Bajaj Scholarship-ಬಜಾಜ್ ಸ್ಕಾಲರ್‌ಶಿಪ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ₹8.0 ಲಕ್ಷದವರೆಗೆ ವಿದ್ಯಾರ್ಥಿವೇತನ!

October 4, 2025 | Siddesh
Bajaj Scholarship-ಬಜಾಜ್ ಸ್ಕಾಲರ್‌ಶಿಪ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ₹8.0 ಲಕ್ಷದವರೆಗೆ ವಿದ್ಯಾರ್ಥಿವೇತನ!
Share Now:

ಬಜಾಜ್ ಆಟೋ ಲಿಮಿಟೆಡ್‌ ವತಿಯಿಂದ ಸಿಎಸ್‌ಆರ್(CSR) ಯೋಜನೆ ಅಡಿಯಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಲು 2025-26ನೇ ಸಾಲಿನಲ್ಲಿ ಉನ್ನತ ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನವನ್ನು(Bajaj Scholarship) ಒದಗಿಸಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ರೂಪಾ ರಾಹುಲ್ ಬಜಾಜ್ ಮಹಿಳಾ ಎಂಜಿನಿಯರಿಂಗ್ ಸ್ಕಾಲರ್‌ಶಿಪ್(Engineering Scholarship) ಕಾರ್ಯಕ್ರಮದಡಿ ಆರ್ಥಿಕ ಬೆಂಬಲ, ಮಾರ್ಗದರ್ಶನ ಮತ್ತು ಉದ್ಯಮದ ಮಾನ್ಯತೆ ಮೂಲಕ ಕೋರ್ ಎಂಜಿನಿಯರಿಂಗ್‌ನಲ್ಲಿ ಪ್ರತಿಭಾನ್ವಿತ ಮಹಿಳೆಯರಿಗೆ ಸಬಲೀಕರಣಕ್ಕೆ ನೆರವನ್ನು ಕಂಪನಿಯಿಂದ ಒದಗಿಸಲಾಗುತ್ತಿದೆ.

ಇದನ್ನೂ ಓದಿ: Udyam Certificate-ಉದ್ಯಮ್ ಸರ್ಟಿಫಿಕೇಟ್ ಪಡೆಯುವುದು ಹೇಗೆ? ಬ್ಯಾಂಕ್ ಸಾಲ ಪಡೆಯಲು ಈ ದಾಖೆಲೆ ಕಡ್ಡಾಯ!

ಪ್ರಸ್ತುತ ಇಂದಿನ ಅಂಕಣದಲ್ಲಿ ಬಜಾಜ್ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿ ಸಲ್ಲಿಸಲು(Engineering Scholarship Application)ನಿಗದಿಪಡಿಸಿರುವ ಅರ್ಹತಾ ಮಾನದಂಡಗಳೇನು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳೇನು? ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Bajaj Auto Limited-ಬಜಾಜ್ ಆಟೋ ಲಿಮಿಟೆಡ್:

70+ ದೇಶಗಳಲ್ಲಿ 18 ಮಿಲಿಯನ್‌ಗಿಂತಲೂ ಹೆಚ್ಚು ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡುವುದರೊಂದಿಗೆ, ಬಜಾಜ್ ಬ್ರ್ಯಾಂಡ್ ನಿಜವಾಗಿಯೂ 'ವಿಶ್ವದ ನೆಚ್ಚಿನ ಭಾರತೀಯ' ಆಗಿದೆ. ಇದು ಭಾರತದ ನಂ.1 ಮೋಟಾರ್‌ಸೈಕಲ್ ರಫ್ತುದಾರರಾಗಿದ್ದು, ಅಂತರರಾಷ್ಟ್ರೀಯವಾಗಿ ಮಾರಾಟವಾಗುವ ಮೂರು ಬೈಕ್‌ಗಳಲ್ಲಿ ಎರಡು ಬಜಾಜ್ ಬ್ಯಾಡ್ಜ್ ಅನ್ನು ಹೊಂದಿವೆ.

ಕಂಪನಿಯು ವಿಶ್ವದ ಅತಿದೊಡ್ಡ ತ್ರಿಚಕ್ರ ವಾಹನ ತಯಾರಕರೂ ಆಗಿದೆ. ಬಜಾಜ್ ಆಟೋ ಒಂದು ಟ್ರಿಲಿಯನ್ ರೂಪಾಯಿಗಳ ಮಾರುಕಟ್ಟೆ ಬಂಡವಾಳೀಕರಣವನ್ನು ತಲುಪಿದ ವಿಶ್ವದ ಮೊದಲ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಕಂಪನಿಯಾಗಿದೆ ಮತ್ತು ವಿಶ್ವದ ಅತ್ಯಂತ ಮೌಲ್ಯಯುತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಕಂಪನಿಯಾಗಿ ಮುಂದುವರೆದಿದೆ.

ಇದನ್ನೂ ಓದಿ: New Ration Card-ಹೊಸ ರೇಶನ್ ಕಾರ್ಡಗೆ ಅರ್ಜಿ ಸಲ್ಲಿಸಲು ಅವಕಾಶ: ಆಹಾರ ಸಚಿವ ಕೆ ಹೆಚ್ ಮುನಿಯಪ್ಪ!

ವ್ಯವಹಾರದ ಹೊರತಾಗಿ, ಬಜಾಜ್ ಆಟೋ ಲಿಮಿಟೆಡ್ ಸಮಾಜಕ್ಕೆ ಬಲವಾದ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಕಂಪನಿ ವತಿಯಿಂದ ಸಿಎಸ್‌ಆರ್ ಯೋಜನೆಗೆ ಮೀಸಲಿಟಿರುವ ಹಣದಲ್ಲಿ ಆರ್ಥಿಕವಾಗಿ ಹಿಂದುಳಿದ ನಾಗರಿಕರಿಗೆ ವಿವಿಧ ಕಾರ್ಯಕ್ರಮಗಳ ಮೂಲಕ ನೆರವನ್ನು ಒದಗಿಸುತ್ತದೆ.

Last Date For Scholarship Application-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ:- 19-09-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 31-10-2025

Scholarship Eligibility-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

  • ವಿದ್ಯಾರ್ಥಿಯು ಆಯ್ದ ಈ "Collage List" ಪಟ್ಟಿಯಲ್ಲಿರುವ ಉನ್ನತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ 2025-26 ಸಾಲಿನಲ್ಲಿ ವ್ಯಾಸಂಗ ಮಾಡಲು ಪ್ರವೇಶ ಪಡೆದಿರಬೇಕು.
  • ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ, ಇಂಡಸ್ಟ್ರಿಯಲ್/ಪ್ರೊಡಕ್ಷನ್, ಆಟೋಮೊಬೈಲ್, ಮೆಕಾಟ್ರಾನಿಕ್ಸ್, ಇನ್ಸ್ಟ್ರುಮೆಂಟೇಶನ್, ಮೆಟೀರಿಯಲ್ ಸೈನ್ಸಸ್ ಮತ್ತು ಮೆಟಲರ್ಜಿ ವಿಭಾಗದಲ್ಲಿ ಪ್ರವೇಶವನ್ನು ಪಡೆದಿರುವವರು ಅರ್ಜಿ ಸಲ್ಲಿಸಲು ಅರ್ಹರು.
  • ವಿದ್ಯಾರ್ಥಿನಿಯರು 12 ನೇ ತರಗತಿಯಲ್ಲಿ ಕನಿಷ್ಠ 75% ಅಂಕಗಳು ಪಡೆದಿರಬೇಕು.

ಇದನ್ನೂ ಓದಿ: SBI RD Scheme-ಎಸ್ ಬಿ ಐ ನಲ್ಲಿ ಪ್ರತಿ ತಿಂಗಳು ಕೇವಲ 610/- ರೂ ಉಳಿತಾಯ ಮಾಡಿ ₹1.0 ಲಕ್ಷ ಹಣ ಗಳಿಸಿ!

Scholarship Prizes and Rewards Details-ಎಷ್ಟು ವಿದ್ಯಾರ್ಥಿವೇತನವನ್ನು ಒದಗಿಸಲಾಗುತ್ತದೆ?

ಅರ್ಜಿ ಸಲ್ಲಿಸಿ ಆಯ್ಕೆಯಾಗುವ ವಿದ್ಯಾರ್ಥಿನಿಯರಿಗೆ ಎಂಜಿನಿಯರಿಂಗ್ ವ್ಯಾಸಂಗ ಅವಧಿಯಲ್ಲಿ ಒಟ್ಟು ನಾಲ್ಕು ವರ್ಷಕ್ಕೆ ರೂ ₹8.0 ಲಕ್ಷದ ವರೆಗೆ ವಿದ್ಯಾರ್ಥಿವೇತನವನ್ನು ಈ ಯೋಜನೆಯ ಮೂಲಕ ಒದಗಿಸಲಾಗುತ್ತದೆ.

Bajaj Scholarship Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹರಿರುವ ವಿದ್ಯಾರ್ಥಿಗಳು ಕೊನೆಯ ದಿನಾಂಕ ಮುಗಿಯುವುದರ ಒಳಗಾಗಿ ಕೆಳಗೆ ವಿವರಿಸಿರುವ ಹಂತವನ್ನು ಅನುಸರಿಸಿ ಮನೆಯಲ್ಲೇ ಇದ್ದು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ವಿದ್ಯಾರ್ಥಿವೇತನ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಬವುದು

Step-1: ವಿದ್ಯಾರ್ಥಿಗಳು ಮೊದಲ ಹಂತದಲ್ಲಿ ಇಲ್ಲಿ ಕ್ಲಿಕ್ "Bajaj Scholarship Online Application"ಮಾಡಿ ಬಜಾಜ್ ಆಟೋ ಲಿಮಿಟೆಡ್ ಕಂಪನಿಯ ವಿದ್ಯಾರ್ಥಿವೇತನದ ಜಾಲತಾಣವನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: PMEGP ಯೋಜನೆ ಅಡಿಯಲ್ಲಿ ಶೇ 35% ಸಬ್ಸಿಡಿಯಲ್ಲಿ ಸ್ವಂತ ಉದ್ದಿಮೆ ಆರಂಭಿಸಲು ಅರ್ಜಿ ಆಹ್ವಾನ!

ಇದನ್ನೂ ಓದಿ: Free Poultry Farm Training-12 ದಿನದ ಉಚಿತ ಕೋಳಿ ಮತ್ತು ಜೇನು ಸಾಕಾಣಿಕೆ ಹೈನುಗಾರಿಕೆ ತರಬೇತಿ!

Step-2: ಬಳಿಕ ಈ ಪುಟದಲ್ಲಿ ಕೊನೆಯಲ್ಲಿ ಕಾಣುವ "Apply Now" ಬಟನ್ ಮೇಲೆ ಕ್ಲಿಕ್ ಮಾಡಿ "Create an Account" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರು ಮತ್ತು ಮೇಲ್ ವಿಳಾಸ ಮತ್ತು ಮೊಬೈಲ್ ನಂಬರ್ ಹಾಕಿ ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಅನ್ನು ರಚನೆ ಮಾಡಿಕೊಂಡು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಎಲ್ಲಾ ವಿವರವನ್ನು ಭರ್ತಿ ಮಾಡಿ ಲಾಗಿನ್ ಅಗಬೇಕು.

Step-3: ಲಾಗಿನ್/Login ಅದ ಬಳಿಕ ಅಧಿಕೃತ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಅಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆಯಾಗಿತ್ತದೆ.

Documents For Bajaj Scholarship-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

ಅರ್ಹ ವಿದ್ಯಾರ್ಥಿನಿಯರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕೆಳಗಿನ ಪಟ್ಟಿಯಲ್ಲಿರುವ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ.

  • ಅಧಾರ್ ಕಾರ್ಡ
  • ವಿದ್ಯಾರ್ಥಿಯ ಪೋಟೋ
  • 10 ಮತ್ತು 12ನೇ ತರಗತಿ ಅಂಕಪಟ್ಟಿ
  • ಆದಾಯ ಪ್ರಮಾಣ ಪತ್ರ
  • ಕಾಲೇಜು ಪ್ರವೇಶ ಪ್ರಮಾಣ ಪತ್ರ
  • ಸೆಮಿಸ್ಟರ್ ಶುಲ್ಕ ರಶೀದಿ

Bajaj Scholarship Website-ವಿದ್ಯಾರ್ಥಿವೇತನ ಕಾರ್ಯಕ್ರಮದ ಬಗ್ಗೆ ಇನ್ನು ಅಧಿಕ ಮಾಹಿತಿಯನ್ನು ಪಡೆಯಲು ಸಂಬಂಧಪಟ್ಟ ಜಾಲತಾಣವನ್ನು ಪ್ರವೇಶ ಮಾಡಲು ವೆಬ್ಸೈಟ್ ಲಿಂಕ್- Click Here
Scholarship Helpline-ಸಹಾಯವಾಣಿ-011-40848860(ಸೋಮವಾರದಿಂದ ಶುಕ್ರವಾರದವರೆಗೆ - ಬೆಳಿಗ್ಗೆ 10:00 ರಿಂದ ಸಂಜೆ 6 ರವರೆಗೆ)

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: