Ganga kalyana-ಮತ್ತೊಂದು ನಿಗಮದಿಂದ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನ!

Facebook
Twitter
Telegram
WhatsApp

ಈಗಾಗಲೇ ವಿವಿಧ ವರ್ಗದ ನಿಗಮಗಳಿಂದ ಗಂಗಾ ಕಲ್ಯಾಣ(Ganga kalyana yojana) ಯೋಜನೆಯಡಿ ಸಬ್ಸಿಡಿಯಲ್ಲಿ ಕೊಳವೆ ಬಾವಿಯನ್ನು ಕೊರೆಸಲು ಅರ್ಜಿ ಆಹ್ವಾನಿಸಲಾಗಿದ್ದು ಈಗ ಮತ್ತೊಂದು ವರ್ಗ ಅಂದರೆ ಎಸ್.ಸಿ/ಎಸ್.ಟಿ ಅಭಿವೃದ್ದಿ ನಿಗಮದಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಥಿಕವಾಗಿ ಸಬಲರಾಗಲು ರೈತರಿಗೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದಕ್ಕೆ ಉತೇಜನ ನೀಡುವ ನಿಟ್ಟಿನಲ್ಲಿ ಕೊಳವೆ ಬಾವಿ/ಬೋರ್ವೆಲ್/Borewell ಅನ್ನು ಕೊರೆಸಿಕೊಳ್ಳಲು ಅರ್ಥಿಕವಾಗಿ ನೆರವು ನೀಡಲು ರಾಜ್ಯ ಸರಕಾರದಿಂದ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯ ಮೂಲಕ ಹಣದ ನೆರವು ನೀಡಲಾಗುತ್ತದೆ.

ಪ್ರಸ್ತುತ ಯಾವೆಲ್ಲ ನಿಗಮಗಳಿಂದ ಗಂಗಾ ಕಲ್ಯಾಣ(Ganga kalyana online application) ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ? ಘಟಕ ವೆಚ್ಚ ಎಷ್ಟು? ಸಬ್ಸಿಡಿ ಮೊತ್ತ ಎಷ್ಟು? ಎಲ್ಲಿ ಅರ್ಜಿ ಸಲ್ಲಿಸಬೇಕು? ದಾಖಲೆಗಳೇನು ಸಲ್ಲಿಸಬೇಕು? ಇತ್ಯಾದಿ ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Constable Job application-SSLC ಪಾಸಾದವರಿಗೆ 39,481 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ!

ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಯನ್ನು ತೆಗೆಸಲು ಈಗಾಗಲೇ ಲಿಂಗಾಯತ,ಒಕ್ಕಲಿಗ, ಹಿಂದುಳಿದ ವರ್ಗ/ದೇವರಾಜ ಅರಸು ನಿಗಮ ದಿಂದ ಅರ್ಜಿ ಆಹ್ವಾನಿಸಲಾಗಿದ್ದು ಇದಕ್ಕೆ ಅರ್ಜಿ ಸಲ್ಲಿಸಲು 15 ಸೆಪ್ಟಂಬರ್ 2024 ಕೊನೆಯ ದಿನಾಂಕ ನಿಗದಿಪಡಿಸಲಾಗಿದೆ, ಈಗ ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗಕ್ಕೆ ಸೇರಿದ ನಿಗಮದಿಂದ ಅರ್ಜಿ ಕರೆಯಲಾಗಿದ್ದು ಇದಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 10 ಅಕ್ಟೋಬರ್ 2024 ಕೊನೆಯ ದಿನವಾಗಿದೆ.

Ganga kalyana subsidy details- ಗಂಗಾ ಕಲ್ಯಾಣ ಯೋಜನೆ ಸಹಾಯಧನ ವಿವರ ಹೀಗಿದೆ:

1) ವೈಯಕ್ತಿಕ ಕೊಳವೆ ಬಾವಿ ಯೋಜನೆಗೆ ಒಟ್ಟು ಘಟಕ ವೆಚ್ಚ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಿಗೆ ರೂ.4.75 ಲಕ್ಷ ಇದರಲ್ಲಿ ವಿದ್ಯುದ್ದೀಕರಣ ವೆಚ್ಚ ಪ್ರತಿ ಕೂಳವೆ ಬಾವಿಗೆ ರೂ.75,000/-ಗಳನ್ನು ಎಸ್ಕಾಂಗಳಿಗೆ ಪಾವತಿಸಲಾಗುತ್ತದೆ.

2) ಉಳಿದ ಜಿಲ್ಲೆಗಳಿಗೆ ರೂ.3.75 ಲಕ್ಷಗಳು ಇದರಲ್ಲಿ ವಿದ್ಯುದ್ದೀಕರಣ ವೆಚ್ಚ ಪ್ರತಿ ಕೊಳವೆ ಬಾವಿಗೆ ರೂ.75,000/-ಗಳನ್ನು ಎಸ್ಕಾಂಗಳಿಗೆ ಪಾವತಿಸಲಾಗುವುದು. ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ ರೂ.50,000/-ಗಳ ಸಾಲವನ್ನು ಶೇ.4ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುತ್ತದೆ.

ಇದನ್ನೂ ಓದಿ: Aadhar- ಆಧಾರ್ ಕಾರ್ಡಯಿರುವವರು ಈ ಮಾಹಿತಿ ತಿಳಿಯುವುದು ಅತ್ಯಗತ್ಯ!

How to apply for ganga kalyana- ಅರ್ಜಿ ಸಲ್ಲಿಕೆ ವಿಧಾನ:

ಅರ್ಹ ಅರ್ಜಿದಾರರು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಆನ್ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್‌ ಅಥವಾ ಕರ್ನಾಟಕ ಒನ್‌, ಗ್ರಾಮ ಒನ್‌, ಬೆಂಗಳೂರು ಒನ್‌ ಕೇಂದ್ರಗಳಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬಹುದು.

Ganga kalyana yojane last date- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಅಕ್ಟೋಬರ್ 2024

ಅರ್ಜಿ ಸಲ್ಲಿಸಲು ಅರ್ಹರು:

1) ಆಯಾ ನಿಗಮಕ್ಕೆ ಸಂಬಂಧಪಟ್ಟ ವರ್ಗಕ್ಕೆ ಸೇರಿದ ಅರ್ಹ ಅರ್ಜಿದಾರರು ಅರ್ಜಿ ಸಲ್ಲಿಸಬಹುದು.

2) 1.20 ಎಕರೆಯಿಂದ 5.0 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತರು ಅರ್ಜಿ ಸಲ್ಲಿಸಬಹುದು.

3) ಅರ್ಜಿದಾರರು/ ಕುಟುಂಬದ ಅವಲಂಬಿತ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ ನೌಕರಿಯಲ್ಲಿರಬಾರದು.

ಇದನ್ನೂ ಓದಿ: Micro credit scheme- ಮೈಕ್ರೋ ಕ್ರೆಡಿಟ್ ಯೋಜನೆಗೆ ಅರ್ಜಿ! ₹2.5 ಲಕ್ಷಕ್ಕೆ ₹1.5 ಲಕ್ಷ ಸಹಾಯಧನ!

ganga kalyana documents- ಅಗತ್ಯ ದಾಖಲಾತಿಗಳು:

1) ಆಧಾರ್ ಕಾರ್ಡ ಪ್ರತಿ

2) ಬ್ಯಾಂಕ್ ಪಾಸ್ ಬುಕ್ ಪ್ರತಿ.

3) ಪೋಟೋ.

4) ಜಾತಿ ಮತ್ತು ಆದಾಯ ಪ್ರಮಾಣ ಪತ್ರ.

5) ಜಮೀನಿನ ಪಹಣಿ/RTC.

6) ರೇಶನ್ ಕಾರ್ಡ ಪ್ರತಿ

7) ಸಣ್ಣ ಹಿಡುವಳಿ ಪ್ರಮಾಣ ಪತ್ರ

8) ಕೊಳವೆ ಬಾವಿ ಇಲ್ಲದಿರುವ ಬಗ್ಗೆ ಪ್ರಮಾಣ ಪತ್ರ.

9) ಮೊಬೈಲ್ ನಂಬರ್

ಇದನ್ನೂ ಓದಿ: four wheeler subsidy- 4.00 ಲಕ್ಷ ಸಹಾಯಧನದಲ್ಲಿ ಗೂಡ್ಸ್ ವಾಹನ, ಟ್ಯಾಕ್ಸಿ ಪಡೆಯಲು ಅರ್ಜಿ ಆಹ್ವಾನ!

Helpline number- ಗಂಗಾ ಕಲ್ಯಾಣ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಸಹಾಯವಾಣಿ: 9482 300 400 ಸಂಪರ್ಕಿಸಬಹುದು.

Facebook
Twitter
Telegram
WhatsApp
Picture of siddesh

siddesh

Leave a Comment

Top Stories

Dishank mobile app

Dishank mobile app- ಕರ್ನಾಟಕದ ಯಾವುದೇ ಸ್ಥಳದ ಸರ್ವೆ ನಂಬರ್ ಮತ್ತು ಮಾಲೀಕರ ವಿವರ ಪಡೆಯಬಹುದು!

ಸಾರ್ವಜನಿಕರು/ರೈತರು ತಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರ್(Google play store) ಭೇಟಿ ಮಾಡಿ ಈ ಕೆಳಗೆ ತಿಳಿಸಿರುವ ಮೊಬೈಲ್ ಅಪ್ಲಿಕೇಶನ್ ಅನ್ನು(Dishank mobile app) ತಮ್ಮ ಮೊಬೈಲ್ ನಲ್ಲಿ ಹಾಕಿಕೊಂಡು ಕುಳಿತಲೇ ರಾಜ್ಯದ

Google Pay loan

Google Pay loan-ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ 9.0 ಲಕ್ಷದವರೆಗೆ ಲೋನ್!

ಗೂಗಲ್ ಪೇ ಮೊಬೈಲ್ ಅಪ್ಲಿಕೇಶನ್ ನಲ್ಲಿ ಬಳಕೆದಾರರು ವೈಯಕ್ತಿಕ ಸಾಲ(Google Pay loan) ಪಡೆಯಲು ಅವಕಾಶವಿದ್ದು, ಲೋನ್ ಪಡೆಯಲು ಅರ್ಜಿಯನ್ನು ಸಲ್ಲಿಸುವುದು ಹೇಗೆ? ಇತರೆ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಸಾರ್ವಜನಿಕರು ಲೋನ್

D.Pharm. Admission

D.Pharm admission-2024: ಡಿ.ಫಾರ್ಮ ಕೋರ್ಸ್ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ!

ಕರ್ನಾಟಕ ಸರ್ಕಾರ ಔಷಧ ನಿಯಂತ್ರಣ ಇಲಾಖೆ ಪರೀಕ್ಷಾ ಪ್ರಾಧಿಕಾರ ಮಂಡಳಿಯಿಂದ ಡಿ.ಫಾರ್ಮಸಿ(D.Pharmacy ) ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಔಷಧ ನಿಯಂತ್ರಣ ಇಲಾಖೆಯ ಪರೀಕ್ಷಾ ಪ್ರಾಧಿಕಾರ ಮಂಡಳಿಯಿಂದ(D.Pharm. Admission) 2024-25 ನೇ ಶೈಕ್ಷಣಿಕ