E-swathu mahiti-ಮನೆ ಇ-ಸ್ವತ್ತು ಮಾಡಿಸಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲಾತಿಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ!

August 1, 2024 | Siddesh

ಮನೆ ಜಾಗವನ್ನು ಇ-ಸ್ವತ್ತು(E-savattu application ) ಮಾಡಿಸಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳೇನು? ಯಾವ ಯಾವ ಪ್ರಕರಣಗಳಲ್ಲಿ ಯಾವೆಲ್ಲ ದಾಖಲಾತಿಗಳನ್ನು ಸಲ್ಲಿಸುವುದು ಅಗತ್ಯ ಎನ್ನುವ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಹಕ್ಕುಪತ್ರ ಇದ್ದಲ್ಲಿ, ಮನೆ ಮಾಲೀಕ ದಾನಪತ್ರ ಮತ್ತು ಮರಣ ಹೊಂದಿದ್ದಲ್ಲಿ, ನಿವೇಶನ ಗ್ರಾಮ ಠಾಣಾ ವ್ಯಾಪ್ತಿ ಇದ್ದ ಪಕ್ಷದಲ್ಲಿ, ಆ ಮನೆ ಖರೀದಿ/ಕ್ರಯ ಅಗಿದ್ದಲ್ಲಿ ಹಾಗೂ ಪಹಣಿ ಕೇಸ್/ಕಂದಾಯ ಇಲಾಖೆ ಭೂಮಿ ಇದ್ದಂತಹ ಸಂದರ್ಭದಲ್ಲಿ ಯಾವೆಲ್ಲ ದಾಖಲಾತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು ಎನ್ನುವ ವಿವರವಾದ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ, 

ಈ ಮಾಹಿತಿಯು ನಿಮಗೆ ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಇತರರಿಗೂ ಈ ಉಪಯುಕ್ತ ಮಾಹಿತಿ ತಿಳಿಸಲು ಸಹಕರಿಸಿ.

ಇದನ್ನೂ ಓದಿ: Bele sala manna- 31 ಸಾವಿರ ರೈತರ ಬೆಳೆ ಸಾಲ ಮನ್ನಾಕ್ಕೆ 232 ಕೋಟಿ ಹಣ! ಇಲ್ಲಿದೆ ಬೆಳೆ ಸಾಲ ಮನ್ನಾ ರೈತರ ಪಟ್ಟಿ!

E-savattu application-2024: ನಿಮ್ಮ ಮನೆಯ ಇ-ಸ್ವತ್ತು ಮಾಡಿಸಲು ಎಲ್ಲಿ ಅರ್ಜಿ ಸಲ್ಲಿಸಬೇಕು? 

ಗ್ರಾಮೀಣ/ಹಳ್ಳಿಯ ವ್ಯಾಪ್ತಿಯ ಜನರು ಮನೆಯ ಇ-ಸ್ವತ್ತು ಅಂದರೆ ತಮ್ಮ ಮನೆ ಜಾಗವನ್ನು ಪ್ರಸ್ತುತ ವಾಸವಿರುವವರ ಹೆಸರಿಗೆ ಮಾಡಿಸಿಕೊಳ್ಳಲು ನಿಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯತಿಯಲ್ಲಿ(grama panchayat) ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬೇಕು.

why e-svattu document required-ಇ-ಸ್ವತ್ತು ಏಕೆ ಮಾಡಿಸಬೇಕು?

ಮನೆಯ ಮೇಲೆ ಬ್ಯಾಂಕ್ ನಲ್ಲಿ ಸಾಲ ಪಡೆದುಕೊಳ್ಳಲು ಇ-ಸ್ವತ್ತು ದಾಖಲೆಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ ಈ ದಾಖಲಾತಿ ಇಲ್ಲದಿದ್ದಲ್ಲಿ ಬ್ಯಾಂಕ್ ಗಳು ಸಾಲ ನೀಡುವುದಿಲ್ಲ ಮತ್ತು ಮನೆಯನ್ನು ಮಾರಾಟ ಮಾಡಲು ಇ-ಸ್ವತ್ತು ಬೇಕಾಗುತ್ತದೆ ಜೊತೆಗೆ ಇ-ಸ್ವತ್ತು ಮನೆಯ ಮಾಲೀಕನನ್ನು ಪ್ರತಿನಿಧಿಸುವ ದಾಖಲೆಯಲ್ಲಿ ಒಂದಾಗಿದೆ ಅದ್ದರಿಂದ ಈ ದಾಖಲೆಯನ್ನು ಸಿದ್ದಪಡಿಸಿ ತಮ್ಮ ಬಳಿ ಇಟ್ಟುಕೊಳ್ಳುವುದು ಅತ್ಯಗತ್ಯ.

ಇದನ್ನೂ ಓದಿ: Nabard job notification-2024: ನಬಾರ್ಡ ಬ್ಯಾಂಕ್ ನಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

Application process- ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ:

ಈ ಕೆಳಗೆ ತಿಳಿಸಿರುವ ಎಲ್ಲಾ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಗ್ರಾಮ ಪಂಚಾಯತಿಯನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಮನೆಯ ಅಳತೆಯನ್ನು ಮಾಡಲಾಗುತ್ತದೆ ಅಳತೆಗೆ ಅನುಗುಣವಾಗಿ ಶುಲ್ಕವನ್ನು ಪಾವತಿ ಮಾಡಿದ ನಂತರ ನಿಮ್ಮ ಅರ್ಜಿ ಪರೀಶಿಲನೆ ಮಾಡಿ ಇ-ಸ್ವತ್ತು ಮಾಡಿಕೊಡಲಾಗುತ್ತದೆ.

Required documents for e-svattu-ವಿವಿಧ ಬಗ್ಗೆಯ ಪ್ರಕರಣವಾರು ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳ ಮಾಹಿತಿ ವಿವರ ಈ ಕೆಳಗಿನಂತಿದೆ:

(A) ಹಕ್ಕುಪತ್ರದ ಕೇಸ್:

1) ಅರ್ಜಿ ನಮೂನೆ

2) ಹಕ್ಕುಪತ್ರ (ಮೂಲ ಹಕ್ಕು ಪತ್ರವನ್ನು ಪಂ.ಅ.ಅ-ಕಾರ್ಯದರ್ಶಿ-ದ್ವಿ.ದ.ಲೆ.ಸ, ಖುದ್ದಾಗಿ ಪರಿಶೀಲಿಸುವುದು)

3) ಆಧಾರ್ ಅಥವಾ EPIC (ವೋಟರ್ ಕಾರ್ಡ್)

4) ಮನೆ/ನಿವೇಶನ ಕಂದಾಯ ಕಟ್ಟಿರುವ ಇತ್ತೀಚಿನ ಅಥವಾ 14.06.2013ರ ಹಿಂದಿನ ರಶೀತಿ

5) ಭಾವಚಿತ್ರ (ಪಾಸ್‌ಪೋರ್ಟ್ ಅಳತೆ)

6) ಮ್ಯುಟೇಶನ್ ರಿಜಿಸ್ಟರ್ ದಾಖಲೆ

7) ವಿದ್ಯುಚ್ಛಕ್ತಿ ಬಿಲ್ (ಕಟ್ಟಡಕ್ಕೆ-ಐಚ್ಚಿಕ)

8) ಅಕ್ಷಾಂಶ-ರೇಖಾಂಶ (ಐಚ್ಛಿಕ)

9) ಮೊಬೈಲ್ ನಂಬರ್, ಗ್ರಾಮ & ಸರ್ವೆ ನಂ.

(B) ದಾನಪತ್ರ ಮತ್ತು ಮರಣ ಇದ್ದಲ್ಲಿ:

1) ಅರ್ಜಿ ನಮೂನೆ

2) ಹಕ್ಕುಪತ್ರ (ಮೂಲ ಹಕ್ಕು ಪತ್ರವನ್ನು ಪಂ.ಅ.ಅ-ಕಾರ್ಯದರ್ಶಿ-ದ್ವಿ.ದ.ಲೆ.ಸ. ಖುದ್ದಾಗಿ ಪರಿಶೀಲಿಸುವುದು)

3) ಆಧಾರ್ ಅಥವಾ EPIC (ವೋಟರ್ ಕಾರ್ಡ್)

4) ಮನೆ/ನಿವೇಶನ ಕಂದಾಯ ಕಟ್ಟಿರುವ ಇತ್ತೀಚಿನ ಅಥವಾ 14.06.2013ರ ಹಿಂದಿನ ರಶೀತಿ

5) ಭಾವಚಿತ್ರ (ಪಾಸ್‌ಪೋರ್ಟ್ ಅಳತೆ)

6) ಮ್ಯುಟೇಶನ್ ರಿಜಿಸ್ಟರ್ ದಾಖಲೆ

7) ವಿದ್ಯುಚ್ಛಕ್ತಿ ಬಿಲ್ (ಕಟ್ಟಡಕ್ಕೆ-ಐಚ್ಚಿಕ)

8) ಮೊಬೈಲ್ ನಂಬರ್ ಮತ್ತು ಗ್ರಾಮ

9) ದಾನಪತ್ರ (ಕಡ್ಡಾಯ)

10) ವಂಶವೃಕ್ಷ (ಕಡ್ಡಾಯ)

11) ಮರಣ ಪ್ರಮಾಣ ಪತ್ರ (ಕಡ್ಡಾಯ)

12) ಆಕ್ಷಾಂಶ-ರೇಖಾಂಶ (ಐಚ್ಛಿಕ)

13) ಸರ್ವೆ ನಂಬರ್

(C) ಗ್ರಾಮ ಠಾಣಾ ವ್ಯಾಪ್ತಿ:

1. ಅರ್ಜಿ 

2. ಸ್ಥಳದ ಮಾಲೀಕತ್ವ ದಾಖಲೆ (ಅಸೆಸ್‌ಮೆಂಟ್ ಮತ್ತು ಡಿಮಾಂಡ್)

3 ಗ್ರಾಮ ಠಾಣಾ ಸ್ಕೆಚ್ (ತಹಶೀಲ್ದಾರ್ ಅವರ)

4 ಚೆಕ್ಕುಬಂದಿ ವಿವರ

5. ಆಧಾರ್ ಅಥವಾ EPIC (ವೋಟರ್ ಕಾರ್ಡ್)

6. ಮನೆ/ನಿವೇಶನ ಕಂದಾಯ ಕಟ್ಟಿರುವ ಇತ್ತೀಚಿನ ಅಥವಾ 14.06.2013ರ ಹಿಂದಿನ ರಶೀತಿ

7. ಭಾವಚಿತ್ರ (ಪಾಸ್‌ಪೋರ್ಟ್ ಅಳತೆ)

8. ಮ್ಯುಟೇಶನ್ ರಿಜಿಸ್ಟರ್ ದಾಖಲೆ

9. ವಿದ್ಯುಚ್ಛಕ್ತಿ ಬಿಲ್ (ಕಟ್ಟಡಕ್ಕೆ-ಐಚ್ಛಿಕ)

10. ಮೊಬೈಲ್ ನಂ. ಮತ್ತು ಗ್ರಾಮ

11. ಸರ್ವೆ ನಂಬರ್

12. ಅಕ್ಷಾಂಶ-ರೇಖಾಂಶ (ಐಚ್ಛಿಕ)

(D) ಸ್ಥಳೀಯ ಯೋಜನಾ ಪ್ರಾಧಿಕಾರ ವ್ಯಾಪ್ತಿಯ ಪ್ರದೇಶ ಮತ್ತು ಹೊರಗಿನ ಪ್ರದೇಶ (ನಿವೇಶನ ಮಾತ್ರ):

1) ಅರ್ಜಿ

2) ಸ್ಥಳದ ಮಾಲೀಕತ್ವ ದಾಖಲೆ ಅಥವಾ ಕ್ರಯ ಪತ್ರ

3) ಭೂಪರಿವರ್ತಿತ ಆದೇಶದ ಪ್ರತಿ

4) ಅನುಮೋದನೆಯಾದ ಬಡಾವಣೆ ನಕ್ಷೆ

5) ಮಾಲೀಕನ ವಿಳಾಸ ಗುರುತಿನ ಪತ್ರ

6) ನಿವೇಶನದ ನಕ್ಷೆ

7) ಆಧಾರ್ ಅಥವಾ EPIC (ವೋಟರ್ ಕಾರ್ಡ್)

8) ಚೆಕ್ಕುಬಂದಿ ವಿವರ

9) ಮ್ಯುಟೇಶನ್ ರಿಜಿಸ್ಟರ್ ದಾಖಲೆ

10) ಭಾವಚಿತ್ರ (ಪಾಸ್‌ಪೋರ್ಟ್ ಅಳತೆ)

11) ಮೊಬೈಲ್ ನಂ ಮತ್ತು ಗ್ರಾಮ

12) ಸರ್ವೆ ನಂಬರ್ (ಐಚ್ಛಿಕ)

13) ಅಕ್ಷಾಂಶ-ರೇಖಾಂಶ (ಐಚ್ಛಿಕ)

(F) ಪಹಣಿ ಕೇಸ್/ಕಂದಾಯ ಇಲಾಖೆ ಭೂಮಿ:

1) ಅರ್ಜಿ

2) ಫಾರಂ ಹೌಸ್ ದೃಢೀಕರಣ (ಆರ್‌ಐ ಅಥವಾ ತಹಶೀಲ್ದಾರ್ ಅವರಿಂದ ಪಡೆದ)

3) ಗ್ರಾಮ ಠಾಣಾ ಸ್ಕೆಚ್ (ತಹಶೀಲ್ದಾರ್ ಅವರ)

4) ಪಹಣಿ

5) ಆಧಾರ್ ಅಥವಾ EPIC (ವೋಟರ್ ಕಾರ್ಡ್)

6) ಮನೆ/ನಿವೇಶನ ಕಂದಾಯ ಕಟ್ಟಿರುವ ಇತ್ತೀಚಿನ ಅಥವಾ 14.06.2013ರ ಹಿಂದಿನ ರಶೀತಿ

7) ಭಾವಚಿತ್ರ (ಪಾಸ್‌ ಪೋರ್ಟ್ ಅಳತೆ)

8) ಮ್ಯುಟೇಶನ್ ರಿಜಿಸ್ಟರ್ ದಾಖಲೆ

9) ವಿದ್ಯುಚ್ಛಕ್ತಿ ಬಿಲ್ (ಕಟ್ಟಡಕ್ಕೆ-ಐಚ್ಛಿಕ)

10) ಮೊಬೈಲ್ ನಂ. ಮತ್ತು ಗ್ರಾಮ

11) ಸರ್ವೆ ನಂಬರ್

12) ಅಕ್ಷಾಂಶ-ರೇಖಾಂಶ (ಐಚ್ಛಿಕ)

13) ಚೆಕ್ಕುಬಂದಿ ವಿವರ

ಫಾರಂ-11ಬಿ:

(A) ಕ್ರಯಪತ್ರದ ಕೇಸ್:

1) ಅರ್ಜಿ

2) ಸ್ಥಳದ ಮಾಲೀಕತ್ವ ದಾಖಲೆ ಅಥವಾ ಕ್ರಯ ಪತ್ರ

3) ಪಹಣಿ ಪತ್ರಿಕೆ (ಆರ್.ಟಿ.ಸಿ)

4) ನಿವೇಶನದ ನಕ್ಷೆ

5) ಮನೆ/ನಿವೇಶನ ಕಂದಾಯ ಕಟ್ಟಿರುವ (14.06.2013 ರ ಪೂರ್ವ) ರಶೀತಿ

6) ವಿದ್ಯುಚ್ಛಕ್ತಿ ಬಿಲ್ ಅಥವಾ ಸ್ಟೇಟ್ಮೆಂಟ್ (ಕಟ್ಟಡಕ್ಕೆ ಕಡ್ಡಾಯ-14.06.2013 ರ ಪೂರ್ವದ ಕನಿಷ್ಠ 06 ತಿಂಗಳ ಹಿಂದಿನ)

7) ಮಾಲೀಕನ ವಿಳಾಸ ಗುರುತಿನ ಪತ್ರ

8) ಆಧಾರ್ ಅಥವಾ EPIC (ವೋಟರ್ ಕಾರ್ಡ್) "

9) ಚೆಕ್ಕುಬಂದಿ ವಿವರ

10) ಮೊಬೈಲ್ ನಂಬರ್ ಮತ್ತು ಗ್ರಾಮ

11) ಸರ್ವೆ ನಂ. (ಐಚ್ಛಿಕ)

12) ಅಕ್ಷಾಂಶ-ರೇಖಾಂಶ (ಐಚ್ಛಿಕ)

13) ಮ್ಯುಟೇಶನ್ ರಿಜಿಸ್ಟರ್ ದಾಖಲೆ

14) ಭಾವಚಿತ್ರ (ಪಾಸ್‌ಪೋರ್ಟ್ ಅಳತೆ)

(B) ಅಸೆಸ್‌ಮೆಂಟ್ ಮತ್ತು ಡಿಮಾಂಡ್ ಕೇಸ್:

1) ಅರ್ಜಿ

2) ಸ್ಥಳದ ಮಾಲೀಕತ್ವ ದಾಖಲೆ ಅಥವಾ ಅಸೆಸ್‌ಮೆಂಟ್ ಮತ್ತು ಡಿಮಾಂಡ್ (14.06.2013 ರ ಪೂರ್ವ)

3) ಮನೆ/ನಿವೇಶನ ಕಂದಾಯ ಕಟ್ಟಿರುವ (14.06.2013 ರ ಪೂರ್ವ) ರಶೀತಿ

4) ವಿದ್ಯುಚ್ಛಕ್ತಿ ಬಿಲ್ ಅಥವಾ ಸ್ಟೇಟ್ ಮೆಂಟ್ (ಕಟ್ಟಡಕ್ಕೆ ಕಡ್ಡಾಯ-14.06.2013 ರ ಪೂರ್ವದ ಕನಿಷ್ಠ 06 ತಿಂಗಳ ಹಿಂದಿನ)

5) ಮಾಲೀಕನ ವಿಳಾಸ ಗುರುತಿನ ಪತ್ರ

6) ಆಧಾರ್ ಅಥವಾ EPIC (ವೋಟರ್ ಕಾರ್ಡ್)

7) ಚೆಕ್ಕುಬಂದಿ ವಿವರ

8) ಮೊಬೈಲ್ ನಂಬರ್ ಮತ್ತು ಗ್ರಾಮ

9) ಸರ್ವೆ ನಂ (ಐಚ್ಛಿಕ)

10) ಅಕ್ಷಾಂಶ-ರೇಖಾಂಶ (ಐಚ್ಛಿಕ)

11) ಮ್ಯುಟೇಶನ್ ರಿಜಿಸ್ಟರ್ ದಾಖಲೆ

12) ಭಾವಚಿತ್ರ (ಪಾಸ್‌ಪೋರ್ಟ್ ಅಳತೆ)

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: