Home Subsidy Scheme-ಮೀನುಗಾರಿಕೆ ಇಲಾಖೆಯಿಂದ ಮನೆ ನಿರ್ಮಾಣಕ್ಕೆ ಸಹಾಯಧನ!

July 5, 2025 | Siddesh
Home Subsidy Scheme-ಮೀನುಗಾರಿಕೆ ಇಲಾಖೆಯಿಂದ ಮನೆ ನಿರ್ಮಾಣಕ್ಕೆ ಸಹಾಯಧನ!
Share Now:

ಮೀನುಗಾರಿಕೆ ಇಲಾಖೆಯಿಂದ 2024-25 ನೇ ಸಾಲಿನ ಮತ್ಸ್ಯಾಶ್ರಯ ಯೋಜನೆಯಡಿ(Home Subsidy Yojana) ಮೀನುಗಾರರಿಗೆ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಲಾಗುತ್ತಿದ್ದು, ಅರ್ಹ ಫಲಾನುಭವಿಗಳು ಈ ಯೋಜನೆಯಡಿ ಸಬ್ಸಿಡಿಯಲ್ಲಿ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಅವಕಾಶವಿರುತ್ತದೆ.

ಮತ್ಸ್ಯಾಶ್ರಯ ಯೋಜನೆಯಡಿ(Karnataka Fisheries department) ಮನೆ ನಿರ್ಮಾಣ ಮಾಡಿಕೊಳ್ಳು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಜಿಲ್ಲಾವಾರು ಹಂಚಿಕೆ ಮಾಡಲಾದ ಮನೆಗಳ ಅಂಕಿ-ಅಂಶ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: E-Khatha-ಮನೆಯಲ್ಲೇ ಕುಳಿತು ಇ-ಖಾತಾ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

2024-25ನೇ ಸಾಲಿನ ಆಯವ್ಯಯದಲ್ಲಿ ರಾಜ್ಯ ಸರ್ಕಾರದಿಂದ ಘೋಷಣೆ ಮಾಡಿದಂತೆ(Fisheries department Yoajne) ಒಟ್ಟು 10,000 ಸಾವಿರ ವಸತಿ ರಹಿತ ಮೀನುಗಾರರಿಗೆ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಮನೆಗಳನ್ನು ನಿರ್ಮಿಸಲು ಸಹಾಯಧನವನ್ನು ನೀಡಲಾಗುವುದು ಎಂದು ತಿಳಿಸಲಾಗಿತ್ತು ಇದರನ್ವಯ ಪ್ರಸ್ತುತ 5,600 ಮನೆ ಹಂಚಿಕೆಗೆ ಅಧಿಕೃತ ಅನುಮೋದನೆಯನ್ನು ನೀಡಲಾಗಿದೆ.

Home Subsidy Scheme In Karnataka-ಪ್ರಸ್ತುತ 5,600 ಮನೆ ಹಂಚಿಕೆ ಅನುಮೋದನೆ:

ಈ ಯೋಜನೆಯನ್ನು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ(RGHCL)ದವರು ಅನುಸರಿಸುವ ಫಲಾನುಭವಿ ಆಧಾರಿತ ವಿಧಾನ ಹಾಗೂ ಸದರಿಯವರು ಅನುಸರಿಸುವ ತಂತ್ರಜ್ಞಾನವನ್ನೇ(ASHRAYA APP)ಅಳವಡಿಸಿಕೊಂಡು ಷರತ್ತು ಮತ್ತು ನಿಬಂಧನೆಗಳನ್ನು ಅನುಸರಿಸಿ ಮೀನುಗಾರಿಕೆ ಇಲಾಖೆಯ ಅಂಗ ಸಂಸ್ಥೆಯಾದ ಕರ್ನಾಟಕ ಮೀನುಗಾರಿಕೆ ಅಭಿವೃದ್ದಿ ನಿಗಮ ನಿಯಮಿತ, ಮಂಗಳೂರು ಇವರ ಮುಖಾಂತರ 5,600 ಮನೆ ಹಂಚಿಕೆಗೆ ಅಧಿಕೃತವಾರು ರಾಜ್ಯ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆಯನ್ನು ನೀಡಿ ಆದೇಶವನ್ನು ಹೊರಡಿಸಲಾಗಿದೆ.

ಇದನ್ನೂ ಓದಿ: Free fast food training-ಉಚಿತ ಫಾಸ್ಟ್ ಫುಡ್ ಉದ್ದಿಮೆ ತರಬೇತಿಗೆ ಅರ್ಜಿ ಆಹ್ವಾನ!

Fisheries Department Scheme-ಜಿಲ್ಲಾವಾರು ಹಂಚಿಕೆ ಮಾಡಲಾದ ಮನೆಗಳ ವಿವರ ಹೀಗಿದೆ:

2024-25 ನೇ ಸಾಲಿನಲ್ಲಿ ಮತ್ಸ್ಯಾಶ್ರಯ ಯೋಜನೆಯಡಿ ವಿವಿಧ ಜಿಲ್ಲೆಗಳಿಗೆ ಹಂಚಿಕೆ ಮಾಡಲಾದ ಮನೆಗಳ ಅಂಕಿ-ಅಂಶ ವಿವರ ಈ ಕೆಳಗಿನಂತಿದೆ.

ಬೆಳಗಾವಿ-450
ಬಾಗಲಕೋಟೆ-175
ವಿಜಯಪುರ-200
ಕಲಬುರಗಿ-225
ಯಾದಗಿರಿ-100
ಬೀದರ್-150
ರಾಯಚೂರು-175
ಕೊಪ್ಪಳ-125
ಧಾರವಾಡ-175
ಉತ್ತರಕನ್ನಡ-150
ಹಾವೇರಿ-150
ವಿಜಯನಗರ-125

ಇದನ್ನೂ ಓದಿ: Maize Fall Armyworm-ಮೆಕ್ಕೆಜೋಳಕ್ಕೆ ಸೈನಿಕ ಹುಳು ಬಾಧೆ! ನಿಯಂತ್ರಿಸಲು ಈ ಕ್ರಮ ಅನುಸರಿಸಿ!
ಬಳ್ಳಾರಿ-125
ಚಿತ್ರದುರ್ಗ-150
ದಾವಣಗೆರೆ-175
ಶಿವಮೊಗ್ಗ-175
ಉಡುಪಿ-125
ತುಮಕೂರು-275
ಚಿಕ್ಕಮಗಳೂರು-125
ಚಿಕ್ಕಬಳ್ಳಾಪುರ-175
ಕೋಲಾರ-150
ಬೆಂಗಳೂರು ನಗರ-700
ಬೆಂಗಳೂರು ಗ್ರಾಮಾಂತರ-100
ರಾಮನಗರ-100
ಮಂಡ್ಯ-175
ಹಾಸನ-175
ದಕ್ಷಿಣಕನ್ನಡ-200
ಕೊಡಗು-50
ಮೈಸೂರು-275
ಚಾಮರಾಜನಗರ-100

ಇದನ್ನೂ ಓದಿ: Bele Vime Amount-2025: ಈ ಜಿಲ್ಲೆಯ ರೈತರ ಖಾತೆಗೆ 30 ಕೋಟಿ ಬೆಳೆ ವಿಮೆ ಬಿಡುಗಡೆ!

Fisheries department home subsidy

Who Can Apply-ಅರ್ಜಿ ಸಲ್ಲಿಸಲು ಅರ್ಹರು:

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಅರ್ಜಿದಾರರು ಮೀನುಗಾರರ ಸಂಘದಲ್ಲಿ ನೋಂದಾಯಿತ ಸದಸ್ಯರಾಗಿ ವಸತಿ ರಹಿತರಾಗಿರಬೇಕು.

ಅರ್ಜಿದಾರರ ಅಥವಾ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಕರ್ನಾಟಕದ ಯಾವುದೇ ಭಾಗದಲ್ಲಿ ಸ್ವಂತ ಮನೆಯನ್ನು ಹೊಂದಿರಬಾರದು ಮತ್ತು ಶಿಥಿಲಗೊಂಡ ಮನೆ ಅಥವಾ ಗುಡಿಸಲಿನಲ್ಲಿ ವಾಸಿಸುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಈ ಹಿಂದೆ ವಸತಿ ಯೋಜನೆಯಡಿ ಸೌಲಭ್ಯವನ್ನು ಪಡೆದಿರಬಾರದು.

ಇದನ್ನೂ ಓದಿ: Diploma Veterinary Admission-ಪಶುಸಂಗೋಪನೆ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ! ತಿಂಗಳಿಗೆ ರೂ 1,000 ಶಿಷ್ಯವೇತನ!

How To Apply-ಅರ್ಜಿಯನ್ನು ಸಲ್ಲಿಸುವ ವಿಧಾನ:

ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ನಿಮ್ಮ ತಾಲ್ಲೂಕಿನ ಮೀನುಗಾರಿಕೆ ಇಲಾಖೆಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Documents-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

  • ಅರ್ಜಿದಾರರ ಆಧಾರ್ ಕಾರ್ಡ
  • ಪೋಟೋ
  • ವಸತಿ ರಹಿತ ದೃಡೀಕರಣ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಬುಕ್
  • ಮೊಬೈಲ್ ನಂಬರ್
  • ಕುಟುಂಬದ ರೇಶನ್ ಕಾರ್ಡ್ ಪ್ರತಿ

ಇದನ್ನೂ ಓದಿ: Free Beautician Training-ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ!

For More Information-ಹೆಚ್ಚಿನ ಮಾಹಿತಿಗಾಗಿ:

Fisheries department helpline-ಮೀನುಗಾರಿಕೆ ಇಲಾಖೆಯ ಸಹಾಯವಾಣಿ 8277200300
Fisheries department websiteಅಧಿಕೃತ ಆದೇಶ ಪ್ರತಿ-Download Now

WhatsApp Group Join Now
Telegram Group Join Now
Share Now: