Bele vime parihara-ಬೆಳೆ ವಿಮೆ ಈ ಜಿಲ್ಲೆಯ ರೈತರಿಗೆ 45 ಕೋಟಿ ಬಿಡುಗಡೆ!

October 17, 2024 | Siddesh
Bele vime parihara-ಬೆಳೆ ವಿಮೆ ಈ ಜಿಲ್ಲೆಯ ರೈತರಿಗೆ 45 ಕೋಟಿ ಬಿಡುಗಡೆ!
Share Now:

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ತಮ್ಮ ಬೆಳೆಗಳಿಗೆ ಬೆಳೆ ವಿಮೆಯನ್ನು(Bele vime parihara) ಮಾಡಿಸಿದ ರೈತರಿಗೆ ಬೆಳೆ ನಷ್ಟವಾಗಿರುವ ಅರ್ಹ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಬೆಳೆ ವಿಮೆ ಪರಿಹಾರವನ್ನು ಜಮಾ ಮಾಡಲಾಗಿದೆ.

ಬೆಳೆ ವಿಮೆ ಪರಿಹಾರವನ್ನು ಯಾವ ಆಧಾರದ ಮೇಲೆ ರೈತರ ಖಾತೆಗೆ ಹಣ ಜಮಾ(Bele vime parihara status) ಮಾಡಲಾಗುತ್ತದೆ? ಪ್ರಸ್ತುತ ಯಾವ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಪರಿಹಾರವನ್ನು(Crop insurance status) ಹಾಕಲಾಗಿದೆ? ಇದರ ಜೊತೆಗೆ ರೈತರು ತಮ್ಮ ಮೊಬೈಲ್ ನಲ್ಲೇ ಬೆಳೆ ವಿಮೆ ಅರ್ಜಿ ಯಾವ ಹಂತದಲ್ಲಿದೆ ಒಂದೊಮ್ಮೆ ಪರಿಹಾರ ಜಮಾ ಅಗಿದ್ದರೆ ಯಾವ ಬ್ಯಾಂಕ್ ಖಾತೆಗೆ ಜಮಾ ಅಗಿದೆ? ಎಷ್ಟು ಹಣ ಎಂದು ತಮ್ಮ ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವ ಮಾಹಿತಿಯನ್ನು ಸಹ ವಿವರಿಸಲಾಗಿದೆ.

ಇದನ್ನೂ ಓದಿ: SIP- ಪ್ರತಿ ತಿಂಗಳು ರೂ 1,000 ಸಾವಿರ ಉಳಿತಾಯ ಮಾಡಿ 12 ಲಕ್ಷ ಆದಾಯಗಳಿಸಿ!

Bele vime parihara-ಈ ಜಿಲ್ಲೆಯ ರೈತರಿಗೆ 45 ಕೋಟಿ ಬೆಳೆ ವಿಮೆ ಬಿಡುಗಡೆ!

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ 2023-24ನೇ ಸಾಲಿನಲ್ಲಿ ಖಾಸಗಿ ವಿಮೆ ಸಂಸ್ಥೆಯವರು ಮುಂಗಾರು ಹಂಗಾಮಿನಲ್ಲಿ ಹಾವೇರಿ ಜಿಲ್ಲೆಯ ಬೆಳೆ ಕಟಾವು ಪ್ರಯೋಗಗಳ ಸಂಬಂಧ ಕೆಲವು ತಾಂತ್ರಿಕ ಕಾರಣಗಳಿಂದ ಕೇಂದ್ರದ ಬೆಳೆ ವಿಮೆ ಸಮಿತಿಗೆ ರಾಜ್ಯ ಸರಕಾರದ ಸಮಿತಿಯ ತೀರ್ಪಿನ ವಿರುದ್ಧ ಅಕ್ಷೇಪಣೆ ಸಲ್ಲಿಸಿದರು.

ಆದರೆ ಕೇಂದ್ರದ ಸಮಿತಿಯಲ್ಲಿ ಅಕ್ಷೇಪಣೆ ವಜಾ ಅಗಿರುವ ಕಾರಣ ಈ ಜಿಲ್ಲೆಯ ಒಟ್ಟೂ 65000 ಅರ್ಹ ರೈತ ಫಲಾನುಭವಿಗಳಿಗೆ ರೂ. 45 ಕೋಟಿ ಬೆಳೆ ವಿಮಾ ಪರಿಹಾರ ಮೊತ್ತವನ್ನು ಜಮಾ ಮಾಡಲಾಗಿದೆ.

ಇದನ್ನೂ ಓದಿ: Dairy farm subsidy-ಹೈನುಗಾರಿಕೆಗೆ 40 ಸಾವಿರ ಸಹಾಯಧನ! ಇಲ್ಲಿದೆ ಯೋಜನೆಯ ಸಂಪೂರ್ಣ ಮಾಹಿತಿ!

CCE-ಏನಿದು ಬೆಳೆ ಕಟಾವು ಪ್ರಯೋಗ?

ಕೃಷಿ ಬೆಳೆಗಳಿಗೆ ಬೆಳೆ ವಿಮೆಯನ್ನು ಪಾವತಿ ಮಾಡಲು ಅರ್ಹ ರೈತರನ್ನು ಗುರುತಿಸಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ನಿಗದಿಪಡಿಸಿದ ಬೆಳೆಯನ್ನು ಆಯ್ಕೆ ಮಾಡಿಕೊಂಡು 4 ಜಮೀನಿನ ತಾಕುಗಳಲ್ಲಿ 5*5 ಮೀಟರ್ ಅಳತೆ ಮಾಡಿ ಬೆಳೆಯನ್ನು ಕಟಾವು ಮಾಡಿ ಸರಾಸರಿ ಇಳುವರಿ ಕಡಿಮೆ ಬಂದರೆ ಈ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದ ರೈತರಿಗೆ ವಿಮೆ ಪರಿಹಾರವನ್ನು ಪಾವತಿ ಮಾಡಲಾಗುತ್ತದೆ.

ತೋಟಗಾರಿಕೆ ಬೆಳೆಗಳಿಗೆ ನಿಗದಿಪಡಿಸಿದ ಗ್ರಾಮ ಪಂಚಾಯತಿ ಮಟ್ಟದಲ್ಲಿ ಒಂದು ವರ್ಷದ ಸರಾಸರಿ ಮಳೆ ಪ್ರಮಾಣದಲ್ಲಿ ಅಗುವ ಕೊರತೆಯ ಅನುಗುಣವಾಗಿ ವಿಮೆಯನ್ನು ಪಾವತಿ ಮಾಡಲಾಗುತ್ತದೆ.

ಇದನ್ನೂ ಓದಿ: Labour card application- ಕಾರ್ಮಿಕ ಮಂಡಳಿಯಿಂದ ಸ್ಮಾರ್ಟ್ ಕಾರ್ಡ! ಈ ಕಾರ್ಡ ಹೊಂದಿರುವವರಿಗೆ 5 ಲಕ್ಷ ವಿಮೆ ಸೌಲಭ್ಯ!

Karnataka agriculture minister-ಕೃಷಿ ಸಚಿವ ಎನ್ ಚಲುವರಾಯಸ್ವಾಮಿಯವರು ತಮ್ಮ ಟ್ವಿಟರ್(X) ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿರುವುದು:

crop insurance

Bele vime status-ಬೆಳೆ ವಿಮೆ ಅರ್ಜಿ ಸ್ಥಿತಿಯನ್ನು ಚೆಕ್ ಮಾಡುವ ವಿಧಾನ:

ರೈತರು ತಮ್ಮ ಬೆಳೆ ವಿಮೆ ಅರ್ಜಿ ಸ್ಥಿತಿಯನ್ನು ಮತ್ತು ಬೆಳೆ ವಿಮೆ ಪರಿಹಾರದ ಹಣ ಜಮಾ ವಿವರವನ್ನು ತಮ್ಮ ಮೊಬೈಲ್ ನಲ್ಲೇ samrakshane ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಅರ್ಜಿ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬಹುದು. ಇದಕ್ಕಾಗಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.

Step-1: ಮೊದಲಿಗೆ ಈ Bele vime application status check ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ಇದಾದ ಬಳಿಕ ಈ ಪೇಜ್ ನಲ್ಲಿ ಬೆಳೆ ವಿಮೆ ಅರ್ಜಿ ಸಲ್ಲಿಸಿದ ವರ್ಷ(Year) ಮತ್ತು ಋತು(Season) ಆಯ್ಕೆ ಮಾಡಿಕೊಂಡು "ಮುಂದೆ/Go" ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Junior Power Man: KEB ಯಿಂದ SSLC ಪಾಸಾದವರಿಗೆ ಭರ್ಜರಿ ಉದ್ಯೋಗವಾಕಾಶ! 2,975 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ!

Step-3: ಇಲ್ಲಿ "Farmers" ಕಾಲಂ ನಲ್ಲಿ "Check Status" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಇಲ್ಲಿ ಮೂರು ಆಯ್ಕೆಗಳ(Proposal number/Mobile number/Aadhaar number) ಆಧಾರ ಮೇಲೆ ನಿಮ್ಮ ಬೆಳೆ ವಿಮೆ ಅರ್ಜಿ ಸ್ಥಿತಿಯನ್ನು ಚೆಕ್ ಮಾಡಲು ಅವಕಾಶವಿದ್ದು ಇದರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಮುಂದುವರೆಯಬೇಕು.

ಇಲ್ಲಿ mobile number ಮೇಲೆ ಟಿಕ್ ಮಾಡಿಕೊಂಡು ಬೆಳೆ ವಿಮೆ ಅರ್ಜಿ ಸಲ್ಲಿಸುವಾಗ ನೀಡಿರುವ ಮೊಬೈಲ್ ನಂಬರ್ ಅನ್ನು ಹಾಕಬೇಕು ಬಳಿಕ ಅಲ್ಲೇ ಕೆಳಗಿರುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ Search ಬಟನ್ ಮೇಲೆ ಕ್ಲಿಕ್ ಮಾಡಿ.

Step-4: ಆಗ ನಿಮ್ಮ ಬೆಳೆ ವಿಮೆ ಅರ್ಜಿಗಳ ವಿವರ ತೋರಿಸುತ್ತದೆ ಇಲ್ಲಿ ಕೊನೆಯಲ್ಲಿ ಕಾಣುವ "Select" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿಯ ಸಂಪೂರ್ಣ ವಿವರ ತೋರಿಸುತ್ತದೆ. ಇಲ್ಲಿ ಕೆಳಗೆ "UTR Details" ನಲ್ಲಿ ಯಾವ ಖಾತೆಗೆ ಬೆಳೆ ವಿಮೆ ಜಮಾ ಅಗಿರುತ್ತದೆಯೋ ಅದರ ವಿವರ ತೋರಿಸುತ್ತದೆ ಒಂದೊಮ್ಮೆ ಇಲ್ಲಿ ಯಾವ ಮಾಹಿತಿಯನ್ನು ತೋರಿಸದೆ ಇದ್ದರೆ ನಿಮಗೆ ವಿಮೆ ಜಮಾ ಅಗಿರುವುದಿಲ್ಲ ಎಂದು ಅರ್ಥ.

Step-5: ನಿಮ್ಮ ಬೆಳೆ ವಿಮೆ ಅರ್ಜಿಯ ಕುರಿತು ಇನ್ನು ಹೆಚ್ಚಿನ ಮಾಹಿತಿಯ ತಿಳಿಯಲು ಇದೆ ಪೇಜ್ ನಲ್ಲಿ ಮೇಲೆ ಕಾಣುವ "View Details" ಬಟನ್ ಮೇಲೆ ಕ್ಲಿಕ್ ಮಾಡಬೇಕು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: