Bapuji Seva Kendra-ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ನೂತನ ವ್ಯವಸ್ಥೆ ಜಾರಿ!

April 14, 2026 | Siddesh
Bapuji Seva Kendra-ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ನೂತನ ವ್ಯವಸ್ಥೆ ಜಾರಿ!
Share Now:

ಇನ್ನು ಮುಂದೆ ಸಾರ್ವಜನಿಕರು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ದಾಖಲೆ ಸೇರಿದಂತೆ ಇನ್ನಿತರೆ ಅಗತ್ಯ ದಾಖಲೆಗಳನ್ನು ಪಡೆಯಲು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ(RDPR) ಗ್ರಾಮ ಪಂಚಾಯತಿ(Grama Panchayat) ಮಟ್ಟದಲ್ಲಿ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವನ್ನು ಒದಗಿಸಲಾಗಿದ್ದು ಇಂದಿನ ಲೇಖನದಲ್ಲಿ ಈ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಬಾಪೂಜಿ ಸೇವಾ ಕೇಂದ್ರ’ಗಳ(Bapuji Seva Kendra) ಮೂಲಕ ಈಗ ಗ್ರಾಮೀಣ ಭಾಗದ ಜನರಿಗೆ ಮತ್ತಷ್ಟು ಹತ್ತಿರ ಸೇವೆಗಳು ದೊರೆಯಲಿವೆ. ಈ ಹಿಂದೆ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ (ನಾಡಕಚೇರಿ) ಮಾತ್ರ ಲಭ್ಯವಿದ್ದ ಪ್ರಮುಖ ಪ್ರಮಾಣ ಪತ್ರಗಳನ್ನು ಈಗ ನಿಮ್ಮದೇ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ರೈತರು ಮತ್ತು ಸಾರ್ವಜನಿಕರು ತಾಲ್ಲೂಕು ಕೇಂದ್ರಗಳಿಗೆ ಅಲೆಯುವುದು ತಪ್ಪಿದಂತಾಗಿದೆ.

ಇದನ್ನೂ ಓದಿ: Free School Admission-ಗವಿಸಿದ್ದೇಶ್ವರ ವಸತಿ ಶಾಲೆಯಲ್ಲಿ ಉಚಿತ ಪ್ರವೇಶ ಪಡೆಯಲು ಅರ್ಜಿ ಅಹ್ವಾನ!

ಈ ನೂತನ ವ್ಯವಸ್ಥೆಯಡಿ ನಿರುದ್ಯೋಗ ದೃಢೀಕರಣ ಪತ್ರ, ಜಮೀನು ಇಲ್ಲದಿರುವ ದೃಢೀಕರಣ ಪತ್ರ, ಮರು ವಿವಾಹವಾಗದಿರುವ ಬಗ್ಗೆ ದೃಢೀಕರಣ ಪತ್ರ ಹಾಗೂ ವ್ಯವಸಾಯಗಾರರ ಕುಟುಂಬದ ಸದಸ್ಯ ದೃಢೀಕರಣ ಪತ್ರ ಸೇರಿದಂತೆ ಹಲವು ದಾಖಲೆಗಳಿಗೆ ಸ್ಥಳೀಯವಾಗಿಯೇ ಅರ್ಜಿ ಸಲ್ಲಿಸಬಹುದಾಗಿದೆ. ಕೇವಲ ರೂ. 40/- ಗಳ ಅಲ್ಪ ಶುಲ್ಕದೊಂದಿಗೆ ಸಾರ್ವಜನಿಕರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಈ ಕ್ರಮವು ಆಡಳಿತದಲ್ಲಿ ವಿಕೇಂದ್ರೀಕರಣವನ್ನು ತರುವುದಲ್ಲದೆ, ಪಾರದರ್ಶಕತೆಗೆ ಹೆಚ್ಚಿನ ಒತ್ತು ನೀಡಿದೆ. ಪ್ರತಿ ಪ್ರಮಾಣ ಪತ್ರಕ್ಕೂ ವಿಶಿಷ್ಟ ಕಾರ್ಯವಿಧಾನವಿದ್ದು, ಸಂಬಂಧಪಟ್ಟ ಗ್ರಾಮ ಲೆಕ್ಕಿಗರು (Village Accountant) ಸ್ಥಳ ಪರಿಶೀಲನೆ ನಡೆಸಿ ನೀಡುವ ವರದಿಯ ಆಧಾರದ ಮೇಲೆ ಜಿಲ್ಲಾಡಳಿತವು ಪತ್ರಗಳನ್ನು ವಿತರಿಸಲಿದೆ.

ಇದನ್ನೂ ಓದಿ: Coconut Farm Subsidy-ತೋಟಗಾರಿಕೆ ಇಲಾಖೆಯಿಂದ ತೆಂಗಿನ ತೋಟ ನಿರ್ಮಾಣಕ್ಕೆ ₹56,000 ಸಹಾಯಧನಕ್ಕಾಗಿ ಅರ್ಜಿ ಆಹ್ವಾನ!

Bapuji Seva Kendra In Karnataka

How To Apply-ಎಲ್ಲಿ ಅರ್ಜಿ ಸಲ್ಲಿಸಬೇಕು?

ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ತಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯತಿಯ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: PUC Marks Card-ಪಿಯುಸಿ ಅಂಕಪಟ್ಟಿಯನ್ನು ಮೊಬೈಲ್‌ನಲ್ಲೇ ಪಡೆಯುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ!

Required Documents For Application-ಅರ್ಜಿ ಸಲ್ಲಿಸಲು ದಾಖಲೆವಾರು ಬೇಕಾಗುವ ಅಗತ್ಯ ದಾಖಲೆಗಳು:

ಪ್ರಮಾಣ ಪತ್ರದ ವಿವರಬೇಕಾಗುವ ದಾಖಲೆಗಳು
ಜಾತಿ ಪ್ರಮಾಣ ಪತ್ರಆಧಾರ್/ರೇಷನ್ ಕಾರ್ಡ್/ವೋಟರ್ ಐಡಿ
ಆದಾಯ ಪ್ರಮಾಣ ಪತ್ರಆಧಾರ್/ರೇಷನ್ ಕಾರ್ಡ್/ವೋಟರ್ ಐಡಿ
ನಿರುದ್ಯೋಗ ದೃಢೀಕರಣ ಪತ್ರರೇಷನ್ ಕಾರ್ಡ್/ಮತದಾರರ ಗುರುತಿನ ಚೀಟಿ/ಆಧಾರ್ ಕಾರ್ಡ್, ಸ್ವಯಂ ಘೋಷಿತ ಪತ್ರ, ಉದ್ಯೋಗ ವಿನಿಮಯ ಕಚೇರಿಯ ಪ್ರಮಾಣ ಪತ್ರ, ಶಾಲಾ ವರ್ಗಾವಣೆ ಪ್ರಮಾಣ ಪತ್ರ (TC).
ಜಮೀನು ಇಲ್ಲದಿರುವ ದೃಢೀಕರಣ ಪತ್ರಆಧಾರ್/ರೇಷನ್ ಕಾರ್ಡ್/ವೋಟರ್ ಐಡಿ ಹಾಗೂ ನಿಗದಿತ ನಮೂನೆಯಲ್ಲಿ ಸ್ವಯಂ ಘೋಷಿತ ಪತ್ರ.
ಮರು ವಿವಾಹವಾಗದಿರುವ ದೃಢೀಕರಣ ಪತ್ರಆಧಾರ್/ರೇಷನ್ ಕಾರ್ಡ್/ವೋಟರ್ ಐಡಿ ಹಾಗೂ ಆದಾಯದ ಬಗ್ಗೆ ಸ್ವಯಂ ಘೋಷಿತ ಪತ್ರ.
ವ್ಯವಸಾಯಗಾರರ ಕುಟುಂಬದ ಸದಸ್ಯ ದೃಢೀಕರಣ ಪತ್ರಆಧಾರ್/ರೇಷನ್ ಕಾರ್ಡ್/ವೋಟರ್ ಐಡಿ ಹಾಗೂ ಪಹಣಿ ಪತ್ರ (RTC).

ಇದನ್ನೂ ಓದಿ: BPL Card-14 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್‌ಗಳ ರದ್ದತಿ ಕಾರ್ಯ ಚುರುಕು! ಇಲ್ಲಿದೆ ರದ್ದಾದ ಕಾರ್ಡ ಪಟ್ಟಿ!

"ಗ್ರಾಮೀಣ ಭಾಗದ ಜನರಿಗೆ ಆಡಳಿತವನ್ನು ತಲುಪಿಸುವುದೇ ನಮ್ಮ ಗುರಿ. ಈ ಮೊದಲು ಒಂದು ಪ್ರಮಾಣ ಪತ್ರಕ್ಕಾಗಿ ರೈತರು ದಿನವಿಡೀ ಸಮಯ ಕಳೆದು ತಾಲ್ಲೂಕು ಕಚೇರಿಗೆ ಹೋಗಬೇಕಿತ್ತು. ಈಗ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಒಂದೇ ಸೂರಿನಡಿ ಎಲ್ಲವೂ ಸಿಗುತ್ತಿರುವುದರಿಂದ ಕಾಲಮಿತಿಯೊಳಗೆ ಸೇವೆ ಒದಗಿಸಲು ನಮಗೆ ಸಾಧ್ಯವಾಗುತ್ತಿದೆ." — ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿ.

"ಹಿಂದೆಲ್ಲ ಒಂದು ಪಹಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅಥವಾ ನಿರುದ್ಯೋಗ ದೃಢೀಕರಣ ಪತ್ರ ಬೇಕೆಂದರೆ ಬಸ್ ಚಾರ್ಜ್ ಹಾಕಿಕೊಂಡು ಪಟ್ಟಣಕ್ಕೆ ಹೋಗಬೇಕಿತ್ತು. ಅಲ್ಲಿ ಸಾಲುಗಟ್ಟಿ ನಿಂತು ಕಾಯಬೇಕಿತ್ತು. ಆದರೆ ಈಗ ನಮ್ಮ ಪಂಚಾಯತಿಯಲ್ಲೇ ಎಲ್ಲಾ ದಾಖಲೆಗಳನ್ನು ಪಡೆಯಲು ಅರ್ಜಿ ಸಲ್ಲಿಸಲು ವ್ಯವಸ್ಥೆಯಿರುವುದರಿಂದ ಅನುಕೂಲವಾಗಿದೆ." — ಮಂಜುನಾಥ್, ಸ್ಥಳೀಯ ಗ್ರಾಮಸ್ಥ

ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ಗ್ರಾಮ ಪಂಚಾಯತಿ ಅಥವಾ ಬಾಪೂಜಿ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: