Mini Tractor subsidy- ಮಿನಿ ಟ್ರ್ಯಾಕ್ಟರ್ ಸೇರಿದಂತೆ ವಿವಿಧ ಸಹಾಯಧನ ಪಡೆಯಲು ಇಲಾಖೆಯಿಂದ ಅರ್ಜಿ ಆಹ್ವಾನ!

August 10, 2024 | Siddesh

ತೋಟಗಾರಿಕೆ ಇಲಾಖೆಯಿಂದ ವಿವಿಧ ಯಂತ್ರೋಪಕರಣಗಳಿಗೆ(Mini Tractor subsidy) ಸೇರಿದಂತೆ ಇತರೆ ಸೌಲಭ್ಯ ಪಡೆಯಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳೇನು? ಇತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ರಾಷ್ಟ್ರೀಯ ತೋಟಗಾರಿಕೆ ಮಿಷನ್(NHM-National Horticulture mission yojana) ಯೋಜನೆಯಡಿ ಮಿನಿ ಟ್ರ್ಯಾಕ್ಟರ್ ಸೇರಿದಂತೆ ವಿವಿಧ ಯೋಜನೆಗಳಿಗೆ ಸಹಾಯಧನ ಪಡೆಯಲು ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಇದನ್ನೂ ಓದಿ: Gruha jyothi- ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪ್ರಯೋಜನ ಪಡೆಯಲು ಡಿ-ಲಿಂಕ್ ಮಾಡಬೇಕು!

Mini Tractor subsidy yojana-ಯಾವೆಲ್ಲ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ?

1) ತೋಟಗಾರಿಕೆ ಇಲಾಖೆಯಿಂದ ಸಣ್ಣ ಟ್ರ್ಯಾಕ್ಟರ್, 
2) ಡ್ರಾಗನ್ ಪ್ರೂಟ್, ಈರುಳ್ಳಿ ಶೇಖರಣಾ ಘಟಕಕ್ಕೆ ಸಹಾಯಧನ,
3) ಅಡಿಕೆ, ಕಾಳುಮೆಣಸು, ಕೋಕೋ ಮುಂತಾದ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವ ಪರಿಶಿಷ್ಟ ಜಾತಿಯ ಅರ್ಹ ರೈತರಿಗೆ ಪ್ರಾಥಮಿಕ ಸಂಸ್ಕರಣಾ ಘಟಕ ಸ್ಥಾಪಿಸಲು ಸಹಾಯಧನ 
4) ಹಾಗೂ ಎಲ್ಲಾ ವರ್ಗದ ರೈತರಿಗೆ ಹಸಿರು ಮನೆ ನಿರ್ಮಿಸಿಕೊಳ್ಳಲು, 9000 ಸಿಎಂಟಿ ಸಾಮರ್ಥ್ಯದ ನೀರು ಸಂಗ್ರಹಣಾ ಘಟಕ ನಿರ್ಮಾಣಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ರಾಷ್ಟ್ರೀಯ ತೋಟಗಾರಿಕೆ ಮಿಷನ್(NHM) ಯೋಜನೆ ಹಿನ್ನೆಲೆ:

ತೋಟಗರಿಕೆ ಇಲಾಖೆಯಿಂದ ನಮ್ಮ ರಾಜ್ಯದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರಿಗೆ ತಮ್ಮ ಜಮೀನಿನಲ್ಲಿ ಬೆಳೆಯನ್ನು ಬೆಳೆಸಲು ವಿವಿಧ ಬಗ್ಗೆಯ ಸೌಲಭ್ಯಗಳನ್ನು ಅಥವಾ ಸವಲತ್ತುಗಳನ್ನು ಹೊಂದಲು ಅರ್ಥಿಕವಾಗಿ ಸಹಾಯ/ಸಬ್ಸಿಡಿ ನೀಡುವ ನಿಟ್ಟಿನಲ್ಲಿ ಹಾಗೂ ತೋಟಗಾರಿಕೆ ಬೆಳೆಗೆ ಉತ್ತೇಜನ ನೀಡಲು ಕರ್ನಾಟಕದಲ್ಲಿ 2005 ರಿಂದ "ರಾಷ್ಟ್ರೀಯ ತೋಟಗಾರಿಕೆ ಮಿಷನ್‌"(NHM-National Horticulture mission) ಯೋಜನೆಯನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: HESCOM Job application- ಹೆಸ್ಕಾಂ ನಿಂದ 338 ಹುದ್ದೆಗಳನ್ನು ಭರ್ತಿಗೆ ಅರ್ಜಿ ಆಹ್ವಾನ!

NHM scheme subsidy details-ಪ್ರಸ್ತುತ ಈ ಯೋಜನೆಯಡಿ ಯಾವೆಲ್ಲ ಚಟುವಟಿಕೆಗೆ ರೈತರಿಗೆ ಸಹಾಯಧನ ನೀಡಲಾಗುತ್ತದೆ:

ವಿವಿಧ ಬೆಳೆ ಹೊಸ ಪ್ರದೇಶ ವಿಸ್ತರಣಿ, ಡ್ರಾಗನ್ ಪ್ರೂಟ್ ಬೆಳೆಯಲು ಸಹಾಯಧನ, ಹೈಬ್ರಿಡ್ ತರಕಾರಿ ಮತ್ತು ಹೂವಿನ ಬೆಳೆಗಳು, ಸಣ್ಣ ಟ್ರ್ಯಾಕ್ಟರ್, ಪ್ಲಾಸ್ಟಿಕ್ ಮಲ್ಟಿಂಗ್ ಮತ್ತು ಪ್ಯಾಕ್ ಹೌಸ್, ಈರುಳ್ಳಿ ಶೇಖರಣಾ ಘಟಕಗಳಿಗೆ ಸಹಾಯಧನ ಪಡೆಯಬವುದು ಇದಲ್ಲದೆ ನೀರು ಶೇಖರಣ ಘಟಕ/ಕೃಷಿ ಹೊಂಡ ಇತ್ಯಾದಿ ಕಾಮಗಾರಿಗಳನ್ನು ಅನುಷ್ಥಾನ ಮಾಡಲು ಅವಕಾಶವಿರುತ್ತದೆ.

How to apply- ಎಲ್ಲಿ ಅರ್ಜಿ ಸಲ್ಲಿಸಬೇಕು?

ಆಸಕ್ತ ಅರ್ಹ ರೈತರು ಈ ಯೋಜನೆಯಡಿ ಸೌಲಭ್ಯವನ್ನು ಪಡೆಯಲು ತಮ್ಮ ತಾಲ್ಲೂಕಿನ ಹಿರಿಯ ತೋಟಗಾರಿಕೆ ನಿರ್ದೇಶಕರ ಕಚೇರಿ/ತೋಟಗರಿಕೆ ಇಲಾಖೆ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಒದಗಿಸಿ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: scholarship application- ಈ ಯೋಜನೆಯಡಿ ಪ್ರತಿ ತಿಂಗಳು ರೂ 4,000 ಸಾವಿರ ವಿದ್ಯಾರ್ಥಿ ವೇತನ ಪಡೆಯಬಹುದು!

Required documents for horticulture department yojana- ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

1)ಅರ್ಜಿದಾರರ ಅಧಾರ್ ಕಾರ್ಡ ಪ್ರತಿ.
2)ಬ್ಯಾಂಕ್ ಪಾಸ್ ಬುಕ್ ಪ್ರತಿ.
3)ಪೋಟೋ.
4)ಪಹಣಿ/ಉತಾರ್/RTC.
5)ರೇಷನ್ ಕಾರ್ಡ ಪ್ರತಿ.
6)ಜಂಟಿ ಮಾಲೀಕರ ಖಾತೆಯಿದಲ್ಲಿ ಎಲ್ಲಾ ಮಾಲೀಕರ ಒಪ್ಪಿಗೆ ಪ್ರಮಾಣ ಪತ್ರ.

Selection process-ಆಯ್ಕೆ ವಿಧಾನ:

ಅನುದಾನ ಲಭ್ಯತೆ ಆಧಾರದ ಮೇಲೆ ಅರ್ಜಿ ಸಲ್ಲಿಸಿದ ನಂತರ ಅರ್ಜಿದಾರರ ಅರ್ಜಿಗಳನ್ನು ಪರಿಶೀಲನೆ ಮಾಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: Free fast food training-ಉಚಿತ ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿಗೆ ಅರ್ಜಿ ಆಹ್ವಾನ!

ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ಲಿಂಕ್ ಗಳು:

ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಮಾರ್ಗಸೂಚಿ/National Horticulture mission guidelines
: Download Now
karnataka horticulture department-ಅಧಿಕೃತ ತೋಟಗಾರಿಕೆ ಇಲಾಖೆ ವೆಬ್ಸೈಟ್ : Click here 

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: