Puc Scholarship-ಪಿಯುಸಿಯಲ್ಲಿ ಉತ್ತಮ ಅಂಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ!

June 26, 2025 | Siddesh
Puc Scholarship-ಪಿಯುಸಿಯಲ್ಲಿ ಉತ್ತಮ ಅಂಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ!
Share Now:

ಕೇಂದ್ರ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ನೀಡಲಾಗುವ ಕಾಲೇಜು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಕೇಂದ್ರ ವಲಯದ ವಿದ್ಯಾರ್ಥಿವೇತನ ಯೋಜನೆಯಡಿ ಪ್ರತಿ ವರ್ಷದಂತೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಡೆದ ದ್ವಿತೀಯ ಪಿಯುಸಿ(2nd Puc Scholarship) ಪರೀಕ್ಷೆಯಲ್ಲಿ ಸಂಯೋಜನೆವಾರು ಶೇಕಡ 80% ಗಿಂತ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಪಿಯುಸಿ ಪರೀಕ್ಷೆಯಲ್ಲಿ ಶೇಕಡ 80% ಗಿಂತ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಕಡ್ಡಾಯವಾಗಿ ಯಾವುದೇ ಪದವಿ / ಉನ್ನತ ಶಿಕ್ಷಣದಲ್ಲಿ ಮುಂದುವರೆಸಲು ಇಚ್ಛಿಸುವ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿದ್ಯಾರ್ಥಿವೇತನ ವೆಬ್‍ಸೈಟ್ https://scholarships.gov.in/Students ನ ನ್ಯಾಷನಲ್ ಸ್ಕಾಲರ್ ಶಿಪ್ ಪೋರ್ಟಲ್(National scholarship portal) ನಲ್ಲಿ ನೋಂದಾಯಿಸಿಕೊಂಡು,

ಇದನ್ನೂ ಓದಿ: Nigama Yojanegalu-ರಾಜ್ಯದ 11 ನಿಗಮಗಳಲ್ಲಿ ವಿವಿಧ ಯೋಜನೆಯಡಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ!

ಒಟಿಆರ್ ನಂಬರ್ ಪಡೆದುಕೊಂಡ ನಂತರ ಆನ್‍ಲೈನ್ ನಲ್ಲಿ(Scholarship Application) 2025-26ನೇ ಸಾಲಿನ ಹೊಸ ಬ್ಯಾಚ್ ಹಾಗೂ ಎಲ್ಲಾ ಹಂತದ ನವೀಕರಣ ಅರ್ಜಿಗಳನ್ನು ಸಲ್ಲಿಸಲು 2025 ರ ಅಕ್ಟೋಬರ್ 31 ರವರೆಗೆ ದಿನಾಂಕ ನಿಗಧಿಪಡಿಸಲಾಗಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Who Can Apply for Scholarship-ವಿದ್ಯಾರ್ಥಿವೇತನ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಪ್ರಸ್ತುತ ಆರ್ಜಿಯನ್ನು ಆಹ್ವಾನಿಸಿರುವ ಯೋಜನೆಯಡಿ ಈ ಕೆಳಗೆ ಹಂಚಿಕೊಂಡಿರುವ ನಿಯಮಗಳನ್ನು ನಿಗದಿಪಡಿಸಲಾಗಿದ್ದು ಇದರ ವಿವರ ಹೀಗಿದೆ:

ಅರ್ಜಿದಾರ ವಿದ್ಯಾರ್ಥಿಯು ಭಾರತೀಯ ನಿವಾಸಿಯಾಗಿರಬೇಕು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡ 80% ಗಿಂತ ಹೆಚ್ಚು ಅಂಕವನ್ನು ಪಡೆದಿರಬೇಕು.
ಉನ್ನತ ವ್ಯಾಸಂಗ ಮಾಡಲು ಕಾಲೇಜು ಪ್ರವೇಶವನ್ನು ಪಡೆದಿರಬೇಕು.

ಇದನ್ನೂ ಓದಿ: Free Chaff Cutter Scheme-ಉಚಿತ ಮೇವು ಕತ್ತರಿಸುವ ಯಂತ್ರ ಪಡೆಯಲು ಅರ್ಜಿ ಆಹ್ವಾನ!

2nd Puc Scholarship Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ವಿದ್ಯಾರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಿ ಕೇಂದ್ರ ಸರ್ಕಾರದ ಅಧಿಕೃತ ನ್ಯಾಷನಲ್ ಸ್ಕಾಲರ್ ಶಿಪ್ ಪೋರ್ಟಲ್ ಅನ್ನು ಪ್ರವೇಶ ಮಾಡಿ ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Step-1: ಮೊದಲಿಗೆ ಇಲ್ಲಿ ಕ್ಲಿಕ್ ಮಾಡಿ Scholarship Application ಅಧಿಕೃತ ನ್ಯಾಷನಲ್ ಸ್ಕಾಲರ್ ಶಿಪ್ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Best Savings Plan- ತಿಂಗಳಿಗೆ ಕೇವಲ ₹1,000 ಉಳಿತಾಯ ಮಾಡಿ ₹6.5 ಲಕ್ಷ ಹಣ ಗಳಿಸಿ!

scholarship

Step-2: ಇದಾದ ಬಳಿಕ ಈ ಪೇಜ್ ನಲ್ಲಿ "New user? Register yourself" ಎಂದು ಕಾಣುವ ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿ OTR ಸಂಖ್ಯೆಯನ್ನು ರಚನೆ ಮಾಡಿಕೊಳ್ಳಬೇಕು.

Step-3: OTR ಸಂಖ್ಯೆಯನ್ನು ರಚನೆ ಮಾಡಿಕೊಂಡ ಬಳಿಕ ಪುನಃ "Login with OTR" ಪುಟವನ್ನು ಭೇಟಿ ಮಾಡಿ Enter OTR (One Time Registration) no.* ಕಾಲಂ ನಲ್ಲಿ ನಿಮ್ಮ OTR ಸಂಖ್ಯೆಯನ್ನು ಹಾಕಿ ಕೆಳಗೆ ಪಾಸ್ವರ್ಡ ಅನ್ನು ನಮೂದಿಸಿ ಕ್ಯಾಪ್ಚ್ ಕೋಡ್ ಅನ್ನು ಹಾಕಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅಗಬೇಕು.

Step-4: ಲಾಗಿನ್ ಅದ ಬಳಿಕ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ವಿದ್ಯಾರ್ಥಿವೇತನ ಯೋಜನೆಯನ್ನು ಆಯ್ಕೆ ಮಾಡಿಕೊಂಡು ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Free Chaff Cutter Scheme-ಉಚಿತ ಮೇವು ಕತ್ತರಿಸುವ ಯಂತ್ರ ಪಡೆಯಲು ಅರ್ಜಿ ಆಹ್ವಾನ!

Required Documents for Scholarship-ಅರ್ಜಿ ಸಲ್ಲಿಸಲು ದಾಖಲೆಗಳು:

ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ವಿದ್ಯಾರ್ಥಿಗಳು ಈ ಕೆಳಗೆ ತಿಳಿಸಿರುವ ಅಗತ್ಯ ದಾಖಲಾತಿಗಳನ್ನು ಹೊಂದಿರುವುದು ಕಡ್ಡಾಯವಾಗಿದೆ.

  • ವಿದ್ಯಾರ್ಥಿಯ ಆಧಾರ್ ಕಾರ್ಡ/Aadhar
  • ಪೋಟೋ/Photo
  • 12ನೇ ತರಗತಿ ಅಂಕಪಟ್ಟಿ/Marks Card
  • ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್/Bank Pass Book
  • ನಿವಾಸಿ ದೃಡೀಕರಣ ಪ್ರಮಾಣ ಪತ್ರ/Address proof
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ/Caste And Income Certificate
  • ಮೊಬೈಲ್ ಮತ್ತು ಇ-ಮೇಲ್ ಐಡಿ/Mobile And mail Id

Last Date For Scholarship-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಅರ್ಹ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು 31 ಅಕ್ಟೋಬರ್ 2025 ಕೊನೆಯ ದಿನಾಂಕವಾಗಿರುತ್ತದೆ.

Bank A/c Aadhar Link-ತಪ್ಪದೇ ಆಧಾರ್ ಲಿಂಕ್ ಮಾಡಿ:

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಆಧಾರ್ ನೋಂದಣಿ ಸಂಖ್ಯೆಯನ್ನು ತಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿಕೊಳ್ಳತಕ್ಕದ್ದು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

NSP Scholarship Notification-ಪ್ರಕಟಣೆಯಲ್ಲಿ ಹಂಚಿಕೊಂಡಿರುವ ಪ್ರಮುಖ ಸೂಚನೆಗಳ ವಿವರ ಹೀಗಿದೆ.

ಆನ್‍ಲೈನ್ ಮೂಲಕ ಸಲ್ಲಿಸಿದ ಅರ್ಜಿಯ ಎಲ್ಲಾ ದಾಖಲೆಗಳನ್ನು ಎಲ್-1 ಪರಿಶೀಲನೆಗಾಗಿ ತಾವು ಅಧ್ಯಯನ ಮಾಡುತ್ತಿರುವ ಪದವಿ ಕಾಲೇಜುಗಳಲ್ಲಿ ನೇಮಕವಾಗಿರುವ ಸಂಸ್ಥೆಯ ನೋಡಲ್ ಆಫೀಸರ್ ಗಳಿಗೆ ನಿಗಧಿತ ದಿನಾಂಕದೊಳಗೆ ಕಡ್ಡಾಯವಾಗಿ ಸಲ್ಲಿಸಬೇಕು. ನಂತರ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಸಲ್ಲಿಸಿರುವ ಅರ್ಜಿಗಳನ್ನು ಆಯಾ ಕಾಲೇಜುಗಳ ಸಂಸ್ಥೆಯ ನೋಡಲ್ ಆಫೀಸರ್‍ಗಳು ಕೂಲಂಕುಷವಾಗಿ ಪರಿಶೀಲಿಸಿ, ಸದರಿ ವಿದ್ಯಾರ್ಥಿಯು ತಮ್ಮ ಕಾಲೇಜಿನಲ್ಲಿ ದಾಖಲಾಗಿ ವಿದ್ಯಾಭ್ಯಾಸ ಮುಂದುವರೆಸಿರುವ ಬಗ್ಗೆ, ಹಾಗೂ ವಿದ್ಯಾರ್ಥಿಯು ಸಲ್ಲಿಸಿರುವ ವಿವರಗಳನ್ನು ಖಚಿತಪಡಿಸಿಕೊಂಡು https://scholarships.gov.in/Institute ಆನ್‍ಲೈನ್ ಮೂಲಕವೇ ನಿಗದಿತ ದಿನಾಂಕದೊಳಗೆ ಅರ್ಜಿಗಳನ್ನು ಪರಿಶೀಲಿಸುವುದು.

ರಾಜ್ಯದ ಎಲ್ಲಾ ಪದವಿ ಕಾಲೇಜುಗಳು ತಮ್ಮ ಹಂತದಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸತಕ್ಕದ್ದು. ಕಾಲಕಾಲಕ್ಕೆ ಕೇಂದ್ರ ಉನ್ನತ ಶಿಕ್ಷಣ ಇಲಾಖೆಯ ಸುತ್ತೋಲೆಗಳನ್ನು ನಿಗಧಿತ ದಿನಾಂಕದೊಳಗೆ ಹೊಸ ಬ್ಯಾಚ್ ಹಾಗೂ ಎಲ್ಲಾ ಹಂತದ ನವೀಕರಣ ಅರ್ಜಿಗಳನ್ನು ತಪ್ಪದೇ ಎಲ್-1 ಹಂತದಲ್ಲಿ ಪರಿಶೀಲಿಸಿ, ತಮ್ಮ ಲಾಗಿನ್ ನಲ್ಲಿ ಯಾವುದೇ ಅರ್ಜಿಗಳು ಪರಿಶೀಲನೆಯಾಗದೇ ಬಾಕಿ ಉಳಿಯದಂತೆ ನಿಗಾ ವಹಿಸಬೇಕು.

ಹಾಗೂ ರಾಜ್ಯ ನೋಡಲ್ ಅಧಿಕಾರಿ ಯವರಿಂದ ವಿದ್ಯಾರ್ಥಿವೇತನದ ಸಲುವಾಗಿ ಬರುವ ಕರೆಗಳು / ಇ-ಮೇಲ್ ಗಳು / ಸುತ್ತೋಲೆಗಳು / ಮಾರ್ಗದರ್ಶನಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಮೂಲಕ ಅರ್ಹ ವಿದ್ಯಾರ್ಥಿಗಳಿಗಾಗಿ ಸಹಕರಿಸಬೇಕು. ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ : mhrdscholarship302@gmail.com ಗೆ ಸಂಪರ್ಕಿಸಬಹುದು ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share Now: