Bajaj scholarship 2025-ಇಂಜಿನಿಯರಿಂಗ್ ವಿದ್ಯಾರ್ಥಿನಿಯರಿಗೆ 8 ಲಕ್ಷ ವಿದ್ಯಾರ್ಥಿ ವೇತನ! ಈಗಲೇ ಅರ್ಜಿ ಸಲ್ಲಿಸಿ.

October 11, 2025 | Siddesh
Bajaj scholarship 2025-ಇಂಜಿನಿಯರಿಂಗ್ ವಿದ್ಯಾರ್ಥಿನಿಯರಿಗೆ 8 ಲಕ್ಷ ವಿದ್ಯಾರ್ಥಿ ವೇತನ! ಈಗಲೇ ಅರ್ಜಿ ಸಲ್ಲಿಸಿ.
Share Now:

ಬಜಾಜ್ ಆಟೋ ಲಿಮಿಟೆಡ್ ಕಂಪನಿಯು ಇಂಜಿನಿಯರಿಂಗ್(Engineering Scholarship) ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನವನ್ನು ಒದಗಿಸಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶ ಅಹ್ವಾನಿಸಲಾಗಿದ್ದು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಪ್ರಕಟಿಸಲಾಗಿದೆ.

ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಬಜಾಜ್(Bajaj scholarship Appication) ಕಂಪನಿಯು ಗುಡ್ ನ್ಯೂಸ್ ನೀಡಿದೆ. ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಮಹಿಳಾ ವಿದ್ಯಾರ್ಥಿನಿಯರಿಗೆ 8 ಲಕ್ಷದವರೆಗೂ ವಿದ್ಯಾರ್ಥಿ ವೇತನ ನೀಡಲು ಮುಂದಾಗಿದೆ. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಕೊನೆಯ ದಿನಾಂಕ, ಹಾಗೂ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲೇಖನವನ್ನು ಸರಿಯಾಗಿ ಓದಿ.

ಇದನ್ನೂ ಓದಿ: Vidyasiri Scholarship 2025-ವಿದ್ಯಾ ಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

Rupa Rahul Bajaj Women Engineering Scholarship - ರೂಪ ರಾಹುಲ್ ಬಜಾಜ್ ಮಹಿಳಾ ಇಂಜಿನಿಯರಿಂಗ್ ಸ್ಕಾಲರ್ಶಿಪ್ ವಿವರಣೆ:

ಭಾರತದಲ್ಲಿಯೇ ಅತ್ಯಂತ ದೊಡ್ಡ ಬ್ರಾಂಡ್ ಗಳಲ್ಲಿ ಒಂದಾದ ಬಜಾಜ್ ಆಟೋ ಲಿಮಿಟೆಡ್ ಕಂಪನಿಯು ಇಂಜಿನಿಯರಿಂಗ್ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಒಂದು ಅದ್ಭುತ ವಿದ್ಯಾರ್ಥಿ ವೇತನ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ರೂಪ ರಾಹುಲ್ ಬಜಾಜ್ ಮಹಿಳಾ ಇಂಜಿನಿಯರಿಂಗ್ ಸ್ಕಾಲರ್ಶಿಪ್. ( Rupa Rahul Bajaj women engineering scholarship) ಎಂಬ ಈ ಈ ಯೋಜನೆಯು ಕಾರ್ಯಕ್ರಮದ ಮೂಲಕ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಒಟ್ಟು ₹8 ಲಕ್ಷ ರೂಪಾಯಿ ವರೆಗಿನ ಆರ್ಥಿಕ ಸಹಾಯ ನೀಡಲು ಮುಂದಾಗಿದ್ದಾರೆ.

ಈ ಯೋಜನೆಯಿಂದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಭವಿಷ್ಯದಲ್ಲಿ ಇಂಜಿನಿಯರಿಂಗ್ ಆಗಿ ತಮ್ಮ ಕನಸನ್ನು ನನಸು ಮಾಡಲು ಅದ್ಭುತಾವಕಾಶವಾಗಿದೆ. ಈ ವಿದ್ಯಾರ್ಥಿ ವೇತನ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲೇಖನವನ್ನು ಸರಿಯಾಗಿ ಅನುಸರಿಸಿ.

ಇದನ್ನೂ ಓದಿ: Period Leave Policy-ರಾಜ್ಯದ್ಯಂತ ಮಹಿಳಾ ನೌಕರಿಗೆ ಭರ್ಜರಿ ಸಿಹಿ ಸುದ್ದಿ: ಪ್ರತಿ ತಿಂಗಳು 1 ದಿನ ಋತುಚಕ್ರ ರಜೆ!

Purpose of the scholarship - ಈ ವಿದ್ಯಾರ್ಥಿ ವೇತನ ಯೋಜನೆಯ ಉದ್ದೇಶ.

ರೂಪ ರಾಹುಲ್ ಬಜಾಜ್ ಇಂಜಿನಿಯರಿಂಗ್ ಸ್ಕಾಲರ್ಶಿಪ್ ಎಂಬ ವಿದ್ಯಾರ್ಥಿ ವೇತನದ ಪ್ರಮುಖ ಉದ್ದೇಶವೇನೆಂದರೆ 2025 26ರ ಶೈಕ್ಷಣಿಕ ವರ್ಷದಲ್ಲಿ ದೇಶದ ಉನ್ನತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ. ಕೋರ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರವೇಶ ಪಡೆದ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಗುರುತಿಸಿ ಅವರಿಗೆ 8 ಲಕ್ಷ ರೂಪಾಯಿ ಮತ್ತು ಸಂಪೂರ್ಣ ಆರ್ಥಿಕ ಬೆಂಬಲ ನೀಡಲು. ಹಾಗೂ ಭವಿಷ್ಯದಲ್ಲಿ ಅವರ ಇಂಜಿನಿಯರಿಂಗ್ ಕನಸನ್ನು ನನಸು ಮಾಡಲು ಈ ವಿದ್ಯಾರ್ಥಿ ವೇತನ ದ ಮೂಲ ಉದ್ದೇಶವಾಗಿದೆ.

ಹಾಗೂ ಇದರ ಜೊತೆಯಲ್ಲಿ ವಿದ್ಯಾರ್ಥಿನಿಯರಿಗೆ ಮೆಂಟರ್ಶಿಪ್ ಮತ್ತು ಉದ್ಯೋಗದಲ್ಲಿ ಇಂಟರ್ನಲ್ ಶಿಪ್ ಮಾಡಲು ಅವಕಾಶವನ್ನು ಕೂಡ ಒದಗಿಸುತ್ತದೆ. ಒಟ್ಟಾರೆ ಹೇಳಬೇಕೆಂದರೆ ಒಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿನಿಯರಿಗೆ ಬೇಕಾಗುವಂತಹ ಎಲ್ಲ ಸಹಾಯವು ಈ ಯೋಜನೆಯಲ್ಲಿ ನೀಡುತ್ತಿದ್ದಾರೆ. ದಯವಿಟ್ಟು ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.

ಇದನ್ನೂ ಓದಿ: SSLC Exam Fee-ಎಸ್ಸೆಸ್ಸೆಲ್ಸಿ ಪರೀಕ್ಷಾ ಶುಲ್ಕ ಏರಿಕೆ! ಎಷ್ಟು ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ?

Bajaj scholarship

Eligibility for scholarship - ಅರ್ಜಿ ಸಲ್ಲಿಸಲು ಅರ್ಹತೆ:

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೆಲವು ಮಾನದಂಡಗಳನ್ನು ಪೂರ್ಣಗೊಳಿಸಬೇಕು.

  • ಬಜಾಜ್ ಕಂಪನಿ ಅವರಿಂದ ನಿಗದಿ ಪಡಿಸಲ್ಪಟ್ಟ ಕಾಲೇಜು ಪಟ್ಟಿಯಲ್ಲಿರುವ ಉನ್ನತ ದರ್ಜೆಯ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.(ಅರ್ಜಿ ಪ್ರಕ್ರಿಯೆಯಲ್ಲಿ ಕಾಲೇಜಿನ ಪಟ್ಟಿ ಪರಿಶೀಲಿಸಬಹುದು)
  • ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕೆಳಗಿನ ಕೋರ್ ಇಂಜಿನಿಯರಿಂಗ್ ಶಾಖೆಯಲ್ಲಿ ಯಾವುದಾದರು ಒಂದು ಅಭ್ಯಾಸ ನಡೆಸುತ್ತಿರಬೇಕು.
  • ಮೆಕಾನಿಕಲ್ ಎಂಜಿನಿಯರಿಂಗ್
  • ಇಲೆಕ್ಟ್ರಿಕಲ್ ಎಂಜಿನಿಯರಿಂಗ್
  • ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ (ECE)
  • ಇಂಡಸ್ಟ್ರಿಯಲ್/ಪ್ರೊಡಕ್ಷನ್ ಎಂಜಿನಿಯರಿಂಗ್
  • ಆಟೋಮೊಬೈಲ್ ಎಂಜಿನಿಯರಿಂಗ್
  • ಮೆಕಾಟ್ರಾನಿಕ್ಸ್
  • ಇನ್ಸ್ಟ್ರುಮೆಂಟೇಷನ್
  • ಮೆಟೀರಿಯಲ್ ಸೈನ್ಸ್ & ಮೆಟಲರ್ಜಿ
  • ವಿದ್ಯಾರ್ಥಿನಿಯರು 10ನೇ/ PUC ತರಗತಿಯಲ್ಲಿ ಕನಿಷ್ಠ 75 % ಅಂಕ ಗಳಿಸಿರಬೇಕು.

ಇದನ್ನೂ ಓದಿ: Sukanya Samriddhi Yojane- ಪೋಸ್ಟ್ ಆಫೀಸ್‌ನಲ್ಲಿ ಅತೀ ಹೆಚ್ಚು ಬಡ್ಡಿ ನೀಡುವ ಯೋಜನೆ!

How to apply for scholarship - ಅರ್ಜಿ ಸಲ್ಲಿಸುವುದು ಹೇಗೆ

ರೂಪ ರಾಹುಲ್ ಬಜಾಜ್ ಮಹಿಳಾ ಇಂಜಿನಿಯರಿಂಗ್ ಸ್ಕಾಲರ್ಶಿಪ್ ಎಂಬ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಆನ್ಲೈನ್ ಮೂಲಕವೇ ಅವಕಾಶವನ್ನು ನೀಡಿದ್ದಾರೆ. ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕೆಳಗಿನ ಲೇಖನವನ್ನು ಅನುಸರಿಸಿ ಅರ್ಜಿಯ ವಿಧಾನವನ್ನು ತಿಳಿದುಕೊಳ್ಳಿರಿ.

ಅರ್ಹ ವಿದ್ಯಾರ್ಥಿಗಳು ಈ ಲಿಂಕ್ "Bajaj scholarship Application" ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರವನ್ನು ಮತ್ತು ದಾಖಲೆಗಳನ್ನು ಆಪ್ಲೋಡ್ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Anganavadi Worker Recruitment-ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ!

Important documents for scholarship- ವಿದ್ಯಾರ್ಥಿ ವೇತನಕ್ಕೆ ಬೇಕಾಗುವಂತ ಅಗತ್ಯ ದಾಖಲೆಗಳು:

  • ವಿದ್ಯಾರ್ಥಿನಿಯರ ಆಧಾರ್ ಕಾರ್ಡ್
  • ಪಾಸ್ಪೋರ್ಟ್ ಸೈಜ್ ಫೋಟೋ
  • 10 ಹಾಗೂ 12ನೇ ತರಗತಿಯ ಮಾರ್ಕ್ಸ್ ಕಾರ್ಡ್
  • ಕುಟುಂಬದ ಆದಾಯ ಪ್ರಮಾಣ ಪತ್ರ
  • ವಿದ್ಯಾರ್ಥಿನಿಯರ ಜಾತಿ ಪ್ರಮಾಣ ಪತ್ರ
  • ಕಾಲೇಜಿನ ಪ್ರವೇಶ ಪ್ರಮಾಣ ಪತ್ರ
  • ಕಾಲೇಜಿನ ಪ್ರವೇಶ ಶುಲ್ಕ ರಶೀದಿ

Last date for scholarship- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ 31 ಅಕ್ಟೋಬರ್ 2025 ರವರೆಗೆ ಅವಕಾಶವಿದೆ. ಅರ್ಜಿ ಸಲ್ಲಿಸುವ ವಿದ್ಯಾರ್ಥಿನಿಯರು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. ಗಮನಿಸಿ ಒಂದು ವೇಳೆ ನಿಮಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಬರದಿದ್ದರೆ ದಯವಿಟ್ಟು ನೀವು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಅಥವಾ ಸೈಬರ್ ಸೆಂಟರ್ಗೆ ಭೇಟಿ ನೀಡುವುದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ರೂಪ ರಾಹುಲ್ ಬಜಾಜ್ ಮಹಿಳಾ ಇಂಜಿನಿಯರಿಂಗ್ ಸ್ಕಾಲರ್ಶಿಪ್ ಈ ಯೋಜನೆಯು ಕೇವಲ ಹಣಕಾಸಿನ ಸಹಾಯವಲ್ಲ ಇದು ಭಾರತದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಮುಂದೆ ಅವರು ಭವಿಷ್ಯದಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮುಂದುವರೆಯಲು ಬಹಳಷ್ಟು ಸಹಕಾರಿಯಾಗುತ್ತದೆ. ಬಜಾಜ್ ಸ್ಕಾಲರ್ಶಿಪ್ ಹೆಚ್ಚಿನ ಮಾಹಿತಿಗಾಗಿ ಬಜಾಜ್ ಅವರ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿಯನ್ನು ತಿಳಿದುಕೊಳ್ಳಿ.

Helpline Numbers-ವಿದ್ಯಾರ್ಥಿ ವೇತನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸಹಾಯ ನಂಬರಿಗೆ ಸಂಪರ್ಕಿಸಿ:

  • ಸಹಾಯವಾಣಿ: 011-40848860 (ಸೋಮವಾರದಿಂದ ಶುಕ್ರವಾರ ಬೆಳಿಗ್ಗೆ 10:00 ಮತ್ತು ಸಂಜೆ 6:00)
  • ಅರ್ಜಿ ಸಲ್ಲಿಸಲು ಲಿಂಕ್: Apply Now

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: