Budget 2025-ಕೇಂದ್ರ ಬಜೆಟ್ ರೈತರಿಗೆ ಭರ್ಜರಿ ಸಿಹಿ ಸುದ್ದಿ! ಕೃಷಿ ಸಾಲದ ಮಿತಿ ಹೆಚ್ಚಳ!

February 1, 2025 | Siddesh
Budget 2025-ಕೇಂದ್ರ ಬಜೆಟ್ ರೈತರಿಗೆ ಭರ್ಜರಿ ಸಿಹಿ ಸುದ್ದಿ! ಕೃಷಿ ಸಾಲದ ಮಿತಿ ಹೆಚ್ಚಳ!
Share Now:

ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ತಮ್ಮ ಎಂಟನೇ ಬಜೆಟ್ ಅನ್ನು ಮಂಡಣೆ ಮಾಡಿದ್ದು ಈ ಬಜೆಟ್ ನಲ್ಲಿ ಕೃಷಿ ವಲಯ(Agriculture) ಮತ್ತು ತೆರಿಗೆ ವಿನಾಯಿತಿ ಕುರಿತು ಜಾರಿಗೊಳಿಸಿರುವ ನೂತನ ಕ್ರಮಗಳನ್ನು ಇಲ್ಲಿ ತಿಳಿಸಲಾಗಿದೆ.

ಕೃಷಿ ಮತ್ತು ಕೃಷಿ ಪೂರಕ ಕಸುಬುಗಳಿಗೆ ಕಿಸಾನ್ ಕ್ರೆಡಿಟ್ ಕಾರ್ಡ(Kisan Credit Card) ಯೋಜನೆಯಡಿ ಕಡಿಮೆ ಬಡ್ದಿದರದಲ್ಲಿ ಈಗಾಗಲೇ ಸಾಲವನ್ನು ನೀಡಲಾಗುತ್ತಿದ್ದು ಇದಕ್ಕೆ ಸಂಬಂಧಪಟ್ಟಂತೆ ಈ ಬಜೆಟ್ ನಲ್ಲಿ ರೈತರಿಗೆ ಕೇಂದ್ರ ಸರಕಾರವು ಸಿಹಿ ಸುದ್ದಿ ನೀಡಿದೆ.

ಕೇಂದ್ರ ಸರಕಾರವು ಈ ಬಜೆಟ್ ನಲ್ಲಿ ಕೃಷಿ ವಲಯಕ್ಕೆ(Krishi sala) ಯಾವೆಲ್ಲ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ? ಮತ್ತು ತೆರಿಗೆ ಸಂಗ್ರಹಣೆಗೆ ಸಂಬಂಧಿಸಿದಂತೆ ನೂತನವಾಗಿ ಜಾರಿಗೆ ತಂದಿರುವ ತೆರಿಗೆ ನೀತಿಯ ಕುರಿತು ಇಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: RTI Act-ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ!

Agriculture Loan-ಕಿಸಾನ್ ಕ್ರೆಡಿಟ್ ಕಾರ್ಡ(Kisan Credit Card) ಯೋಜನೆಯಡಿ ಕೃಷಿ ಸಾಲದ ಮಿತಿ ₹3 ಲಕ್ಷ ದಿಂದ ₹5 ಲಕ್ಷಕ್ಕೆ ಏರಿಕೆ:

ಕೃಷಿ ಚಟುವಟಿಕೆಗಳಿಗೆ ನೆರವು ನೀಡಲು ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಒದಗಿಸಲು ಕಿಸಾನ್ ಕ್ರೆಡಿಟ್ ಕಾರ್ಡ ಯೋಜನೆಯಡಿ ಈ ಹಿಂದೆ ₹3 ಲಕ್ಷದ ವರೆಗೆ ಸಾಲವನ್ನು ನೀಡಲಾಗುತ್ತಿತ್ತು ಈ ಮಿತಿಯನ್ನು ಈಗ ₹5 ಲಕ್ಷಕ್ಕೆ ಏರಿಕೆ ಮಾಡಲಾಗಿರುತ್ತದೆ.

KCC Loan interest-ಶೇ 4 ಬಡ್ಡಿದರದಲ್ಲಿ ಸಾಲ ಸೌಲಭ್ಯ:

ಕಿಸಾನ್ ಕ್ರೆಡಿಟ್ ಕಾರ್ಡ(KCC) ಯೋಜನೆಯಡಿ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅರ್ಥಿಕ ನೆರವನ್ನು ನೀಡಲು ಶೇ 4 ಬಡ್ಡಿದರದಲ್ಲಿ ಸಾಲವನ್ನು ನೀಡಲಾಗಿತ್ತದೆ.

ಇದನ್ನೂ ಓದಿ: National Horticulture Fair 2025-ರಾಜ್ಯದಲ್ಲಿ 3 ದಿನ ರಾಷ್ಟ್ರೀಯ ತೋಟಗಾರಿಕಾ ಮೇಳ! ಇಲ್ಲಿದೆ ಮೇಳದ ಸಂಪೂರ್ಣ ವಿವರ!

KCC loan

How to Get KCC Loan-ಕಿಸಾನ್ ಕ್ರೆಡಿಟ್ ಕಾರ್ಡ ಯೋಜನೆಯಡಿ ಸಾಲ ಪಡೆಯುವುದು ಹೇಗೆ?

ರೈತರು ಕಿಸಾನ್ ಕ್ರೆಡಿಟ್ ಕಾರ್ಡ ಯೋಜನೆಯಡಿ ಸಾಲವನ್ನು ಪಡೆಯಲು ಇತರೆ ಯಾವುದೇ ಬ್ಯಾಂಕ್ ನಲ್ಲಿ ಈಗಾಗಲೇ ಯಾವುದೇ ಬಗ್ಗೆ ಸಾಲವನ್ನು ಪಡೆದಿದ್ದರೆ ಅದನ್ನು ಸಂಪೂರ್ಣವಾಗಿ ಮರು ಪಾವತಿ ಮಾಡಿ ನಿಮ್ಮ ಹತ್ತಿರದ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಅನ್ನು ನೇರವಾಗಿ ಅಗತ್ಯ ದಾಖಲಾತಿಗಳ ಸಮೇತ ಭೇಟಿ ಮಾಡಿ ಕೃಷಿ ಸಾಲವನ್ನು ಪಡೆಯಬಹುದು.

Documents For KCC Loan-ಬೇಕಾಗುವ ದಾಖಲಾತಿಗಳು:

1) ರೈತರ ಆಧಾರ್ ಕಾರ್ಡ ಪ್ರತಿ
2) ಪೋಟೋ-2
3) ಜಮೀನಿನ ಪಹಣಿ
4) ಬ್ಯಾಂಕ್ ಪಾಸ್ ಬುಕ್
5) ಮೊಬೈಲ್ ನಂಬರ್

ಇದನ್ನೂ ಓದಿ: Ration Angadi-ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು?

Central budget

₹2 ಲಕ್ಷದವರೆಗೆ ಯಾವುದೇ ಆಧಾರ ಅವಶ್ಯವಿರುವುದಿಲ್ಲ:

ಕಿಸಾನ್ ಕ್ರೆಡಿಟ್ ಕಾರ್ಡ ಯೋಜನೆಯಡಿ ₹2 ಲಕ್ಷದವರೆಗೆ ಯಾವುದೇ ಬಗ್ಗೆಯ ಆಧಾರವನ್ನು ಅಡಮಾನವಿಡದೇ ರೈತರು ಬ್ಯಾಂಕ್ ಗಳಿಂದ ಸಾಲವನ್ನು ಪಡೆಯಲು ಅವಕಾಶವಿರುತ್ತದೆ.

ಪ್ರಧಾನ ಮಂತ್ರಿ ಧನ್ ಧ್ಯಾನ್ ಕೃಷಿ ಯೋಜನೆ ಜಾರಿ:

ಕಡಿಮೆ ಇಳುವರಿ, ಆಧುನಿಕ ಬೆಳೆ ತೀವ್ರತೆ ಮತ್ತು ಸರಾಸರಿಗಿಂತ ಕಡಿಮೆ ಸಾಲದ ನಿಯತಾಂಕಗಳನ್ನು ಹೊಂದಿರುವ 100 ಜಿಲ್ಲೆಗಳನ್ನು ಒಳಗೊಂಡ ಪ್ರಧಾನ ಮಂತ್ರಿ ಧನ್ ಧ್ಯಾನ್ ಕೃಷಿ ಯೋಜನೆಯನ್ನು ಹಣಕಾಸು ಸಚಿವರು ಈ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ. ಪ್ರಧಾನ ಮಂತ್ರಿ ಧನ್ ಧ್ಯಾನ್ ಕೃಷಿ ಯೋಜನೆಯು 1.7 ಕೋಟಿ ರೈತರಿಗೆ ಸಹಕಾರಿಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: Revenue Department-ರಾಜ್ಯ ಸರಕಾರದಿಂದ ಕಂದಾಯ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಮಹತ್ವದ ನಿರ್ಣಯ!

Tax collection Details--12 ಲಕ್ಷ ರೂವರೆಗಿನ ತೆರಿಗೆ ವಿನಾಯಿತಿ:

ಮಾಸಿಕ ವೇತನವನ್ನು ಪಡೆಯುವ ನೌಕರರು ಈ ಹಿಂದೆ 7 ಲಕ್ಷ ರೂವರೆಗಿನ ಆದಾಯಕ್ಕೆ ಟ್ಯಾಕ್ಸ್ ರಿಬೇಟ್ ನೀಡಲಾಗುತ್ತಿತ್ತು. ಈಗ 12 ಲಕ್ಷ ರುವರೆಗಿನ ಆದಾಯಕ್ಕೆ ತೆರಿಗೆ ಕಟ್ಟುವ ಅವಶ್ಯಕತೆ ಇರುವುದಿಲ್ಲ.

New tax collection slab-ನೂತನ ತೆರಿಗೆ ಸಂಗ್ರಹಣೆ ನಿಯಮ ಹೀಗಿದೆ:

0-4 ಲಕ್ಷ ರೂ- ತೆರಿಗೆ ಇಲ್ಲ
4-8 ಲಕ್ಷ ರೂ- ಶೇ. 5 ತೆರಿಗೆ
8-12 ಲಕ್ಷ ರೂ- ಶೇ. 10 ತೆರಿಗೆ
12-16 ಲಕ್ಷ ರೂ- ಶೇ. 15 ತೆರಿಗೆ
16-20 ಲಕ್ಷ ರೂ- ಶೇ. 20 ತೆರಿಗೆ
20-24 ಲಕ್ಷ ರೂ- ಶೇ. 25 ತೆರಿಗೆ
24 ಲಕ್ಷ ರೂ ಮೇಲ್ಪಟ್ಟು- ಶೇ. 30 ತೆರಿಗೆ

ಹಿರಿಯ ನಾಗರಿಕರಿಗೆ ಸಿಗುವ ಬಡ್ಡಿ ಆದಾಯದಲ್ಲಿ ಟ್ಯಾಕ್ಸ್ ಡಿಡಕ್ಷನ್ ಮಿತಿಯನ್ನು 1 ಲಕ್ಷ ರೂಗೆ ಏರಿಕೆ ಮಾಡಲಾಗಿದೆ. ಅಂದರೆ, ಠೇವಣಿಗಳಿಂದ ಒಂದು ವರ್ಷಕ್ಕೆ ಸಿಗುವ 1 ಲಕ್ಷ ರೂವರೆಗಿನ ಬಡ್ಡಿ ಆದಾಯಕ್ಕೆ ಟ್ಯಾಕ್ಸ್ ವಿನಾಯಿತಿಯನ್ನು ನೀಡಲಾಗಿದೆ.

ಮನೆ ಇನ್ನಿತರೆ ಬಾಡಿಗೆಗಳಿಂದ ಬರುವ ಆದಾಯಕ್ಕೆ ವಾರ್ಷಿಕ ಟಿಡಿಎಸ್ ಮಿತಿಯನ್ನು 2.4 ಲಕ್ಷ ರೂನಿಂದ 6 ಲಕ್ಷ ರೂಗೆ ಏರಿಸಲಾಗಿದೆ.

ಕೇಂದ್ರದ ಬಜೆಟ್ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಲು ಅಧಿಕೃತ ವೆಬ್ಸೈಟ್-CLICK HERE

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: