Pouthi Khate-ಕೃಷಿ ಜಮೀನಿನ ಮಾಲೀಕತ್ವ ವರ್ಗಾವಣೆ ಇನ್ನು ಭಾರಿ ಸುಲಭ!

July 18, 2025 | Siddesh
Pouthi Khate-ಕೃಷಿ ಜಮೀನಿನ ಮಾಲೀಕತ್ವ ವರ್ಗಾವಣೆ ಇನ್ನು ಭಾರಿ ಸುಲಭ!
Share Now:

ಕೃಷಿ ಜಮೀನಿನ ಮಾಲೀಕತ್ವ ವರ್ಗಾವಣೆ ವಿಧಾನವನ್ನು ಕಂದಾಯ ಇಲಾಖೆಯಿಂದ ಸರಳೀಕರಣಗೊಳಿಸಲಾಗಿದ್ದು ಇದಕ್ಕೆ ಪೂರಕವಾಗಿ ಪೌತಿ ಖಾತೆ(Pouthi Khate)ಆಂದೋಲನವನ್ನು ಜಾರಿಗೆ ತರಲಾಗಿದ್ದು ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಪೌತಿ/ವಾರಸಾ ರೀತ್ಯಾ ಮಾಲೀಕತ್ವವು(Pouthi Khate Andolana)ಮೃತರ ಉತ್ತಾರಧಿಕಾರಿಗಳ ಹೆಸರಿಗೆ ಬದಲಾವಣೆಯಾಗದಿದ್ದಲ್ಲಿ ಅಂತಹ ಜಮೀನುಗಳ ಪೌತಿ/ವಾರಸಾ ಸ್ವರೂಪದ ಪ್ರಕ್ರಿಯೆಗಳನ್ನು ಸರಳಿಕೃತಗೊಳಿಸುವ ಉದ್ದೇಶದಿಂದಾಗಿ ಕರ್ನಾಟಕ ಸರ್ಕಾರದಿಂದ ಇ-ಪೌತಿ ಖಾತಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿರುತ್ತದೆ.

ಇದನ್ನೂ ಓದಿ: Horticulture Diploma-ಎರಡು ವರ್ಷದ ಬಾಗಲಕೋಟೆ ತೋಟಗಾರಿಕೆ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ!

ಆದ್ದರಿಂದ, ಮರಣ ಹೊಂದಿರುವ ಪಟ್ಟಾದಾರರ ಕುಟುಂಬಸ್ಥರು ಇ-ಪೌತಿ(RTC) ಖಾತಾ ಬದಲಾವಣೆಗೆ ತಮ್ಮ ಗ್ರಾಮದ ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಈ ಕೆಳಗಿನ ದಾಖಲೆಗಳೊಂದಿಗೆ ಅರ್ಜಿಯನ್ನು ತಕ್ಷಣವೇ ಸಲ್ಲಿಸಲು ಕಂದಾಯ ಇಲಾಖೆಯಿಂದ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗಿದೆ.

ಈ ಅಂಕಣದಲ್ಲಿ ಪೌತಿ ಖಾತೆ ಎಂದರೇನು? ರೈತರು ಪೌತಿ ಖಾತೆಯಿಂದ(Revenue Department) ಯಾವೆಲ್ಲ ಪ್ರಯೋಜನಗಳನ್ನು ಪಡೆಯಬಹುದು?ಮರಣ ಹೊಂದಿದವರಿಂದ ಖಾತೆಯನ್ನು ವರ್ಗಾವಣೆ ಮಾಡಿಕೊಳ್ಳಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎನ್ನುವುದರ ಕುರಿತು ಸಂಪೂರ್ಣ ಅವಶ್ಯಕ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: Free Skill Training-ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯಲು ಇಲ್ಲಿದೆ ಸುವರ್ಣಾವಕಾಶ!

What Is Pouthi Khata-ಪೌತಿ ಖಾತೆ ಎಂದರೇನು?

ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ಬಳಿಕ ಪ್ರಸ್ತುತ ವಾರಸುದಾರರ ಹೆಸರಿಗೆ ಮಾಲೀಕತ್ವವನ್ನು ವರ್ಗಾವಣೆ ಮಾಡುವುದಕ್ಕೆ ಪೌತಿ ಖಾತೆ ಎನ್ನುತ್ತಾರೆ.

Karanataka Pouthi Khata Details-50 ಲಕ್ಷಕ್ಕೂ ಅಧಿಕ ಖಾತೆಗಳು ಮರಣ ಹೊಂದಿದವರ ಹೆಸರಿನಲ್ಲಿವೆ:

ಕಂದಾಯ ಇಲಾಖೆಯ ಅಂಕಿ-ಸಂಖ್ಯೆಯ ಮಾಹಿತಿಯ ಪ್ರಕಾರ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಸೇರಿ 50 ಲಕ್ಷಕ್ಕೂ ಅಧಿಕ ಕೃಷಿ ಜಮೀನಿನ ಖಾತೆಗೆ ಇನ್ನು ಸಹ ಮರಣ ಹೊಂದಿದವರ ಹೆಸರಿನಲ್ಲೇ ಇವೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Ganga Kalyana-ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕ!

Pouthi Khata Information-ಕೃಷಿ ಜಮೀನಿನ ಖಾತೆ ಬದಲಾವಣೆಗೆ ಪೌತಿ ಖಾತೆ ಆಂದೋಲನ:

ಕಂದಾಯ ಇಲಾಖೆಯಿಂದ ರೈತರಿಗೆ ಸಿಹಿ ಸುದ್ದಿಯನ್ನು ನೀಡಲಾಗಿದ್ದು, ಇಲ್ಲಿಯವರೆಗೆ ತಮ್ಮ ಹೆಸರಿಗೆ ಜಮೀನಿನ ಮಾಲೀಕತ್ವವನ್ನು ವರ್ಗಾವಣೆ ಮಾಡಿಕೊಳ್ಳದವರಿಗೆ ಜಮೀನಿನ ಮಾಲೀಕತ್ವವನ್ನು ಸರಳ ವಿಧಾನವನ್ನು ಅನುಸರಿಸಿ ಕಡಿಮೆ ಸಮಯದಲ್ಲಿ ಸುಲಭವಾಗಿ ವರ್ಗಾವಣೆ ಮಾಡಿಕೊಳ್ಳಲು "ಪೌತಿ ಖಾತೆ ಅಭಿಯಾನ" ವನ್ನು ಹಳ್ಳಿ ಮಟ್ಟದಲ್ಲಿ ಏರ್ಪಡಿಸಲು ನೂತನ ಯೋಜನೆಯನ್ನು ಜಾರಿಗೆ ತರಲಾಗಿದೆ.

Objective Of Pouthi Khata Andolana-ಪೌತಿ ಖಾತೆ ಅಂದೋಲನದ ಉದ್ದೇಶ:

ಕೃಷಿ ಜಮೀನಿನ ಮಾಲೀಕರು ಮೃತರಾದಲ್ಲಿ, ಅವರ ವಾರಸುದಾರರು ತಮ್ಮ ಹೆಸರಿಗೆ ಹಕ್ಕು ಬದಲಾವಣೆಯ ಪ್ರಕ್ರಿಯೆ ಸುಲಭವಾಗಿ, ಉಚಿತವಾಗಿ, ವೇಗವಾಗಿ ಹಾಗೂ ಭ್ರಷ್ಟಾಚಾರವಿಲ್ಲದೆ ಪಡೆಯಬಹುದಾಗಿದೆ.

ಈ ಹಕ್ಕು ಬದಲಾವಣೆಯನ್ನು 'ಇ-ಪೌತಿ ಅಂದೋಲನ" ಮೂಲಕ ಗ್ರಾಮ ಮಟ್ಟದಲ್ಲೇ ಸುಲಭವಾಗಿ ಮಾಡಿಸಬಹುದು.

ಇದನ್ನೂ ಓದಿ: Education Loan-ಉನ್ನತ ವ್ಯಾಸಂಗಕ್ಕೆ ಬಡ್ಡಿರಹಿತ 50.00 ಲಕ್ಷ ಸಾಲ ಪಡೆಯಲು ಅರ್ಜಿ ಆಹ್ವಾನ!

Pouthi Khate

Pouthi Khate Benefits-ಪೌತಿ ಅಂದೋಲನದ ಸೌಲಭ್ಯಗಳು:

  • ಮರಣ ಪ್ರಮಾಣ ಪತ್ರದ ಆಧಾರದಲ್ಲಿ ಹಕ್ಕು ಬದಲಾವಣೆಯ ಪ್ರಕ್ರಿಯೆ.
  • ಗ್ರಾಮ ಕಚೇರಿಯಲ್ಲಿಯೇ ಸೇವೆಗಳ ಲಭ್ಯತೆ.
  • ಖಾತೆ/ಪೌತಿ ನವೀಕರಣ ಭ್ರಷ್ಟಾಚಾರವಿಲ್ಲದ ಸೇವಾ ವಾತಾವರಣ.
  • ಕಂಪ್ಯೂಟರ್ ಅಥವಾ ಮೊಬೈಲ್ ಮೂಲಕ ಇ-ಪೌತಿ ಮಾಹಿತಿ
  • ಗ್ರಾಹಕ ಪರಿಹಾರ ಕೇಂದ್ರಗಳ ಬೆಂಬಲ.

Pouthi Khate-ಈ ಸೇವೆಗಳನ್ನು ಪಡೆಯಲು ನೀವು ಮಾಡಬೇಕಾದದ್ದು:

ರೈತರು ಪೌತಿ ಖಾತೆ ಆಂದೋಲದ ಪ್ರಯೋಜನವನ್ನು ಪಡೆಯಲು ನಿಮ್ಮ ಗ್ರಾಮದ ಗ್ರಾಮ ಆಡಳಿತಾಧಿಕಾರಿ/ RI/ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಮತ್ತು ಕೆಳಗೆ ತಿಳಿಸಿರುವ ದಾಖಲೆಗಳನ್ನು ನೀಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Scholarship-HDFC ಬ್ಯಾಂಕಿನಿಂದ Parivartan ಯೋಜನೆಯಡಿ ₹75,000 ವಿದ್ಯಾರ್ಥಿವೇತನ!

Required Documents-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ವಾರಸುದಾರರ ಹೆಸರಿಗೆ ಖಾತೆಯನ್ನು ವರ್ಗಾವಣೆ ಮಾಡಿಕೊಳ್ಳಲು ಅರ್ಜಿಯನ್ನು ಸಲ್ಲಿಸಲು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

  • ಜಮೀನಿನ ಪಹಣಿ/ಊತಾರ್/RTC
  • ಕುಟುಂಬದ ವಂಶವೃಕ್ಷ.
  • ಮೃತರ ಮರಣ ಪ್ರಮಾಣ ಪತ್ರ.
  • ಮತ್ತು ಎಲ್ಲಾ ವಾರಸುದಾರರ ಆಧಾರ ಕಾರ್ಡ.

ಇದನ್ನೂ ಓದಿ: Free Hostel Admission-ಉಚಿತ ವಿದ್ಯಾರ್ಥಿನಿಲಯಗಳ ಪ್ರವೇಶಾತಿಗೆ ಕೊನೆಯ ದಿನಾಂಕ ವಿಸ್ತರಣೆ!

Aadhar Card Link-ಆಧಾರ್ ಕಾರ್ಡಗೆ ಮೊಬೈಲ್ ನಂಬರ್ ಲಿಂಕ್ ಕಡ್ಡಾಯ:

ಅರ್ಜಿದಾರರು ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿಯಲ್ಲಿ ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಅರ್ಜಿದಾರರ ಮೊಬೈಲ್ ನಂಬರ್ ಮತ್ತು ಆಧಾರ್ ಕಾರ್ಡ ಕಡ್ಡಾಯವಾಗಿ ಲಿಂಕ್ ಅಗಿರಬೇಕು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Pothi Khata Benefits-ಪೌತಿ ಖಾತೆ ಮಾಡಿಕೊಳ್ಳುವುದರಿಂದ ಆಗುವ ಪ್ರಯೋಜನಗಳು:

ಕಂದಾಯ ಇಲಾಖೆಯಿಂದ ಪ್ರಸ್ತುತ ಜಾರಿಗೆ ತಂದಿರುವ ಪೌತಿ ಖಾತೆ ಅಭಿಯಾನದಿಂದ ರೈತರಿಗೆ ಹಲವು ಪ್ರಯೋಜನಗಳಿಡ್ದು ರೈತರು ಸುಲಭ ಮತ್ತು ಸರಳ ವಿಧಾನವನ್ನು ಅನುಸರಿಸಿ ಮರಣ ಹೊಂದಿದವರ ಹೆಸರಿನಿಂದ ತಮ್ಮ ಹೆಸರಿಗೆ ಕೃಷಿ ಜಮೀನ ಮಾಲೀಕತ್ವವನ್ನು ಕಡಿಮೆ ಸಮಯದಲ್ಲಿ ಸರಳ ವಿಧಾನದ ಮೂಲಕ ವರ್ಗಹಿಸಿಕೊಳ್ಳಬಹುದು.

ನಿಮ್ಮ ಹೆಸರಿನಲ್ಲೇ ಜಮೀನಿನ ಮಾಲೀಕತ್ವ ಇದ್ದರೆ ಕೃಷಿ ಜಮೀನಿನ ಮೇಲೆ ಬೆಳೆ ಸಾಲ ಪಡೆಯಲು ನೆರವಾಗುತ್ತದೆ ಇದಲ್ಲದೇ ವಿವಿಧ ಸಬ್ಸಿಡಿ ಆಧಾರಿತ ಯೋಜನೆಯ ಪ್ರಯೋಜನವನ್ನು ಪಡೆಯಬಹುದು ಮತ್ತು ಬೆಳೆ ವಿಮೆ ಯೋಜನೆಯ ಪ್ರಯೋಜನ ಜೊತೆಗೆ ಬೆಳೆ ಪರಿಹಾರ, ಬೆಂಬಲ ಬೆಲೆ ಯೋಜನೆಯಡಿ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಸಹ ನೆರವಾಗುತ್ತದೆ.

ನಿಮ್ಮ ಹಕ್ಕು, ನಿಮ್ಮ ಭೂಮಿ - ಇ-ಪೌತಿ ಮೂಲಕ ಸುರಕ್ಷಿತವಾಗಿ ಖಾತೆ ಬದಲಾವಣೆ ಮಾಡಿಕೊಳ್ಳಿ! ಹೆಚ್ಚಿನ ಮಾಹಿತಿಗೆ ನಿಮ್ಮ ಹಳ್ಳಿ ವ್ಯಾಪ್ತಿಯ ಕಂದಾಯ ಇಲಾಕೆಯ ಕಚೇರಿಯನ್ನು ಭೇಟಿ ಮಾಡಿ.

WhatsApp Group Join Now
Telegram Group Join Now
Share Now: