Bele Parihara 2025-ಮಳೆ ಮತ್ತು ಪ್ರವಾಹ ಸಂತ್ರಸ್ತ ರೈತರಿಗೆ ಬೆಳೆ ಹಾನಿ ಪರಿಹಾರ ₹ 31,000ಗೆ ಹೆಚ್ಚಿಸಿದ ರಾಜ್ಯ ಸರಕಾರ!

October 17, 2025 | Siddesh
Bele Parihara 2025-ಮಳೆ ಮತ್ತು ಪ್ರವಾಹ ಸಂತ್ರಸ್ತ ರೈತರಿಗೆ ಬೆಳೆ ಹಾನಿ ಪರಿಹಾರ ₹ 31,000ಗೆ ಹೆಚ್ಚಿಸಿದ ರಾಜ್ಯ ಸರಕಾರ!
Share Now:

ರಾಜ್ಯದಲ್ಲಿ ವಿವಿಧ ಜಿಲ್ಲೆಯಲ್ಲಿ 2025-26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಬೆಳೆ ಹಾನಿಗೀಡಾಗಿರುವ 12.82 ಲಕ್ಷ ಹೆಕ್ಟೇರ್‌ಗಳಷ್ಟು ಕೃಷಿ ಮತ್ತು ತೋಟಗಾರಿಕಾ ಬೆಳೆಗೆ ಹೆಚ್ಚಿನ ಪರಿಹಾರ(Bele Parihara) ವಿತರಣೆಗೆ ನಿನ್ನೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತವಾಗಿ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಕಳೆದ 2-3 ವಾರದಲ್ಲಿ ಉತ್ತರಕರ್ನಾಟಕ ಭಾಗ ಮತ್ತು ರಾಜ್ಯ ವಿವಿಧ ಭಾಗಗಳಲ್ಲಿ ಅತೀಯಾದ ಮಳೆಯಿಂದ ಉಂಟಾಗಿರುವ ಬೆಳೆ ಹಾನಿಗೆ(Bele Parihara Amount) ರಾಜ್ಯ ಸರಕಾರವು ಹೆಚ್ಚುವರಿಯಾಗಿ ಪರಿಹಾರ ಮೊತ್ತವನ್ನು ಸೇರಿಸಿ ರೈತರಿಗೆ ನೀಡಲು ಅಧಿಕೃತವಾಗಿ ಅನುಮೋದನೆಯನ್ನು ನೀಡಿದೆ.

ಇದನ್ನೂ ಓದಿ: Gram Sumangal Scheme-ಪ್ರತಿ ತಿಂಗಳು 95 ಪಾವತಿಸಿದರೆ, 14 ಲಕ್ಷ ರೂಪಾಯಿ ಪಡೆಯಿರಿ!

ಈಗಾಗಲೇ ಅತೀಯಾದ ಮಳೆಯಿಂದ ತೋಟಗಾರಿಕೆ ಮತ್ತು ಕೃಷಿ ಬೆಳೆ ಹಾನಿಗೆ(Bele Hani)ಒಳಗಾದ ಸಂತ್ರಸ್ತ ರೈತರು ಬೆಳೆ ಹಾನಿ ಪರಿಹಾರವನ್ನು ಪಡೆಯಲು ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಇದಕ್ಕಾಗಿ ಅವಶ್ಯಕ ದಾಖಲೆಗಳು ಯಾವುವು? ಪ್ರಸ್ತುತ ರಾಜ್ಯ ಸರಕಾರ ಎಷ್ಟು ಮೊತ್ತವನ್ನು ಹೆಚ್ಚಳ ಮಾಡಲಾಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಪ್ರಕಟಿಸಲಾಗಿದೆ.

Crop Loss Amount Increased In Karnataka-ಬೆಳೆ ಹಾನಿ ಪರಿಹಾರ ರೂ ₹31,000 ಗೆ ಹೆಚ್ಚಿಸಿದ ರಾಜ್ಯ ಸರಕಾರ:

ಮಳೆಯಾಶ್ರಿತ ಬೆಳೆಗೆ ಎಸ್‌ಡಿಆರ್‌ಎಫ್‌/ ಎನ್‌ಡಿಆರ್‌ಎಫ್‌ ಮಾನದಂಡಗಳ ಪ್ರಕಾರ ಪ್ರತಿ ಹೆಕ್ಟೇರ್‌ಗೆ 8,500 ರೂ.ಪರಿಹಾರ ಧನದ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ರೂ.8,500 ಪರಿಹಾರ ಸೇರಿ ಒಟ್ಟು 17,000 ರೂ., ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ರೂ.17,000 ಪರಿಹಾರ ಧನದ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 8,500 ರೂ. ಪರಿಹಾರ ಸೇರಿ ಒಟ್ಟು 25,500 ರೂ.

ಹಾಗೂ ಬಹುವಾರ್ಷಿಕ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 22,500 ರೂ. ಪರಿಹಾರ ಧನದ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ರೂ.8,500 ಪರಿಹಾರ ಸೇರಿ ಒಟ್ಟು ರೂ.31,000 ನಿಗದಿಗೊಳಿಸಿ ವಿತರಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಇದನ್ನೂ ಓದಿ: Land Owners Details-ಉಚಿತವಾಗಿ ಜಮೀನಿನ ಮಾಲೀಕರ ವಿವರವನ್ನು ಚೆಕ್ ಮಾಡಲು ವೆಬ್ಸೈಟ್ ಬಿಡುಗಡೆ!

Bele Hani Vivara-12.82 ಲಕ್ಷ ಹೆಕ್ಟೇರ್‌ಗಳಷ್ಟು ಬೆಳೆ ಹಾನಿ:

ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಲ್ಲಿ ತೋಟಗಾರಿಕೆ ಮತ್ತು ಕೃಷಿ ಬೆಳೆಗಳನ್ನು ಸೇರಿ ಒಟ್ಟೂ 12.82 ಲಕ್ಷ ಹೆಕ್ಟೇರ್‌ಗಳಷ್ಟು ಬೆಳೆ ಹಾನಿಯಾಗಿದು ದಾಖಲಾಗಿದೆ ಎಂದು ಸಭೆಯಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.

Crop Loss Survey-ಅಧಿಕಾರಿಗಳಿಂದ ಜಂಟಿ ಸಮೀಕ್ಷೆ:

ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಬೆಳೆ ಹಾನಿಯಾಗಿರುವ ಕ್ಷೇತ್ರವನ್ನು ಭೇಟಿ ಅರ್ಹ ರೈತರನ್ನು ಗುರುತಿಸಲು ಮತ್ತು ಹಾನಿ ಪ್ರಮಾಣವನ್ನು ಗುರುತಿಸಲು ರಾಜ್ಯಾದ್ಯಂತ ಈಗಾಗಲೇ ಜಂಟಿ ಸಮೀಕ್ಷೆ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು ಅರ್ಹ ರೈತರಿಗೆ ಪರಿಹಾರವನ್ನು ಒದಗಿಸಲು Parihara ತಂತ್ರಾಂಶದಲ್ಲಿ ರೈತರ ದಾಖಲೆಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ.

ಇದನ್ನೂ ಓದಿ: B-Khata to A-Khata-ರಾಜ್ಯ ಸರಕಾರದಿಂದ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಆನ್‍ಲೈನ್ ವ್ಯವಸ್ಥೆ!

Bele Parihara

Bele Hani Arji-ರೈತರು ಪರಿಹಾರ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು?

ಭಾರೀ ಮಳೆ ಮತ್ತು ಪ್ರವಾಹದಿಂದ ಬೆಳೆ ಹಾನಿಗೀಡಾಗಿರುವ ರೈತರು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹಳ್ಳಿಯ ಗ್ರಾಮ ಲೆಕ್ಕಾಧಿಕಾರಿ/ಗ್ರಾಮ ಆಡಳಿತಾಧಿಕಾರಿ ಅಥವಾ ಕೃಷಿ ಮತ್ತು ತೋಟಗಾರಿಕೆ ಇಲಾಖೆಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.

Required Documents For Crop Loss Amount-ಅಗತ್ಯ ದಾಖಲೆಗಳು:

ರೈತರು ಬೆಳೆ ಹಾನಿ ಪರಿಹಾರವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಲು ಈ ಕೆಳಗಿನ ಪಟ್ಟಿಯಲ್ಲಿರುವ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

  • ಬೆಳೆ ಹಾನಿಯಾಗಿರುವ ಕ್ಷೇತ್ರದ ಪಹಣಿ/ಊತಾರ್/RTC
  • ರೈತರ ಆಧಾರ್ ಕಾರ್ಡ
  • ಹಾನಿ ಕ್ಷೇತ್ರದ ಪೋಟೋ
  • ರೈತರ ಬ್ಯಾಂಕ್ ಪಾಸ್ ಬುಕ್
  • ಮೊಬೈಲ್ ನಂಬರ್

ಇದನ್ನೂ ಓದಿ: Gruha Lakshmi Scheme: ಗೃಹಲಕ್ಷ್ಮಿ ಯೋಜನೆಯ ಬಾಕಿ ಉಳಿದ ತಿಂಗಳ ಹಣ ಬಿಡುಗಡೆ!

Bele Hani Parihara Website-ಪರಿಹಾರ ವಿತರಣೆಗೆ ಆನ್ಲೈನ್ ವ್ಯವಸ್ಥೆ:

ಒಮ್ಮೆ ರೈತರು ಬೆಳೆ ಹಾನಿ ಅಗಿರುವುದರ ಕುರಿತು ಅಗತ್ಯ ದಾಖಲೆಗಳ ಸಮೇತ ಅರ್ಜಿಯನ್ನು ಸಲ್ಲಿಸದ ಬಳಿಕ ಇಲಾಖೆಯ ಅಧಿಕಾರಿಗಳು ಅರ್ಜಿಯನ್ನು ಪರೀಶಿಲನೆ ಮಾಡಿ ಕ್ಷೇತ್ರ ಭೇಟಿ ಮಾಡಿ ಹಾನಿ ಪ್ರಮಾಣದ ಸಮೀಕ್ಷೆಯನ್ನು ಮಾಡಿ ರಾಜ್ಯ ಸರಕಾರ ಇ-ಆಡಳಿತ ಇಲಾಕೆಯಿಂದ ಅಬಿವೃದ್ದಿಪಡಿಸಿರುವ "Parihara.karnataka.gov.in" ತಂತ್ರಾಂಶದಲ್ಲಿ ರೈತರ ವಿವರವನ್ನು ದಾಖಲಿಸಲಾಗುತ್ತದೆ.

ಇದನ್ನೂ ಓದಿ: Sainik School Admission 2025-ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅವಕಾಶ! ಇಲ್ಲಿದೆ ಸಂಪೂರ್ಣ ಮಾಹಿತಿ!

Bele Parihara Farmers List-ಬೆಳೆ ಹಾನಿ ಪರಿಹಾರದ ಹಣ ಪಡೆದ ರೈತರ ಪಟ್ಟಿ:

ರೈತರು ಇಲ್ಲಿ ಕ್ಲಿಕ್ Parihara Farmers List ಮಾಡಿ ರಾಜ್ಯ ಸರಕಾರದ ಪರಿಹಾರ ಜಾಲತಾಣವನ್ನು ಭೇಟಿ ಮಾಡಿ ಕಳೆದ ವರ್ಷ ನಿಮ್ಮ ಹಳ್ಳಿಯಲ್ಲಿ ಯಾರಿಗೆಲ್ಲ ಬೆಳೆ ಹಾನಿ ಪರಿಹಾರ ಜಮಾ ಅಗಿದೆ ಎನ್ನುವ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು.

ಈ ವೆಬ್ಸೈಟ್ ಅನ್ನು ಭೇಟಿ ಮಾಡಿ ರೈತರು ಇಲ್ಲಿ ಬೆಳೆ ಹಾನಿಯಾದ ವರ್ಷ,ಹಂಗಾಮು ಮತ್ತು ನಿಮ್ಮೆ ಜಿಲ್ಲೆ,ತಾಲೂಕು,ಹೋಬಳಿ,ಹಳ್ಳಿ ಹೆಸರನ್ನು ಆಯ್ಕೆ ಮಾಡಿಕೊಂಡು "Get Report/ವಿವರ ಪಡೆಯಿರಿ" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹಳ್ಳಿಯಲ್ಲಿ ಯಾರಿಗೆಲ್ಲ ಪರಿಹಾರದ ಹಣ ಜಮಾ ಅಗಿದೆ ಎನ್ನುವ ಮಾಹಿತಿಯನ್ನು ನೋಡಬಹುದು.

Parihara-ಪರಿಹಾರ ವೆಬ್ಸೈಟ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: