HomeNew postsBele sala manna- 31 ಸಾವಿರ ರೈತರ ಬೆಳೆ ಸಾಲ ಮನ್ನಾಕ್ಕೆ 232 ಕೋಟಿ ಹಣ!...

Bele sala manna- 31 ಸಾವಿರ ರೈತರ ಬೆಳೆ ಸಾಲ ಮನ್ನಾಕ್ಕೆ 232 ಕೋಟಿ ಹಣ! ಇಲ್ಲಿದೆ ಬೆಳೆ ಸಾಲ ಮನ್ನಾ ರೈತರ ಪಟ್ಟಿ!

ರಾಜ್ಯ ಸರಕಾರದಿಂದ 2017 ಹಾಗೂ 2018 ನೇ ಸಾಲಿನಲ್ಲಿ ರೈತರ ಸಾಲ ಮನ್ನಾ ಯೋಜನೆಯಡಿ ಬೆಳೆ ಸಾಲವನ್ನು(Bele sala manna farmer list) ಮನ್ನಾ ಮಾಡುವ ಘೋಷಣೆಯನ್ನು ಮಾಡಲಾಗಿತ್ತು ಇದರನ್ವಯ ಒಟ್ಟು 17.37 ಲಕ್ಷ ರೈತರ ಬೆಳೆ ಸಾಲ ಮನ್ನಾದ ಪ್ರಯೋಜನ ಪಡೆದುಕೊಂಡಿದ್ದರು,

ಅದರೆ ಕೆಲವು ತಾಂತ್ರಿಕ ಸಮಸ್ಯೆಯಿಂದ ಈ ಯೋಜನೆಯ ಪ್ರಯೋಜನವು 31 ಸಾವಿರ ರೈತರಿಗೆ ದೊರೆತಿರಲಿಲ್ಲ ಈಗ ಈ ಕುರಿತು ವಿಧಾನ ಪರಿಷತ್ ನಲ್ಲಿ ಪ್ರಶ್ನೆಗೆ ಉತ್ತರ ನೀಡಿದ ಸಹಕಾರ ಸಚಿವ ಕೆ ಎನ್ ರಾಜನ್ನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ/ಸೊಸೈಟಿಯ ಮೂಲಕ ನೀಡಲಾಗಿದ್ದ 50 ಸಾವಿರ ಸಾಲ ಮನ್ನಾ ಸೌಲಭ್ಯವನ್ನು 21.57 ಲಕ್ಷ ರೈತರು ಪಡೆದಿದ್ದು, 2018ರಲ್ಲಿ ಘೋಷಣೆ ಮಾಡಿದ 1 ಲಕ್ಷ ಸಾಲ ಮನ್ನಾ ಪ್ರಯೋಜನವನ್ನು 17.37 ಲಕ್ಷ ರೈತರು ಪಡೆದಿಕೊಂಡಿದ್ದರು,

ಈ ಎರಡು ಯೋಜನೆಯ ಸಾಲ ಮನ್ನಾಕ್ಕಾಗಿ ಸರಕಾರವು 7,662 ಕೋಟಿ ಮತ್ತು 7,987 ಕೋಟಿ ಅನುದಾನ ವ್ಯಯಿಸಲಾಗಿತ್ತು ಕೆಲವು ತಾಂತ್ರಿಕ ಸಮಸ್ಯೆಯಿಂದ ಇಲ್ಲಿಯವರೆಗೆ ಈ ಎರಡು ಯೋಜನೆಯ ಪ್ರಯೋಜನ ಇನ್ನು 31 ಸಾವಿರ ರೈತರಿಗೆ ದೊರೆತಿಲ್ಲದ ಕಾರಣ ಇವರಿಗೆ ನೀಡಬೇಕಿರುವ ಮೊತ್ತ 161.51 ಕೋಟಿ ಹಾಗೂ ಅರ್ಹತೆ ಗುರುತಿಸಲು ಬಾಕಿಯಿರುವ ರೈತರ ಮೊತ್ತ,

ಇದನ್ನೂ ಓದಿ: veterinary doctor application-400 ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

64.49 ಕೋಟಿ ಸೇರಿ ಒಟ್ಟು 232 ಕೋಟಿ ಅನುದಾನವನ್ನು ಬಿಡುಗಡೆ ಮಾಡುವಂತೆ ಕೋರಿ ಅರ್ಥಿಕ ಇಲಾಖೆಗೆ ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಸದನಕ್ಕೆ ಉತ್ತರಿಸಿ ಎಲ್ಲರಿಗೂ ಈ ಯೋಜನೆಯ ಪ್ರಯೋಜನ ದೊರಕಲಿದೆ ಎಂದು ತಿಳಿಸಿದ್ದರು.

Bele sala manna list- 2024: ಇಲ್ಲಿಯವರೆಗೆ ಎಷ್ಟು ರೈತರ ಬೆಳೆ ಸಾಲ ಮನ್ನಾ ಅಗಿದೆ ಎನ್ನುವ ರೈತರ ಪಟ್ಟಿಯನ್ನು ಮೊಬೈಲ್ ನಲ್ಲೇ ನೋಡುವ ವಿಧಾನ:

ರೈತರು ತಮ್ಮ ಮೊಬೈಲ್ ನಲ್ಲಿಯೇ ಬೆಳೆ ಸಾಲ ಮನ್ನಾ ಅಗಿರುವ ಪಟ್ಟಿಯನ್ನು ನೋಡಲು ಅವಕಾಶವಿದ್ದು ರಾಜ್ಯ ಸರಕಾರದ ಅಧಿಕೃತ ಬೆಳೆ ಸಾಲ ಮನ್ನಾ ಯೋಜನೆ ವ್ಯವಸ್ಥೆಯ ವೆಬ್ಸೈಟ್ ಅನ್ನು ಭೇಟಿ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ನಿಮ್ಮ ಮನೆಯಲ್ಲೇ ಕುಳಿತು ಬೆಳೆ ಸಾಲ ಮನ್ನಾ ಅಗಿರುವ ರೈತರ ಪಟ್ಟಿಯನ್ನು ನೋಡಬಹುದು.

Step-1: ಪ್ರಥಮದಲ್ಲಿ ಈ Bele sala manna list ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Nabard job notification-2024: ನಬಾರ್ಡ ಬ್ಯಾಂಕ್ ನಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

Step-2: ಇದಾದ ನಂತರ ಈ ಕೆಳಗಿನ ಚಿತ್ರದಲ್ಲಿ ತೋರಿಸಿರುವ ರೀತಿ ಮುಖಪುಟ ತೆರೆದುಕೊಳ್ಳುತ್ತದೆ, ಇಲ್ಲಿ ಕೊನೆಯಲ್ಲಿ ಕಾಣುವ “ನಾಗರಿಕ ಸೇವೆಗಳು” ಆಯ್ಕೆ ವಿಭಾಗದಲ್ಲಿ ಕೊನೆಯಲ್ಲಿ ಕಾಣುವ “ಬೆಳೆ ಸಾಲಮನ್ನಾ ವರದಿ” ಆಯ್ಕೆ ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: “ಬೆಳೆ ಸಾಲಮನ್ನಾ ವರದಿ” ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ನಿಮ್ಮ ಜಿಲ್ಲೆ, ತಾಲ್ಲೂಕು, ಹಳ್ಳಿ ಹೆಸರನ್ನು ಆಯ್ಕೆ ಮಾಡಿಕೊಂಡು ನಿಮ್ಮ ಹಳ್ಳಿಯಲ್ಲಿ ಬೆಳೆ ಸಾಲ ಮನ್ನಾ ಯಾರಿಗೆಲ್ಲ ಅಗಿದೆ ಮತ್ತು ಎಷ್ಟು ಮೊತ್ತ ಎಂದು ವಿವರವಾದ ಮಾಹಿತಿಯ ರೈತರ ಪಟ್ಟಿ ತೋರಿಸುತ್ತದೆ.

ಇದನ್ನೂ ಓದಿ: uchitha olige tharabeti-2024: ಉಚಿತ ಹೋಲಿಗೆ ತರಬೇತಿ ಮತ್ತು ಸಾಲ ಪಡೆಯಲು ಅರ್ಜಿ ಆಹ್ವಾನ!

ವಿಶೇಷ ಸೂಚನೆ: ಕೆಲವು ಸಮಯದಲ್ಲಿ ಈ ವೆಬ್ಸೈಟ್ ಅನ್ನು ಒಪನ್ ಮಾಡಿದಾಗ ಈ ರೀತಿ “Service Unavailable” ಎಂದು ತೋರಿಸುತ್ತದೆ ಅಂತಹ ಸನ್ನಿವೇಶದಲ್ಲಿ ಕೆಲವು ದಿನ/ಸಮಯದ ನಂತರ ಈ ವೆಬ್ಸೈಟ್ ಅನ್ನು ಪುನಃ ಭೇಟಿ ಮಾಡಿ ಚೆಕ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: Education loan – ವಿದ್ಯಾಭ್ಯಾಸ ಸಾಲ ಯೋಜನೆಯಡಿ ಸಾಲ ಪಡೆಯಲು ಅರ್ಜಿ ಆಹ್ವಾನ!

sala manna website- ಉಪಯುಕ್ತ ವೆಬ್ಸೈಟ್ ಲಿಂಕ್ ಗಳು:

ಬೆಳೆ ಸಾಲ ಮನ್ನಾ ಯೋಜನೆಯ ಅಧಿಕೃತ ವೆಬ್ಸೈಟ್: Click here

Most Popular

Latest Articles

Related Articles