Documets for Crop Insurance-ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

1) ರೈತರ ಆಧಾರ್ ಕಾರ್ಡ.
2) ಆಧಾರ್ ಲಿಂಕ್ ಅಗಿರುವ ಬ್ಯಾಂಕ್ ಖಾತೆ ವಿವರ.
3) ಜಮೀನಿನ ಪಹಣಿ/ಉತಾರ್/RTC.
4) ವಿಮೆ ಪ್ರಿಮಿಯಂ ಮೊತ್ತ.
5) ಮೊಬೈಲ್ ನಂಬರ್.

Adike Bele Vime-2025: ಕೆಲವು ಆಯ್ದ ಬೆಳೆಗಳ ವಿಮೆ ಪ್ರಿಮಿಯಂ ಮೊತ್ತ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ವಿವರ ಈ ಕೆಳಗಿನಂತಿದೆ:

ಬೆಳೆವಿಮೆ ಪ್ರಿಮಿಯಂ ಮೊತ್ತ(2.5 ಎಕರೆಗೆ)ಪಾವತಿಸಲು ಕೊನೆಯ ದಿನಾಂಕ
ಅಡಿಕೆ6,400/-30-06-2025
ಕಾಳುಮೆಣಸು2,350/-30-06-2025
ದಾಳಿಂಬೆ6,350/-30-06-2025
ವಿಳ್ಯೆದೆಲೆ5,850/-30-06-2025
ಮಾವು4,000/-31-07-2025

ಇದನ್ನೂ ಓದಿ: Best Savings Plan- ತಿಂಗಳಿಗೆ ಕೇವಲ ₹1,000 ಉಳಿತಾಯ ಮಾಡಿ ₹6.5 ಲಕ್ಷ ಹಣ ಗಳಿಸಿ!

FID Number-ಪ್ರೂಟ್ಸ್ ಐಡಿಯನ್ನು(FID) ಹೊಂದಿರುವುದು ಕಡ್ಡಾಯ:

ಯಾವುದೇ ಬೆಳೆಗೆ ಬೆಳೆ ವಿಮೆಯನ್ನು ಮಾಡಿಸಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಪ್ರೂಟ್ಸ್ ಐಡಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಇದರೊಟ್ಟಿಗೆ ಕೃಷಿ ಇಲಾಖೆಯಿಂದ ರೈತರಿಗೆ ನೀಡುವ ಪ್ರೂಟ್ಸ್ ಐಡಿಯನ್ನು ಹೊಂದಿರುವುದರ ಜೊತೆಗೆ ಈ ಐಡಿಯಲ್ಲಿ ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಮತ್ತು ಜಮೀನಿನ ವಿಸ್ತೀರ್ಣ ಸರಿಯಾಗಿ ಸೇರ್ಪಡೆಯಾಗಿದ್ದರೆ ಮಾತ್ರ ಆ ಜಮೀನಿನಲ್ಲಿ ಬೆಳೆದಿರುವ ಬೆಳೆಗೆ ವಿಮೆಯನ್ನು ಮಾಡಿಸಲು ಸಾಧ್ಯವಾಗುತ್ತದೆ.

FID Number Application-ಪ್ರೂಟ್ಸ್ ಐಡಿಯನ್ನು(FID) ಎಲ್ಲಿ ಸರಿಪಡಿಸಬೇಕು?

ಒಂದೊಮ್ಮೆ ನಿಮ್ಮ ಪ್ರೂಟ್ಸ್ ಐಡಿಯು ತಪ್ಪಾಗಿದ್ದರೆ ಅಥವಾ ಈ ಐಡಿಯಲ್ಲಿ ಯಾವುದೇ ಬಗ್ಗೆಯ ವಿವರವನ್ನು ತಿದ್ದುಪಡಿ/ಸರಿಪಡಿಸುವುದು ಇದ್ದಲ್ಲಿ ರೈತರು ತಮ್ಮ ಹೋಬಳಿಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಸರಿಪಡಿಸಿಕೊಳ್ಳಬಹುದು ಜೊತೆಗೆ FID ರಚನೆ ಮಾಡಿಕೊಳ್ಳಲು ನೂತನ ಅರ್ಜಿಯನ್ನು ಸಹ ಸಲ್ಲಿಸಬಹುದು.

adike vime

Horticulture Crop Last Date- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ರೈತರು ಮನೆಯಲ್ಲೇ ಕುಳಿತು ತಮ್ಮ ಮೊಬೈಲ್ ನಲ್ಲೇ ತಮ್ಮ ಹಳ್ಳಿ ವ್ಯಾಪ್ತಿಯಲ್ಲಿನ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಎನ್ನುವ ವಿವರವನ್ನು ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ www.samrakshane.karnataka.gov.in ವೆಬ್ಸೈಟ್ ಅನ್ನು ಭೇಟಿ ಮಾಡಿ ಮಾಹಿತಿಯನ್ನು ತಿಳಿಯಬಹುದು.

Step-1: ಮೊದಲಿಗೆ ಇಲ್ಲಿ ಕ್ಲಿಕ್ Click Here ಮಾಡಿ ರಾಜ್ಯ ಸರ್ಕಾರದ ಅಧಿಕೃತ ಬೆಳೆ ವಿಮೆಯ ಸಂರಕ್ಷಣೆ(samrakshane Website) ಅನ್ನು ಪ್ರವೇಶ ಮಾಡಬೇಕು. ಬಳಿಕ ಇಲ್ಲಿ ಮುಖಪುಟದಲ್ಲಿ "ವರ್ಷ/Year: 2025-26" ಮತ್ತು "ಋತು: Kharif/ಮುಂಗಾರು" ಎಂದು ಸೆಲೆಕ್ಟ್ ಮಾಡಿಕೊಂಡು "ಮುಂದೆ/Go" ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Karmika Card Benefits-ನೀವು ಕಾರ್ಮಿಕ ಕಾರ್ಡ ಹೊಂದಿದ್ದೀರಾ? ಈ ಸೌಲಭ್ಯ ಪಡೆಯಬಹುದು!

bele vime

Step-2: ನಂತರ ಈ ಪೇಜ್ ನಲ್ಲಿ ಕೆಳಗೆ ಕಾಣುವ "Farmers' ವಿಭಾಗದಲ್ಲಿ "View Cut Off Dates" ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ರೈತರು "District/ಜಿಲ್ಲೆ" ಎಂದು ಕಾಣುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ಜಿಲ್ಲೆಯಲ್ಲಿ ಯಾವೆಲ್ಲ ಬೆಳೆಗಳಿಗೆ ಬೆಳೆವಿಮೆಯನ್ನು ಮಾಡಿಸಬಹುದು ಮತ್ತು ಬೆಳೆವಾರು ಬೆಳೆ ವಿಮೆ ಪ್ರಿಮಿಯಂ ಪಾವತಿ ಮಾಡಿ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವುದು ಎನ್ನುವ ವಿವರ ತೋರಿಸುತ್ತದೆ.

bele vime last date

For More Information-ಹೆಚ್ಚಿನ ಮಾಹಿತಿಯನ್ನು ಪಡೆಯಲು:

Crop Insurance Helpline-ವಿಮಾ ಕಂಪನಿಯ ಸಹಾಯವಾಣಿ- 9743855126, 8431462824, 8971608962(HDFC Ergo Insurance Companyy)
Bele Vime Website-ರಾಜ್ಯ ಸರ್ಕಾರದ ಅಧಿಕೃತ ಬೆಳೆ ವಿಮೆ ವೆಬ್ಸೈಟ್- Click Here

WhatsApp Group Join Now
Telegram Group Join Now
Share Now: