Home Construction-ಕಟ್ಟಡ ನಕ್ಷೆ ಮಂಜೂರಾತಿಯಿಲ್ಲದೆ ಮನೆ ಕಟ್ಟವಂತಿಲ್ಲ: ಸುಪ್ರೀಂ ಕೋರ್ಟ್

June 28, 2025 | Siddesh
Home Construction-ಕಟ್ಟಡ ನಕ್ಷೆ ಮಂಜೂರಾತಿಯಿಲ್ಲದೆ ಮನೆ ಕಟ್ಟವಂತಿಲ್ಲ: ಸುಪ್ರೀಂ ಕೋರ್ಟ್
Share Now:

ಸುಪ್ರೀಂ ಕೋರ್ಟ್(Supreme Court) ಮನೆ ನಿರ್ಮಾಣ ಮಾಡುವ ಸಾರ್ವಜನಿಕರಿಗೆ ಪ್ರಸ್ತುತ ಜಾರಿಯಲ್ಲಿರುವ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು(Home Construction) ಮಾಡಿ ನೂತನ ತೀರ್ಪನ್ನು ಪ್ರಕಟ ಮಾಡಿದ್ದು ಈ ನಿಯಮದ ಪ್ರಕಾರ ಇನ್ಮುಂದೆ ಕಟ್ಟಡ ನಕ್ಷೆಯ ಮಂಜೂರಾತಿ ಮತ್ತು ಸ್ವಾಧೀನ ಪ್ರಮಾಣಪತ್ರ ಇಲ್ಲದೆ ನೀರು ಅಥವಾ ವಿದ್ಯುತ್ ಸಂಪರ್ಕ ಒದಗಿಸುವುದನ್ನು ನಿಷೇಧ ಮಾಡಲಾಗಿದ್ದು ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಮನೆ ನಿರ್ಮಾಣ ಮಾಡುವ ಯೋಜನೆಯನ್ನು ಹಾಕಿಕೊಂಡಿರುವ ನಾಗರಿಕರು ತಪ್ಪದೇ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಅದರಲ್ಲೂ ಬೆಂಗಳೂರಿನಲ್ಲಿ ಮನೆ ನಿರ್ಮಾಣ ಮಾಡುವವರು ತಪ್ಪದೇ ಈ ಮಾಹಿತಿಯನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ.

ಇದನ್ನೂ ಓದಿ: NLM Scheme-ಜಾನುವಾರು ಮಿಷನ್ ಯೋಜನೆಯಡಿ ಕುರಿ ಮೇಕೆ ಕೋಳಿ ಸಾಕಾಣಿಕೆಗೆ ₹ 25.00 ಲಕ್ಷ ಸಬ್ಸಿಡಿ!

ಸುಪ್ರೀಂ ಕೋರ್ಟ್(Supreme Court Order) ನಿಂದ ಇನ್ಮುಂದೆ ಕಟ್ಟಡ ನಕ್ಷೆ ಮಂಜೂರಾತಿ ಇಲ್ಲದೆ ನೀರು-ವಿದ್ಯುತ್ ಸಂಪರ್ಕ ನಿಷೇಧ ಮಾಡಲಾಗಿದ್ದು ಈ ಕ್ರಮದಿಂದ ಯಾವೆಲ್ಲ ನಿಯಮಗಳನ್ನು ಸಾರ್ವಜನಿಕರು ತಪ್ಪದೇ ಪಾಲಿಸಬೇಕು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್‌ ಅವರು ಈ ನಿಯಮದ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಮಾಹಿತಿಯನ್ನು ಸಹ ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

New Home Construction Rule-2.5 ಲಕ್ಷ ಅನಧಿಕೃತ ಕಟ್ಟಡಗಳು:

ರಾಜ್ಯ ಸರ್ಕಾರದ ಅಂಕಿ-ಅಂಶದ ಪ್ರಕಾರ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಒಟ್ಟು ಕಟ್ಟಡಗಳು 2.5 ಲಕ್ಷ ಇದ್ದು ಈ ನಿಯಮದಿಂದ 2.5 ಲಕ್ಷ ಕುಟುಂಬಗಳಿಗೆ ಪರಿಣಾಮ ಬೀರಲಿದ್ದು ಇನ್ನುಂದೆ ಹೊಸ ಮನೆ/ಕಟ್ಟಡವನ್ನು ಕಟ್ಟಲು ಯೋಜನೆಯನ್ನು ಹಾಕಿಕೊಂಡಿರುವವರು ತಪ್ಪದೇ ಸ್ಥಳೀಯ ಪ್ರಾಧಿಕಾರವನ್ನು ಭೇಟಿ ಅಗತ್ಯ ಅನುಮತಿಗಳನ್ನು ಪಡೆದು ಕಟ್ಟಡ/ಮನೆಯನ್ನು ನಿರ್ಮಾಣ ಮಾಡಲು ಆರಂಭಿಸುವುದು ಉತ್ತಮ ನಿರ್ಣಯವಾಗಿದೆ.

ಇದನ್ನೂ ಓದಿ: Kharif Crop Survey-2025: ಮುಂಗಾರು ಬೆಳೆ ಸಮೀಕ್ಷೆ ರೈತರ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ!

Home Construction Permission-ಅನುಮತಿಯಿಲ್ಲದೆ ಮನೆ ಕಟ್ಟಬೇಡಿ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌

ಕಟ್ಟಡ ನಕ್ಷೆ ಮಂಜೂರು, ಸ್ವಾಧೀನ ಪ್ರಮಾಣಪತ್ರ ಇಲ್ಲದೆ ನೀರು ಹಾಗೂ ವಿದ್ಯುತ್‌ ಸಂಪರ್ಕ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿದೆ. ಹೀಗಾಗಿ, ಅನುಮತಿ ಇಲ್ಲದೆ ಜನರು ಮನೆ ಕಟ್ಟಬಾರದು ಎಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್‌ ಅವರು ತಿಳಿಸಿದ್ದಾರೆ.

Construction Permission Application-ಅನುಮತಿ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು?

ಸಾರ್ವಜನಿಕರು ಮನೆ/ಕಟ್ಟಡ ನಿರ್ಮಾಣ ಮಾಡಲು ಅಗತ್ಯ ಅನುಮತಿಗಳನ್ನು ಪಡೆಯಲು ಬೆಂಗಳೂರಿನವರು BBMP/ಸ್ಥಳೀಯ ನಗರ ಪ್ರಾಧಿಕಾರದ ಕಚೇರಿಯನ್ನು ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಅನುಮತಿಯನ್ನು ಪಡೆಯಬೇಕು.

ಇದನ್ನು ಹೊರತುಪಡಿಸಿ ಇತರೆ ನಗರಗಳ ನಾಗರಿಕರು ಮಹಾನಗರ ಪಾಲಿಕೆ ಕಚೇರಿ/ಸ್ಥಳೀಯ ನಗರ ಪ್ರಾಧಿಕಾರದ ಕಚೇರಿಯನ್ನು ಭೇಟಿ ಮಾಡಬೇಕು, ಗ್ರಾಮೀಣ ಭಾಗದ ಜನರು ಗ್ರಾಮ ಪಂಚಾಯತಿಯಲ್ಲಿ ಅಗತ್ಯ ಅನುಮತಿಗಳನ್ನು ಪಡೆಯಬಹುದು.

ಇದನ್ನೂ ಓದಿ: Nigama Yojanegalu-ರಾಜ್ಯದ 11 ನಿಗಮಗಳಲ್ಲಿ ವಿವಿಧ ಯೋಜನೆಯಡಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ!

Documents-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

  • ಅರ್ಜಿದಾರರ ಆಧಾರ್ ಕಾರ್ಡ/Aadhar
  • ಆಸ್ತಿಗೆ ಸಂಬಂಧಪಟ್ಟ ಮಾಲೀಕತ್ವ ದಾಖಲೆಗಳು/Property Documents
  • ಪೋಟೋ/Photo
  • ಅರ್ಜಿ ನಮೂನೆ/Application Form
  • ಮೊಬೈಲ್ ನಂಬರ್/Mobile

Supreme Court Order-ಸುಪ್ರೀಂ ಕೋರ್ಟ್ ತೀರ್ಪಿನ ಮಹತ್ವ:

ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿರುವುದು ಇತ್ತೀಚೆಗಷ್ಟೆ, ಮತ್ತು ಇದು ಆರೋಗ್ಯಕರ ಮತ್ತು ಯೋಜಿತ ನಗರಾಭಿವೃದ್ಧಿಗೆ ಒತ್ತು ನೀಡುವ ಉದ್ದೇಶವನ್ನು ಒಳಗೊಂಡಿದೆ. ಕೋರ್ಟ್‌ನ ಅಭಿಪ್ರಾಯದ ಪ್ರಕಾರ, ಅನಧಿಕೃತ ಕಟ್ಟಡಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಆರ್ಥಿಕ ಮತ್ತು ಪರಿಸರ ಸಮಸ್ಯೆಗಳಿಗೆ ಕಾರಣವಾಗಬಹುದು.

ಉದಾಹರಣೆಗೆ, ಯೋಜನೆ ಇಲ್ಲದೆ ಕಟ್ಟಡಗಳು ನೀರಿನ ಸಂಪನ್ಮೂಲಗಳ ಮೇಲೆ ಒತ್ತಡ ಉಂಟು ಮಾಡಬಹುದು ಮತ್ತು ಭೂ ಸವಕಾಶಿಕತೆಯನ್ನು ಕಡಿಮೆ ಮಾಡಬಹುದು. ಈ ತೀರ್ಪು 2024ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಮತ್ತೊಂದು ತೀರ್ಪುವನ್ನು ಪೂರಕವಾಗಿ ಕಾಣಬಹುದು, ಇದರಲ್ಲಿ ಸರ್ಕಾರಗಳು ಒತ್ತಾಯಿಸುವ ಪರವಾನಗಿ ಶುಲ್ಕಗಳನ್ನು ರದ್ದುಗೊಳಿಸಲಾಗಿತ್ತು ಈ ಎರಡೂ ತೀರ್ಪುಗಳು ಆಸ್ತಿ ಹಕ್ಕುಗಳ ರಕ್ಷಣೆಗೆ ಒತ್ತು ನೀಡುತ್ತವೆ, ಆದರೆ ಜನರಿಗೆ ತಕ್ಷಣದ ಸವಾಲುಗಳನ್ನೂ ಎದುರಿಸಬೇಕಾಗಿದೆ.

ಇದನ್ನೂ ಓದಿ: Puc Scholarship-ಪಿಯುಸಿಯಲ್ಲಿ ಉತ್ತಮ ಅಂಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ!

ಕರ್ನಾಟಕದಲ್ಲಿ, ಈ ತೀರ್ಪು ಖಾಸಗಿ ಮತ್ತು ಸರ್ಕಾರಿ ಆಸ್ತಿಗಳ ಮೇಲೆ ಪ್ರತ್ಯಕ್ಷ ಪರಿಣಾಮ ಬೀರಬಹುದು. ಉದಾಹರಣೆಗೆ, ಬೆಂಗಳೂರು ಮತ್ತು ಇತರೆ ಪ್ರಮುಖ ನಗರಗಳಲ್ಲಿ ಅನೇಕ ಜನರು ಆರ್ಥಿಕ ಸೀಮಿತಿಗಳ ಕಾರಣದಿಂದಾಗಿ ಅಥವಾ ನಿಯಮಗಳ ಬಗ್ಗೆ ಅಜ್ಞಾನದಿಂದ ಕಟ್ಟಡ ನಕ್ಷೆಯ ಮಂಜೂರಾತಿ ಇಲ್ಲದೆ ಮನೆಗಳನ್ನು ಕಟ್ಟಿದ್ದಾರೆ. ಈಗ, ಈ ಮನೆಗಳಿಗೆ ನೀರು ಮತ್ತು ವಿದ್ಯುತ್ ಸಂಪರ್ಕವನ್ನು ತಡೆಹಿಡಿಯುವ ಸಾಧ್ಯತೆ ಇದೆ.

Home construction rules-2025: ಕರ್ನಾಟಕದ ಕಟ್ಟಡ ನಿಯಮಗಳ ಹಿನ್ನೆಲೆ:

ಕರ್ನಾಟಕದಲ್ಲಿ ಕಟ್ಟಡ ನಿಯಮಗಳು ಕಳೆದ ಕೆಲವು ದಶಕಗಳಿಂದ ವಿವಿಧ ಸುಧಾರಣೆಗಳನ್ನು ಕಂಡಿವೆ. 2015ರಲ್ಲಿ, ರಾಜ್ಯ ಸರ್ಕಾರವು "ಅಕ್ರಮ-ಸಕ್ರಮ" ಯೋಜನೆಯನ್ನು ಪರಿಚಯಿಸಿತು, ಇದರ ಮೂಲಕ ಅನಧಿಕೃತ ಕಟ್ಟಡಗಳನ್ನು ನಿಯಮಿತಗೊಳಿಸಲು ಅವಕಾಶ ಮಾಡಿಕೊಡಲಾಗಿತ್ತು. ಈ ಯೋಜನೆಯು ಬೆಂಗಳೂರು ಮಹಾನಗರ ಪಾಲಿಕೆಗೆ (BBMP) ಸುಮಾರು ₹5,000 ಕೋಟಿ ಆದಾಯ ತಂದಿತು, ಆದರೆ ಇದು ಕಾನೂನು ಸವಾಲುಗಳನ್ನು ಎದುರಿಸಿತು.

ಕರ್ನಾಟಕ ಹೈಕೋರ್ಟ್ ಈ ಯೋಜನೆಯ ಮೇಲೆ ತಡೆಯಾಜ್ಞೆ ಜಾರಿಗೊಳಿಸಿತು, ಆದರೆ ಸುಪ್ರೀಂ ಕೋರ್ಟ್ ಇದನ್ನು ಒಪ್ಪಿಕೊಂಡಿತು, ಇತ್ತೀಚೆಗೆ, ಕರ್ನಾಟಕವು ಕಟ್ಟಡ ಉಪನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ. 2024ರಲ್ಲಿ, ಮಳೆ ನೀರ ಇರಿಸಿಕೊಳ್ಳುವ ವ್ಯವಸ್ಥೆ ಮತ್ತು ಅಗ್ನಿ ಸುರಕ್ಷತೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲಾಯಿತು ಈ ಬದಲಾವಣೆಗಳು ಪರಿಸರ ಸಂರಕ್ಷಣೆಗೆ ಒತ್ತು ನೀಡುತ್ತವೆ, ಆದರೆ ಅವುಗಳ ಜಾರಿಯಲ್ಲಿ ತೊಡಕುಗಳು ಕಂಡುಬಂದಿವೆ.

ಇದನ್ನೂ ಓದಿ: Crop Advisory-ಅತೀಯಾದ ಮಳೆಯಿಂದ ಬೆಳೆ ಚೇತರಿಸಿಕೊಳ್ಳಲು ರೈತರು ಈ ಕ್ರಮ ಅನುಸರಿಸಿ!

ಅನಧಿಕೃತ ಕಟ್ಟಡಗಳ ಸಮಸ್ಯೆ:

ಕರ್ನಾಟಕದಲ್ಲಿ ಅನಧಿಕೃತ ಕಟ್ಟಡಗಳ ಸಂಖ್ಯೆ ಗಣನೀಯವಾಗಿ ಏರಿದೆ, ಇದಕ್ಕೆ ನಗರೀಕರಣ ಮತ್ತು ಭೂ ಸೀಮಿತಿಗಳು ಕಾರಣವಾಗಿವೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ, ಭೂ ಮೌಲ್ಯ ದರಗಳು ಗಗನಕ್ಕೇರಿದ್ದು, ಸಾಮಾನ್ಯ ಜನರು ಕಡಿಮೆ ದರದಲ್ಲಿ ಭೂಮಿಯನ್ನು ಖರೀದಿಸಿ ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಇದರ ಫಲವಾಗಿ, ನಗರ ಯೋಜನೆಗಳು ಗದ್ದಲವಾಗುತ್ತವೆ ಮತ್ತು ಪರಿಸರ ಸಮಸ್ಯೆಗಳು ಉದ್ಭವಿಸುತ್ತವೆ.

ಆದಾಗ್ಯೂ, ಈ ಸಮಸ್ಯೆಯ ಪರಿಹಾರ ಹುಡುಕುವಲ್ಲಿ ಸರ್ಕಾರ ಎದುರಿಸುತ್ತಿರುವ ಸವಾಲುಗಳೂ ಇವೆ. ಅಕ್ರಮ-ಸಕ್ರಮ ಯೋಜನೆಯಂತಹ ತಂತ್ರಗಳು ತಾತ್ಕಾಲಿಕ ಪರಿಹಾರವನ್ನು ಒದಗಿಸಬಹುದು, ಆದರೆ ಇದು ದೀರ್ಘಾವಧಿ ಸಮಸ್ಯೆಗಳಿಗೆ ಕಾರಣವಾಗಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: