HomeFarm machineryBest mileage bikes-ಅತಿ ಹೆಚ್ಚು ಮೈಲೇಜ್ ಕೊಡುವ ಬೈಕ್ ಗಳು!ಫುಲ್ ಟ್ಯಾಂಕ್ ಮಾಡಿದರೆ 700-750 km...

Best mileage bikes-ಅತಿ ಹೆಚ್ಚು ಮೈಲೇಜ್ ಕೊಡುವ ಬೈಕ್ ಗಳು!ಫುಲ್ ಟ್ಯಾಂಕ್ ಮಾಡಿದರೆ 700-750 km ಓಡಿಸಬಹುದು!

ಪ್ರಸ್ತುತ ಪೆಟ್ರೋಲ್(petrol) ಬೆಲೆಯು ದಿನೇ ದಿನೇ ಏರುಗತಿಯಲ್ಲಿ ಸಾಗುತ್ತಿದ್ದು ಮಧ್ಯಮ ವರ್ಗದ ಜನರು ಕೆಲಸಕ್ಕೆ ತೆರಳಲು ಮತ್ತು ರೈತರು ಸಹ ತಮ್ಮ ದೈನಂದಿನ(best mileage bikes) ಚಟುವಟಿಕೆಗಳನ್ನು ಮಾಡಲು ದ್ವಿಚಕ್ರ ವಾಹನಗಳನ್ನು ಖರೀದಿ ಮಾಡಲು ಉತ್ತಮ ಮೈಲೇಜ್ ಕೊಡುವಂತಹ ಬೈಕ್ ಅನ್ನು ಖರೀದಿಸುವ ಆಲೋಚನೆ ಇದ್ದರೆ ಇಲ್ಲಿದೆ ಇದಕ್ಕೆ ಸೂಕ್ತ ಉತ್ತರ.

ಬಹುತೇಕ ಮಾಧ್ಯಮ ವರ್ಗದ ಜನರು ಬೈಕನ್ನು ಖರೀದಿಸುವ ಸಮಯದಲ್ಲಿ ಶೋರೂಂಗೆ ಭೇಟಿ ಮಾಡಿದಾಗ ಸರ್ವೇಸಾಮಾನ್ಯವಾಗಿ ಮೊದಲು ಕೇಳುವ ಪ್ರಶ್ನೆಯೇ ಈ ಬೈಕ್ ಎಷ್ಟು ಮೈಲೇಜ್(mileage bikes) ಕೊಡುತ್ತೆ ಸರ್? ಇದಕ್ಕೆ ಮುಖ್ಯ ಕಾರಣವೇ ದಿನೇ ದಿನೇ ಹೆಚ್ಚುತ್ತಿರುವ ಪೆಟ್ರೋಲ್ ಬೆಲೆ.

ಭಾರತದಲ್ಲಿ ದೊಡ್ಡ ಸಂಖ್ಯೆಯ ಮಧ್ಯಮ ವರ್ಗದ ಜನರು ಹೆಚ್ಚು ಮೈಲೇಜ್ ಕೊಡುವ ಬೈಕ್ ಅನ್ನು ಖರೀದಿಸಲು ಬಯಸುತ್ತಾರೆ. ಜೊತೆಗೆ ಕಡಿಮೆ ನಿರ್ವಹಣಾ ವೆಚ್ಚವನ್ನು ತಗಲುವ ಕಂಪನಿಯ ಬೈಕ್ ಅನ್ನು ಸಹ ಆಯ್ಕೆ ಮಾಡಿಕೊಳ್ಳುತ್ತಾರೆ ಈ ಸಾಲಿಗೆ ಸೇರುವ ಹಾಗೂ ಪ್ರಸ್ತುತ ವರ್ಷಗಳಲ್ಲಿ ಅತಿ ಹೆಚ್ಚು ಜನಪ್ರಿಯ ಹಾಗೂ ಹೆಚ್ಚು ಮಾರಾಟವಾಗುತ್ತಿರುವ ಎರಡು ಬೈಕ್ ಗಳ ಕುರಿತು ಈ ಅಂಕಣದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Bele vime parihara-ಬೆಳೆ ವಿಮೆ ಈ ಜಿಲ್ಲೆಯ ರೈತರಿಗೆ 45 ಕೋಟಿ ಬಿಡುಗಡೆ!

ಬೈಕ್ ಅನ್ನು ಖರೀದಿಸುವಾಗ ಅಗತ್ಯವಾಗಿ ಗಮನಿಸಬೇಕಾದ ಅಂಶಗಳು:

  • ಬೈಕ್ ನ ಬೆಲೆ/Bike Price
  • ಬೈಕ್ ಕಂಪನಿ ಮತ್ತು ಮಾಡೆಲ್/Bike Company and Model
  • ಇಂಜಿನ್ ಶಕ್ತಿ ಮತ್ತು ಮೈಲೇಜ್/Bike Mileage
  • ಕಂಪನಿಯ ಸರ್ವಿಸ್/Company Service
  • ಖರೀದಿಸುವ ಮುನ್ನ ಒಮ್ಮೆ ತಪ್ಪದೇ ಟೆಸ್ಟ್ ಡ್ರೈವ್ ಮಾಡುವುದು/Test Drive

Bike Price-ಬೈಕ್ ನ ಬೆಲೆ:

ಗ್ರಾಹಕರು ಬೈಕನ್ನು ಖರೀದಿ ಮಾಡಲು ಶುರು ಮಾಡುವ ಮೊದಲು ನಿಮ್ಮ ಜಿಲ್ಲೆಯಲ್ಲಿ ಅತಿ ಕಡಿಮೆ ಬೆಲೆಯಲ್ಲಿ ನೀವು ಖರೀದಿ ಮಾಡಲು ಬಯಸುವ ಬೈಕ್ ಯಾವ ಶೋರೂಮ್ನಲ್ಲಿ ಲಭ್ಯವಿದೆ ಎಂದು ವಿಚಾರಿಸಿದ ನಂತರ ಯಾವ ಶೋರೂಮ್ನಲ್ಲಿ ಬೈಕ್ ಖರೀದಿಸಬೇಕೆಂದು ಕೊನೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಬೇಕು.

ಇದನ್ನೂ ಓದಿ: SIP- ಪ್ರತಿ ತಿಂಗಳು ರೂ 1,000 ಸಾವಿರ ಉಳಿತಾಯ ಮಾಡಿ 12 ಲಕ್ಷ ಆದಾಯಗಳಿಸಿ!

Bike Company and Model-ಬೈಕಿನ ಕಂಪನಿ ಮತ್ತು ಮಾಡೆಲ್:

ಗ್ರಾಹಕರು ಬೈಕ್ ಖರೀದಿಸುವಾಗ ಜನಪ್ರಿಯವಾದ ಬೈಕ್ ಬ್ರಾಂಡ್ ಮತ್ತು ಮಾಡೆಲ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಅತಿ ಮುಖ್ಯ.

Bike Mileage-ಇಂಜಿನ್ ಶಕ್ತಿ ಮತ್ತು ಮೈಲೇಜ್:

ಬೈಕಿನ ಮೈಲೇಜ್ ನೀವು ಖರೀದಿಸುವ ಬೈಕಿನ ಇಂಜಿನಿನ ಶಕ್ತಿಯ ಆಧಾರದ ಮೇಲೆ ಇರುತ್ತದೆ ಉದಾಹರಣೆಗೆ ಹೇಳುವುದಾದರೆ ನೀವು 100 CC ಬೈಕ್ ಖರೀದಿಸುವ ಬದಲು 150 ಸಿಸಿ ಬೈಕ್ ಅನ್ನು ಖರೀದಿಸಿದರೆ 15 ರಿಂದ 20 ಕಿಲೋಮೀಟರ್ ಕಡಿಮೆ ಮೈಲೇಜ್ ನೀಡುತ್ತದೆ ಎಷ್ಟು ಕಡಿಮೆ CC ಬೈಕ್ ಅನ್ನು ಖರೀದಿಸುತ್ತಿರೋ ಅಷ್ಟೇ ಹೆಚ್ಚು ಮೈಲೇಜ್ ಅನ್ನು ನೀವು ಪಡೆಯಬಹುದು.

ಇದನ್ನೂ ಓದಿ: Dairy farm subsidy-ಹೈನುಗಾರಿಕೆಗೆ 40 ಸಾವಿರ ಸಹಾಯಧನ! ಇಲ್ಲಿದೆ ಯೋಜನೆಯ ಸಂಪೂರ್ಣ ಮಾಹಿತಿ!

Company Service-ಕಂಪನಿಯ ಸರ್ವಿಸ್:

ಬೈಕ್ ಖರೀದಿಸಿದ ನಂತರ ಬೈಕಿನ ಸರ್ವಿಸ್ ಸಹ ಮುಖ್ಯವಾಗಿರುತ್ತದೆ ಬೈಕ್ ರಿಪೇರಿ ಬಂದಂತಹ ಸಂದರ್ಭದಲ್ಲಿ ಬೈಕ್ ಸರ್ವಿಸ್ ಸೆಂಟರ್ ನಿಂದ ಉತ್ತಮ ಪ್ರತಿಕ್ರಿಯೆ ಸಿಗದಿದ್ದಲ್ಲಿ ನಿಮ್ಮ ಬೈಕ್ ಬೇಗ ಹಾಳಾಗುತ್ತದೆ ಆದ್ದರಿಂದ ಬೈಕ್ ಕಂಪನಿಯ ಸರ್ವಿಸ್ ಸೆಂಟರ್ ಸೇವೆಯು ಉತ್ತಮವಾಗಿರುವುದನ್ನು ಆಯ್ಕೆ ಮಾಡಿಕೊಳ್ಳಬೇಕು.

Test Drive-ಖರೀದಿಸುವ ಮುನ್ನ ಟೆಸ್ಟ್ ಡ್ರೈ ಮಾಡುವುದು:

ಬಹಳಷ್ಟು ಜನರು ಈ ಪ್ರಯತ್ನವನ್ನು ಮಾಡುವುದೇ ಇಲ್ಲ ತಮಗೆ ಇಷ್ಟದ ಬೈಕನ್ನು ನೇರವಾಗಿ ಶೋರೂಮ್ ಗೆ ಭೇಟಿ ಮಾಡಿ ಖರೀದಿಸುವ ಮುನ್ನ ಒಮ್ಮೆ ಆ ಬೈಕ್ ಅನ್ನು ಚಲಾಯಿಸಿ ನೋಡುವುದು ಅತಿ ಮುಖ್ಯವಾಗಿದೆ ಟೆಸ್ಟ್ ಡ್ರೈವ್ ಮಾಡಿದರೆ ಆ ಬೈಕ್ ನಿಮಗೆ comfortable ಆಗುತ್ತದೆಯೇ ಇಲ್ಲವೇ ಮತ್ತು Road grip ಹೇಗಿದೆ ಇತ್ಯಾದಿ ಪ್ರಾಯೋಗಿಕ ಅನುಭವ ಸಿಗುವುದರಿಂದ ಆ ಬೈಕ್ ಖರೀದಿಸಲು ನಿರ್ಧಾರ ಕೈಗೊಳ್ಳಲು ಸಹಾಯಕವಾಗುತ್ತದೆ.

ಇದನ್ನೂ ಓದಿ: Labour card application- ಕಾರ್ಮಿಕ ಮಂಡಳಿಯಿಂದ ಸ್ಮಾರ್ಟ್ ಕಾರ್ಡ! ಈ ಕಾರ್ಡ ಹೊಂದಿರುವವರಿಗೆ 5 ಲಕ್ಷ ವಿಮೆ ಸೌಲಭ್ಯ!

Best mileage bikes-2024: ಇಲ್ಲಿದೆ ನೋಡಿ ಅತಿ ಹೆಚ್ಚು ಮೈಲೇಜ್ ಕೊಡುವ ಬೈಕ್ ಗಳು:

1) TVS sport:

ಟಿವಿಎಸ್ ಕಂಪನಿಯಿಂದ ಬಿಡುಗಡೆ ಮಾಡಿರುವ ಈ ಬೈಕ್ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದ್ದು ಅತಿ ಹೆಚ್ಚು ಮೈಲೇಜ್(tvs sport mileage) ಅನ್ನು ಸಹ ಹೊಂದಿದೆ ಜೊತೆಗೆ ಉತ್ತಮ ಇಂಧನ ದಕ್ಷತೆಯನ್ನು ಸಹ ನೀಡುತ್ತದೆ. Exshow room ಬೆಲೆಯೂ ಬೆಂಗಳೂರಿನಲ್ಲಿ ರೂ 67,320/- ಇದ್ದು 7 ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಒಂದು ಲೀಟರ್ ಪೆಟ್ರೋಲ್ ಗೆ 70 to 80 km ಮೈಲೇಜ್ ನೀಡುತ್ತದೆ ಎಂದು ಕಂಪನಿಯು ತಿಳಿಸಿದೆ.

TVS sports

ಒಮ್ಮೆ 10 ಲೀಟರ್ ಪೆಟ್ರೋಲ್ ಭರ್ತಿ ಮಾಡಿ ಟ್ಯಾಂಕ್ ಫುಲ್ ಮಾಡಿದರೆ 700 ರಿಂದ 750 ಕಿಲೋಮೀಟರ್ ಪ್ರಯಾಣಿಸಬಹುದು. 109.5 Single cylinder CC ಬೈಕ್ ಇದಾಗಿದ್ದು BS6 ಇಂಜಿನ್ ಹೊಂದಿದ್ದು 4 speed gear box ನ್ನು ಹೊಂದಿದೆ.

ಇದನ್ನೂ ಓದಿ: Junior Power Man: KEB ಯಿಂದ SSLC ಪಾಸಾದವರಿಗೆ ಭರ್ಜರಿ ಉದ್ಯೋಗವಾಕಾಶ! 2,975 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ!

2) Bajaj Platina:

Bajaj company ಯ ಬೈಕ್ ಇದಾಗಿದ್ದು, ಈ ಬೈಕ್ ಸಹ ನಮ್ಮ ದೇಶದಲ್ಲಿ ಪ್ರಸ್ತುತ ಹೆಚ್ಚು ಪ್ರಚಲಿತದಲ್ಲಿದೆ. ಕಡಿಮೆ ಪೆಟ್ರೋಲ್ ಅನ್ನು ಬಳಕೆ ಮಾಡಿಕೊಂಡು ಹೆಚ್ಚು ದೂರದವರೆಗೆ ಈ ಬೈಕ್ ನಲ್ಲಿ(bajaj platina mileage) ಸಾಗಬಹುದಾಗಿದೆ. ಕಂಪನಿಯು ಹೇಳುವ ಪ್ರಕಾರ ಒಂದು ಲೀಟರ್ ಪೆಟ್ರೋಲ್ ಗೆ ಸುಮಾರು 70-75 ಕಿ.ಮೀ ಮೈಲೇಜ್ ನೀಡುತ್ತದೆ. ಈ ಬೈಕಿನ ಪೆಟ್ರೋಲ್ ಟ್ಯಾಂಕ್ ನ ಸಾಮರ್ಥ್ಯವು 11 ಲೀಟರ್ ಇದ್ದು ಒಮ್ಮೆ ಭರ್ತಿ ಮಾಡಿದರೆ 700 ರಿಂದ 750 ಕಿಲೋಮೀಟರ್ ಪ್ರಯಾಣಿಸಬಹುದು.

Bajaj Platina

ಈ ಬೈಕಿನ ಎಕ್ಸ್ ಶೋರೂಮ್ ಪ್ರೈಸ್ 69,165 ಇದ್ದು ಆರ್ ಟಿ ಓ ಮತ್ತು ಇನ್ಸೂರೆನ್ಸ್ ಶುಲ್ಕ ಸೇರಿ 90,000 ವೆಚ್ಚವಾಗುತ್ತದೆ. 102 CC single cylinder bike ಇದಾಗಿದ್ದು 7.79 ಬಿಎಚ್‌ಪಿ ಪವರ್ and 8.34 NM ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ಉತ್ತಮ ಮೈಲೇಜ್ ಅನ್ನು ನೀಡುವ ಬೈಕನ್ನು ಖರೀದಿಸುವ ಇಚ್ಛೆ ಇದ್ದವರು ಈ ಎರಡು ಬೈಕ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

Most Popular

Latest Articles

Related Articles