ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ನಂತರ ಹೊಸ ಬಿಪಿಎಲ್ ಕಾರ್ಡಗಳ(New BPL Card) ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು ಇದರ ಕುರಿತು ಸಾರ್ವಜನಿಕರಿಗೆ ಅಗತ್ಯ ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.
ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಯ ಪ್ರಯೋಜನವನ್ನು ಪಡೆಯಲು ನಕಲಿ ಕಾರ್ಡಗಳ(New BPL Card application) ಹಾವಳಿಯನ್ನು ತಪ್ಪಿಸಲು ಆಹಾರ ಇಲಾಖೆಯ ಮೂಲಕ ರಾಜ್ಯ ಸರ್ಕಾರವು ಹೊಸ ಬಿಪಿಎಲ್ ಕಾರ್ಡಗಳನ್ನು ವಿತರಣೆ ಮಾಡದಂತೆ ಆದೇಶವನ್ನು ನೀಡಲಾಗಿದ್ದು ಈ ಕುರಿತು ಸಾರ್ವಜನಿಕ ವಲಯದಲ್ಲಿ ನಿರಾಸೆಯನ್ನು ಉಂಟು ಮಾಡಿದೆ.
ಇದನ್ನೂ ಓದಿ: Bangalore Weather-ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ! ಕರ್ನಾಟಕ ಹವಾಮಾನ ಮುನ್ಸೂಚನೆ!
ಬಿಪಿಎಲ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಿದವರಿಗೆ ಕಾರ್ಡ ವಿತರಣೆ ಕುರಿತು ಆಹಾರ ಇಲಾಖೆ(Karnataka Food Department) ಅಧಿಕಾರಿಗಳು ಹಂಚಿಕೊಂಡಿರುವ ಮಾಹಿತಿ ವಿವರ ಏನು? ಬಿಪಿಎಲ್ ಕಾರ್ಡಗೆ ಅರ್ಜಿ ಸಲ್ಲಿಸಿದವರು ತಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ಮನೆಯಲ್ಲೇ ಇದ್ದು ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳುವುದು ಹೇಗೆ ಎನ್ನುವ ಮಾಹಿತಿ ಸೇರಿದಂತೆ ಇನ್ನಿತರ ಅಗತ್ಯ ವಿವರವನ್ನು ಈ ಕೆಳಗೆ ಪ್ರಕಟಿಸಲಾಗಿದೆ.
Total BPL Card Application-2.86 ಲಕ್ಷ ಅರ್ಜಿ ವಿಲೇವಾರಿ ಬಾಕಿ:
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಗೆ ಬರುವ ಮುಂಚೆ ಇಂದ ಇಲ್ಲಿಯವರೆಗೆ ಒಟ್ಟು 2.86 ಲಕ್ಷ ಅರ್ಜಿದಾರರು ಹೊಸ ಬಿಪಿಎಲ್ ಕಾರ್ಡ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿರುತ್ತಾರೆ ಎನ್ನುವ ಮಾಹಿತಿಯು ಆಹಾರ ಇಲಾಖೆಯ ಅಂಕಿ-ಅಂಶದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Milk incentive Amount- ರೈತರಿಗೆ ₹400 ಕೋಟಿ ಹಾಲಿ ಪ್ರೋತ್ಸಾಹಧನ ಪಾವತಿ: ಸಚಿವ ಕೆ.ವೆಂಕಟೇಶ್!
BPL Card News-ನಮಗೂ ಅವಕಾಶ ನೀಡಿ ಎನ್ನುತ್ತಿದ್ದಾರೆ ನಾಗರಿಕರು:
ಕಳೆದ 2-3 ತಿಂಗಳ ಹಿಂದೆ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿಯ ಬದಲು ಹಣವನ್ನು ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗುತ್ತಿತ್ತು ಆದರೆ ಈ ಫೆಬ್ರವರಿ-2025 ರಿಂದ ಹೆಚ್ಚುವರಿ ಅಕ್ಕಿಯ ಹಣದ ಬದಲು ಅಕ್ಕಿಯನೇ ರಾಜ್ಯ ಸರ್ಕಾರದಿಂದ ವಿತರಣೆ ಮಾಡಲು ಕ್ರಮಕೈಗೊಳ್ಳಲಾಗಿದ್ದು ಇದೆ ಮಾದರಿಯಲ್ಲಿ ನಮಗೂ ಸಹ ಬಿಪಿಎಲ್ ಕಾರ್ಡಗಳನ್ನು ನೀಡಿ ಎಂದು ಅರ್ಜಿದಾರರು ಆಹಾರ ಇಲಾಕೆಯ ಅಧಿಕಾರಿಗಳಲ್ಲಿ ಮನವಿ ಸಲ್ಲಿಸುತ್ತಿದ್ದಾರೆ.
New BPL Card-ಆಹಾರ ಇಲಾಖೆ ಅಧಿಕಾರಿಗಳ ಉತ್ತರ ಹೀಗಿದೆ:
ಅರ್ಜಿದಾರರು ಆಹಾರ ಇಲಾಖೆ ಅಧಿಕಾರಿಗಳನ್ನು ನೇರವಾಗಿ ಭೇಟಿ ಮಾಡಿ ನಮಗೆ ಬಿಪಿಎಲ್ ಕಾರ್ಡಗಳನ್ನು ವಿತರಣೆ ಮಾಡಿ ಎಂದು ಮನವಿಯನ್ನು ಸಲ್ಲಿಸಿದ್ದು ಇದಕ್ಕೆ ಉತ್ತರವಾಗಿ ಇಲಾಖೆಯ ಅಧಿಕಾರಿಗಳು “ರಾಜ್ಯ ಸರ್ಕಾರದಿಂದಲೇ ಹೊಸ ಬಿಪಿಎಲ್ ಕಾರ್ಡಗಳನ್ನು ವಿತರಣೆ ಮಾಡದಂತೆ ಆದೇಶವನ್ನು ನೀಡಲಾಗಿದ್ದು ಹೊಸ ಬಿಪಿಎಲ್ ಕಾರ್ಡಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡುವಂತೆ ಸರ್ಕಾರದಿಂದ ನಿರ್ದೇಶನ ಬಂದಲ್ಲಿ ಕೂಡಲೇ ನಿಮಗೆ ಬಿಪಿಎಲ್ ಕಾರ್ಡ ನೀಡಲಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ಉತ್ತರಿಸಿದ್ದಾರೆ.
ಹೊಸ ಬಿಪಿಎಲ್ ಕಾರ್ಡ ವಿತರನೆ ಅಧಿಕಾರಿವು ನಮ್ಮ ಕೈಯಲ್ಲಿ ಏನೂ ಇಲ್ಲ ಎಲ್ಲಾ ಸರ್ಕಾರದ ನಿರ್ಧಾರದ ಮೇಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Mobile canteen subsidy-ಫಾಸ್ಟ್ ಫುಡ್ ವಾಹನ ಖರೀದಿಗೆ ₹5 ಲಕ್ಷದ ವರೆಗೆ ಸಬ್ಸಿಡಿ ಪಡೆಯಲು ಅರ್ಜಿ ಅಹ್ವಾನ!
New BPL Card Application Details-ಹೊಸ ಬಿಪಿಎಲ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಿದವರ ವಿವರ ಹೀಗಿದೆ:
- ರಾಜ್ಯಾದ್ಯಂತ ಒಟ್ಟೂ ಸಲ್ಲಿಸಿರುವ ಅರ್ಜಿಗಳ ಸಂಖ್ಯೆ- 11.36 ಲಕ್ಷ
- ಒಟ್ಟು ಪರಿಶೀಲನೆ ಮಾಡಲಾಗಿರುವ ಅರ್ಜಿಗಳು- 5.76 ಲಕ್ಷ
- ಒಟ್ಟು ತಿರಸ್ಕೃತವಾಗಿರುವ ಅರ್ಜಿಗಳು- 2.24 ಲಕ್ಷ
- ಹಿಂಪಡೆದ ಅರ್ಜಿಗಳು- 47,000
- ಹೊಸ ಬಿಪಿಎಲ್ ಕಾರ್ಡ ಪಡೆಯಲು ಅರ್ಹರಿರುವವರು- 2.86 ಲಕ್ಷ
ಇದನ್ನೂ ಓದಿ: PM-Kisan 2025: ಪಿಎಂ ಕಿಸಾನ್ ಯೋಜನೆಯಡಿ 10 ಲಕ್ಷ ರೈತರ ಕೈತಪ್ಪಿದ ಆರ್ಥಿಕ ನೆರವು! ಇಲ್ಲಿದೆ ಅಧಿಕೃತ ಪಟ್ಟಿ!
BPL Card Status-ಅನ್ಲೈನ್ ನಲ್ಲಿ ಬಿಪಿಎಲ್ ಕಾರ್ಡ ಅರ್ಜಿ ಸ್ಥಿತಿಯನ್ನು ಚೆಕ್ ಮಾಡುವ ವಿಧಾನ:
ಈಗಾಗಲೇ ಹೊಸ ಬಿಪಿಎಲ್ ಕಾರ್ಡ ಅನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಿದವರು ತಮ್ಮ ಮೊಬೈಲ್ ಮೂಲಕ ಆಹಾರ ಇಲಾಖೆಯ ಅಧಿಕೃತ ಜಾಲತಾಣವನ್ನು ನೇರವಾಗಿ ಭೇಟಿ ಮಾಡಿ ಈ ಕೆಳಗಿನ ಹಂತಗಳನ್ನು ಅನುಸರಿಸಿ ನಿಮ್ಮ ಅರ್ಜಿಯು ಯಾವ ಹಂತದಲ್ಲಿದೆ ಎನ್ನುವ ಮಾಹಿತಿಯನ್ನು ಒಂದೆರಡು ಕ್ಲಿಕ್ ನಲ್ಲಿ ತಿಳಿಯಬಹುದು.
Step-1: ಮೊದಲಿಗೆ ಈ BPL CARD STATUS CHECK ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಆಹಾರ ಇಲಾಖೆಯ ತಂತ್ರಾಂಶವನ್ನು ಪ್ರವೇಶ ಮಾಡಬೇಕು.
Step-2: ಬಳಿಕ ಇಲ್ಲಿ ಮುಖಪುಟದಲ್ಲಿ ಕಾಣುವ “ಇ-ಸೇವೆಗಳು” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-3: ಮೇಲಿನ ಹಂತಗಳನ್ನು ಪೂರ್ಣಗೊಳಿಸಿದ ನಂತರ ಇಲ್ಲಿ ಎಡಬದಿಯಲ್ಲಿ ಕಾಣುವ “ಇ-ಸ್ಥಿತಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ “ಹೊಸ/ಹಾಲಿ ಪಡಿತರ ಚೀಟಿಯ ಸ್ಥಿತಿ”ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆಯು ಬರುವ ವಿಭಾಗದ ಮೇಲೆ ಕ್ಲಿಕ್ ಮಾಡಬೇಕು.
Step-4: ನಂತರ ಈ ಪೇಜ್ ನಲ್ಲಿ “Application Status of new Ration Card applied/ಹೊಸ ಪಡಿತರ ಚೀಟಿಗೆ ಸಲ್ಲಿಸಲಾದ ಅರ್ಜಿ ಯ ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯ ಸ್ವೀಕೃತಿ ಸಂಖ್ಯೆಯನ್ನು ಹಾಕಿ “Go” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎನ್ನುವ ಮಾಹಿತಿಯು ಗೋಚರಿಸುತ್ತದೆ.