Free Chaff Cutter Scheme-ಉಚಿತ ಮೇವು ಕತ್ತರಿಸುವ ಯಂತ್ರ ಪಡೆಯಲು ಅರ್ಜಿ ಆಹ್ವಾನ!

June 24, 2025 | Siddesh
Free Chaff Cutter Scheme-ಉಚಿತ ಮೇವು ಕತ್ತರಿಸುವ ಯಂತ್ರ ಪಡೆಯಲು ಅರ್ಜಿ ಆಹ್ವಾನ!
Share Now:

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ಗಣಿಗಾರಿಕೆ ಪ್ರದೇಶದಲ್ಲಿ ವಾಸವಾಗಿರುವ ಸಂತ್ರಸ್ತರಿಗೆ ಆರ್ಥಿಕವಾಗಿ ಸ್ವಾವಲಂಬನೆಯನ್ನು ಸಾಧಿಸಲು ಹೈನುಗಾರಿಕೆಯನ್ನು ಆರಂಭಿಸಲು ಇಲಾಖೆಯಿಂದ ಉಚಿತವಾಗಿ ಹಸು ಮತ್ತು ಎಮ್ಮೆ ಹಾಗೂ ಮೇವು ಕತ್ತರಿಸುವ ಯಂತ್ರವನ್ನು(Chaff Cutter Subsidy Scheme) ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪ್ರಸ್ತುತ ಅರ್ಹ ರೈತರಿಗೆ ಈ ಯೋಜನೆಯಡಿ(Free Chaff Cutter Scheme) ಸೌಲಭ್ಯವನ್ನು ಪಡೆಯಲು ಅವಕಾಶವಿದ್ದು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: Ration card-ರೇಷನ್ ಕಾರ್ಡದಾರರಿಗೆ ಅಕ್ಕಿ ಬದಲು ಆಹಾರ ಕಿಟ್! ಇಲ್ಲಿದೆ ಸಂಪೂರ್ಣ ವಿವರ!

Karnataka veterinary department-ಹೈನುಗಾರಿಕೆ ಕೃಷಿಕರಿಗೆ ಉಪ ಆದಾಯದ ಮೂಲವಾಗಿದೆ:

ಹೌದು, ಮಿತ್ರರೇ ಹೈನುಗಾರಿಕೆ ಕೃಷಿಕರಿಗೆ ಉಪ ಆದಾಯದ(Dairy farming benefits) ಮೂಲವಾಗಿ ಮಹತ್ವದ ಪಾತ್ರ ವಹಿಸುತ್ತದೆ. ಇದು ಕೃಷಿಯ ಜೊತೆಗೆ ಸಂಯೋಜಿತವಾಗಿ ಕೆಲಸ ಮಾಡುವ ಒಂದು ಪೂರಕ ಚಟುವಟಿಕೆಯಾಗಿದ್ದು, ಕೃಷಿಕರಿಗೆ ಹೆಚ್ಚುವರಿ ಆದಾಯ, ಆರ್ಥಿಕ ಸ್ಥಿರತೆ ಮತ್ತು ಜೀವನೋಪಾಯವನ್ನು ಒದಗಿಸುತ್ತದೆ, ಇದರ ಕುರಿತು ಕೆಲವು ಪ್ರಮುಖ ಅಂಶಗಳು ಹೀಗಿವೆ:

1) ನಿಯಮಿತ ಆದಾಯ: ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಿಂದ ಕೃಷಿಕರಿಗೆ ನಿಯಮಿತವಾಗಿ ಆದಾಯ ದೊರೆಯುತ್ತದೆ, ಇದು ವರ್ಷವಿಡೀ ಸ್ಥಿರವಾದ ಆದಾಯವನ್ನು ಒದಗಿಸುತ್ತದೆ, ಕೃಷಿಯಿಂದ ಬರುವ ಆದಾಯದ ಏರಿಳಿತವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.
ಕೃಷಿ-ಪೂರಕ: ಹೈನುಗಾರಿಕೆಯಿಂದ ದೊರೆಯುವ ಗೊಬ್ಬರವನ್ನು ಕೃಷಿಗೆ ಬಳಸಬಹುದು, ಇದು ರಾಸಾಯನಿಕ ಗೊಬ್ಬರದ ವೆಚ್ಚವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Karmika Card Benefits-ನೀವು ಕಾರ್ಮಿಕ ಕಾರ್ಡ ಹೊಂದಿದ್ದೀರಾ? ಈ ಸೌಲಭ್ಯ ಪಡೆಯಬಹುದು!

2) ಬಹುಮುಖ ಉತ್ಪನ್ನಗಳು: ಹಾಲಿನ ಜೊತೆಗೆ, ತುಪ್ಪ, ಮೊಸರು, ಚೀಸ್ ಮುಂತಾದ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಬಹುದು, ಇದು ಆದಾಯವನ್ನು ಹೆಚ್ಚಿಸುತ್ತದೆ.

3) ಗ್ರಾಮೀಣ ಉದ್ಯೋಗ: ಇದು ಕೃಷಿಕರ ಕುಟುಂಬದ ಸದಸ್ಯರಿಗೆ ಉದ್ಯೋಗ ಒದಗಿಸುತ್ತದೆ, ವಿಶೇಷವಾಗಿ ಮಹಿಳೆಯರಿಗೆ, ಆರ್ಥಿಕ ಸಬಲೀಕರಣವನ್ನು ಉತ್ತೇಜಿಸುತ್ತದೆ.

4) ಮಾರುಕಟ್ಟೆ ಬೇಡಿಕೆ: ಹಾಲಿನ ಉತ್ಪನ್ನಗಳಿಗೆ ಯಾವಾಗಲೂ ಒಳ್ಳೆಯ ಬೇಡಿಕೆ ಇರುತ್ತದೆ, ಇದು ಕೃಷಿಕರಿಗೆ ಸ್ಥಿರವಾದ ಮಾರುಕಟ್ಟೆಯನ್ನು ಒದಗಿಸುತ್ತದೆ.

ಹೀಗಾಗಿ, ಹೈನುಗಾರಿಕೆ ಕೃಷಿಕರಿಗೆ ಆರ್ಥಿಕ ಸ್ಥಿರತೆ, ಹೆಚ್ಚುವರಿ ಆದಾಯ ಮತ್ತು ಕೃಷಿಯ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡುವ ಪ್ರಮುಖ ಉಪ ಆದಾಯದ ಮೂಲವಾಗಿದೆ.

ಇದನ್ನೂ ಓದಿ: Best Savings Plan- ತಿಂಗಳಿಗೆ ಕೇವಲ ₹1,000 ಉಳಿತಾಯ ಮಾಡಿ ₹6.5 ಲಕ್ಷ ಹಣ ಗಳಿಸಿ!

Chaff Cutter subsidy

Who Can Apply For Chaff Cutter Subsidy-ಅರ್ಜಿಯನ್ನು ಸಲ್ಲಿಸಲು ಅರ್ಹರು:

(1) ಅರ್ಜಿದಾರರು ಕೃಷಿಕ ಕುಟುಂಬಕ್ಕೆ ಸೇರಿದವರಾಗಿರಬೇಕು.

(2) ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

(3) ಈ ಹಿಂದೆ ಈ ಯೋಜನೆಯಡಿ ಪ್ರಯೋಜನವನ್ನು ಪಡೆದಿರಬಾರದು.

(4) ಗಣಿಗಾರಿಕೆ ಪ್ರದೇಶದಲ್ಲಿ ವಾಸವಾಗಿರುವ ಸಂತ್ರಸ್ತರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: Free Hostel Application-ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಇನ್ನು 4 ದಿನ ಮಾತ್ರ ಬಾಕಿ!

Veterinary Department-ಯಾವೆಲ್ಲ ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ:

ಪ್ರಸ್ತುತ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ವಿಜಯನಗರ ಜಿಲ್ಲೆಯ ಕೆಲವು ಆಯ್ದ ತಾಲ್ಲೂಕುಗಳಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಒಟ್ಟು ಹೈನುರಾಸು ಮತ್ತು ಒಟ್ಟು ಮೇವು ಕತ್ತಿರಿಸುವ ಯಂತ್ರಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Mevu Katarisuva Yantra-ಎಷ್ಟು ಸಹಾಯಧನವನ್ನು ನೀಡಲಾಗುತ್ತದೆ:

  • ಒಟ್ಟೂ ಘಟಕ ವೆಚ್ಚ- ರೂ 1,20,000/-
    ಹೈನುರಾಸು ಘಟಕ- ಹಸು ಮತ್ತು ಎಮ್ಮೆ ನೀಡಲಾಗುತ್ತದೆ.
  • SC/ST ವರ್ಗದ ರೈತರಿಗೆ ಸಹಾಯಧನ- ರೂ 1,08,000/-
    ಸಾಮಾನ್ಯ ವರ್ಗದ ರೈತರಿಗೆ- ರೂ 72,000/-
  • ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಆಯ್ಕೆಯಾದ ಫಲಾನುಭವಿಗಳಲ್ಲಿ SC/ST ವರ್ಗದ ರೈತರಿಗೆ ಶೇ 90% ಸಬ್ಸಿಡಿ ನೀಡಲಾಗುತ್ತದೆ ಉಳಿದ ವರ್ಗದ ರೈತರಿಗೆ ಶೇ 60% ಸಹಾಯಧನವನ್ನು ನೀಡಲಾಗುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
  • 2 HP ಸಾಮರ್ಥ್ಯದ ಮೇವು ಕತ್ತರಿಸುವ ಯಂತ್ರವನ್ನು ಉಚಿತವಾಗಿ ಪಡೆಯಲು ಈ ಯೋಜನೆಯಡಿ ಅವಕಾಶವಿರುತ್ತದೆ.

ಇದನ್ನೂ ಓದಿ: Land Purchase Loan-ಕರ್ನಾಟಕ ಬ್ಯಾಂಕ್ ನಿಂದ ಕೃಷಿ ಭೂಮಿ ಖರೀದಿಗೆ ಸಾಲ ಸೌಲಭ್ಯ!

How To Apply-ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಹ ಅರ್ಜಿದಾರರು ಈ ಕೆಳಗೆ ತಿಳಿಸಿರುವ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಲಾಗಿದೆ ನಿಮ್ಮ ತಾಲ್ಲೂಕಿನ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Required Documents-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

  • ಅರ್ಜಿದಾರ ಆಧಾರ್ ಕಾರ್ಡ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಪೋಟೋ
  • ರೇಶನ್ ಕಾರ್ಡ
  • ಮೊಬೈಲ್ ನಂಬರ್

For More Information-ಈ ಯೋಜನೆಯ ಕುರಿತು ಹಾಗೂ ಇಲಾಖೆಯ ಇನ್ನಿತರೆ ಯೋಜನೆಗಳ ಮಾಹಿತಿಗಾಗಿ:

Veterinary Department Helpline-ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸಹಾಯವಾಣಿ- 8277100200
Veterinary Department Webiste-ಇಲಾಖೆಯ ಅಧಿಕೃತ ವೆಬ್ಸೈಟ್- Click Here

WhatsApp Group Join Now
Telegram Group Join Now
Share Now: