Horticulture Diploma-ಎರಡು ವರ್ಷದ ಬಾಗಲಕೋಟೆ ತೋಟಗಾರಿಕೆ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ!

July 18, 2025 | Siddesh
Horticulture Diploma-ಎರಡು ವರ್ಷದ ಬಾಗಲಕೋಟೆ ತೋಟಗಾರಿಕೆ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ!
Share Now:

ಬಾಗಲಕೊಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ(Horticulture University Bagalkot) ಎರಡು ವರ್ಷದ ಡಿಪ್ಲೋಮಾ ತೋಟಗಾರಿಕೆ ಕೋರ್ಸ್ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಇದರ ಕುರಿತು ಸಂಪೂರ್ಣ ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಪ್ರಸ್ತುತ ಈ ಲೇಖನದಲ್ಲಿ ತೋಟಗಾರಿಕೆ ಡಿಪ್ಲೋಮಾ(Horticulture Diploma) ಕೋರ್ಸ್ ಪ್ರವೇಶವನ್ನು ಪಡೆಯಲು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಅರ್ಹತಾ ಮಾನದಂಡಗಳೇನು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಶುಲ್ಕ,ಅಭ್ಯರ್ಥಿ ಆಯ್ಕೆ ವಿಧಾನ,ಡಿಪ್ಲೋಮಾ ತೋಟಗಾರಿಕೆ ಕೋರ್ಸ್ ಕಾಲೇಜು ಮತ್ತು ಲಭ್ಯವಿರುವ ಸೀಟುಗಳ ವಿವರ ಸೇರಿದಂತೆ ಎಲ್ಲಾ ಅವಶ್ಯಕ ಮಾಹಿತಿಯನ್ನು ತಿಳಿಸಲಾಗಿದೆ.

ಇದನ್ನೂ ಓದಿ: Free Skill Training-ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯಲು ಇಲ್ಲಿದೆ ಸುವರ್ಣಾವಕಾಶ!

ರಾಜ್ಯದಲ್ಲಿ ಕೃಷಿ,ಪಶುಸಂಗೊಪನೆ ವಿಷಯದಲ್ಲಿ ಡಿಪ್ಲೋಮಾ ಕೋರ್ಸ್(Diploma Horticulture Application)ಲಭ್ಯವಿರುವ ರೀತಿಯಲ್ಲಿ ತೋಟಗಾರಿಕೆ ವಿಷಯದಲ್ಲಿಯು ಸಹ ಡಿಪ್ಲೋಮಾ ಕೋರ್ಸ್ ಲಭ್ಯವಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಪ್ರವೇಶವನ್ನು ಪಡೆಯಬಹುದು.

Karnataka Horticulture Diploma College-ಡಿಪ್ಲೋಮಾ ತೋಟಗಾರಿಕೆ ಕೋರ್ಸ್ ಕಾಲೇಜು ಮತ್ತು ಲಭ್ಯವಿರುವ ಸೀಟುಗಳ ವಿವರ:

ಕಿತ್ತೂರರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿ, ತಾ: ಗೋಕಾಕ, ಜಿ: ಬೆಳಗಾವಿ- 25 ಸೀಟುಗಳು

ಜಿ ನಾರಾಯಣ ಗೌಡ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ (ಡಿಪ್ಲೋಮಾ) ಕೇಂದ್ರ, ಹೊಗಳಗೆರೆ, ತಾ: ಶ್ರೀನಿವಾಸಪುರ, ಜಿ: ಕೋಲಾರ- 25 ಸೀಟುಗಳು

ಇದನ್ನೂ ಓದಿ: Ganga Kalyana-ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕ!

Horticulture Diploma Eligibility-ಪ್ರವೇಶಕ್ಕೆ ಶೈಕ್ಷಣಿಕ ಅರ್ಹತೆ: :

ಡಿಪ್ಲೋಮಾ (ತೋಟಗಾರಿಕೆ) ಕೋರ್ಸ್‌ಗೆ ಪ್ರವೇಶವನ್ನು ಬಯಸುವ ವಿದ್ಯಾರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಇವರು ನಡೆಸುವ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದ ಅಭ್ಯರ್ಥಿಗೆ 25 ವರ್ಷ ಮೀರಿರಬಾರದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಜುಲೈ 2025

ಇದನ್ನೂ ಓದಿ: Education Loan-ಉನ್ನತ ವ್ಯಾಸಂಗಕ್ಕೆ ಬಡ್ಡಿರಹಿತ 50.00 ಲಕ್ಷ ಸಾಲ ಪಡೆಯಲು ಅರ್ಜಿ ಆಹ್ವಾನ!

Application Fee-ಅರ್ಜಿ ಶುಲ್ಕ:

ಸಾಮಾನ್ಯ ಅಭ್ಯರ್ಥಿಗಳಿಗೆ(GN/OBC): 500 ರೂ
ಪ.ಜಾತಿ ಮತು ಪ.ಪಂಗಡ ವರ್ಗದವರಿಗೆ(SC/ST): 250 ರೂ

Selection Method-ಅಭ್ಯರ್ಥಿ ಆಯ್ಕೆ ವಿಧಾನ:

ಎಸ್.ಎಸ್.ಎಲ್.ಸಿ./ತತ್ಸಮಾನ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಹಾಗೂ ರೋಸ್ಟರ್ ಪದ್ದತಿ ಆಧರಿಸಿ ಅಭ್ಯರ್ಥಿಗಳ ಆಯ್ಕೆಯನ್ನು ಮಾಡಲಾಗುವುದು. ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಮೂಲ ಎಸ್.ಎಸ್.ಎಲ್.ಸಿ ಅಂಕಪಟ್ಟಿ ವಿತರಣೆಯಾಗದಿದ್ದಲ್ಲಿ ತಾವು ಉತ್ತೀರ್ಣರಾದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ನೀಡಿರುವ ಅಂಕಪಟ್ಟಿಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಲಗತ್ತಿಸಬೇಕು. ಸೀಟು ಹಂಚಿಕೆ ನಂತರ ಸಂಬಂಧಪಟ್ಟ ಮಹಾವಿದ್ಯಾಲಯ/ಡಿಪ್ಲೋಮಾ ಕೇಂದ್ರದಲ್ಲಿ ಹಾಜರಾಗುವಾಗ ಕಡ್ಡಾಯವಾಗಿ ಮಂಡಳಿ ನೀಡಿದ ಅಂಕಪಟ್ಟಿಯನ್ನು ಹಾಜರುಪಡಿಸಬೇಕು ತಪ್ಪಿದ್ದಲ್ಲಿ ಪ್ರವೇಶ ರದ್ದಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Scholarship-HDFC ಬ್ಯಾಂಕಿನಿಂದ Parivartan ಯೋಜನೆಯಡಿ ₹75,000 ವಿದ್ಯಾರ್ಥಿವೇತನ!

Horticulture Diploma

How To Apply-ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ದಿನಾಂಕ: 31-07-2025ರ ಒಳಗಾಗಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ(https://uhsbagalkot.karnataka.gov.in) ಮಾಡಿ ಡೌನ್ಲೋಡ್ ಮಾಡಿಕೊಂಡು ಬಳಿಕ ಭರ್ತಿ ಮಾಡಿದ ಅರ್ಜಿಯನ್ನು ವಿಶ್ವವಿದ್ಯಾಲಯದ ಚಲನ್ ಪ್ರತಿ ಮತ್ತು ಎಲ್ಲಾ ಅವಶ್ಯಕ ದಾಖಲೆಗಳೊಂದಿಗೆ ಡೀನ್ ಸ್ನಾತಕೋತ್ತರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಉದ್ಯಾನಗಿರಿ, ನವನಗರ, ಬಾಗಲಕೋಟ-587104 ಇವರಿಗೆ ಕೊನೆಯ ದಿನಾಂಕ: 31-07-2025 ರಂದು ಸಂಜೆ 5.00 ಘಂಟೆಯ ಒಳಗಾಗಿ ಖುದ್ದಾಗಿ ಅಥವಾ ಅಂಚೆಯ ಮೂಲಕ ಸಲ್ಲಿಸಬೇಕು.

Useful Links-ಅರ್ಜಿ ಸಲ್ಲಿಸಲು ಉಪಯುಕ್ತ ಲಿಂಕ್:

Website link-ಅಧಿಕೃತ ವೆಬ್ಸೈಟ್: Click Here
Application link-ಅರ್ಜಿ ನಮೂನೆ: Download Now

ಇದನ್ನೂ ಓದಿ: Free Hostel Admission-ಉಚಿತ ವಿದ್ಯಾರ್ಥಿನಿಲಯಗಳ ಪ್ರವೇಶಾತಿಗೆ ಕೊನೆಯ ದಿನಾಂಕ ವಿಸ್ತರಣೆ!

Helplines-ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆಗಳು:

ಸಂಯೋಜಕರು, ಡಿಪ್ಲೋಮಾ (ತೋಟಗಾರಿಕೆ) ಎರಡು ವರ್ಷದ ಕೋರ್ಸ್, ತೋ.ಮ. ಅರಭಾವಿ (ಗೋಕಾಕ): 9845656148

ಸಂಯೋಜಕರು, ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ (ಡಿಪ್ಲೋಮಾ) ಕೇಂದ್ರ, ಕೋಲಾರ (ಹೊಗಳಗೆರೆ): 9900534193

Horticulture Diploma Opportunities-ತೋಟಗಾರಿಕೆ ಡಿಪ್ಲೋಮಾ ಮುಗಿಸಿದ ಬಳಿಕ ಯಾವೆಲ್ಲ ಅವಕಾಶಗಳಿವೆ?

ಮುಖ್ಯವಾಗಿ, ಡಿಪ್ಲೋಮಾದಲ್ಲಿ ತೇರ್ಗಡೆಯಾದವರು ತೋಟಗಾರಿಕೆಯಲ್ಲಿ ಸಶಕ್ತರಾಗಿ ನಿರತರಾಗಲು, ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ವಲಸೆ ಹೋಗುವ ಹಂಬಲವನ್ನು ನಿಯಂತ್ರಿಸುವುದರ ಜೊತೆಗೆ ಈ ಪ್ರದೇಶಗಳಲ್ಲಿ ತೋಟಗಾರಿಕೆಯನ್ನು ಅಭಿವೃದ್ಧಿಪಡಿಸಿ ಪ್ರಗತಿಪರ ರೈತರಾಗುವಲ್ಲಿ ನೆರವಾಗುತ್ತದೆ.

ವಿದ್ಯಾರ್ಥಿಗಳು ಗ್ರಾಮೀಣ ಮಟ್ಟದಲ್ಲಿ ತೋಟಗಾರಿಕೆ ಬೆಳೆಗಳ ಉತ್ಪಾದನೆ ಹಾಗೂ ಅವುಗಳ ಮೌಲ್ಯವರ್ಧನೆಗೆ ಸಂಬಂಧಪಟ್ಟ ತಾಂತ್ರಿಕತೆಗಳನ್ನು ರೈತರಿಗೆ ಮುಟ್ಟಿಸುವ ದಿಸೆಯಲ್ಲಿ ಮುಂಚೂಣಿಯ ಕಾರ್ಯಕರ್ತರಾಗಿ ಹೊರಹೊಮ್ಮುತ್ತಾರೆ.

ಡಿಪ್ಲೋಮಾ (ತೋಟಗಾರಿಕೆ)ಯಲ್ಲಿ ತೇರ್ಗಡೆಯಾದವರಿಗೆ ರಾಜ್ಯ ಸರಕಾರದ ಅಭಿವೃದ್ಧಿ ಇಲಾಖೆಗಳಾದ ತೋಟಗಾರಿಕೆ, ಬೀಜೋತ್ಪಾದನಾ ಕಂಪನಿಗಳು, ರಸಗೊಬ್ಬರ ಮತ್ತು ಕೀಟನಾಶಕ ಕಂಪನಿಗಳು, ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣಾ ಘಟಕಗಳು, ಆಮದು ಮತ್ತು ರಫ್ತು ಕಂಪನಿ, ರಾಷ್ಟ್ರೀಯ ತೋಟಗಾರಿಕೆ ಮಿಷನ್, ಮುಂತಾದ ಕಡೆಗಳಲ್ಲಿ ಉದ್ಯೋಗಾವಕಾಶಗಳ ಸೌಲಭ್ಯ ದೊರೆಯುವ ಸಾಧ್ಯತೆ ಇರುತ್ತದೆ.

ಡಿಪ್ಲೋಮಾ (ತೋಟಗಾರಿಕೆ)ಯಲ್ಲಿ ಎರಡು ವರ್ಷದ ಕೋರ್ಸ್‌ದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಿ.ಎಸ್ಸಿ (ಹಾನರ್ಸ್) ತೋಟಗಾರಿಕೆಯಲ್ಲಿ ಶೇಕಡಾ 5 ರಷ್ಟು ಸೀಟುಗಳನ್ನು ಸಹ ಕಾಯ್ದಿರಿಸಲಾಗಿದೆ(ಲ್ಯಾಟ್ರಲ್ ಎಂಟ್ರಿ ಟು ಬಿ.ಎಸ್ಸಿ (ಹಾನರ್ಸ್.) ತೋಟಗಾರಿಕೆ)

WhatsApp Group Join Now
Telegram Group Join Now
Share Now: