HomeAgriculturebele vime last date- ಬೆಳೆ ವಿಮೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ!

bele vime last date- ಬೆಳೆ ವಿಮೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ!

ಫಸಲ್ ಭಿಮಾ ಯೋಜನೆಯಡಿ ರೈತರು ತಮ್ಮ ಬೆಳೆಗಳಿಗೆ ಬೆಳೆ ವಿಮೆಯನ್ನು(bele vime) ಮಾಡಿಸಲು ಇದ್ದ ಕೊನೆಯ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದ್ದು, ರೈತ ಮಿತ್ರರರು ಈ ಅವಕಾಶದ ಪ್ರಯೋಜನವನ್ನು ಪಡೆದುಕೊಳ್ಳಲು ಪ್ರಕಟಣೆ ಹೊರಡಿಸಲಾಗಿದೆ.

ಯಾವೆಲ್ಲ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಕೊನೆಯ ವಿಸ್ತರಣೆ ಮಾಡಲಾಗಿದೆ? ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ದಾಖಲಾತಿಗಳೇನು? ಇತ್ಯಾದಿ ವಿವರವನ್ನು ಈ ಕೆಳಗೆ ವಿವರಿಸಲಾಗಿದೆ.

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರಕಾರದ ಸಹಯೋಗದಲ್ಲಿ ರೈತರ ಬೆಳೆಗಳಿಗೆ ವಿಮೆ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು, ಪ್ರತಿ ವರ್ಷ ಈ ಯೋಜನೆಯ ಪ್ರಯೋಜನ ಪಡೆಯಲು ರೈತರು ಕೊನೆಯ ದಿನಾಂಕದ ಒಳಗಾಗಿ ಪ್ರಿಮಿಯಂ ಮೊತ್ತವನ್ನು ಪಾವತಿ ಮಾಡಿ ತಮ್ಮ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಿಕೊಳ್ಳಬೇಕು.

ಇದನ್ನೂ ಓದಿ:  kaludhari-ಕಾಲುದಾರಿ ಮತ್ತು ಬಂಡಿದಾರಿ ಕುರಿತು ರೈತರಿಗೆ ಸಿಹಿ ಸುದ್ದಿ ನೀಡಿದ ಹೈಕೂರ್ಟ್!

ಯಾವೆಲ್ಲ ಬೆಳೆಗಳ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ?

ತೋಟಗಾರಿಕೆ ಬೆಳೆಗಳಾದ ಅಡಿಕೆ ಮತ್ತು ಕಾಳುಮೆಣಸು  ಕೃಷಿ ಬೆಳೆ ಭತ್ತ ಬೆಳೆ ವಿಮೆ ಪ್ರಿಮಿಯಂ ಪಾವತಿಗೆ ನಿಗದಿಪಡಿಸಿದ ಕೊನೆಯ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ.

Last date for bele vime-ಈ ದಿನಾಂಕದವರೆಗೆ ಅರ್ಜಿ ಸಲ್ಲಿಸಲು ಅವಕಾಶ:

ಈ ಮೊದಲು ಇದ್ದ ಕೊನೆಯ ದಿನಾಂಕ ಮುಕ್ತಾಯವಾದ ಕಾರಣ ಇನ್ನು ಅನೇಕ ರೈತರು ಬೆಳೆ ವಿಮೆ ಮಾಡಿಸುವುದು ಬಾಕಿ ಇದ್ದ ಕಾರಣ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಲು ಮನವಿ ಮಾಡಿಕೊಂಡಿರುವುದರಿಂದ 16 ಆಗಸ್ಟ್ 2024 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

Required Documents for crop insurance- ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ.
2) ಬ್ಯಾಂಕ್ ಪಾಸ್ ಬುಕ್.
3) ಜಮೀನಿನ ಪಹಣಿ/RTC.
4) ಮೊಬೈಲ್ ಸಂಖ್ಯೆ.

ಇದನ್ನೂ ಓದಿ: Agriculture Land information: ನಿಮ್ಮ ಜಮೀನಿಗೆ ಹೋಗಲು ಕಾಲು ದಾರಿ ಮತ್ತು ಬಂಡಿ ದಾರಿ ಅಳತೆ ಎಷ್ಟು ಎಂದು ತಿಳಿಯುವುದು ಹೇಗೆ?

How to apply for crop insurance-ಎಲ್ಲಿ ಅರ್ಜಿ ಸಲ್ಲಿಸಬೇಕು?

ಬೆಳೆ ವಿಮೆಯನ್ನು ಮಾಡಿಸಲು ಆಸಕ್ತ ರೈತರು ತಮ್ಮ ಹತ್ತಿರದ ಗ್ರಾಮ ಒನ್/ ಕರ್ನಾಟಕ ಒನ್ ಕೇಂದ್ರವನ್ನು ಭೇಟಿ ಮಾಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಆನ್ಲೈನ್ ಮೂಲಕ ಪ್ರಿಮಿಯಂ ಅನ್ನು ಪಾವತಿ ಮಾಡಿ ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು.

crop insuramce last date details-ಈ ಮೂರು ಬೆಳೆಗಳನ್ನು ಹೊರತುಪಡಿಸಿ ಇತರೆ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ಮಾಹಿತಿಯನ್ನು ಪಡೆಯುವ ವಿಧಾನ ಹೀಗಿದೆ:

ಬೆಳೆ ವಿಮೆ ಯೋಜನೆಯ ಅಧಿಕೃತ ಸಂರಕ್ಷಣೆ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ರೈತರು ಬೆಳೆ ವಿಮೆ ಯೋಜನೆಯ ಸಂಪೂರ್ಣ ಮಾಹಿತಿಯನ್ನು ತಮ್ಮ ಮೊಬೈಲ್ ನಲ್ಲಿ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸಲು ಬೆಳೆವಾರು ಕೊನೆಯ ದಿನಾಂಕದ ವಿವರ, ಬೆಳೆ ವಿಮೆ ಅರ್ಜಿ ಸ್ಥಿತಿ, ಬೆಳೆ ವಿಮೆ ಪರಿಹಾರದ ಮಾಹಿತಿ ಸೇರಿದಂತೆ ಇತರೆ ಅನೇಕ ವಿವರವನ್ನು ಇಲ್ಲಿ ಪಡೆಯಬಹುದು.

ಇದನ್ನೂ ಓದಿ:  Mini Tractor subsidy- ಮಿನಿ ಟ್ರ್ಯಾಕ್ಟರ್ ಸೇರಿದಂತೆ ವಿವಿಧ ಸಹಾಯಧನ ಪಡೆಯಲು ಇಲಾಖೆಯಿಂದ ಅರ್ಜಿ ಆಹ್ವಾನ!

Step-1: ಮೊದಲಿಗೆ ಈ crop insurance ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಇದಾದ ಬಳಿಕ ವರ್ಷ: “2024-25” Season/ಋತು: “Kharif” ಎಂದು ಆಯ್ಕೆ ಮಾಡಿಕೊಂಡು “ಮುಂದೆ/Go” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ತದನಂತರ “Farmers” ಕಾಲಂ ನಲ್ಲಿ ಕೊನೆಯಲ್ಲಿ ಕಾಣುವ “view cut off dates” ಬಟನ್ ಮೇಲೆ ಕ್ಲಿಕ್ ಮಾಡಿಬೇಕು.

Step-4: ಮೇಲಿನ ಹಂತವನ್ನು ಪೂರ್ಣಗೊಳಿಸಿದ ಬಳಿಕ ಈ ಪೇಜ್ ನಲ್ಲಿ ನಿಮ್ಮ “ಜಿಲ್ಲೆಯನ್ನು/District” ಆಯ್ಕೆ ಮಾಡಿದರೆ ಬೆಳೆ ವಿಮೆ ಮಾಡಿಸಲು ನಿಗದಿಪಡಿಸಿದ ಬೆಳೆವಾರು ಕೊನೆಯ ದಿನಾಂಕದ ಲಿಸ್ಟ್ ತೆರೆದುಕೊಳ್ಳುತ್ತದೆ.

ಇದನ್ನೂ ಓದಿ: Gruha jyothi- ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪ್ರಯೋಜನ ಪಡೆಯಲು ಡಿ-ಲಿಂಕ್ ಮಾಡಬೇಕು!

bele vime status-ಬೆಳೆ ವಿಮೆಯ ಯೋಜನೆಯ ಎಲ್ಲಾ ಮಾಹಿತಿ ಇಲ್ಲಿ ಲಭ್ಯ:

samrakshane ವೆಬ್ಸೈಟ್ ಅನ್ನು ಪ್ರವೇಶ “Faremers” ಕಾಲಂ ನಲ್ಲಿ ಕಾಣುವ ಆಯ್ಕೆಗಳ ಮೇಲೆ ಕ್ಲಿಕ್ ಮಾಡಿ ಬೆಳೆ ವಿಮೆ ಅರ್ಜಿ ಯಾವ ಹಂತದಲ್ಲಿದೆ? ಕಳೆದ ವರ್ಷಗಳಲ್ಲಿ ಅಂದರೆ ಯಾವ ವರ್ಷ ಎಷ್ಟು ಎಷ್ಟು ಬೆಳೆ ವಿಮೆ ಪಾವತಿ ಮಾಡಲಾಗಿದೆ? ನಿಮ್ಮ ಸರ್ವೆ ನಂಬರ್ ಅನ್ನು ಹಾಕಿ ಬೆಳೆ ವಿಮೆ ಮಾಹಿತಿಯನ್ನು ಸಹ ಪಡೆದುಕೊಳ್ಳಬಹುದು.

samrakshane website link: Click here

Most Popular

Latest Articles

Related Articles