Tissue Culture Banana-ತೋಟಗಾರಿಕೆ ಇಲಾಖೆಯಿಂದ ರಿಯಾಯಿತಿ ದರದಲ್ಲಿ ‘ಅಂಗಾಂಶ ಕೃಷಿ’ ಬಾಳೆ ಸಸಿ ವಿತರಣೆ!

May 31, 2026 | Siddesh

ಬೆಂಗಳೂರು: ರಾಜ್ಯದ ರೈತರ ಆರ್ಥಿಕ ಪ್ರಗತಿಗೆ ತೋಟಗಾರಿಕೆ ಇಲಾಖೆಯು ಭರ್ಜರಿ ಉತ್ತೇಜನ ನೀಡಿದೆ. ಬಾಳೆ ಇಳುವರಿಯಲ್ಲಿ(Tissue Culture Banana) ಕರ್ನಾಟಕವನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ, ಸಾಂಪ್ರದಾಯಿಕ ಬಾಳೆ ಕಂದುಗಳ ಬದಲಿಗೆ ಸುಧಾರಿತ ವೈಜ್ಞಾನಿಕ ತಂತ್ರಜ್ಞಾನದ ಅಂಗಾಂಶ ಕೃಷಿ (ಟಿಶ್ಯೂ ಕಲ್ಚರ್) ಬಾಳೆ ಸಸಿಗಳನ್ನು ಬಳಸುವಂತೆ ಇಲಾಖೆಯು ರೈತರಲ್ಲಿ ವಿನಂತಿಸಿದೆ.

ಪ್ರಸ್ತುತ ದೇಶದ ಸರಾಸರಿ ಬಾಳೆ ಉತ್ಪಾದಕತೆ(Banana Farming) ಪ್ರತಿ ಹೆಕ್ಟೇರ್‌ಗೆ 42 ಮೆಟ್ರಿಕ್ ಟನ್ ಇದ್ದರೆ, ಕರ್ನಾಟಕದಲ್ಲಿ ಇದು ಕೇವಲ 26 ಮೆಟ್ರಿಕ್ ಟನ್ ಮಾತ್ರ ಇದೆ. ಹಳೆಯ ಪದ್ಧತಿಯ ಬಾಳೆ ಕಂದುಗಳ ಬಳಕೆಯೇ ಇಳುವರಿ ಕುಂಠಿತಗೊಳ್ಳಲು ಪ್ರಮುಖ ಕಾರಣವಾಗಿದ್ದು, ಇದನ್ನು ಬದಲಾಯಿಸಲು ಇಲಾಖೆ ಈಗ ಮುಂದಾಗಿದೆ.

ಇಂದಿನ ಲೇಖನದಲ್ಲಿ ಟಿಶ್ಯೂ ಕಲ್ಚರ್ ಬಾಳೆ ಸಸಿ ಬಳಕೆ(Hulimavu Bio-Center) ಮತ್ತು ರಿಯಾಯಿತಿ ದರದಲ್ಲಿ ತೋಟಗಾರಿಕೆ ಇಲಾಕೆಯಿಂದ ಸಸಿಗಳನ್ನು ಪಡೆಯುವುದರ ಬಗ್ಗೆ ಇಲಾಖೆಯಿಂದ ಹೊರಡಿಸಿರುವ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಸಾಂಪ್ರದಾಯಿಕ ಕಂದು Vs ಅಂಗಾಂಶ ಕೃಷಿ ಸಸಿ: ಯಾವುದು ಬೆಸ್ಟ್?

ರೈತರ ಸುಲಭ ತಿಳುವಳಿಕೆಗಾಗಿ ತೋಟಗಾರಿಕೆ ಇಲಾಖೆಯು ಸಾಂಪ್ರದಾಯಿಕ ಕಂದು ಹಾಗೂ ಅಂಗಾಂಶ ಕೃಷಿ ಸಸಿಗಳ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ಬಿಡುಗಡೆ ಮಾಡಿದೆ:

ವೈಶಿಷ್ಟ್ಯಗಳುಸಾಂಪ್ರದಾಯಿಕ ಬಾಳೆ ಕಂದುಅಂಗಾಂಶ ಕೃಷಿ (Tissue Culture) ಸಸಿ
ಆರೋಗ್ಯ ಮತ್ತು ರೋಗ ನಿರೋಧಕತೆರೋಗ ಮತ್ತು ಕೀಟಗಳು ಬೇಗನೆ ಹರಡುತ್ತವೆ, ಗಿಡಗಳು ಬದುಕುಳಿಯುವ ಪ್ರಮಾಣ ಕಡಿಮೆ.ಪ್ರಯೋಗಾಲಯದಲ್ಲಿ ಸಿದ್ಧವಾಗುವುದರಿಂದ ಸಂಪೂರ್ಣ ರೋಗರಹಿತ ಮತ್ತು ಹೆಚ್ಚು ಆರೋಗ್ಯಕರ.
ಬೆಳವಣಿಗೆ ಮತ್ತು ಕೊಯ್ಲುಗಿಡಗಳು ಅಸಮಾನವಾಗಿ ಬೆಳೆಯುತ್ತವೆ, ಕೊಯ್ಲು ಬೇರೆ ಬೇರೆ ಸಮಯದಲ್ಲಿ ಬರುತ್ತದೆ.ಒಂದೇ ಸಮನಾದ ಏಕರೂಪದ ಬೆಳವಣಿಗೆ. ಇಡೀ ತೋಟ ಒಂದೇ ಬಾರಿಗೆ ಕೊಯ್ಲಿಗೆ ಸಿದ್ಧವಾಗುತ್ತದೆ.
ಇಳುವರಿ ಮತ್ತು ಗುಣಮಟ್ಟಇಳುವರಿ ಕಡಿಮೆ ಮತ್ತು ಅಸ್ಥಿರ. ಹಣ್ಣಿನ ಗಾತ್ರದಲ್ಲಿ ಏರುಪೇರಿರುತ್ತದೆ.ಅತ್ಯಂತ ಹೆಚ್ಚಿನ ಹಾಗೂ ಸ್ಥಿರ ಇಳುವರಿ. ಹಣ್ಣುಗಳು ದೊಡ್ಡದಾಗಿ, ಆಕರ್ಷಕವಾಗಿರುತ್ತವೆ.
ನಿರ್ವಹಣಾ ವೆಚ್ಚನೀರು, ಗೊಬ್ಬರ ವ್ಯರ್ಥವಾಗುತ್ತದೆ. ರೋಗ ನಿರ್ವಹಣೆ ಮತ್ತು ಕಾರ್ಮಿಕರ ವೆಚ್ಚ ಹೆಚ್ಚು.ನೀರು ಮತ್ತು ಗೊಬ್ಬರದ ಸಮರ್ಪಕ ಬಳಕೆ. ಸುಲಭ ನಿರ್ವಹಣೆಯಿಂದಾಗಿ ಕಾರ್ಮಿಕರ ವೆಚ್ಚ ಕಡಿಮೆ.
ಒಟ್ಟು ಲಾಭಆರಂಭಿಕ ವೆಚ್ಚ ಕಡಿಮೆ ಇದ್ದರೂ, ದೀರ್ಘಾವಧಿಯಲ್ಲಿ ಮಣ್ಣು ಹಾಳಾಗಿ ಲಾಭ ಅಸ್ಥಿರವಾಗಿರುತ್ತದೆ.ಆರಂಭಿಕ ವೆಚ್ಚ ಕೊಂಚ ಹೆಚ್ಚಿದ್ದರೂ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವುದರಿಂದ ಗರಿಷ್ಠ ಲಾಭ ಖಚಿತ.

Tissue Culture Banana Price-ಇಲಾಖೆಯ ಅಧಿಕೃತ ಸಸಿಗಳ ದರ ಪಟ್ಟಿ:

ಖಾಸಗಿ ವ್ಯಕ್ತಿಗಳಿಂದ ವಂಚನೆಗೊಳಗಾಗುವುದನ್ನು ತಪ್ಪಿಸಲು ತೋಟಗಾರಿಕೆ ಇಲಾಖೆಯು ಅತ್ಯಂತ ನ್ಯಾಯೋಚಿತ ದರದಲ್ಲಿ ಸಸಿಗಳನ್ನು ಒದಗಿಸುತ್ತಿದೆ:

  • *4"6" ಪಾಲಿಬ್ಯಾಗ್ ಸಸಿ: ಪ್ರತಿ ಸಸಿಗೆ ಕೇವಲ ರೂ. 12/-
  • ಎಕ್ಸ್ ಅಗಾರ್ ಹಂತದ ಸಸಿ: ಪ್ರತಿ ಸಸಿಗೆ ಕೇವಲ ರೂ. 6/-
  • 98 ಕ್ಯಾವಿಟಿವುಳ್ಳ ಸಸಿ: ಪ್ರತಿ ಸಸಿಗೆ ಕೇವಲ ರೂ. 7/-

Nursery Address-ಸಸಿಗಳು ಎಲ್ಲಿ ದೊರೆಯುತ್ತವೆ?

ಉತ್ತಮ ಗುಣಮಟ್ಟದ ರೋಗರಹಿತ ಅಂಗಾಂಶ ಕೃಷಿ ಬಾಳೆ ಸಸಿಗಳನ್ನು ರೈತರು ನೇರವಾಗಿ ಈ ಕೆಳಗಿನ ವಿಳಾಸದಲ್ಲಿ ಪಡೆಯಬಹುದು:

ಬೆಂಗಳೂರಿನ ಜೈವಿಕ ಕೇಂದ್ರ, ಹುಳಿಮಾವು (ರಾಯಲ್ ಮೀನಾಕ್ಷಿ ಮಾಲ್ ಎದುರುಗಡೆ), ಬೆಂಗಳೂರು.ಅಥವಾ ನಿಮ್ಮ ಜಿಲ್ಲೆಗೆ ಹತ್ತಿರವಿರುವ ತೋಟಗಾರಿಕೆ ಇಲಾಕೆಯ ಜೈವಿಕ ಕೇಂದ್ರದಲ್ಲಿ(Bio-Center) ಸಸಿಯನ್ನು ಪಡೆಯಬಹುದು.

Contact Details-ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಸಸಿಗಳ ಕಾಯ್ದಿರಿಸುವಿಕೆ ಹಾಗೂ ತಾಂತ್ರಿಕ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಸಹನ ಹೆಗಡೆ ಅವರು ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಕೋರಿದ್ದಾರೆ:

  • 7975736459
  • 9880234281

ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಮತ್ತು ನಿಮ್ಮ ಜಿಲ್ಲೆಗೆ ಹತ್ತಿರದಲ್ಲಿ ಯಾವ ಭಾಗದಲ್ಲಿ ಇಲಾಕೆಯ ಜೈವಿಕ ಕೇಂದ್ರ ಇದೆ ಎನ್ನುವ ಮಾಹಿತಿಯನ್ನು ತಿಳಿಯಲು ಇಲಾಖೆಯ ಅಧಿಕೃತ ವೆಬ್ಸೈಟ್ ಲಿಂಕ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: