Taluk wise ration card list-ಆಹಾರ ಇಲಾಖೆಯಿಂದ ತಾಲ್ಲೂಕುವಾರು ರದ್ದಾದ ರೇಷನ್ ಕಾರ್ಡ ಪಟ್ಟಿ ಬಿಡುಗಡೆ!

December 5, 2023 | Siddesh

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ತಾಲ್ಲೂಕುವಾರು ಪ್ರತಿ ತಿಂಗಳ ರದ್ದಾದ ಪಡಿತರ ಚೀಟಿ/ರೇಷನ್ ಕಾರ್ಡ ಪಟ್ಟಿಯನ್ನು ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ.

ಪಡಿತರ ಚೀಟಿ ಹೊಂದಿರುವ ಗ್ರಾಹಕರು ಇಲಾಖೆಯ ಅಧಿಕೃತ ಜಾಲತಾಣ ಭೇಟಿ  ಮಾಡಿ ಹೇಗೆ ಈ ಪಟ್ಟಿಯನ್ನು ನೋಡಬವುದು ಮತ್ತು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ. ರೇಷನ್ ಕಾರ್ಡ ಹೊಂದಿರುವ ಗ್ರಾಹಕರು ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯೋ? ಇಲ್ಲವೋ? ಎಂದು ನಿಮ್ಮ ಮೊಬೈಲ್ ನಲ್ಲೇ ನೋಡಿ ಖಚಿತಪಡಿಸಿಕೊಳ್ಳಬವುದು.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯಾದ ಬಳಿಕ ಈ ಯೋಜನೆಯಡಿ ಸೌಲಭ್ಯ ಪಡೆಯಲು ಪಡಿತರ ಚೀಟಿಯನ್ನು ದುರ್ಬಳಕೆ ಮಾಡುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿದ ಇಲಾಖೆಯು ಕಳೆದ 3-4  ತಿಂಗಳಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನುಅನುಸರಿಸಿ ದೊಡ್ಡ ಸಂಖ್ಯೆಯ ಅನರ್ಹ ಪಡಿತರ ಚೀಟಿಗಳನ್ನು ರದ್ದು ಮಾಡಿ ಪಟ್ಟಿ ಬಿಡುಗಡೆಗೊಳಿಸಿದೆ.

ಇದನ್ನೂ ಓದಿ: morarji desai application-ಉಚಿತ ವಸತಿ ಶಾಲೆ ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

Taluk wise ration card list-ಮೊಬೈಲ್ ನಲ್ಲಿ ಪಟ್ಟಿಯನ್ನು ನೋಡುವ ವಿಧಾನ:

ಪಡಿತರ ಚೀಟಿ ಹೊಂದಿರುವ ಗ್ರಾಹಕರು ತಮ್ಮ ಮೊಬೈಲ್ ಮೂಲಕ ಬೆಳಿಗ್ಗೆ  8-00 ರಿಂದ ರಾತ್ರಿ 8-00 ಗಂಟೆಯ ನಡುವೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಈ https://ahara.kar.nic.in ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ ತಾಲ್ಲೂಕುವಾರು ರದ್ದಾದ ರೇಷನ್ ಕಾರ್ಡ ಪಟ್ಟಿಯನ್ನು ನೋಡಬವುದು. ಈ ಕೆಳಗಿನ ವಿಧಾನ ಅನುಸರಿಸಿ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯೋ? ಇಲ್ಲವೋ? ಎಂದು ಪರೀಶಿಲಿಸಬವುದು.

Step-1: ಮೊದಲಿಗೆ ಈ ಲಿಂಕ್ cancelled ration card list ಮೇಲೆ ಕ್ಲಿಕ್ ಮಾಡಿ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು. ನಂತರ "ಇ-ಪಡಿತರ ಚೀಟಿ" ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ಈ ವಿಭಾಗದಲ್ಲಿ 6 ನೇಯ ಆಯ್ಕೆಯಾದ "ರದ್ದುಗೊಳಿಸಲಾದ/ತಡೆಹಿಡಿಯಲಾದ ಪಟ್ಟಿ" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: "ರದ್ದುಗೊಳಿಸಲಾದ/ತಡೆಹಿಡಿಯಲಾದ ಪಟ್ಟಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಂಡು ಈ ಪೇಜ್ ನಲ್ಲಿ ಪ್ರಥಮದಲ್ಲಿ District, Taluk, Month, Year ಅನ್ನು select ಮಾಡಿಕೊಂಡು "Go" ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ತಾಲ್ಲೂಕಿನ ರದ್ದಾದ ಅಥವಾ ತಡೆಹಿಡಿಯಲಾದ ರೇಷನ್ ಕಾರ್ಡ ಪಟ್ಟಿ ತೋರಿಸುತ್ತದೆ.

ಇದನ್ನೂ ಓದಿ: Food Department-ಹೊಸ ರೇಷನ್ ಕಾರ್ಡ ಅರ್ಜಿ ಸಲ್ಲಿಕೆ ಕುರಿತು ಆಹಾರ ಇಲಾಖೆಯಿಂದ ಮತ್ತೊಂದು ಪತ್ರಿಕಾ ಪ್ರಕಟಣೆ!

ಫಲಾನುಭವಿಗಳು ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯೋ? ಇಲ್ಲವೋ ಎಂದು ನೋಡಲು ಈ ಪೇಜ್ ನ ಕೊನೆಯಲ್ಲಿ ಕಾಣುವ ಪುಟದ ಸಂಖ್ಯೆಯ(1.2.3.4...)ಮೇಲೆ ಕ್ಲಿಕ್ ಮಾಡಿ ಪಟ್ಟಿಯನ್ನು ಸಂಪೂರ್ಣವಾಗಿ ಪರೀಶಿಲಿಸಬೇಕು.

ಇದನ್ನೂ ಓದಿ: Drought relief list: 2023-24 ನೇ ಸಾಲಿನ ಬರ ಪರಿಹಾರ ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ:ಇಲ್ಲಿ ಕಾಣಿಸಿರುವ ಲಿಂಕ್ ಮೇಲೆ ಓತ್ತಿ ನಿಮ್ಮ ಹೆಸರು ಪರೀಕ್ಷಿಸಿಕೊಳ್ಳಿ.

ration card list-2023: ಪಟ್ಟಿಯಲ್ಲಿ ಯಾವೆಲ್ಲ ಮಾಹಿತಿ ಲಭ್ಯ?

ಈ ಮೇಲಿನ ವಿಧಾನವನ್ನು ಅನುಸರಿಸಿ ತಿಂಗಳು/ತಾಲ್ಲೂಕುವಾರು ರದ್ದಾದ/ತಡೆಯಿಡಿಯಲಾದ ಪಡಿತರ ಚೀಟಿಯ ಪಟ್ಟಿಯ ವಿವರವನ್ನು ಪಡೆದ ಬಳಿಕ ಈ ಪಟ್ಟಿಯಲ್ಲಿ ಫಲಾನುಭವಿಯ ರೇಷನ್ ಕಾರ್ಡ್ RC Number, ಹೆಸರು, ರದ್ದಾದ ದಿನಾಂಕ, ರೇಷನ್ ಕಾರ್ಡ ರದ್ದುಗೊಳಿಸಲು ಅಥವಾ ತಡೆಯಿಡಿಯಲು ಕಾರಣದ ವಿವರವನ್ನು ನೋಡಬವುದಾಗಿದೆ.

ಅರ್ಹರಿದ್ದರು ರದ್ದಾದರೆ ಏನು ಮಾಡಬೇಕು?

ಒಂದೊಮ್ಮೆ ನಿಮ್ಮ ತಿಳಿಸಿದ ವಿಧಾನವನ್ನು ಅನುಸರಿಸಿ ಪಟ್ಟಿಯನ್ನು ಸಂಪೂರ್ಣವಾಗಿ ಚೆಕ್ ಮಾಡಿದಾಗ ಆ ಪಟ್ಟಿಯಲ್ಲಿ ನಿಮ್ಮ ಹೆಸರು ತೋರಿಸಿದರೆ ನೀವು ಪಡಿತರ ಚೀಟಿ ಪಡೆಯಲು ಅರ್ಹರಿದಲ್ಲಿ ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ತಾಲ್ಲೂಕಿನ ಆಹಾರ ಇಲಾಖೆಯ ಕಚೇರಿಯನ್ನು(Food inspector office) ಭೇಟಿ ಮಾಡಿ ನಿಮ್ಮ ರೇಷನ್ ಕಾರ್ಡ ಅರ್ಜಿಯನ್ನು ಮರು ಪರೀಶಿಲನೆ ಮಾಡುವಂತೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಉಪಯುಕ್ತ ಲಿಂಕ್ ಗಳು:

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ವೆಬ್ಸೈಟ್ ಲಿಂಕ್: Click here
ರಾಜ್ಯದ ಎಲ್ಲಾ ತಾಲ್ಲೂಕುಗಳ ಆಹಾರ ಇಲಾಖೆಯ Food Inspector ಕಚೇರಿ ವಿವರ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ: Click here

ಇದನ್ನೂ ಓದಿ: Post matric scholarship-ರಾಜ್ಯ ಸರಕಾರದಿಂದ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ! ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಬವುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: