Ayushman card-2024: ನಿಮ್ಮ ಬಳಿ ಈ ಕಾರ್ಡ ಇದ್ದರೆ 5 ಲಕ್ಷದವರೆಗೆ ಉಚಿತ ಆರೋಗ್ಯ ಚಿಕಿತ್ಸೆ ಪಡೆಯಬಹುದು?

July 17, 2024 | Siddesh

ಎಲ್ಲಾ ಕೃಷಿಕಮಿತ್ರ ಓದುಗ ಮಿತ್ರರಿಗೆ ಶುಭ ಮುಂಜಾನೆ ಇಂದು ಈ ಲೇಖನದಲ್ಲಿ ಆಯುಷ್ಮಾನ್ ಕಾರ್ಡ ಕುರಿತು ವಿವರಿಸಲಾಗಿದ್ದು, ನಿಮ್ಮ ಬಳಿ ಈ ಕಾರ್ಡ(Ayushman health card) ಇದ್ದರೆ 5 ಲಕ್ಷದವರೆಗೆ ಉಚಿತ ಆರೋಗ್ಯ ಚಿಕಿತ್ಸೆ ಪಡೆಯಬಹುದಾಗಿದೆ.

ಆಯುಷ್ಮಾನ್ ಭಾರತ್ ಯೊಜನೆಯು ಭಾರತದಲ್ಲಿ ಅರೋಗ್ಯ ರಕ್ಷಣೆಯ ಕ್ಷೇತ್ರದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಯೋಜನೆಯು(Ayushman health card yojana) ದೇಶದ ಬಡ ಮತ್ತು ಅಗತ್ಯವಿರುವ ಕುಟುಂಬಗಳಿಗೆ ಗುಣಮಟ್ಟದ ಅರೋಗ್ಯ ರಕ್ಷಣೆಯನ್ನು ಒದಗಿಸಲು ಸಹಾಯ ಮಾಡುತ್ತಿದೆ.

ಈ ಕಾರ್ಡ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲೆಗಳೇನು? ಕಾರ್ಡ ಪ್ರಯೋಜನಗಳೇನು? ಯಾವೆಲ್ಲ ಚಿಕಿತ್ಸೆಯನ್ನು ಈ ಕಾರ್ಡ ಮೂಲಕ ಪಡೆಯಬಹುದು ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Karnataka post office jobs-2024: ಕರ್ನಾಟಕ ಅಂಚೆ ಇಲಾಖೆಯಲ್ಲಿ 1900+ ಹುದ್ದೆಗಳ ಬೃಹತ್ ನೇಮಕಾತಿ!

How can apply-ಯಾರೆಲ್ಲ ಕಾರ್ಡ ಪಡೆಯಲು ಅರ್ಹರು?

ಕರ್ನಾಟಕದ ಎಲ್ಲಾ ನಿವಾಸಿಗಳು ಈ ಯೋಜನೆಗೆ ಅರ್ಹರು

ವಾರ್ಷಿಕ ಕುಟುಂಬ ಆದಾಯ 1.20 ಲಕ್ಷ ರೂಪಾಯಿ ಮೀರಿರಬಾರದು.

ಕೆಲವು ವರ್ಗ ಗಳಿಗೆ ಆದಾಯ ಮಿತಿ 2.40 ಲಕ್ಷ ರೂಪಾಯಿ.

ಪಡಿತರ ಕಾರ್ಡ್ ಹೊಂದಿರುವ ಕುಟುಂಬಗಳು ಸ್ವಯಂ ಚಾಲಿತವಾಗಿ ಅರ್ಹವಾಗಿರುತ್ತವೆ.

ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಉದ್ಯೋಗಿ ಆಗಿರಬಾರದು.

Ayushman health card benefits-ಕಾರ್ಡ ಪ್ರಯೋಜನಗಳು:

ಒಂದು ವರ್ಷಕ್ಕೆ 5 ಲಕ್ಷದವರೆಗೆ ಉಚಿತ ಅರೋಗ್ಯ ಚಿಕಿತ್ಸೆ ಸೌಲಭ್ಯ.

ಯೋಜನೆಯಡಿಯಲ್ಲಿ 1393 ಕಾಯಿಲೆ ಗಳಿಗೆ ಚಿಕಿತ್ಸೆ ಲಭ್ಯ.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ಪಡೆಯಬಹುದು.

ಯಾವುದೆ ಮುಂಗಡ ಹಣ ಪಾವತಿಸುವ ಅಗತ್ಯವಿಲ್ಲ.

ಅಸ್ಪತ್ರೆಗೆ ದಾಖಲಾಗುವುದು ಮತ್ತು ಬಿಡುಗಡೆಯಾಗುವುದು ಕಾಗದ ರಹಿತ ಪ್ರಕ್ರಿಯೆಯಾಗಿರುತ್ತದೆ.

ಇದನ್ನೂ ಓದಿ: Marriage Assistane Scheme-2024: ರೂ.60,000/- ಮದುವೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ಫಲಾನುಭವಿ ಗಳಿಗೆ 24/7 ಗ್ರಾಹಕ ಸೇವಾ ಸಹಾಯವಾಣಿ ಲಭ್ಯ.

Ayushman card-ಯಾವ ಚಿಕಿತ್ಸೆ ಗಳು ಲಭ್ಯವಿವೆ?

1650 ಕ್ಕೂ ಹೆಚ್ಚು ಚಿಕ್ಕಿತ್ಸಾ ವಿಧಾನಗಳು ಲಭ್ಯವಿದೆ.

ಪ್ರಮುಖ ಚಿಕಿತ್ಸೆ ಗಳಲ್ಲಿ ಶಸ್ತ್ರ ಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆ, ಹೃದ್ರೊಗ ಚಿಕಿತ್ಸೆ, ಗರ್ಭದಾರಣೆ ಮತ್ತು ಪ್ರಸವ ಚಿಕಿತ್ಸೆ, ಮಾನಸಿಕ ಆರೋಗ್ಯ ಚಿಕಿತ್ಸೆ, ಇತ್ಯಾದಿ ಸೇರಿವೆ.

Required documents for application-ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:

ಅರ್ಜಿದಾರರ ಆಧಾರ್ ಕಾರ್ಡ್.
ಕುಟುಂಬದ ಪಡಿತರ ಚೀಟಿ.
ಮೊಬೈಲ್ ಸಂಖ್ಯೆ.

ಇದನ್ನೂ ಓದಿ: Karnataka dams water level: ಪ್ರಸ್ತುತ ರಾಜ್ಯದ ಯಾವ ಜಲಾಶಯಕ್ಕೆ ಎಷ್ಟು ನೀರು ಹರಿದು ಬರುತ್ತಿದೆ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.

Ayushman card application-ಎಲ್ಲಿ ಅರ್ಜಿ ಸಲ್ಲಿಸಬೇಕು?

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ಎಬಿ-ಎಆರ್ಕೆ ಕಾರ್ಡ್ ನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ರೂ.10/- ಶುಲ್ಕದೊಂದಿಗೆ ನೀಡಲಾಗುತ್ತದೆ. ಬೆಂಗಳೂರು ಒನ್ ಕರ್ನಾಟಕ ಒನ್ ಮತ್ತು ಸೇವ ಸೀಂಧು ಕೇಂದ್ರಗಳಲ್ಲಿ ರೂ. 35/- ಶುಲ್ಕದೊಂದಿಗೆ ಎಬಿ-ಎಆರ್ಕೆ ಕಾರ್ಡ್ ನೀಡಲಾಗುತ್ತದೆ. 

Ayushman helpline-ಸಹಾಯವಾಣಿಗಳು:

ಆರೋಗ್ಯ ಸಹಾಯವಾಣಿ-104
ಟೋಲ್ ಫ್ರೀ ಸಂಖ್ಯೆ: 1800 425 8330

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: