- Advertisment -
HomeNew postsbele vime news- ಬೆಳೆ ವಿಮೆ ಮಾಡಿಸಲು ಈ ಕೆಲಸ ತಪ್ಪದೇ ಮಾಡಿ!

bele vime news- ಬೆಳೆ ವಿಮೆ ಮಾಡಿಸಲು ಈ ಕೆಲಸ ತಪ್ಪದೇ ಮಾಡಿ!

Last updated on September 30th, 2024 at 02:24 pm

ರೈತರು ತಮ್ಮ  ಬೆಳೆಗಳಿಗೆ ಬೆಳೆ ವಿಮೆ ಪರಿಹಾರ(bele vime news) ಪಡೆಯಲು ಅರ್ಜಿ ಸಲ್ಲಿಸಲು ಈ ಲೇಖನದಲ್ಲಿ ವಿವರಿಸಿರುವ ನಿಯಮಯನ್ನು ಪಾಲಿಸುವುದು ಕಡ್ದಾಯವಾಗಿದೆ.

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ಬೆಳೆದ ಬೆಳೆಗಳಿಗೆ ವಿಮೆ ಸೌಲಭ್ಯವನ್ನು ಕಲ್ಪಿಸಿಕೊಡಲಾಗುತ್ತಿದ್ದು ಈ ಯೋಜನೆಯಡಿ ರೈತರು ತಮ್ಮ ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳಿಗೆ ವಿಮೆ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಬಹುದು.

ಬೆಳೆ ವಿಮೆಯನ್ನು ಮಾಡಿಸಲು ರೈತರು ಅಗತ್ಯ ದಾಖಲೆಗಳ ಸಮೇತ ಕೊನೆಯ ದಿನಾಂಕದ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಯಾವೆಲ್ಲ ಕ್ರಮಗಳನ್ನು ತಪ್ಪದೇ ರೈತರು ಪಾಲಿಸಬೇಕು ಎನ್ನುವ ಉಪಯುಕ್ತ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Karnataka weather news-2024: ರಾಜ್ಯದ ಮುಂಗಾರು ಮಳೆ ಮುನ್ಸೂಚನೆ!

Bele vime news- ಬೆಳೆ ವಿಮೆ ಮಾಡಿಸಲು ಈ ಕೆಲಸ ತಪ್ಪದೇ ಮಾಡಿ!

ಬೆಳೆ ವಿಮೆಗೆ ರೈತರು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುವುದರಿಂದ FID ಅಲ್ಲಿ ದಾಖಲೆಗಳು ಸರಿಯಾಗಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ.

1) FID ಅಲ್ಲಿ ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಸೇರ್ಪಡೆಯಾಗಿದ್ದರೆ ಮಾತ್ರ ಅರ್ಜಿ ಸಲ್ಲಿಸಬಹುದು.

2) FID ನಂಬರ್ ನಲ್ಲಿ ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಸೇರ್ಪಡೆಯಾಗಿರುವುದರ ಜೊತೆಗೆ ಜಮೀನಿನ ವಿಸ್ತೀರ್ಣವು ಸಹ ಸರಿಯಾಗಿ ಸೇರ್ಪಡೆಯಾಗಿರಬೇಕು.

3) FID ಅಲ್ಲಿ ಇರುವ ಸರ್ವೆ ನಂಬರ್ ನಲ್ಲಿ ದಾಖಲಾಗಿರುವ ಬೆಳೆ ಮಾಹಿತಿಯು ಅತೀ ಮುಖ್ಯವಾಗಿದ್ದು ನೀವು ಇಲ್ಲಿ ಯಾವ ಬೆಳೆ ದಾಖಲಾಗಿರುತ್ತದೆಯೋ ಆ ಬೆಳೆಗೆ ಬೆಳೆ ವಿಮೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಈ ಮೇಲಿನ ಎಲ್ಲಾ ಕಾರಣಗಳಿಂದ ರೈತರು ತಮ್ಮ FID ನಂಬರ್/ ಪ್ರೂಟ್ಸ್ ಐಡಿ ಅಲ್ಲಿ ಜಮೀನಿನ ಎಲ್ಲಾ ವಿವರವನ್ನು ಸರಿಯಾಗಿ ದಾಖಲಿಸಿಕೊಳ್ಳುವುದು ಅತೀ ಮುಖ್ಯವಾಗಿದೆ ಒಂದೊಮ್ಮೆ ಪ್ರೂಟ್ಸ್ ಐಡಿ/FID ನಂಬರ್ ನಲ್ಲಿ ದಾಖಲಾಗಿರುವ ವಿವರದಲ್ಲಿ ತಪ್ಪಾಗಿದ್ದರೆ ಯಾವುದೇ ಬಗ್ಗೆಯ ತಿದ್ದುಪಡಿ ಮಾಡಿಸಲು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಸರಿಪಡಿಸಿಕೊಳ್ಳಬಹುದು.

ಇದನ್ನೂ ಓದಿ: SSC Recruitment 2024- SSLC ಪಾಸಾದವರಿಗೆ 8326 ಹುದ್ದೆಗಳ ನೇಮಕಾತಿಗೆ ಅರ್ಜಿ!

Crop insurance application-2024: ಬೆಳೆ ವಿಮೆ ಅರ್ಜಿ ಸಲ್ಲಿಸಿದ ಬಳಿಕ ಈ ತಪ್ಪು ಮಾಡದಿರಿ:

ರೈತರು ತಾವು ಬೆಳೆದ ಬೆಳೆಗೆ ಬೆಳೆ ವಿಮೆಯನ್ನು ಮಾಡಿಸಿದ ಬಳಿಕ ಕೆಲವೊಂದು ನಿಯಮಗಳನ್ನು ನೆನಪಿನಲ್ಲಿಟ್ಟುಕೊಂಡು ತಪ್ಪದೇ ಪಾಲನೆ ಮಾಡಿ ಅವುಗಳ ವಿವರ ಈ ಕೆಳಗಿನಂತಿದೆ.

ನೀವು ಯಾವ ಬೆಳೆ ಬೆಳೆ ವಿಮೆ ಮಾಡಿಸಿರುತ್ತಿರೋ ಆ ಬೆಳೆಯು ನಿಮ್ಮ ಪಹಣಿಯಲ್ಲಿ ಬೆಳೆ ಸಮೀಕ್ಷೆ ಮಾಡುವಾಗ ದಾಖಲಾಗಿದ್ದರೆ ಮಾತ್ರ ಮುಂದೆ ಬೆಳೆ ನಷ್ಟವಾದಗ ವಿಮೆ ಪರಿಹಾರ ಬರುತ್ತದೆ ಬೆಳೆ ವಿಮೆ ಅರ್ಜಿ ಬೆಳೆ ವಿವರ ಮತ್ತು ಬೆಳೆ ಸಮೀಕ್ಷೆ ಬೆಳೆ ವಿವರ ತಾಳೆಯಾಗದಿದ್ದರೆ ನಿಮಗೆ ಬೆಳೆ ವಿಮೆ ಪರಿಹಾರ ಜಮಾ ಅಗುವುದಿಲ್ಲ.

ಬೆಳೆ ವಿಮೆ ಪ್ರಿಮಿಯಂ ಅನ್ನು ಪಾವತಿ ಮಾಡಿ ಬೆಳೆ ವಿಮೆ ಅರ್ಜಿಯನ್ನು ಸಲ್ಲಿಸಿದ ಬಳಿಕ ಪಾವತಿ ರಶೀದಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಯಾವುದೇ ಕಾರಣಕ್ಕೂ ಈ ರಶೀದಿಯನ್ನು ಕಳೆದುಕೊಳ್ಳಬೇಡಿ ವೈಯಕ್ತಿಕ ನಷ್ಟ ಪರಿಹಾರ ಅರ್ಜಿ ಸಲ್ಲಿಸಲು ಈ ರಶೀದಿ ಬೇಕಾಗುತ್ತದೆ ಅದ ಕಾರಣ.

ಇದನ್ನೂ ಓದಿ: RTC aadhar link-2024: ರೈತರ ಜಮೀನುಗಳಿಗೆ ಆಧಾರ್ ಲಿಂಕ್!

ಬೆಳೆ ವಿಮೆ ಅರ್ಜಿ ಎಲ್ಲಿ ಸಲ್ಲಿಸಬೇಕು? ಬೆಳೆವಾರು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಬೆಳೆ ವಿಮೆ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ: CLICK HERE

- Advertisment -
LATEST ARTICLES

Related Articles

- Advertisment -

Most Popular

- Advertisment -