PUC Result-2025: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ!ಇಲ್ಲಿದೆ ವೆಬ್ಸೈಟ್ ಲಿಂಕ್!

April 8, 2025 | Siddesh
PUC Result-2025: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ!ಇಲ್ಲಿದೆ ವೆಬ್ಸೈಟ್ ಲಿಂಕ್!
Share Now:

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB)ಯಿಂದ ಇಂದು ದ್ವಿತೀಯ ಪಿಯುಸಿ ಫಲಿತಾಂಶವನ್ನು(PUC Result) ಪ್ರಕಟಿಸಲಾಗಿದ್ದು ಈ ಅಂಕಣದಲ್ಲಿ ನೀಡಿರುವ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಂದು ಮಧ್ಯಾಹ್ನ 12:30ಕ್ಕೆ ಮಲ್ಲೇಶ್ವರದಲ್ಲಿರುವ ಮಂಡಳಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಫಲಿತಾಂಶವನ್ನು ಘೋಷಿಸಿದರು. ಈ ಸುದ್ದಿಗೋಷ್ಠಿಯ ನಂತರ, ಮಧ್ಯಾಹ್ನ 1:30ರಿಂದ ಫಲಿತಾಂಶವು ಅಧಿಕೃತ ವೆಬ್‌ಸೈಟ್‌ಗಳಾದ karresults.nic.in ಮತ್ತು kseab.karnataka.gov.in ನಲ್ಲಿ ವಿದ್ಯಾರ್ಥಿಗಳು ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: New BPL Card-ಹೊಸ ಬಿಪಿಎಲ್ ಕಾರ್ಡ ವಿತರಣೆ! ಇಲ್ಲಿದೆ ನೂತನ ಅಪ್ಡೇಟ್!

ವಿದ್ಯಾರ್ಥಿಗಳು ಈ ವೆಬ್‌ಸೈಟ್‌ಗಳ ಮೂಲಕ ವಿದ್ಯಾರ್ಥಿಗಳು(KSEAB 2nd PUC Result) ತಮ್ಮ ನೋಂದಣಿ ಸಂಖ್ಯೆ ಮತ್ತು ವಿಷಯದ ವಿವರಗಳನ್ನು ನಮೂದಿಸಿ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದಾಗಿತ್ತು. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಪ್ರಕಟಿಸಲಾಗಿದೆ.

PUC Result Details-ಈ ಬಾರಿ ದ್ವಿತೀಯ ಪಿಯುಸಿ ವಿವರ ಹೀಗಿದೆ:

ಕಳೆದ ಮಾರ್ಚ್ 1 ರಿಂದ ಮಾರ್ಚ್ 20ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗೆ ರಾಜ್ಯಾದ್ಯಂತ ಸುಮಾರು 7.13 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ ಹೊಸ ವಿದ್ಯಾರ್ಥಿಗಳ ಸಂಖ್ಯೆ 6,61,474 ಮತ್ತು ಪುನರಾವರ್ತಿತ ಮತ್ತು ಖಾಸಗಿ ವಿದ್ಯಾರ್ಥಿಗಳ ಸಂಖ್ಯೆ ಯಥಾಕ್ರಮವಾಗಿ 34,071 ಮತ್ತು 18,317 ಇತ್ತು. ಫಲಿತಾಂಶದ ಮೊದಲ ಪ್ರಕಟಣೆಯಲ್ಲಿ ರಾಜ್ಯದ ಒಟ್ಟು ಉತ್ತೀರ್ಣ ಪ್ರಮಾಣ 73.45% ಎಂದು ವರದಿಯಾಗಿದ್ದು,

ಇದರಲ್ಲಿ ಉಡುಪಿ ಜಿಲ್ಲೆ 93.90% ಸಾಧನೆಯೊಂದಿಗೆ ಮೊದಲ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ (93.57%) ಮತ್ತು ಬೆಂಗಳೂರು ದಕ್ಷಿಣ (85.36%) ಯಥಾಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.

ಇದನ್ನೂ ಓದಿ: Bangalore Weather-ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ! ಕರ್ನಾಟಕ ಹವಾಮಾನ ಮುನ್ಸೂಚನೆ!

PUC Result-2025: ಜಿಲ್ಲಾವಾರು ಫಲಿತಾಂಶದ ವಿವರ ಹೀಗಿದೆ:

PUC Result

ಇದನ್ನೂ ಓದಿ: Milk incentive Amount- ರೈತರಿಗೆ ₹400 ಕೋಟಿ ಹಾಲಿ ಪ್ರೋತ್ಸಾಹಧನ ಪಾವತಿ: ಸಚಿವ ಕೆ.ವೆಂಕಟೇಶ್!

PUC Status Check-ಮೊಬೈಲ್ ನಲ್ಲಿ ಫಲಿತಾಂಶವನ್ನು ಚೆಕ್ ಮಾಡುವ ವಿಧಾನ:

ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಲು ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಬಹುದಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯಿಂದ ಅಧಿಕೃತವಾಗಿ ಬಿಡುಗಡೆ ಮಾಡಿರುವ ತಂತ್ರಾಂಶವನ್ನು ಭೇಟಿ ಮಾಡಿ ಮನೆಯಲ್ಲೇ ಕುಳಿತು ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು.

Step-1: ಪ್ರಥಮದಲ್ಲಿ ಈ PUC Status Check-2025 ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ದ್ವಿತೀಯ ಪಿಯುಸಿ ಫಲಿತಾಂಶದ ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Mobile canteen subsidy-ಫಾಸ್ಟ್ ಫುಡ್ ವಾಹನ ಖರೀದಿಗೆ ₹5 ಲಕ್ಷದ ವರೆಗೆ ಸಬ್ಸಿಡಿ ಪಡೆಯಲು ಅರ್ಜಿ ಅಹ್ವಾನ!

2nd PUC

Step-2: ಫಲಿತಾಂಶ ಚೆಕ್ ಮಾಡುವ ವೆಬ್ಸೈಟ್ ಅನ್ನು ಪ್ರವೇಶ ಮಾಡಿದ ನಂತರ ಇಲ್ಲಿ ಮುಖಪುಟದಲ್ಲಿ ಕಾಣುವ "2025 ದ್ವಿತೀಯ ಪಿಯುಸಿ ಪರೀಕ್ಷೆ-1 ರ ಫಲಿತಾಂಶ ಪ್ರಕಟಣೆ / II PUC EXAM-1 RESULT 2025 announced on 08/04/2025" ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ತದನಂತರ ಈ ಪೇಜ್ ನಲ್ಲಿ "Enter Reg No" ಕಾಲಂ ನಲ್ಲಿ ನೋಂದಣಿ ಸಂಖ್ಯೆಯನ್ನು ಹಾಕಿ ಕೆಳಗ ಕಾಣುವ "Select Subject" ನಲ್ಲಿ Science/Arts/Commerce ಅನ್ನು ಆಯ್ಕೆ ಮಾಡಿಕೊಂಡು "Submit" ಬಟನ್ ಮೇಲೆ ಕ್ಲಿಕ್ ಮಾಡಿದರೆ ಫಲಿತಾಂಶವನ್ನು ನೋಡಬಹುದು.

ಕೊನೆಯದಾಗಿ ಒಂದು ಮಾತು:

ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ ಕಾಯುತ್ತಿರುವವರು ಈಗಾಗಲೇ ಫಲಿತಾಂಶವನ್ನು ನೋಡಿರುವವರು ಈ ಮಾತನ್ನು ತಪ್ಪದೇ ಗಮನಿಸಿ “ಫಲಿತಾಂಶ ಏನೇ ಬರಲಿ, ಇದು ನಿಮ್ಮ ಜೀವನದ ಅಂತಿಮ ಗುರಿಯಲ್ಲ. ಧೈರ್ಯದಿಂದ ಮುಂದುವರಿಯಿರಿ, ನಿಮ್ಮ ಭವಿಷ್ಯ ಉಜ್ವಲವಾಗಿರಲಿ"

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: