Annabhagya Amount- ಜನವರಿ-2025 ತಿಂಗಳ ಅನ್ನಭಾಗ್ಯ ಹಣ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ!

February 3, 2025 | Siddesh
Annabhagya Amount- ಜನವರಿ-2025 ತಿಂಗಳ ಅನ್ನಭಾಗ್ಯ ಹಣ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ!
Share Now:

ರಾಜ್ಯ ಸರಕಾರದಿಂದ ಪಡಿತರ ಚೀಟಿ ಹೊಂದಿರುವ ಗ್ರಾಹಕರಿಗೆ ಪ್ರತಿ ತಿಂಗಳು ಹೆಚ್ಚುವರಿಯಾಗಿ ವಿತರಣೆ ಮಾಡುವ 5 ಕೆಜಿ ಅಕ್ಕಿ ಬದಲಿಗೆ ನೇರ ನಗದು ವರ್ಗಾವಣೆ(Annabhagya DBT Status) ಮೂಲಕ ಅನ್ನಭಾಗ್ಯ ಯೋಜನೆಯಡಿ ನೀಡುವ ಅರ್ಥಿಕ ನೆರವನ್ನು ಜಮಾ ಮಾಡಲಾಗಿದೆ.

ಜನವರಿ-2025 ತಿಂಗಳ ಅನ್ನಭಾಗ್ಯ(Annabhagya) ಯೋಜನೆಯ ಹಣವನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದ್ದು, ಈ ಅಂಕಣದಲ್ಲಿ ವಿವರಿಸಿರುವ ವಿಧಾನವನ್ನು ಅನುಸರಿಸಿ ರೇಶನ್ ಕಾರ್ಡ ಹೊಂದಿರುವ ಗ್ರಾಹಕರು ತಮ್ಮ ಮೊಬೈಲ್ ನಲ್ಲೇ ಹಣ ಜಮಾ ವಿವರವನ್ನು ಒಂದೆರಡು ಕ್ಲಿಕ್ ನಲ್ಲಿ ಪಡೆಯಬಹುದಾಗಿದೆ.

ಕಳೆದ ಕೆಲವು ತಿಂಗಳಲ್ಲಿ ಈ ಯೋಜನೆಯಡಿ ಅರ್ಥಿಕ ನೆರವನ್ನು ಜಮಾ ಮಾಡಲಾಗುರುವುದಿಲ್ಲ ಅದರೆ ಪ್ರಸ್ತುತ ಜನವರಿ-2025 ರ ಕೊನೆಯ ವಾರ ರಾಜ್ಯದ ಎಲ್ಲಾ ಜಿಲ್ಲೆಯ ಪಡಿತರ ಚೀಟಿ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯ ಹಣವನ್ನು ಜಮಾ ಮಾಡಲಾಗಿರುತ್ತದೆ, ಗ್ರಾಹಕರು DBT Karnataka ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಈ ಯೋಜನೆಯಡಿ ಜಮಾ ಅಗಿರುವ ಹಣದ ಜಮಾ ವಿವರದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: Milk Price-ರೈತರಿಗೆ ಸಿಹಿ ಸುದ್ದಿ! ಹಾಲಿದ ದರ ಹೆಚ್ಚಳ ಮಾಡಿದ ಕೆ ಎಂ ಎಫ್!

Annabhagya- ಅನ್ನಭಾಗ್ಯ ಯೋಜನೆಯಡಿ ಎಷ್ಟು ಅರ್ಥಿಕ ನೆರವು ನೀಡಲಾಗುತ್ತದೆ?

ರಾಜ್ಯ ಸರಕಾರದ ನೂತನ ಘೋಷಣೆಯನ್ವಯ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಲಾಗಿತ್ತು ಇದರನ್ವಯ 5 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ ಉಳಿಕೆ 5 ಕೆಜಿ ಅಕ್ಕಿ ಬದಲಾಗಿದೆ ಪ್ರತಿ ಕೆಜೆ ಅಕ್ಕಿಗೆ ₹34 ರೂ ರಂತೆ ಒಟ್ಟು ₹170 ರೂ ಹಣವನ್ನು ನೇರ ನಗದು ವರ್ಗಾವಣೆ(DBT) ಮೂಲಕ ಅರ್ಹ ಪಡಿತರ ಚೀಟಿ ಗ್ರಾಹಕರ ಖಾತೆಗೆ ಜಮಾ ಮಾಡಲಾಗುತ್ತಿದೆ.

ನಿಮ್ಮ ಕಾರ್ಡನಲ್ಲಿರುವ ಸದಸ್ಯರ ಸಂಖ್ಯೆಯ ಅನುಗುಣವಾಗಿ ಈ ಯೋಜನೆಯಡಿ ಅರ್ಥಿಕ ನೆರವನ್ನು ಜಮಾ ಮಾಡಲಾಗುತ್ತದೆ.

ಇದನ್ನೂ ಓದಿ: Ayushman card-ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?

Annabhagya DBT Status- ಅನ್ನಭಾಗ್ಯ ಸ್ಟೇಟಸ್ ಚೆಕ್ ಮಾಡಿಕೊಳ್ಳುವ ವಿಧಾನ:

ರಾಜ್ಯ ಸರಕಾರದಿಂದ ಪ್ರತಿ ತಿಂಗಳು ನೇರ ನಗದು ವರ್ಗಾವಣೆ ಮೂಲಕ ಅರ್ಹ ಪಡಿತರ ಚೀಟಿದಾರರಿಗೆ(Ration Card) ಜಮಾ ಮಾಡುವ ಅಕ್ಕಿ ಹಣದ ಜಮಾ ವಿವರವನ್ನು ಈ ಕೆಳಗೆ ವಿವರಿಸಿರುವ ಹಂತವನ್ನು ಅನುಸರಿಸಿ ಡಿಬಿಟಿ ಕರ್ನಾಟಕ ಮೊಬೈಕ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಸಂಪೂರ್ಣ ಮಾಹಿತಿಯನ್ನು ಕೇವಲ ಒಂದೆರಡು ಕ್ಲಿಕ್ ನಲ್ಲಿ ಪಡೆಯಬಹುದು.

Step-1: ಮೊದಲಿಗೆ ಇಲ್ಲಿ ಕ್ಲಿಕ್ Annabhagya Status Check ಮಾಡಿ ಅಧಿಕೃತ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಪ್ರವೇಶ ಮಾಡಿ ಡೌನ್ಲೋಡ್ ಮಾಡಿಕೊಳ್ಳಬೇಕು.

Annabhagya DBT Status

Step-2: ಇದಾದ ಬಳಿಕ ಈ ಅಪ್ಲಿಕೇಶನ್ ಅನ್ನು ಒಪನ್ ಮಾಡಿಕೊಂಡು ಅರ್ಜಿದಾರರ 12 ಅಂಕಿಯ ಆಧಾರ್ ಕಾರ್ಡ ನಂಬರ್ ಅನ್ನು ಹಾಕಿ ನಿಮ್ಮ ಮೊಬೈಲ್ ನಂಬರ್ ಗೆ ಬರುವ OTP ಅನ್ನು ನಮೂದಿಸಿ ಬಳಕೆದಾರ ಐಡಿಯನ್ನು ನೊಂದಣಿ ಮಾಡಿಕೂಂಡು ಈ ಅಪ್ಲಿಕೇಶನ್ ಅನ್ನು ಲಾಗಿನ್ ಅಗಲು ಪಾಸ್ವರ್ಡ್ ಅನ್ನು ರಚನೆ ಮಾಡಿಕೊಳ್ಳಬೇಕು.

ಇದನ್ನೂ ಓದಿ: Budget 2025-ಕೇಂದ್ರ ಬಜೆಟ್ ರೈತರಿಗೆ ಭರ್ಜರಿ ಸಿಹಿ ಸುದ್ದಿ! ಕೃಷಿ ಸಾಲದ ಮಿತಿ ಹೆಚ್ಚಳ!

Step-3: ಬಳಕೆದಾರ ಐಡಿ ಮತ್ತು ಪಾಸ್ವರ್ಡ ಅನ್ನು ರಚನೆ ಮಾಡಿಕೊಂಡ ನಂತರ "Login" ಬಟನ್ ಮೇಲೆ ಕ್ಲಿಕ್ ಮಾಡಿ ರಚನೆ ಮಾಡಿಕೊಂಡಿರುವ ಪಾಸ್ವರ್ಡ ಅನ್ನು ಹಾಕಿ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ಲಾಗಿನ್ ಅಗಬೇಕು.

Step-4: "Login" ಅದ ನಂತರ ಈ ಅಪ್ಲಿಕೇಶನ್ ಮುಖಪುಟದ ಎಡಬದಿಯಲ್ಲಿ ಮೇಲೆ ಕಾಣುವ "ಪಾವತಿ ಸ್ಥಿತಿ" ಬಟನ್ ಮೇಲೆ ಕ್ಲಿಕ್ ಮಾಡಿ "ಅನ್ನಭಾಗ್ಯ ಯೋಜನೆ" ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಈ ಕೆಳಗಿನ ಚಿತ್ರದಲ್ಲಿ ತೋರಿಸಿದ ರೀತಿಯಲ್ಲಿ ಜನವರಿ-2025 ತಿಂಗಳ ಅನ್ನಭಾಗ್ಯ ಹಣ ಜಮಾ ವಿವರ ಕಾಣಿಸುತ್ತದೆ.

ಇಲ್ಲಿ ಜನವರಿ-2025 ತಿಂಗಳ ಯಾವ ದಿನಾಂಕದಂದು ಹಣ ಜಮಾ ಅಗಿದೆ? ಎಷ್ಟು ಹಣ ಜಮಾ ಅಗಿದೆ? ಜಮಾ ಅದ ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ಅಂಕಿಗಳು, ಮತ್ತು ಬ್ಯಾಂಕ್ ಹೆಸರು ಇತ್ಯಾದಿ ವಿವರವನ್ನು ನೋಡಬಹುದು.

WhatsApp Group Join Now
Telegram Group Join Now
Share Now: