RTC Crop Details-ಬೆಳೆ ವಿಮೆ ಮತ್ತು ಬೆಳೆ ಪರಿಹಾರ ಪಡೆಯಲು ಈ ವರ್ಷದ ಬೆಳೆ ಮಾಹಿತಿ ಬಿಡುಗಡೆ!

December 30, 2024 | Siddesh
RTC Crop Details-ಬೆಳೆ ವಿಮೆ ಮತ್ತು ಬೆಳೆ ಪರಿಹಾರ ಪಡೆಯಲು ಈ ವರ್ಷದ ಬೆಳೆ ಮಾಹಿತಿ ಬಿಡುಗಡೆ!
Share Now:

ಕೃಷಿ ಇಲಾಖೆಯಿಂದ ರಾಜ್ಯದ ಎಲ್ಲಾ ರೈತರ ಜಮೀನಿನ ಬೆಳೆ ಮಾಹಿತಿಯನ್ನು ಪಹಣಿಯಲ್ಲಿ(RTC Bele vivara ದಾಖಲಿಸಿ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ರೈತರು ತಮ್ಮ ಮೊಬೈಲ್ ನಲ್ಲೇ ಸರ್ವೆ ನಂಬರ್ ವಾರು ಬೆಳೆ ಮಾಹಿತಿ ಪಟ್ಟಿಯನ್ನು ಹೇಗೆ ನೋಡುವುದು ಎಂದು ಇಲ್ಲಿ ತಿಳಿಸಲಾಗಿದೆ.

ಬೆಳೆ ವಿಮೆ(Crop Insurance) ಮತ್ತು ಬೆಳೆ ಪರಿಹಾರವನ್ನು(Crop Loss Amount)ಅರ್ಹ ರೈತರಿಗೆ ಒದಗಿಸಲು ಪ್ರತಿ ವರ್ಷವು ಸಹ ಸರ್ವೆ ನಂಬರ್ ವಾರು ಸ್ಥಳ ಭೇಟಿ ಮಾಡಿ ಬೆಳೆ ಸಮೀಕ್ಷಯನ್ನು ನಡೆಸಿ ಬೆಳೆ ಮಾಹಿತಿಯನ್ನು ಡಿಜಿಟಲ್ ಮಾದರಿಯಲ್ಲಿ ಸಂಗ್ರಹಿಸಿ ಎಲ್ಲಾ ರೈತರ ಜಮೀನಿನ ಬೆಳೆ ವಿವರದ ಪಟ್ಟಿಯನ್ನು ಅಧಿಕೃತ Crop Survey ವೆಬ್ಸೈಟ್ ನಲ್ಲಿ ಹಂಗಾಮುವಾರು ಬಿಡುಗಡೆ ಮಾಡಲಾಗುತ್ತದೆ.

ಬೆಳೆ ಸಮೀಕ್ಷೆಯ(Crop Survey) ಮೂಲಕ ಸಂಗ್ರಹಣೆ ಮಾಡಿ ಪಹಣಿ/RTC/ಉತಾರ್ ನಲ್ಲಿ ನಮೂದಿಸಿರುವ ಬೆಳೆ ಮಾಹಿತಿಯ ಆಧಾರದ ಮೇಲೆಯೇ ರೈತರಿಗೆ ಬೆಳೆ ವಿಮೆ ಮತ್ತು ಬೆಳೆ ಹಾನಿ ಪರಿಹಾರವನ್ನು ನೀಡಲಾಗುತ್ತದೆ ಅದ್ದರಿಂದ ಎಲ್ಲಾ ರೈತರು ಈ ಅಂಕಣದಲ್ಲಿ ವಿವರಿಸಿರುವ ಮಾಹಿತಿಯನ್ನು ಪೂರ್ಣವಾಗಿ ಓದಿ ನಿಮ್ಮ ಜಮೀನಿನ ಸರ್ವೆ ನಂಬರ್ ನಲ್ಲಿ ಸರಿಯಾದ ಬೆಳೆ ಮಾಹಿತಿ ದಾಖಲಾಗಿದೀಯಾ? ಎಂದು ಒಮ್ಮೆ ಚೆಕ್ ಮಾಡಿಕೊಳ್ಳಿ.

ಇದನ್ನೂ ಓದಿ: Annabhagya DBT Status-ಇಲ್ಲಿಯವರೆಗೆ ಅನ್ನಭಾಗ್ಯ ಯೋಜನೆಯಡಿ ಎಷ್ಟು ಹಣ ಜಮಾ ಆಗಿದೆ? ಎಂದು ಹೇಗೆ ತಿಳಿಯುವುದು?

ಬೆಳೆ ಸಮೀಕ್ಷೆಯ ಬೆಳೆ ಮಾಹಿತಿಯು ಸರಿಯಾಗಿ ದಾಖಲಾಗುವುದು ಅತೀ ಮುಖ್ಯವಾಗಿದೆ:

ಕೃಷಿ ಇಲಾಖೆಯಿಂದ(Karnataka agriculture department) ಜಿಪಿಎಸ್ ಆಧಾರಿತ ಬೆಳೆ ಸಮೀಕ್ಷೆಯಲ್ಲಿ ಸಂಗ್ರಹಣೆ ಮಾಡಿದ ಬೆಳೆ ಮಾಹಿತಿಯು ರೈತರ ಸರ್ವೆ ನಂಬರ್ ನಲ್ಲಿ ದಾಖಲಾಗಿರುತ್ತದೆ ಇಲ್ಲಿ ನಮೂದಿಸಿರುವ ಬೆಳೆ ಮಾಹಿತಿ ಮತ್ತು ಜಮೀನಿನಲ್ಲಿ ರೈತರು ಬೆಳೆದ ಬೆಳೆ ಹೆಸರು ತಾಳೆಯಾಗುವುದು ಅತೀ ಮುಖ್ಯ ಏಕೆಂದರೆ ಬೆಳೆ ವಿಮೆ , ಬೆಳೆ ಹಾನಿ ಪರಿಹಾರ ಹಾಗೂ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಇದೆ ಮಾಹಿತಿಯನ್ನು ಪರಿಗಣಿಸಲಾಗುತ್ತದೆ ಅದ್ದರಿಂದ.

Crop survey App-ಬೆಳೆ ಸಮೀಕ್ಷೆಯನ್ನು ಹೇಗೆ ಮಾಡಲಾಗುತ್ತದೆ?

ಕೃಷಿ ಇಲಾಖೆಯಿಂದ ಪ್ರತಿ ಹಂಗಾಮಿನಲ್ಲಿ ಖಾಸಗಿ ನಿವಾಸಿಗಳ ಮೂಲಕ ಸರ್ವೆ ನಂಬರ್ ವಾರು ರೈತರ ಜಮೀನನ್ನು ನೇರವಾಗಿ ಭೇಟಿ ಮಾಡಿ ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಮೂಲಕ GPS ಆಧಾರಿತ ಪೋಟೋ ತೆಗೆದು ಬೆಳೆ ಮಾಹಿತಿಯನ್ನು ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ.

ಇಲ್ಲಿ ರೈತರು ಯಾವ ಬೆಳೆ ಬೆಳೆದಿದ್ದಾರೆ? ವಿಸ್ತೀರ್ಣ ಎಷ್ಟು? ಜಮೀನಿನ ಬೆಳೆಯ ಜಿಪಿಎಸ್ ಪೋಟೊ ಎಲ್ಲಾ ಮಾಹಿತಿಯನ್ನು ಡಿಜಿಟಲ್ ಮಾದರಿಯಲ್ಲಿ ಸಂಗ್ರಹಣೆ ಮಾಡಲಾಗಿರುತ್ತದೆ.

ಇದನ್ನೂ ಓದಿ: Yashaswini Card-ಯಶಸ್ವಿನಿ ಕಾರ್ಡ ಪಡೆಯಲು ಇನ್ನು 2 ದಿನ ಮಾತ್ರ ಅವಕಾಶ! 5 ಲಕ್ಷದ ವರೆಗೆ ಉಚಿತ ಚಿಕಿತ್ಸೆ!

Dishank mobile app-ಸರ್ವೆ ನಂಬರ್ ವಾರು ಬೆಳೆ ವಿವರವನ್ನು ನೋಡುವ ವಿಧಾನ:

ರೈತರು ಎರಡು ವಿಧಾನವನ್ನು ಅನುಸರಿಸಿ ತಮ್ಮ ಸರ್ವೆ ನಂಬರ್ ನಲ್ಲಿ ಯಾವ ಬೆಳೆ ದಾಖಲಾಗಿದೆ ಎನ್ನುವ ಮಾಹಿತಿಯನ್ನು ಕೇವಲ ಒಂದೆರಡು ಕ್ಲಿಕ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.

ಮೊದಲನೇ ವಿಧಾನ ರೈತರು ಬೆಳೆ ದರ್ಶಕ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಜಮೀನ ಸರ್ವೆ ನಂಬರ್ ನಲ್ಲಿ ಯಾವ ಬೆಳೆ ಹೆಸರನ್ನು ನಮೂದಿಸಲಾಗಿದೆ ಎಂದು ಚೆಕ್ ಮಾಡಿಕೊಳ್ಳುವುದರ ಜೊತೆಗೆ ಬೆಳೆ ವಿಮೆ ತಪ್ಪಾಗಿ ದಾಖಲಾಗಿದ್ದರೆ ಇದೇ ಅಪ್ಲಿಕೇಶನ್ ಮೂಲಕ ಅಕ್ಷೇಪನೇಯನ್ನು ಸಹ ಸಲ್ಲಿಸಬಹುದು.

ಇದನ್ನೂ ಓದಿ: Ration Card News-ರೇಶನ್ ಕಾರ್ಡ ಹೊಂದಿರುವವರು ಈ ಕೆಲಸ ಮಾಡಲು ಇನ್ನು 3 ದಿನ ಮಾತ್ರ ಬಾಕಿ!

Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ Dishank mobile app Download ಮಾಡಿ ಗೂಗಲ್ ಪ್ಲೇ ಸ್ಟೋರ್ ಭೇಟಿ ಮಾಡಿ "Darshak 2024-25" ಮೊಬೈಲ್ App ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

Step-2: ಅಪ್ಲಿಕೇಶನ್ ಅನ್ನು ಲಾಗಿನ್ ಅದ ಬಳಿಕ ಇಲ್ಲಿ ಎರಡು ಆಯ್ಕೆಗಳು ಕಾಣಿಸುತ್ತವೆ ಇಲ್ಲಿ "ರೈತ" ಎಂದು ಆಯ್ಕೆ ಮಾಡಿಕೊಂಡು ವರ್ಷ : "2024-25" ಋತು: ಮುಂಗಾರು ಎಂದು ಆಯ್ಕೆ ಮಾಡಿಕೊಂಡು ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿ, ಸೆಲೆಕ್ಟ್ ಮಾಡಿ ನಿಮ್ಮ ಜಮೀನಿನ ಸರ್ವೆ ನಂಬರ್ ಅನ್ನು ನಮೂದಿಸಿ "ವಿವರ ಪಡೆಯಿರಿ" ಬಟನ್ ಮೇಲೆ ಕ್ಲಿಕ್ ಮಾಡಬೇಕು.

bele-mahiti

ಇದನ್ನೂ ಓದಿ: Village Map-ನಿಮ್ಮ ಜಮೀನಿಗೆ ಹೋಗಲು ದಾರಿ ಸಮಸ್ಯೆಯೇ? ಇಲ್ಲಿದೆ ಅಧಿಕೃತ ದಾರಿ ನಕ್ಷೆ!

Step-3: ನಂತರ ನಿಮ್ಮ ಜಮೀನಿನ ಸರ್ವೆ ನಂಬರಿನ ಹಿಸ್ಸಾ ಸೆಲೆಕ್ಟ್ ಮಾಡಿಕೊಂಡು "ಮಾಲೀಕರ ವಿವರ" ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರನ್ನು ಸೆಲೆಕ್ಟ್ ಮಾಡಿ ಕೆಳಗೆ ಕಾಣುವ "ಸಮೀಕ್ಷೆಯ ವಿವರಗಳನ್ನು ಪಡೆಯಿರಿ" ಬಟನ್ ಮೇಲೆ ಕ್ಲಿಕ್ ಮಾಡದರೆ ನಿಮ್ಮ ಜಮೀನಿನ ಬೆಳೆ ವಿವರ ನಮೂದಿಸಿದ ಸಮೀಕ್ಷೆಗಾರನ ಹೆಸರು ಮತ್ತು ಮೊಬೈಲ್ ನಂಬರ್ ಸಮೀಕ್ಷೆ ನಡೆಸಿದ ದಿನ ಗೊಚರಿಸುತ್ತದೆ ಇದರ ಮೇಲೆ ಕ್ಲಿಕ್ ಮಾಡಿ ನಂತರ "ಬೆಳೆ ವಿವರ ವೀಕ್ಷಿಸಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮುಂದುವರೆರಿ.

crop survey

Step-4: ಈ ಪೇಜ್ ನಲ್ಲಿ ನಿಮ್ಮ ಜಮೀನಿನ ಸರ್ವೆ ನಂಬರ್ ನಲ್ಲಿ ದಾಖಲಿಸಿದ ಬೆಳೆ ಹೆಸರು, ವಿಸ್ತೀರ್ಣ, ಕೊನೆಯಲ್ಲಿ ಬೆಳೆ ಪೋಟೋ ಕಾಣಿಸುತ್ತದೆ. ಬೆಳೆ ಮಾಹಿತಿಯಲ್ಲಿ ಅಕ್ಷೇಪಣೆ ಇದ್ದಲ್ಲಿ ಇಲ್ಲಿ ಅರ್ಜಿ ಸಲ್ಲಿಸಬಹುದು.

ವಿಧಾನ-2: ಅಧಿಕೃತ ಜಾಲತಾಣ ಭೇಟಿ ಮಾಡಿ ಬೆಳೆ ವಿವರ ಪಟ್ಟಿ ನೋಡಬಹುದು:

ರೈತರು ತಮ್ಮ ಸರ್ವೆ ನಂಬರ್ ಅನ್ನು ಹಾಕಿ ಈ ಕೆಳಗೆ ನೀಡುವ ಅಧಿಕೃತ Crop Survey ಜಾಲತಾಣವನ್ನು ಭೇಟಿ ಮಾಡಿ ನಿಮ್ಮ ಜಮೀನಿನ ಬೆಳೆ ವಿವರ ಚೆಕ್ ಮಾಡಿಕೊಳ್ಳಬಹುದು.

Step-1: ಇಲ್ಲಿ ಕ್ಲಿಕ್ Crop Details Check ಮಾಡಿ ಅಧಿಕೃತ ಬೆಳೆ ಸಮೀಕ್ಷೆಯ ಜಾಲತಾಣವನ್ನು ಭೇಟಿ ಮಾಡಿ ಪ್ರಥಮದಲ್ಲಿ "Year/ವರ್ಷ ಆಯ್ಕೆಯಲ್ಲಿ "2024-25" ಎಂದು ಆಯ್ಕೆ ಮಾಡಿ ತದನಂತರ "Season" ಆಯ್ಕೆಯಲ್ಲಿ "ಮುಂಗಾರು" ಎಂದು ಸೆಲೆಕ್ಟ್ ಮಾಡಿಕೊಂಡು "GO" ಬಟನ್ ಮೇಲೆ ಕ್ಲಿಕ್ ಮಾಡಬೇಕು.

RTC Crop Details

Step-2: ಬಳಿಕ "View PR Uploaded crop Info" ಆಯ್ಕೆಯ ಮೇಲೆ ಒತ್ತಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿ ಮತ್ತು ಸರ್ವೆ ನಂಬರ್ ಹಾಕಿ Get Crop Survey Details ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹೆಸರು ತೋರಿಸುತ್ತದೆ ಇಲ್ಲಿ Select ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ Crop Information ಎಂದು ತೋರಿಸಿ ನಿಮ್ಮ ಜಮೀನಿನ ಸರ್ವೆ ನಂಬರ್ ನಲ್ಲಿ ನಮೂದಿಸಿದ ಬೆಳೆವನ್ನು ಇಲ್ಲಿ ಕಾಣಬಹುದು.

WhatsApp Group Join Now
Telegram Group Join Now
Share Now: