Crop Advisory-ಅತೀಯಾದ ಮಳೆಯಿಂದ ಬೆಳೆ ಚೇತರಿಸಿಕೊಳ್ಳಲು ರೈತರು ಈ ಕ್ರಮ ಅನುಸರಿಸಿ!

June 25, 2025 | Siddesh
Crop Advisory-ಅತೀಯಾದ ಮಳೆಯಿಂದ ಬೆಳೆ ಚೇತರಿಸಿಕೊಳ್ಳಲು ರೈತರು ಈ ಕ್ರಮ ಅನುಸರಿಸಿ!
Share Now:

ಕರ್ನಾಟಕ ರಾಜ್ಯ ಕೃಷಿ ಇಲಾಖೆಯಿಂದ(Agriculture Deparment) ರೈತರಿಗೆ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಉತ್ತಮವಾಗಿ ಬೆಳೆಯನ್ನು ನಿರ್ವಹಣೆ(Crop Advisory) ಮಾಡಲು ಅತೀಯಾದ ಮಳೆಯಿಂದ ಬೆಳೆ ಚೇತರಿಸಿಕೊಳ್ಳಲು ರೈತರು ಅನುಸರಿಸಬೇಕಾದ ಪ್ರಮುಖ ಕ್ರಮಗಳ ಕುರಿತು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು ನೂತನ ಪ್ರಕಟಣೆಯನ್ನು ಹೊರಡಿಸಿದ್ದು, ಇದರ ವಿವರವನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಮತ್ತೆ ಮುಂಗಾರು ಮಳೆಯು ಸತತವಾಗಿ ಸ್ವಲ್ಪವು ಬಿಡುವು ಕೊಡದೇ ಬರುತ್ತಿರುವುದರಿಂದ ಈಗ ತಾನೇ ಬಿತ್ತನೆ ಮಾಡಿ 15 ದಿನದ ಒಳಗಿನ ಏಕದಾನ್ಯ ಮತ್ತು ದ್ವಿದಳ ದಾನ್ಯ ಬೆಳೆಗಳನ್ನು ಸಮರ್ಪಕವಾಗಿ ನಿರ್ವಹಣೆಯನ್ನು ಮಾಡಲು ಕೃಷಿ ಇಲಾಖೆಯಿಂದ(Krishi Ilake) ರೈತರಿಗೆ ಸಲಹೆಯನ್ನು ನೀಡಲಾಗಿದೆ.

ಇದನ್ನೂ ಓದಿ: Ration card-ರೇಷನ್ ಕಾರ್ಡದಾರರಿಗೆ ಅಕ್ಕಿ ಬದಲು ಆಹಾರ ಕಿಟ್! ಇಲ್ಲಿದೆ ಸಂಪೂರ್ಣ ವಿವರ!

ಅತೀಯಾದ ಮಳೆಯಿಂದ ಬೆಳೆಗಳು ಹಾನಿಯಾಗುವುದನ್ನು(Crop Management) ತಪ್ಪಿಸಿ ಈ ಸಮಯಲ್ಲಿ ರೈತರು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಇದರ ಜೊತೆಗೆ ಇಂತಹ ಸಮಯದಲ್ಲಿ ಬರುವಂತಹ ರೋಗ-ಕೀಟದ ನಿರ್ವಹಣೆಯನ್ನು ಮಾಡುವ ವಿಧಾನ ಸೇರಿದಂತೆ ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

Agriculture Deparment Crop Advisory-ಕೃಷಿ ಇಲಾಖೆಯ ಅಧಿಕೃತ ಪ್ರಕಟಣೆಯ ವಿವರ ಹೀಗಿದೆ:

2025-26 ಸಾಲಿನ ಮುಂಗಾರು ಮಳೆಯು ರಾಜ್ಯದ ಬಹುತೇಕ ತಾಲ್ಲೂಕಿನಲ್ಲಿ ಕೆಲವು ದಿನಗಳಿಂದ ಸತತವಾಗಿ ಸುರಿದ ಕಾರಣ ತಗ್ಗು ಪ್ರದೇಶದ ರೈತರ ಹೊಲಗಳಲ್ಲಿ ನೀರು ನಿಂತಿದ್ದು, ಹೊಲಗಳ ಒಡ್ಡುಗಳಲ್ಲಿ ನಿಂತ ನೀರನ್ನು ಬಸಿಗಾಲುವೆ ಅಥವಾ ಹರಿ ಮಾಡುವುದರ ಮೂಲಕ ಹೊರ ಹಾಕಲು ಪ್ರಯತ್ನ ಮಾಡಬೇಕು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜೊತೆಗೆ ಗೋವಿನ ಜೋಳ(Maize) ಮತ್ತು ಹತ್ತಿ ಬೆಳೆಗಳಲ್ಲಿ ನೀರಿನಲ್ಲಿ ಕರಗುವ ರಸಗೊಬ್ಬರಗಳಾದ 19:19:19. 13:0:45 ಇವುಗಳಲ್ಲಿ ಯಾವುದಾದರೂ ಒಂದನ್ನು ಪ್ರತಿ ಲೀಟರ್ ನೀರಿಗೆ 3 ರಿಂದ 5 ಗ್ರಾಂ ಬೆರೆಸಿ ಬೆಳೆಗಳ ಮೇಲೆ ಸಿಂಪಡಿಸಬೇಕು ನಂತರ ಮೆಕ್ಕಜೋಳ ಬೆಳಗೆ ಲದ್ದಿ ಹುಳುವಿನ(Fall armyworm management) ಹತೋಟಿಗಾಗಿ ಇಮ್ಯಾಮೆಕ್ಸಿನ್ ಬೆಂಜೋಯೆಟ್(, Emamectin benzoate) ಪ್ರತಿ ಲೀಟರ್ ನೀರಿಗೆ 0.5 ಗ್ರಾಂ ಬೆರೆಸಿದ ದ್ರಾವಣವನ್ನು ಸಿಂಪಡಿಸಬೇಕು.

ಇದನ್ನೂ ಓದಿ: E-Attendance In Schools-ಇನ್ನುಂದೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಇ-ಹಾಜರಾತಿ ಕಡ್ಡಾಯ!

ಹಾಗೂ ಹತ್ತಿ(Cotton), ಸೋಯಾಅವರೆ ಹಾಗೂ ಶೇಂಗಾ ಬೆಳೆಗಳ ಬುಡಕ್ಕೆ ಕಾರ್ಬನ್‌ ಡೈಜಿಮ್ ಪ್ರತಿ ಲೀಟರ್ ನೀರಿಗೆ 3 ಗ್ರಾಂ ಅಥವಾ ಧೈಯೋಪಿನೆಟ್ ಮಿಥೈಲ್ ಪ್ರತಿ ಲೀಟರ್ ನೀರಿಗೆ 2 ಗ್ರಾಂ ನಂತೆ ದ್ರಾವಣವನ್ನು ಸುರಿಯಬೇಕು.

ಬೆಳೆಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗುವ ಸಾಧ್ಯತೆಯಿರುವುದರಿಂದ ಹಳದಿ, ಕೆಂಪು ಆಗುವುದನ್ನು ತಪ್ಪಿಸಲು ನ್ಯಾನೋ ಡಿಎಪಿ, ನ್ಯಾನೋ ಯೂರಿಯಾ, 19:19:19 ಹಾಗೂ 13:0:45 ಪೋಷಕಾಂಶ ಬಳಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಮತಿ ಸವಿತಾ ಚಕ್ರಸಾಲಿ, ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Free Chaff Cutter Scheme-ಉಚಿತ ಮೇವು ಕತ್ತರಿಸುವ ಯಂತ್ರ ಪಡೆಯಲು ಅರ್ಜಿ ಆಹ್ವಾನ!

karnataka agriculture deparment

Agriculture Machinery Subsidy-ಕೃಷಿ ಯಂತ್ರೋಪಕರಣ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶ:

2025-26 ನೇ ಸಾಲಿನ ಕೃಷಿ ಯಂತ್ರೋಪಕರಣ ಯೋಜನೆಯಡಿ ಸಬ್ಸಿಡಿಯಲ್ಲಿ ವಿವಿಧ ಬಗ್ಗೆಯ ಯಂತ್ರಗಳನ್ನು ರೈತರು ಕೃಷಿ ಇಲಾಖೆಯ ಮೂಲಕ ಖರೀದಿಯನ್ನು ಮಾಡಲು ಅಗತ್ಯ ದಾಖಲಾತಿಗಳನ್ನು ಒದಗಿಸಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

How To Apply For Machinery Subsidy Yojana-ಅರ್ಜಿಯನ್ನು ಎಲ್ಲಿ ಸಲ್ಲಿಬೇಕು?

ಕೃಷಿ ಇಲಾಖೆಯಿಂದ ರಾಜ್ಯದ ಎಲ್ಲಾ ಹೋಬಳಿಗಳಲ್ಲಿ ರೈತ ಸಂಪರ್ಕ ಕೇಂದ್ರಗಳನ್ನು ತೆರೆದಿದ್ದು ರೈತರು ತಮ್ಮ ಹಳ್ಳಿ ವ್ಯಾಪ್ತಿಯಲ್ಲಿರುವ ಈ ಕಚೇರಿಯನ್ನು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಕಚೇರಿ ಸಮಯದಲ್ಲಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯಡಿ ಸಬ್ಸಿಡಿಯಲ್ಲಿ ವಿವಿಧ ಬಗ್ಗೆಯ ಯಂತ್ರಗಳನ್ನು ಪಡೆಯಲು ಅವಕಾಶವಿರುತ್ತದೆ.

ಇದನ್ನೂ ಓದಿ: Best Savings Plan- ತಿಂಗಳಿಗೆ ಕೇವಲ ₹1,000 ಉಳಿತಾಯ ಮಾಡಿ ₹6.5 ಲಕ್ಷ ಹಣ ಗಳಿಸಿ!

Required Documents-ಅರ್ಜಿ ಸಲ್ಲಿಸಲು ದಾಖಲೆಗಳು:

  • ಅರ್ಜಿದಾರ ರೈತರ ಆಧಾರ್ ಕಾರ್ಡ್.
  • ಪೋಟೋ.
  • ಬ್ಯಾಂಕ್ ಪಾಸ್ ಬುಕ್ ಪ್ರತಿ.
  • ರೇಶನ್ ಕಾರ್ಡ.
  • 20/- ರೂ ಬಾಂಡ್ ಪೇಪರ್.
  • ಜಮೀನಿನ ಪಹಣಿ/ಊತಾರ್/RTC.
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
  • ರೈತರ ಮೊಬೈಲ್ ನಂಬರ್.

Karnataka Agriculture Deparment-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಕೃಷಿ ಇಲಾಖೆಯ ಅಧಿಕೃತ ಜಾಲತಾಣ ಭೇಟಿ ಮಾಡಲು ಇಲ್ಲಿ ಕ್ಲಿಕ್ ಮಾಡಿ- Click Here

WhatsApp Group Join Now
Telegram Group Join Now
Share Now: