Milk Incentive-9.07 ಲಕ್ಷ ರೈತರ ಖಾತೆಗೆ 2,854 ಕೋಟಿ ಹಾಲಿನ ಪ್ರೋತ್ಸಾಹಧನ!

July 5, 2025 | Siddesh
Milk Incentive-9.07 ಲಕ್ಷ ರೈತರ ಖಾತೆಗೆ 2,854 ಕೋಟಿ ಹಾಲಿನ ಪ್ರೋತ್ಸಾಹಧನ!
Share Now:

ರಾಜ್ಯ ಸರ್ಕಾರದಿಂದ ಕಳೆದ 2 ವರ್ಷದಲ್ಲಿ 2,854 ಕೋಟಿ ಹಾಲಿನ ಪ್ರೋತ್ಸಾಹಧನವನ್ನು(Karnataka Milk Incentive) ಹಾಲು ಉತ್ಪಾದಕ ರೈತರ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗಿದ್ದು ಪ್ರಸ್ತುತ ಈ ಅಂಕಣದಲ್ಲಿ ಇದರ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಕಳೆದ ಹಲವು ವರ್ಷಗಳಿಂದ KMF ಡೈರಿಗಳಿಗೆ ಹಾಲನ್ನು ಸರಬರಾಜು ಮಾಡುವ ರೈತರಿಗೆ ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದಿಂದ ಪ್ರೋತ್ಸಾಹಧನವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಪ್ರತಿ ತಿಂಗಳು ರೈತರ ಖಾತೆಗೆ ಜಮಾ ಅಗುವ ಹಾಲಿನ ಪ್ರೋತ್ಸಾಹಧನದ ವಿವರವನ್ನು ರೈತರು ತಮ್ಮ ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವ ವಿವರವನ್ನು ಸಹ ಇಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: E-Khatha-ಮನೆಯಲ್ಲೇ ಕುಳಿತು ಇ-ಖಾತಾ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

ಇದಲ್ಲದೇ ರೈತರು ಡಿಬಿಟಿ ಕರ್ನಾಟಕ(DBT Satus Sheck) ಅಪ್ಲಿಕೇಶನ್ ಅನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಇಲ್ಲಿಯವರೆಗೆ ಎಷ್ಟು ಹಣ ಜಮಾ ಅಗಿದೆ? ಬ್ಯಾಂಕ್ ಖಾತೆ ವಿವರ,ಜಮಾ ದಿನಾಂಕ ಇನ್ನಿತರೆ ಅಗತ್ಯ ಮಾಹಿತಿಯನ್ನು ಹೇಗೆ ಪಡೆಯುವುದು ಎನ್ನುವ ಮಾಹಿತಿಯನ್ನು ಸಹ ಇಲ್ಲಿ ಹಂಚಿಕೊಳ್ಳಲಾಗಿದೆ.

Milk Incentive Scheme-ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿಯಾಗಿ ರೂ 5 ಪ್ರೋತ್ಸಾಹಧನ:

KMF ಡೈರಿಗಳಿಗೆ ಹಾಲನ್ನು ಹಾಕುವ ರೈತರಿಗೆ ಪ್ರತಿ ಲೀಟರ್ ಹಾಲಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ರೂ 5 ಪ್ರೋತ್ಸಾಹಧನವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

Milk Incentive-9.07 ಲಕ್ಷ ರೈತರ ಖಾತೆಗೆ 2,854 ಕೋಟಿ ಹಾಲಿನ ಪ್ರೋತ್ಸಾಹಧನ:

ರಾಜ್ಯ ಸರ್ಕಾರದಿಂದ ಕಳೆದ 2 ವರ್ಷದಲ್ಲಿ 2,854 ಕೋಟಿ ಹಾಲಿನ ಪ್ರೋತ್ಸಾಹಧನವನ್ನು ಹಾಲು ಉತ್ಪಾದಕ ರೈತರ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗಿದೆ ಎಂದು ಸರ್ಕಾರದಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

ಇದನ್ನೂ ಓದಿ: Home Subsidy Scheme-ಮೀನುಗಾರಿಕೆ ಇಲಾಖೆಯಿಂದ ಮನೆ ನಿರ್ಮಾಣಕ್ಕೆ ಸಹಾಯಧನ!

Milk Incentive Amount-ಯಾರಿಗೆಲ್ಲ ಈ ಪ್ರೋತ್ಸಾಹಧನ ಸಿಗಲಿದೆ?

ಹಳ್ಳಿ ಮಟ್ಟದಲ್ಲಿರುವ KMF ಡೈರಿಗಳಿಗೆ ಹಾಲನ್ನು ಹಾಕುವ ಎಲ್ಲಾ ರೈತರಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ನೀಡುವ ರೂ 5 ಪ್ರೋತ್ಸಾಹಧನವನ್ನು ಪಡೆಯಲು ಅವಕಾಶವಿರುತ್ತದೆ.

halina dara

Milk Incentive Status Check-ನಿಮ್ಮ ಮೊಬೈಲ್ ನಲ್ಲೇ ಜಮಾ ವಿವರ ಚೆಕ್ ಮಾಡಿ:

ರೈತರು ಯಾವುದೇ ಕಚೇರಿಯನ್ನು ಭೇಟಿ ಮಾಡದೇ ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ ಇಲ್ಲಿಯವರೆಗೆ ಎಷ್ಟು ಮೊತ್ತದ ಹಾಲಿನ ಪ್ರೋತ್ಸಾಹಧನ ಜಮಾ ಅಗಿದೆ ಎನ್ನುವ ಮಾಹಿತಿಯನ್ನು ತಮ್ಮ ಮನೆಯಲ್ಲೇ ಇದ್ದು ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು.

Step-1: ಮೊದಲಿಗೆ ಇಲ್ಲಿ ಕ್ಲಿಕ್ ಮಾಡಿ "Download Now" ಗೂಗಲ್ ಪ್ಲೈ ಸ್ಟೋರ್ ಪ್ರವೇಶ ಮಾಡಿ ಅಧಿಕೃತ ರಾಜ್ಯ ಸರ್ಕಾರದ "DBT KARNATAKA" ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ.

ಇದನ್ನೂ ಓದಿ: Kotak Scholarships-2025: ಕೋಟಕ್ ಕನ್ಯಾ ಸ್ಕಾಲರ್‌ಶಿಪ್ ಪಡೆಯಲು ಅರ್ಜಿ ಆಹ್ವಾನ!

Step-2: ನಂತರ ಅಪ್ಲಿಕೇಶನ್ ಅನ್ನು ಒಪನ್ ಮಾಡಿಕೊಂಡು ರೈತರು ತಮ್ಮ 12 ಅಂಕಿಯ ಆಧಾರ್ ಕಾರ್ಡ ನಂಬರ್ ಅನ್ನು ಹಾಕಿ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನಮೂದಿಸಿ ಮಾಡಲು ನಾಲ್ಕು ಅಂಕಿಯ ಪಾಸ್ವರ್ಡ ಅನ್ನು ರಚನೆ ಮಾಡಿಕೊಂಡು ಮುಂದುವರೆಯಬೇಕು.

Step-3: ಮೇಲಿನ ಹಂತಗಳನ್ನು ಅನುಸರಿಸಿ ಪಾಸ್ವರ್ಡ ಅನ್ನು ರಚನೆ ಮಾಡಿಕೊಂಡ ನಂತರ "Login" ಬಟನ್ ಮೇಲೆ ಕ್ಲಿಕ್ ಮಾಡಿ ನಾಲ್ಕು ಅಂಕಿಯ ಪಾಸ್ವರ್ಡ ಅನ್ನು ಹಾಕಿ ಲಾಗಿನ್ ಅಗಬೇಕು. ಬಳಿಕ ಇಲ್ಲಿ ಮುಖಪುಟದಲ್ಲಿ ಕಾಣುವ "ಪಾವತಿ ಸ್ಥಿತಿ/Payment Status" ಬಟನ್ ಮೇಲೆ ಕ್ಲಿಕ್ ಮಾಡಿ "ಹಾಲಿನ ಪ್ರೋತ್ಸಾಹಧನ" ಎಂದು ಕಾಣುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ತಿಂಗಳುವಾರು ಇಲ್ಲಿಯವರೆಗೆ ಎಷ್ಟು ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಅಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.

KMF

ಇದನ್ನೂ ಓದಿ: Maize Fall Armyworm-ಮೆಕ್ಕೆಜೋಳಕ್ಕೆ ಸೈನಿಕ ಹುಳು ಬಾಧೆ! ನಿಯಂತ್ರಿಸಲು ಈ ಕ್ರಮ ಅನುಸರಿಸಿ!

Reason For Milk Incentive Not Received-ಹಾಲಿನ ಪ್ರೋತ್ಸಾಹಧನ ಜಮಾ ಅಗದಿರಲು ಪ್ರಮುಖ ಕಾರಣಗಳು:

ರೈತರ ಖಾತೆಗೆ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡುವ ಹಾಲಿನ ಪ್ರೋತ್ಸಾಹಧನ ಜಮಾ ಅಗದಿರಲು ಪ್ರಮುಖ ಕಾರಣಗಳ ಪಟ್ಟಿ ಈ ಕೆಳಗಿನಂತಿವೆ.

1) ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಇಲ್ಲದೇ ಇರುವುದು:

ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿ DBT ಮೂಲಕ ಸಹಾಯಧನವನ್ನು ಪಡೆಯಲು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಮಾಡಿರುವುದು ಕಡ್ಡಾಯವಾಗಿದೆ ಇದರಂತೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಅಗದೇ ಇದ್ದಲ್ಲಿ ಹಾಲಿನ ಪ್ರೋತ್ಸಾಹಧನ ಜಮಾ ಅಗುವುದಿಲ್ಲ.

ಇದನ್ನೂ ಓದಿ: Bele Vime Amount-2025: ಈ ಜಿಲ್ಲೆಯ ರೈತರ ಖಾತೆಗೆ 30 ಕೋಟಿ ಬೆಳೆ ವಿಮೆ ಬಿಡುಗಡೆ!

2) ಇ-ಕೆವೈಸಿ ಮಾಡಿಸದೇ ಇದ್ದಲ್ಲಿ:

ಬ್ಯಾಂಕ್ ಅಕೌಂಟ್ ಇರುವ ಶಾಖೆಯಲ್ಲಿ ಅನೇಕ ವರ್ಷಗಳಿಂದ ಪಾನ್ ಕಾರ್ಡ ಆಧಾರ್ ಕಾರ್ಡ ಎರಡನ್ನು ನೀಡದೇ ಇ-ಕೆವೈಸಿ ಮಾಡಿಸದೇ ಇದ್ದಲ್ಲಿ ನಿಮ್ಮ ಬ್ಯಾಂಕ್ ಖಾತೆಯು ನಿಷ್ಕ್ರ‍ಿಯಗೊಂಡಿದ್ದರೆ ನಿಮ್ಮ ಹಾಲಿನ ಪ್ರೋತ್ಸಾಹಧನ ಜಮಾ ಅಗುವುದಿಲ್ಲ. ಅದ್ದರಿಂದ ಇ-ಕೆವೈಸಿ ಮಾಡಿಸದ ರೈತರು ಬ್ಯಾಂಕ್ ಖಾತೆಯಿರುವ ಶಾಖೆಯನ್ನು ಭೇಟಿ ಮಾಡಿ ಇ-ಕೆವೈಸಿ ಮಾಡಿಕೊಳ್ಳಿ.

3) ಬ್ಯಾಂಕ್ ಖಾತೆ ವಿವರ ಮತ್ತು ಆಧಾರ್ ಕಾರ್ಡ ವಿವರ ತಾಳೆಯಾಗದೇ ಇದ್ದಲ್ಲಿ:

ರೈತರು ಪ್ರತಿ ನಿತ್ಯ ಹಾಲನ್ನು ಹಾಕುವ ಡೈರಿಯಲ್ಲಿ ಹಾಲಿನ ಪ್ರೋತ್ಸಾಹಧನ ಪಡೆಯಲು ಸಲ್ಲಿಸಿದ ದಾಖಲಾತಿಗಳಲ್ಲಿ ಬ್ಯಾಂಕ್ ಖಾತೆ ವಿವರ ಮತ್ತು ಆಧಾರ್ ಕಾರ್ಡ ವಿವರ ತಾಳೆಯಾಗದೇ ಇದ್ದರು ಸಹ ಹಾಲಿನ ಪ್ರೋತ್ಸಾಹಧನ ಜಮಾ ಅಗುವುದಿಲ್ಲ. ಅದ್ದರಿಂದ ಒಮ್ಮೆ ಈ ದಾಖಲೆಗಳನ್ನು ಚೆಕ್ ಮಾಡಿಕೊಳ್ಳಿ.

Milk Incentive Helpline Numbers-ಹಾಲಿನ ಪ್ರೋತ್ಸಾಹಧನ ವರ್ಗಾವಣೆ ಕುರಿತು ಮಾಹಿತಿಯನ್ನು ಪಡೆಯಲು ನಿಮ್ಮ ಜಿಲ್ಲೆಯ ಅಧಿಕಾರಿಗಳ ಮೊಬೈಲ್ ಸಂಖ್ಯೆಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ-Download Now

ಅಧಿಕೃತ ವೆಬ್ಸೈಟ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: