Subsidy Schemes 2026: ಕರ್ನಾಟಕ ಆರ್ಯ ವೈಶ್ಯ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ!

August 30, 2026 | Siddesh
Subsidy Schemes 2026: ಕರ್ನಾಟಕ ಆರ್ಯ ವೈಶ್ಯ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ!
Share Now:

ಕರ್ನಾಟಕ ಸರ್ಕಾರವು ಆರ್ಯ ವೈಶ್ಯ ಸಮುದಾಯದ ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ 2026-27ನೇ ಸಾಲಿನ ವಿವಿಧ ಯೋಜನೆಗಳಿಗೆ(Karnataka Nigama Yojanegalu) ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು 2026ರ ಅಕ್ಟೋಬರ್ 15ರ ಒಳಗಾಗಿ ಅರ್ಜಿ ಸಲ್ಲಿಸಿ ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬಹುದು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ್‌ ಅವರು ವಿಕಾಸಸೌಧದಲ್ಲಿ ಈ ಸಂಬಂಧಿಸಿದ ಕರಪತ್ರಗಳನ್ನು ಬಿಡುಗಡೆಗೊಳಿಸಿದರು. ಕಳೆದ 7 ವರ್ಷಗಳಲ್ಲಿ ನಿಗಮವು ರೂ. 85 ಕೋಟಿಗಳಷ್ಟು ಅನುದಾನ ಮತ್ತು ಮರುಪಾವತಿ ಮೊತ್ತವನ್ನು ಬಳಕೆ ಮಾಡಿಕೊಂಡು 16,785 ಫಲಾನುಭವಿಗಳಿಗೆ ಸೌಲಭ್ಯ ಒದಗಿಸಿದ್ದು, ಶೇ. 96ರಷ್ಟು ಸಾಧನೆ ಮಾಡಿದೆ. ಅಲ್ಲದೆ ರೂ.11 ಕೋಟಿ ಸಾಲ ಮರುಪಾವತಿಯಾಗಿದ್ದು, 740 ಫಲಾನುಭವಿಗಳು ಸಂಪೂರ್ಣವಾಗಿ ಸಾಲ ಮರುಪಾವತಿ ಮಾಡಿದ್ದಾರೆ.

ಇದನ್ನೂ ಓದಿ: Ganga Kalyana Scheme-ಗಂಗಾ ಕಲ್ಯಾಣ ಯೋಜನೆಯಡಿ ಬೋರ್ವೆಲ್ ಕೊರೆಯಲು ಅರ್ಜಿ ಆಹ್ವಾನ!

ಈ ಲೇಖನದಲ್ಲಿ ನಿಗಮದಿಂದ ಯಾವೆಲ್ಲ ಯೋಜನೆಯಡಿ(Ganaga Kalyana) ಅರ್ಜಿ ಆಹ್ವಾನಿಸಲಾಗಿದೆ? ಯೋಜನೆವಾರು ಸಬ್ಸಿಡಿ ಮೊತ್ತವೆಷ್ಟು? ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೇರಿದಂತೆ ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Arya Vaishya Nigama Subsidy Schemes-ಸಾಮಾನ್ಯ ನಿಯಮಗಳು ಹಾಗೂ ಮೀಸಲಾತಿ:

ಅರ್ಜಿದಾರರು ನಮೂನೆ-ಜಿ ಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆದಿರಬೇಕು. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ (Seeding) ಕಡ್ಡಾಯವಾಗಿದೆ. ಎಲ್ಲಾ ಯೋಜನೆಗಳಲ್ಲಿ ಮಹಿಳೆಯರಿಗೆ ಶೇ. 33, ವಿಕಲಚೇತನರಿಗೆ ಶೇ. 5 ಹಾಗೂ ತೃತೀಯಲಿಂಗಿಗಳಿಗೆ ಶೇ. 5ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.

Application Last Date- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 15 ಅಕ್ಟೋಬರ್ 2026

ಇದನ್ನೂ ಓದಿ: MBA Scholorship-ಎಂಬಿಎ, ಪಿಜಿಡಿಎಂ,ಪಿಜಿಪಿ ವಿದ್ಯಾರ್ಥಿಗಳಿಗೆ 8 ಲಕ್ಷದವರೆಗೆ ವಿದ್ಯಾರ್ಥಿವೇತನ!

Arya Vaishya Nigama Subsidy Schemes-ಪ್ರಮುಖ ಯೋಜನೆಗಳ ವಿವರ:

1) ಸ್ವಯಂ-ಉದ್ಯೋಗ ನೇರಸಾಲ ಯೋಜನೆ/Business Loan Subsidy:

ವ್ಯಾಪಾರ ಪ್ರಾರಂಭಿಸಲು ರೂ. 1 ಲಕ್ಷ ನೆರವು ನೀಡಲಾಗುವುದು (ರೂ. 20,000 ಸಬ್ಸಿಡಿ ಹಾಗೂ ರೂ. 80,000 ಶೇ. 4ರ ಬಡ್ಡಿದರದಲ್ಲಿ ಸಾಲ).

ಅರ್ಜಿದಾರರ ವಯಸ್ಸು 18 ರಿಂದ 55 ವರ್ಷದೊಳಗಿರಬೇಕು ಹಾಗೂ ವಾರ್ಷಿಕ ಆದಾಯ ರೂ. 3.00 ಲಕ್ಷ ಮೀರಿರಬಾರದು. ಸಾಲವನ್ನು 3 ವರ್ಷಗಳಲ್ಲಿ ಮರುಪಾವತಿಸಬೇಕು.

2) ಅರಿವು ಶೈಕ್ಷಣಿಕ ಸಾಲ ಯೋಜನೆ/Education Loan Subsidy:

ಸಿಇಟಿ ಅಥವಾ ನೀಟ್ ಮೂಲಕ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ. 1.00 ಲಕ್ಷ ಸಾಲವನ್ನು ಶೇ. 2ರ ಬಡ್ಡಿದರದಲ್ಲಿ ನೀಡಲಾಗುತ್ತದೆ. ವಾರ್ಷಿಕ ಆದಾಯ ಮಿತಿ ರೂ. 6.00 ಲಕ್ಷ. ಕೋರ್ಸ್ ಮುಗಿದ 4 ತಿಂಗಳ ನಂತರ 3 ವರ್ಷಗಳ ಅವಧಿಯಲ್ಲಿ ಸಾಲ ತೀರಿಸಬೇಕು.ಒಂದು ಕುಟುಂಬದ ಇಬ್ಬರು ವಿದ್ಯಾರ್ಥಿಗಳಿಗೆ ಅವಕಾಶವಿದೆ.

ಇದನ್ನೂ ಓದಿ: Fish Farming subsidy-ಮೀನುಗಾರಿಕೆ ಇಲಾಖೆಯಡಿ ಮೀನುಗಾರಿಕೆ ಸಲಕರಣೆ ಕಿಟ್ ಪಡೆಯಲು ಅರ್ಜಿ!

Subsidy Schemes In karnataka

3) ಆರ್ಯ ವೈಶ್ಯ ಆಹಾರ ವಾಹಿನಿ / ವಾಹಿನಿ ಯೋಜನೆ/Mobile Canteen Subsidy:

ಮೊಬೈಲ್ ಕ್ಯಾಂಟೀನ್ ನಡೆಸಲು ರೂ. 2.00 ಲಕ್ಷ ಸಬ್ಸಿಡಿ ನೀಡಲಾಗುತ್ತದೆ. ವಾಣಿಜ್ಯ ಉಪಯೋಗಕ್ಕೆ ಬಳಸುವ ವಾಹನಗಳಿಗೆ ರೂ. 1.00 ಲಕ್ಷ ಸಹಾಯಧನ ಸಿಗಲಿದೆ. ಹೊಸ ವಾಹನ ಖರೀದಿ ಮತ್ತು Food-grade steel ಬಳಕೆ ಕಡ್ಡಾಯ. ಉಚಿತ ಮಾರ್ಕೆಟಿಂಗ್ ತರಬೇತಿಯನ್ನೂ ನೀಡಲಾಗುತ್ತದೆ.

4) ವಾಸವಿ ಗಂಗಾ ಕಲ್ಯಾಣ ಯೋಜನೆ/Ganga Kalyana:

ರೈತರ ಜಮೀನಿಗೆ ನೀರಾವರಿ ಸೌಲಭ್ಯಕ್ಕಾಗಿ ರೂ. 2.00 ಲಕ್ಷ ಸಾಲ (ಶೇ. 4 ಬಡ್ಡಿ) ಮತ್ತು ವಿದ್ಯುದ್ದೀಕರಣಕ್ಕೆ ರೂ. 50,000 ಸಬ್ಸಿಡಿ ನೀಡಲಾಗುತ್ತದೆ. 2 ರಿಂದ 15 ಎಕರೆ ಜಮೀನು ಹೊಂದಿರುವ ರೈತರು ಅರ್ಹರು. ಯಾವುದೇ Collateral security ಅಗತ್ಯವಿರುವುದಿಲ್ಲ. ರೈತ ಮಿತ್ರ ಕೇಂದ್ರದಿಂದ FRUITS ಐಡಿ ಪಡೆಯುವುದು ಕಡ್ಡಾಯವಾಗಿದೆ.

ಕರಪತ್ರ ಬಿಡುಗಡೆ ಸಮಾರಂಭದಲ್ಲಿ ನಿಗಮದ ಅಧ್ಯಕ್ಷರಾದ ಕೆ.ವಿ. ರಾಮ್ ಪ್ರಸಾದ್, ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ದೀಪಶ್ರೀ ಕೆ. ಉಪಸ್ಥಿತರಿದ್ದರು.

ಇದನ್ನೂ ಓದಿ: Taxi Subsidy Scheme-ಸ್ವಾವಲಂಬಿ ಸಾರಥಿ ಯೋಜನೆ ವಾಹನ ಖರೀದಿಗೆ 3.0 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

How To Apply-ಅರ್ಜಿ ಸಲ್ಲಿಸುವುದು ಹೇಗೆ?

ಈ ಮೇಲೆ ತಿಳಿಸಿರುವ ಯೋಜನೆಗಳ ಪ್ರಯೋಜನವನ್ನು ಪಡೆಯಲು ಅರ್ಹ ಮತ್ತು ಆಸಕ್ತ ಅರ್ಜಿದಾರರು ಎರಡು ವಿಧಾನವನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಬಹುದು ಒಂದು ನೇರವಾಗಿ ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಗಮದ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರವನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.

  • Helpline Number-ಇನ್ನು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ- 9448451111
  • Arya Vaishya Nigama Website-ನಿಗಮದ ಅಧಿಕೃತ ವೆಬ್ಸೈಟ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: