Janaushadhi Kendra-ಜನೌಷಧಿ ಕೇಂದ್ರ ತೆರೆಯಲು ಅರ್ಜಿ ಆಹ್ವಾನ! ಸ್ವಂತ ಉದ್ಯಮ ಆರಂಭಿಸಲು ಸುವರ್ಣಾವಕಾಶ!

November 17, 2026 | Siddesh
Janaushadhi Kendra-ಜನೌಷಧಿ ಕೇಂದ್ರ ತೆರೆಯಲು ಅರ್ಜಿ ಆಹ್ವಾನ! ಸ್ವಂತ ಉದ್ಯಮ ಆರಂಭಿಸಲು ಸುವರ್ಣಾವಕಾಶ!
Share Now:

ಕಡಿಮೆ ಬಂಡವಾಳದಲ್ಲಿ ಸ್ವಂತ ಉದ್ಯಮ ಆರಂಭಿಸಬೇಕು, ಜೊತೆಗೆ ಜನರಿಗೆ ಕಡಿಮೆ ಬೆಲೆಯಲ್ಲಿ ಔಷಧಿಗಳನ್ನು ಒದಗಿಸುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂಬ ಆಸಕ್ತಿ ಇದೆಯೇ? ಹಾಗಿದ್ದರೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ (PMBJK) ಯೋಜನೆಯಡಿ ಜನೌಷಧಿ ಕೇಂದ್ರ(Janaushadhi Kendra Application ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ.

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ದೊರೆಯುವ ಅನೇಕ ಔಷಧಿಗಳನ್ನು ಜನೌಷಧಿ ಕೇಂದ್ರಗಳ(Jan Aushadhi Kendra) ಮೂಲಕ ಕಡಿಮೆ ಬೆಲೆಯಲ್ಲಿ ಜನರಿಗೆ ಒದಗಿಸಲಾಗುತ್ತದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಔಷಧಿ ಖರೀದಿಯ ವೆಚ್ಚ ಕಡಿಮೆಯಾಗುತ್ತದೆ. ಮತ್ತೊಂದೆಡೆ, ಕೇಂದ್ರ ಆರಂಭಿಸುವ ಉದ್ಯಮಿಗಳಿಗೆ ಔಷಧಿಗಳ ಮಾರಾಟದ ಮೂಲಕ ಆದಾಯ ಗಳಿಸುವ ಅವಕಾಶವೂ ಸಿಗುತ್ತದೆ.

ಇದನ್ನೂ ಓದಿ: Anganwadi Worker-ಅಂಗನವಾಡಿಯಲ್ಲಿ ಸರ್ಕಾರಿ ಉದ್ಯೋಗ ಪಡೆಯುವುದು ಹೇಗೆ! ಇಲ್ಲಿದೆ ಸಂಪೂರ್ಣ ಮಾಹಿತಿ!

ಹಾಗಾದರೆ ಜನೌಷಧಿ ಕೇಂದ್ರ(Jan Aushadhi Kendra Subsidy) ಎಂದರೇನು? ಈ ಕೇಂದ್ರ ಆರಂಭಿಸುವುದರಿಂದ ಸಿಗುವ ಪ್ರಯೋಜನಗಳೇನು? ಸರ್ಕಾರದಿಂದ ಎಷ್ಟು ಪ್ರೋತ್ಸಾಹಧನ ದೊರೆಯುತ್ತದೆ? ಯಾರು ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

What Is Janaushadhi Kendra-ಜನೌಷಧಿ ಕೇಂದ್ರ ಎಂದರೇನು?

ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ (PMBJP) ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯನ್ನು ಭಾರತೀಯ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಬ್ಯೂರೋ (PMBI) ಅನುಷ್ಠಾನಗೊಳಿಸುತ್ತಿದೆ.

ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ಜನಸಾಮಾನ್ಯರಿಗೆ ಗುಣಮಟ್ಟದ ಜೆನೆರಿಕ್ ಔಷಧಿಗಳನ್ನು ಕೈಗೆಟುಕುವ ಬೆಲೆಯಲ್ಲಿ ಒದಗಿಸುವುದು. ಇದಕ್ಕಾಗಿ ದೇಶದ ವಿವಿಧ ಭಾಗಗಳಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.

ಇದನ್ನೂ ಓದಿ: Bangalore Krishi Mela-2026: ಇಂದಿನಿಂದ 3 ದಿನ ಜಿ.ಕೆ.ವಿ.ಕೆ.ಯಲ್ಲಿ ಕೃಷಿಮೇಳ!

ಈ ಕೇಂದ್ರಗಳಲ್ಲಿ ವಿವಿಧ ರೀತಿಯ ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳು ಕಡಿಮೆ ಬೆಲೆಯಲ್ಲಿ ಲಭ್ಯವಿರುತ್ತವೆ. ಇದರಿಂದ ಸಾರ್ವಜನಿಕರಿಗೆ ಆರೋಗ್ಯ ಸೇವೆಗಳ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ.

Janaushadhi Kendra Benefits-ಜನೌಷಧಿ ಕೇಂದ್ರ ಆರಂಭಿಸಿದರೆ ಯಾವೆಲ್ಲ ಪ್ರಯೋಜನಗಳಿವೆ?

ಅನೇಕ ಜನರಲ್ಲಿ ಈ ಪ್ರಶ್ನೆ ಇದ್ದು ಜನೌಷಧಿ ಕೇಂದ್ರವನ್ನು ಆರಂಭಿಸುವುದರಿಂದ ಸರ್ಕಾರದಿಂದ ಎಷ್ಟು ಸಹಾಯಧನ ಮತ್ತು ಇನ್ನಿತರೆ ಸೌಲಭ್ಯಗಳನ್ನು ಪಡೆಯಬಹುದು ಎಂದು ಇದರ ವಿವರ ಈ ಕೆಳಗೆ ಹಂಚಿಕೊಳ್ಳಲಾಗಿದೆ:

ಔಷಧಿಗಳ ಮಾರಾಟದ ಮೇಲೆ ಕಮಿಷನ್:

ಜನೌಷಧಿ ಕೇಂದ್ರದ ಅಧಿಕೃತ ಪ್ರಕಟಣೆಯಲ್ಲಿ ಔಷಧಿ ಮಾರಾಟದ ಮೇಲೆ ಗರಿಷ್ಠ 30% ವರಗೆ ಲಾಭ ವಿತರಣೆಯನ್ನು ಅರ್ಜಿದಾರರಿಗೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ ಜೊತೆಗೆ ಪ್ರತಿ ತಿಂಗಳು ಶೇ 12% ವರೆಗೆ ಪ್ರೋತ್ಸಾಹಧನವನ್ನು ಸಹ ನೀಡಲಾಗುತ್ತದೆ.

ಇದನ್ನೂ ಓದಿ: Koli Mari Vitarane-ಪಶುಪಾಲನಾ ಇಲಾಖೆಯಿಂದ ಉಚಿತ ಕೋಳಿ ಮರಿ ಪಡೆಯಲು ಅರ್ಜಿ ಆಹ್ವಾನ!

2 ಲಕ್ಷದ ವರೆಗೆ ಪ್ರೋತ್ಸಾಹಧನ:

ಜನೌಷಧಿ ಕೇಂದ್ರವನ್ನು ಆರಂಭಿಸಲು ಅರ್ಜಿ ಸಲ್ಲಿಸಿದ ಅಭ್ಯರ್ಥಿಯು ಮಹಿಳಾ ಉದ್ಯಮಿಗಳು ಮತ್ತು ರ್ಮಾಸಿಸ್ಟ್‌ ಅಗಿದ್ದರೆ ಮತ್ತು ವಿಕಲಚೇತನ ವ್ಯಕ್ತಿಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಕೇಂದ್ರವನ್ನು ತೆರೆಯಲು ಗರಿಷ್ಠ 2 ಲಕ್ಷದ ವರೆಗೆ ಸಹಾಯಧನವನ್ನು ನೀಡಲಾಗುತ್ತದೆ.

Janaushadhi Kendra Opeing Online Application-ಅರ್ಜಿ ಸಲ್ಲಿಸುವುದು ಹೇಗೆ?

ಜನೌಷಧಿ ಕೇಂದ್ರ ಆರಂಭಿಸಲು ಆಸಕ್ತಿ ಹೊಂದಿರುವವರು ತಮ್ಮ ಮೊಬೈಲ್ ಮೂಲಕವೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದ್ದು ಕೆಳಗೆ ತಿಳಿಸಿಸುವ ಹಂತಗಳನ್ನು ಅನುಸರಿಸಿ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಗತ್ಯ ವಿವರ ಮತ್ತು ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬಹುದು:

Step-1: ಅರ್ಜಿದಾರರು ಮೊದಲಿಗೆ ಈ ವೆಬ್ ಲಿಂಕ್ "Apply Now" ಮೇಲೆ ಕ್ಲಿಕ್ ಮಾಡಿ ಜನೌಷಧಿ ಅಧಿಕೃತ ವೆಬ್‌ಸೈಟ್ ಅನ್ನು ಭೇಟಿ ಮಾಡಿ.

Janaushadhi Kendra Website

Step-2: ಇದಾದ ಬಳಿಕ ಇಲ್ಲಿ ನೀಡಿರುವ ಮಾರ್ಗಸೂಚಿಗಳನ್ನು ಇನ್ನಿತರೆ ವಿವರವನ್ನು ಒಮ್ಮೆ ಪರಿಶೀಲಿಸಿ ಬಳಿಕ "APPLY FOR KENDRA" ಬಟನ್ ಮೇಲೆ ಕ್ಲಿಕ್ ಮಾಡಿ "Mobile Number" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಹತ್ತು ಅಂಕಿಯ ಮೊಬೈಲ್ ನಂಬರ್ ಅನ್ನು ನಮೂದಿಸಿ Get OTP ಬಟನ್ ಮೇಲೆ ಕ್ಲಿಕ್ ಮಾಡಿ OTP ಅನ್ನು ಪಡೆದು Login ಆಗಿ.

ಇದನ್ನೂ ಓದಿ: Sujnananidhi Scholarship-ಸುಜ್ಞಾನನಿಧಿ ಶಿಷ್ಯವೇತನ ಯೋಜನೆಯಡಿ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿವೇತನ!

Step-3: ಲಾಗಿನ್ ಅದ ನಂತರ ಇಲ್ಲಿ ಕೇಳುವ ಎಲ್ಲಾ ವಿವರವನ್ನು ಸರಿಯಾಗಿ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

Jan Aushadhi Kendra Available Medicines List-ಜನೌಷಧಿ ಕೇಂದ್ರದಲ್ಲಿ ಎಷ್ಟು ಔಷಧಿಗಳು ಲಭ್ಯ:

2100ಕ್ಕೂ ಹೆಚ್ಚು ಔಷಧಿಗಳು ಹಾಗೂ 315 ವೈದ್ಯಕೀಯ ಉಪಕರಣಗಳು ಜೊತೆಗೆ ಆರೋಗ್ಯ ಪೂರಕ ಉತ್ಪನ್ನಗಳು ಅಯುರ್ವೇದಿಕ್ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳು ಈ ಕೇಂದ್ರದಲ್ಲಿ ಲಭ್ಯವಿರುತ್ತವೆ.

ಇದನ್ನೂ ಓದಿ: Swavalambi Sarathi Scheme-ಸರಕು ಸಾಗಣೆ ವಾಹನ ಖರೀದಿಗೆ 4 ಲಕ್ಷ ಸಹಾಯಧನ! ಇಂದೇ ಅರ್ಜಿ ಸಲ್ಲಿಸಿ!

ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಂಪರ್ಕಿಸಿ:

ನಾಗರಿಕರು ಜನೌಷಧಿ ಕೇಂದ್ರ ಆರಂಭಿಸುವ ಕುರಿತು ಹೆಚ್ಚಿನ ಮಾಹಿತಿ, ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ ಮತ್ತು ಸಹಾಯಧನದ ಇನ್ನಿತರೆ ವಿವರಗಳನ್ನು ತಿಳಿಸಲು ಈ ಕೆಳಗಿನ ಸಹಾಯವಾಣಿಗೆ ಕರೆ ಮಾಡಿ ಮಾಹಿತಿಯನ್ನು ಪಡೆಯಬಹುದು ಮತ್ತು ವೆಬ್ಸೈಟ್ ಭೇಟಿ ಮಾಡಿ ಮಾಹಿತಿ ತಿಳಿಯಬಹುದು.

  • Janaushadhi Kendra Website-ಅಧಿಕೃತ ವೆಬ್‌ಸೈಟ್- Click Here
  • Helpline-ಸಹಾಯವಾಣಿ ಸಂಖ್ಯೆ- 1800 180 8080

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: