Karmika Card Benefits-ನೀವು ಕಾರ್ಮಿಕ ಕಾರ್ಡ ಹೊಂದಿದ್ದೀರಾ? ಈ ಸೌಲಭ್ಯ ಪಡೆಯಬಹುದು!

June 24, 2025 | Siddesh
Karmika Card Benefits-ನೀವು ಕಾರ್ಮಿಕ ಕಾರ್ಡ ಹೊಂದಿದ್ದೀರಾ? ಈ ಸೌಲಭ್ಯ ಪಡೆಯಬಹುದು!
Share Now:

ಕರ್ನಾಟಕ ಕಟ್ಟ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ(Labour department schemes) ನೋಂದಣಿಯನ್ನು ಮಾಡಿಕೊಂಡು ಕಾರ್ಮಿಕ ಕಾರ್ಡ(Labour Card) ಅನ್ನು ಪಡೆದಿರುವ ಅರ್ಹ ಕಾರ್ಮಿಕರು ಸರ್ಕಾರದ ವಿವಿಧ ಯೋಜನೆಯಡಿ ಅನೇಕ ಸೌಲಭ್ಯಗಳನ್ನು ಪಡೆಯಲು ಅವಕಾಶವಿದ್ದು ಅವುಗಳ ವಿವರವನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಕಾರ್ಮಿಕ ಇಲಾಖೆಯಡಿ(Karmika Ilake) ಒಟ್ಟು 3 ಮಂಡಳಿಗಳು ಕಾರ್ಯನಿರ್ವಹಿಸುತ್ತಿದ್ದು ಈ ಮೂರು ಮಂಡಳಿಗಳಿಂದ ವಿವಿಧ ಸಹಾಯಧನ ಆಧಾರಿತ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತದೆ ಇವುಗಳ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: Ration card-ರೇಷನ್ ಕಾರ್ಡದಾರರಿಗೆ ಅಕ್ಕಿ ಬದಲು ಆಹಾರ ಕಿಟ್! ಇಲ್ಲಿದೆ ಸಂಪೂರ್ಣ ವಿವರ!

ಪ್ರಸ್ತುತ ಈ ಲೇಖನದಲ್ಲಿ ಕಾರ್ಮಿಕ ಕಾರ್ಡ(Karmika card benefits) ಪಡೆಯುವುದು ಹೇಗೆ? ಕಾರ್ಮಿಕ ಕಾರ್ಡ ಹೊಂದಿರುವವರು ಯಾವೆಲ್ಲ ಸೌಲಭ್ಯಗಳನ್ನು ಪಡೆಯಬಹುದು ಸೇರಿದಂತೆ ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Karnataka Labour Department-ಮೂರು ಮಂಡಳಿಗಳ ವಿವರ ಹೀಗಿದೆ:

1) ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ.

2) ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ.

3) ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ.

Karmika Card Application-ಕಾರ್ಮಿಕ ಕಾರ್ಡ ಅನ್ನು ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬಹುದು?

ಕಾರ್ಮಿಕ ಕಾರ್ಡ ಅನ್ನು ಪಡೆಯಲು ಅರ್ಹರಿರುವ ನಾಗರಿಕರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹತ್ತಿರ ಗ್ರಾಮ ಒನ್/ಕರ್ನಾಟಕ ಒನ್/CS ಕೇಂದ್ರದಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅಥವಾ ನಿಮ್ಮ ತಾಲ್ಲೂಕಿನ ಕಾರ್ಮಿಕ ಇಲಾಖೆಯನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: E-Attendance In Schools-ಇನ್ನುಂದೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಇ-ಹಾಜರಾತಿ ಕಡ್ಡಾಯ!

Karmika Card Benefits

Documents-ಅರ್ಜಿ ಸಲ್ಲಿಸಲು ದಾಖಲೆಗಳು:

  • ಅರ್ಜಿದಾರರ ಆಧಾರ್ ಕಾರ್ಡ್.
  • ಪೋಟೋ.
  • ಕೆಲಸ ಮಾಡುತ್ತಿರುವ ಬಗ್ಗೆ ದೃಡೀಕರಣ ಪತ್ರ.
  • ಬ್ಯಾಂಕ್ ಪಾಸ್ ಬುಕ್ ಪ್ರತಿ.
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
  • ಮೊಬೈಲ್ ನಂಬರ್.

Labour Department Schems-2025: ನೀವು ಕಾರ್ಮಿಕ ಕಾರ್ಡ ಹೊಂದಿದ್ದೀರಾ? ಈ ಸೌಲಭ್ಯ ಪಡೆಯಬಹುದು:

ರಾಜ್ಯ ಸರ್ಕಾರದಡಿ ಕಾರ್ಯನಿರ್ವಹಿಸುವ ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯನ್ನು ಮಾಡಿಕೊಂಡು ಕಾರ್ಮಿಕ ಕಾರ್ಡ ಅನ್ನು ಪಡೆದಿರುವ ಅರ್ಹ ಕಾರ್ಮಿಕರು ಈ ಕೆಳಗಿನ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಲು ಅವಕಾಶವಿರುತ್ತದೆ.

ಇದನ್ನೂ ಓದಿ: Free Hostel Application-ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಇನ್ನು 4 ದಿನ ಮಾತ್ರ ಬಾಕಿ!

1) ಕುಟು೦ಬ ಪಿಂಚಣಿ ಸೌಲಭ್ಯ:

ಈ ಯೋಜನೆಯಡಿ ಪ್ರತಿ ತಿಂಗಳು ರೂ 2000 ಪಿಂಚಣಿಯನ್ನು ಪಡೆಯಲು ಅವಕಾಶವಿರುತ್ತದೆ.

2) ದುರ್ಬಲತೆ ಪಿಂಚಣಿ:

ಕಾರ್ಮಿಕನು/ಳು ಕೆಲಸದ ಸಮಯದಲ್ಲಾದ ಅಪಘಾತದಿಂದ ಅಥವಾ ಯಾವುದಾದರೂ ಖಾಯಿಲೆಯಿಂದ ಭಾಗಶಃ ದುರ್ಬಲತೆಗೆ ಒಳಗಾದಾಗ ಅವನಿಗೆ/ಅವಳಿಗೆ ಸರ್ಕಾರದ ಅಧಿಸೂಚನೆಯಂತೆ ರೂ.2000/-ಗಳನ್ನು ದುರ್ಬಲತೆ ಪಿಂಚಣಿಯನ್ನಾಗಿ ಮಂಜೂರು ಮಾಡಲಾಗುತ್ತದೆ.

ಇದನ್ನೂ ಓದಿ: Best Savings Plan- ತಿಂಗಳಿಗೆ ಕೇವಲ ₹1,000 ಉಳಿತಾಯ ಮಾಡಿ ₹6.5 ಲಕ್ಷ ಹಣ ಗಳಿಸಿ!

3) ಹೆರಿಗೆ ವೆಚ್ಚಕ್ಕೆ ಸಹಾಯಧನ:

ನೋಂದಾಯಿತ ಮಹಿಳಾ ಕಾರ್ಮಿಕರಿಂದ ಅರ್ಜಿಯನ್ನು ಪಡೆದು ಆಕೆಯ ಗಂಡು/ಹೆಣ್ಣು ಮಗುವಿನ ಜನನಕ್ಕೆ ಹೆರಿಗೆ ವೆಚ್ಚಕ್ಕೆ ರೂ.50,000/- ಸಹಾಯಧನವನ್ನು ಒದಗಿಸಲಾಗುತ್ತದೆ.

4) ಅಂತ್ಯಕ್ರಿಯೆ ವೆಚ್ಚ:

ನೋಂದಾಯಿತ ಕಟ್ಟಡ ಕಾರ್ಮಿಕನ ಅಂತ್ಯಕ್ರಿಯೆ ವೆಚ್ಚವನ್ನು ಭರಿಸಲು ಈ ಯೋಜನೆಯಡಿ ಆರ್ಥಿಕ ನೆರವನ್ನು ನೀಡಲಾಗುತ್ತದೆ.

5) ಶೈಕ್ಷಣಿಕ ಸಹಾಯಧನ:

ಪ್ರೌಢಶಾಲೆ. (8 ರಿಂದ 10ನೇ ತರಗತಿವರೆಗೆ) ರೂ.6.000/-, ಪಿಯುಸಿ / ಡಿಪ್ಲೊಮಾ / ಐಟಿಐ /ಟಿಸಿಹೆಜ್ ಶಿಕ್ಷಣಕ್ಕಾಗಿ ರೂ.8.000/-, ಪದವಿ ಶಿಕ್ಷಣಕ್ಕಾಗಿ ರೂ.10.000/-, ಸ್ನಾತಕೋತ್ತರ ಶಿಕ್ಷಣಕ್ಕಾಗಿ ರೂ.12.000/-, ಇಂಜಿನೀಯರಿಂಗ್/ವೈದ್ಯಕೀಯ ಶಿಕ್ಷಣಕ್ಕಾಗಿ ರೂ.20,000/-ಗಳ ಪ್ರೋತ್ಸಾಹ ಸಹಾಯಧನ ನೀಡಲಾಗುವುದು. (ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಶೇ.50 ಹಾಗೂ ಪ.ಜಾತಿ. /ಪ. ಪಂಗಡದ ವಿದ್ಯಾರ್ಥಿಗಳು ಶೇ. 45 ರಷ್ಟು ಅಂಕ ಪಡೆದು ತೇರ್ಗಡೆಯಾಗಿರಬೇಕು. ಒಂದು ಕುಟುಂಬದಲ್ಲಿ ಇಬ್ಬರು, ವಿದ್ಯಾರ್ಥಿಗಳಿಗೆ (ಮಕ್ಕಳಿಗೆ) ಮಾತ್ರ ಈ ಸೌಲಭ್ಯ ನೀಡಲಾಗುತ್ತದೆ.

ಇದನ್ನೂ ಓದಿ: Land Purchase Loan-ಕರ್ನಾಟಕ ಬ್ಯಾಂಕ್ ನಿಂದ ಕೃಷಿ ಭೂಮಿ ಖರೀದಿಗೆ ಸಾಲ ಸೌಲಭ್ಯ!

6) ಪಿಂಚಣಿ ಸೌಲಭ್ಯ:

ಪ್ರತಿ ನೋಂದಾಯಿತ ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕ ಫಲಾನುಭವಿಯು 60 ವರ್ಷ ವಯೋಮಿತಿ ಪೂರ್ಣಗೊಳಿಸಿರಬೇಕು. ನೋಂದಾಯಿತ ಕಟ್ಟಡ ಕಾರ್ಮಿಕ 60 ವರ್ಷ ವಯಸ್ಸು ಪೂರ್ಣಗೊಳ್ಳುವ ಪೂರ್ವದಲ್ಲಿ ಕನಿಷ್ಠ 03 ವರ್ಷಗಳು ನಿರಂತರವಾಗಿ ಮಂಡಳಿಯ ಫಲಾನುಭವಿಯಾಗಿ ಇದ್ದರೆ ಮಾಸಿಕ ರೂ 3000/-ಗಳನ್ನು ಪಿಂಚಣಿಯನ್ನು ಪಡೆಯಬಹುದು.

7) ವೈದ್ಯಕೀಯ ಸಹಾಯಧನ:

ನೋಂದಾಯಿತ ಕಾರ್ಮಿಕರಿಗೆ ಗರಿಷ್ಠ ರೂ.2 ಲಕ್ಷಗಳವರೆಗೆ ಈ ಯೋಜನೆಯಡಿ ವೈದ್ಯಕೀಯ ವೆಚ್ಚವನ್ನು ಭರಿಸಲು ಅವಕಾಶವಿರುತ್ತದೆ.

8) ಅಪಘಾತ ಪರಿಹಾರಧನ:

ನೋಂದಾಯಿತ ಕಟ್ಟಡ ಕಾರ್ಮಿಕನಿಗೆ ಕೆಲಸ ಮಾಡುವ ಸಮಯದಲ್ಲಿ ಅಪಘಾತವಾದಾಗ, ಅವನಿಗೆ / ಅವಳಿಗೆ ಕಾರ್ಮಿಕರ ನಷ್ಠ ಪರಿಹಾರ ಕಾಯ್ದೆ, 1923 ರ ಪ್ರಾವಧಾನಗಳಡಿ ಸಂಸ್ಥೆಯ ನಿಯೋಜಕನು ಅಪಘಾತ ಪರಿಹಾರವನ್ನು ನೀಡಬೇಕಾಗುತ್ತದೆ. ಜೊತೆಗೆ ಸರ್ಕಾರದ ಅಧಿಸೂಚನೆ ಸಂಖ್ಯೆ ಎಲ್ ಡಿ 106 ಎಲ್ ಇಟಿ 2019 ಬೆಂಗಳೂರು ದಿನಾಂಕ: 01-10-2019 ರಂತೆ ಮಂಡಳಿಯಿಂದ 2-ಲಕ್ಷ ರೂಗಳ ಪರಿಹಾರ ಸಹಾಯಧನ ನೀಡಲಾಗುತ್ತಿದೆ.

ಇದನ್ನೂ ಓದಿ: Gruhalakshmi Yojane-ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿಸುದ್ದಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್!

9) ಮದುವೆ ಸಹಾಯಧನ:

ಕಾರ್ಮಿಕ ರಿಂದ ಅರ್ಜಿಯನ್ನು ಸ್ವೀಕರಿಸಿ ಫಲಾನುಭವಿಯ ಮೊದಲನೆ ಮದುವೆಗೆ ಅಥವಾ ಅವನ / ಅವಳ ಎರಡು ಅವಲಂಭಿತ ಮಕ್ಕಳಿಗೆ ಮದುವೆಯ ವೆಚ್ಚವನ್ನು ಭರಿಸಲು ಸಹಾಯಧನವಾಗಿ ರೂ.60,000/- ಅನ್ನು ಪಡೆಯಲು ಅವಕಾಶವಿರುತ್ತದೆ.

10) ತಾಯಿ ಮಗು ಸಹಾಯಧನ:

ನೋಂದಾಯಿತ ಮಹಿಳಾ ನಿರ್ಮಾಣ ಕಾರ್ಮಿಕಳು ಮಗುವಿಗೆ ಜನ್ಮ ನೀಡಿದ ದಿನಾಂಕದಿಂದ ಮುಂದಿನ 3 ವರ್ಷಗಳವರೆಗೆ ಮಗುವಿನ ಪ್ರಿ-ಸ್ಕೂಲ್ ಶಿಕ್ಷಣ ಮತ್ತು ಪೌಷ್ಟಿಕಾಂಶ ಆಹಾರ ಸೇವನೆ ಬೆಂಬಲದ ಸಹಾಯ ಪಡೆಯಲು ಅರ್ಹಳಾಗಿರುತ್ತಾಳೆ.

ನೋಂದಾಯಿತ ಮಹಿಳಾ ನಿರ್ಮಾಣ ಕಾರ್ಮಿಕರಿಗೆ ವಾರ್ಷಿಕ 6000/- ರೂ ಗಳ ಮೊತ್ತವನ್ನು (ಮಾಸಿಕ 500 ರೂಪಾಯಿಗಳು) ಮಂಜೂರು ಮಾಡಲಾಗುತ್ತದೆ.

Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು:

ಈ ಮೇಲಿನ ಯೋಜನೆಗಳ ಸೌಲಭ್ಯವನ್ನು ಪಡೆಯಲು ಈ Apply Now ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now
Share Now: