PMAY Yojana-ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ₹2.5 ಲಕ್ಷ ಸಬ್ಸಿಡಿ!ಈಗಲೇ ಅರ್ಜಿ ಸಲ್ಲಿಸಿ!

July 10, 2025 | Siddesh
PMAY Yojana-ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ₹2.5 ಲಕ್ಷ ಸಬ್ಸಿಡಿ!ಈಗಲೇ ಅರ್ಜಿ ಸಲ್ಲಿಸಿ!
Share Now:

ಪ್ರತಿಯೊಬ್ಬ ನಾಗರಿಕರಿಗು ತಮ್ಮದೇ ಅದ ಸ್ವಂತ ಮನೆಯನ್ನು ಹೊಂದಬೇಕು ಎನ್ನುವ ಕನಸು ಇದ್ದೇ ಇರುತ್ತದೆ ಈ ಕನಸಿಗೆ ರೆಕ್ಕೆ-ಪುಕ್ಕ ಕಟ್ಟಲು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆ(Pradhan Mantri Awas Yojana) ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ₹2.5 ಲಕ್ಷದ ವರೆಗೆ ಸಬ್ಸಿಡಿಯನ್ನು ನೀಡಲಾಗುತ್ತದೆ. ಈ ಯೋಜನೆಯ ಕುರಿತು ಒಂದಿಷ್ಟು ಅಗತ್ಯ ವಿವರವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಸಹಯೋಗದಲ್ಲಿ PMAY 2.0 ಯೋಜನೆಯ ಮೂಲಕ(Awas Yojana Application) ಬಡ ಮತ್ತು ಮಧ್ಯಮ ವರ್ಗದ 1 ಕೋಟಿ ಜನರಿಗೆ ಸ್ವಂತ ಮನೆಯನ್ನು ಹೊಂದಲು ಆರ್ಥಿಕ ನೆರವನ್ನು ಒದಗಿಸುವ ಗುರಿಯನ್ನು ರೂಪಿಸಿದ್ದು, ಅರ್ಹ ನಾಗರಿಕರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಅವಕಾಶವಿರುತ್ತದೆ.

ಇದನ್ನೂ ಓದಿ: Free Motor Repair-ಉಚಿತ ಎಲೆಕ್ಟ್ರಿಷಿಯನ್ ಮತ್ತು ಮೋಟರ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿ ಯಾರೆಲ್ಲ(Home Subsidy Scheme) ಅರ್ಜಿ ಸಲ್ಲಿಸಿ ಪ್ರಯೋಜನವನ್ನು ಪಡೆದುಕೊಳ್ಳಬಹುದು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಅರ್ಜಿ ವಿಲೇವಾರಿ ಪ್ರಕ್ರಿಯೆ ಸೇರಿದಂತೆ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಸಲಾಗಿದೆ.

PMAY 2.0 ಯೋಜನೆ 2029ರ ವರೆಗೆ ವಿಸ್ತರಣೆ:

ಕೇಂದ್ರ ಸರಕಾರದಿಂದ ಪ್ರಧಾನ ಮಂತ್ರಿ ಆವಾಸ್‌ ಯೋಜನೆ- ಅರ್ಬನ್‌ 2.0 ಯ ಅಧಿಕೃತ ಮಾರ್ಗಸೂಚಿಯನ್ನು ಬಿಡುಗಡೆ(PMAY 2.0 Yojana application) ಮಾಡಲಾಗಿದ್ದು 2024ರ ಸೆಪ್ಟೆಂಬರ್‌ 1ರಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು ಮುಂದಿನ 5 ವರ್ಷಗಳ ಕಾಲ ಅಂದರೆ 2029ರ ವರೆಗೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ.

Who can apply for PMAY 2.0-ಅರ್ಜಿ ಸಲ್ಲಿಸಲು ಅರ್ಹರು:

ಅರ್ಜಿದಾರರು ಭಾರತೀಯ ನಿವಾಸಿಯಾಗಿರಬೇಕು.

ಅರ್ಜಿದಾರರು ಆರ್ಥಿಕವಾಗಿ ದುರ್ಬಲ ವರ್ಗ (EWS), ಕಿರಿಯ ಆದಾಯ ವರ್ಗ (LIG), ಮತ್ತು ಮಧ್ಯಮ ಆದಾಯ ವರ್ಗ (MIG)ದವರಾಗಿರಬೇಕು.

ಅರ್ಜಿದಾರರ ಕುಟುಂಬವು ಅರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಬೇಕು.

ಇದನ್ನೂ ಓದಿ: Horticulture Schemes-ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿಯಲ್ಲಿ ಪವರ್ ಸ್ಪ್ರೇಯರ್,ದೋಟಿ, ಪವರ್ ವೀಡರ್ ಪಡೆಯಲು ಅರ್ಜಿ!

ಕಳೆದ 20 ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಯಾವುದೇ ಗೃಹ ಸಂಬಂಧಿತ ಸಹಾಯಧನ ಆಧಾರಿತ ಯೋಜನೆಯಡಿ ಸಬ್ಸಿಡಿಯನ್ನು ಪಡೆದಿರಬಾರದು.

ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸ್ವಂತ ಮನೆಯನ್ನು ಹೊಂದಿರುವವರಿಗೆ ಅವಕಾಶವಿರುವುದಿಲ್ಲ.

ಏಕಾಂಗಿಯಾಗಿ ವಾಸ ಮಾಡುತ್ತಿರುವ ಮಹಿಳೆಯರಿಗೆ, ಅಂಕವಿಕಲರಿಗೆ, ಹಿರಿಯ ನಾಗರಿಕರಿಗೆ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಪ್ರಥಮ ಆದ್ಯತೆಯನ್ನು ನೀಡಲಾಗುತ್ತದೆ ಎಂದು ಅಧಿಕೃತ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Nano Urea-ನಾನ್ಯೋ ಯೂರಿಯಾವನ್ನು ವಿವಿಧ ಬೆಳೆಗಳಲ್ಲಿ ಬಳಕೆ ಮಾಡುವುದು ಹೇಗೆ?

PMAY Application

Required Documents For PMAY 2.0 Scheme-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

  • ಅರ್ಜಿದಾರರ ಆಧಾರ್ ಕಾರ್ಡ ಪ್ರತಿ/Aadhar Card.
  • ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಪ್ರತಿ/Bank Pass Book.
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ/Caste and Income Certificate.
  • ಪೋಟೋ/Photo.
  • ಮೊಬೈಲ್ ನಂಬರ್/Mobile Numebr.
  • ಮನೆ ನಿರ್ಮಾಣದ ಅಧಿಕೃತ ದಾಖಲೆಗಳು/Property documents

PMAY 2.0 Application-ಅರ್ಜಿ ಸಲ್ಲಿಸುವುದು ಹೇಗೆ?

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಸಹಾಯಧನವನ್ನು ಪಡೆಯಲು ಎರಡು ರೀತಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಒಂದನೇಯ ವಿಧಾನ ಅರ್ಜಿದಾರರು ನೇರವಾಗಿ PMAY 2.0 ಯೋಜನೆಯ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ ಅಗತ್ಯ ವಿವರ ಮತ್ತು ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಅರ್ಜಿ ಹಾಕಬಹುದು ಅಥವಾ ಎರಡನೇಯ ವಿಧಾನ ಅರ್ಜಿದಾರರು ತಮ್ಮ ಹತ್ತಿರದ ಗ್ರಾಮ ಒನ್/CSC ಕೇಂದ್ರವನ್ನು/ ಕಂಪ್ಯೂಟರ್ ಸೆಂಟರ್, ಸ್ಥಳೀಯ ನಗರ ಪಂಚಾಯತ್/ಮುನಿಸಿಪಾಲಿಟಿ ಕಚೇರಿಗೆ ಹೋಗಿ ಅಥವಾ ನಗರ ಅಭಿವೃದ್ಧಿ ಪ್ರಾಧಿಕಾರ/ವಾಡ್ ನ ಕಚೇರಿಗಳನ್ನು ಸಂಪರ್ಕಿಸಿ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Ration Card eKYC-ರೇಶನ್ ಕಾರ್ಡ ಇ-ಕೆವೈಸಿ ಕುರಿತು ಮಹತ್ವದ ಮಾಹಿತಿ ಪ್ರಕಟ!

PMAY 2.0 Online Apply Method-ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ:

ಪಿಎಂ ಆವಾಸ್ 2.0 ಯೋಜನೆಯಡಿ ಪ್ರಯೋಜನವನ್ನು ಪಡೆಯಲು ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಮನೆಯಲ್ಲೇ ಇದ್ದು ಯಾವುದೇ ಸರ್ಕಾರಿ ಕಚೇರಿಯನ್ನು ಭೇಟಿ ಮಾಡದೇ ನಿಮ್ಮ ಮೊಬೈಲ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದು.

Step-1: ಪ್ರಥಮದಲ್ಲಿ PMAY ONLINE APPLICATION ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಪಿಎಂ ಆವಾಸ್ 2.0 ಯೋಜನೆಯ ವೆಬ್ಸೈಟ್ ಅನ್ನು ಭೇಟಿ ಮಾಡಿ.

Step-2: ಇದಾದ ಬಳಿಕ ಇಲ್ಲಿ ಮುಖಪುಟದಲ್ಲಿ ಕಾಣುವ "APPLY PMAY-U 2.0" ಆಯ್ಕೆಯ ಮೇಲೆ ಕ್ಲಿಕ್ ಮಾಡಿ "CLICK TO PROCEED" ಬಟನ್ ಮೇಲೆ ಕ್ಲಿಕ್ ಮಾಡಬೇಕು ಬಳಿಕ "PROCEED" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.

ಇದನ್ನೂ ಓದಿ: Bele Samikshe- ರೈತರು ಈ ಕೆಲಸ ಮಾಡದಿದ್ದರೆ ಬೆಳೆ ವಿಮೆ ಇತರೆ ಯೋಜನೆಗಳ ಸೌಲಭ್ಯ ಬಂದ್ ಆಗಲಿದೆ!

Step-3: ನಂತರದಲ್ಲಿ ನಿಮ್ಮ ರಾಜ್ಯ/State, ಮತ್ತು ಅರ್ಜಿದಾರರ ವಾರ್ಷಿಕ ಆದಾಯ ವನ್ನು ನಮೂದಿಸಿ ನಂತರ "Select Mission Component" ಆಯ್ಕೆ ಮಾಡಿಕೊಂಡು ಇಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಗಳಿಗೆ ಟಿಕ್ ಮಾಡಿ ಕೇಳಗೆ ಕಾಣವ "ELIGIBLITY CHECK" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4: ಇದಾದ ನಂತರ ಅರ್ಜಿದಾರರ ಆಧಾರ್ ಕಾರ್ಡ ನಂಬರ್ ಮತ್ತು ಆಧಾರ್ ನಲ್ಲಿರುವಂತೆ ಹೆಸರನ್ನು ಹಾಕಿ "Generare OTP" ಬಟನ್ ಮೇಲೆ ಕ್ಲಿಕ್ ಮಾಡಿ ಒಟಿಪಿ ನಮೂದಿಸಿ ಇಲ್ಲಿ ಕೇಳುವ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕಿಕ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ.

ಇದನ್ನೂ ಓದಿ: Artists Pension Scheme-ಕಲಾವಿದರ ಮಾಸಾಶನ 2,000 ದಿಂದ 2,500 ಕ್ಕೆ ಹೆಚ್ಚಿಸಿ ಆದೇಶ ಪ್ರಕಟ!

Important Notice-ಅರ್ಜಿದಾರರು ಗಮನಿಸಬೇಕಾದ ಪ್ರಮುಖ ಅಂಶಗಳು:

  • ಅರ್ಜಿ ಸಲ್ಲಿಸುವ ಮೊದಲು ಎಲ್ಲ ದಾಖಲೆಗಳು ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಿ.
  • ವಂಚನೆಗಳಿಂದ ದೂರವಿರಿ ಯಾವುದೇ ವೈಯಕ್ತಿಕ ಹಣದ ಪಾವತಿ ಮಾಡುವ ಅಗತ್ಯವಿಲ್ಲ.
  • ಪ್ರತಿ ಹಂತದ ಮಾಹಿತಿ ಪಡೆಯಲು ಅಧಿಕೃತ ವೆಬ್‌ಸೈಟ್ ಅಥವಾ ನಗರ ಅಭಿವೃದ್ಧಿ ಕಚೇರಿ ಸಂಪರ್ಕಿಸಿ.
  • ಅರ್ಜಿ ಸಂಖ್ಯೆಯನ್ನು ಕಾಯ್ದಿರಿಸಿಕೊಳ್ಳಿ,ನಿಮ್ಮ ಅರ್ಜಿಯನ್ನು ಸ್ಥಿತಿಯನ್ನು PMAY ಜಾಲತಾಣವನ್ನು ಪ್ರವೇಶ ಮಾಡಿ ಕಾಲ ಕಾಲಕ್ಕೆ ಚೆಕ್ ಮಾಡಿಕೊಳ್ಳಬಹುದು.

PMAY 2.0 Guidelines-ಯೋಜನೆಯ ಮಾರ್ಗಸೂಚಿ ಕೈಪಿಡಿ- Download Now

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: